ಸರಕಾರ ರಚನೆಗೆ ಬಿಜೆಪಿಗೆ ಆಹ್ವಾನ ನೀಡಿದ ರಾಜ್ಯಪಾಲರು!

Wednesday, May 16th, 2018
parivarthan

ಬೆಂಗಳೂರು: ಮತದಾರ ಮಹಾಪ್ರಭು ನೀಡಿದ ಜನಾದೇಶ ನಮ್ಮ ಬಳಿ ಇದೆ. ನಾವೇ ಸರ್ಕಾರ ರಚಿಸಲು ಅರ್ಹರು ಎಂದು ಹೇಳುತ್ತಿರುವ ಬಿಜೆಪಿ ನಾಯಕರು ರಾಜಭವನಕ್ಕೆ ತೆರಳಿ, ವಜುಭಾಯಿ ವಾಲರನ್ನು ಭೇಟಿ ಮಾಡಿದ್ದಾರೆ. 104 ಶಾಸಕರ ಬೆಂಬಲವಿರುವ ಎರಡು ಪತ್ರಗಳನ್ನು ರಾಜ್ಯಪಾಲರಿಗೆ ಸಲ್ಲಿಕೆ ಮಾಡಿರುವ ಯಡಿಯೂರಪ್ಪ ಅವರು ಸರ್ಕಾರ ರಚನೆಗೆ ಮೊದಲು ಅವಕಾಶ ನೀಡಬೇಕು. ಗುರುವಾರ(ಮೇ 17) ದಂದು ಪ್ರಮಾಣ ವಚನ ಸ್ವೀಕರಿಸಿ, ಒಂದು ವಾರದೊಳಗೆ ಸದನದಲ್ಲಿ ಬಹುಮತ ಸಾಬೀತುಪಡಿಸುವುದಾಗಿ ಕೋರಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲ ಮುಂದಿರುವ ನಾಲ್ಕು ಆಯ್ಕೆಗಳು […]

ಶಿಕಾರಿಪುರದಲ್ಲಿ ಭರ್ಜರಿ ಜಯ ಸಾಧಿಸಿದ ಬಿ.ಎಸ್.ಯಡಿಯೂರಪ್ಪ

Tuesday, May 15th, 2018
bs-yediyurappa

ಶಿವಮೊಗ್ಗ: ಕರ್ನಾಟಕ ಬಿಜೆಪಿ ಅಧ್ಯಕ್ಷ ಮತ್ತು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸ್ವ ಕ್ಷೇತ್ರ ಶಿಕಾರಿಪುರ ಕ್ಷೇತ್ರದಲ್ಲಿ ಅವರು ಗೆಲುವು ಸಾಧಿಸಿದ್ದಾರೆ. ಶಿವಮೊಗ್ಗ ಸಂಸದರಾಗಿರುವ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರದಿಂದ 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆ ದಿನಾಂಕ ಘೋಷಣೆಗೂ ಮೊದಲು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಬಿ.ಎಸ್.ಯಡಿಯೂರಪ್ಪ ಅವರು ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಆದರೆ, ಎಷ್ಟು ಮತಗಳ ಅಂತದಲ್ಲಿ ಎಂಬುದು ಇನ್ನೂ ಖಚಿತವಾಗಿಲ್ಲ. ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ […]

ಚಾಮುಂಡೇಶ್ವರಿಯಲ್ಲಿ ಸಿಎಂಗೆ ಹಿನ್ನಡೆ… ಎಲ್ಲಿ ಯಾರು ಮುನ್ನಡೆ ನೋಡಿ

Tuesday, May 15th, 2018
siddaramaih

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಜೆಡಿಎಸ್‌ನ ಜಿ.ಟಿ. ದೇವೆಗೌಡ ಮುನ್ನಡೆಯಲ್ಲಿದ್ದಾರೆ. ಇದೇ ವೇಳೆ ಬಾದಾಮಿಯಲ್ಲಿ ಸಿದ್ದರಾಮಯ್ಯ ಮುನ್ನಡೆಯಲ್ಲಿದ್ದಾರೆ. ಬಿಜೆಪಿಯ ಶ್ರೀರಾಮುಲು ಹಿನ್ನಡೆ ಅನುಭಿಸಿದ್ದಾರೆ. ಮತ ಅಂಚೆ ಶೃಂಗೇರಿ ಬಿಜೆಪಿ ಡಿ.ಎನ್.ಜೀವರಾಜ್ ಮುನ್ನಡೆ ಚಿಕ್ಕಮಗಳೂರು ಸಿ.ಟಿ.ರವಿ ಬಿಜೆಪಿ ಮುನ್ನಡೆ ಮೂಡಿಗೆರೆ ವಿಧಾನಸಭೆ ಕ್ಷೇತ್ರ ಬಿಜೆಪಿ ಮೊದಲನೇ ಸುತ್ತು 1634 ಮತಗಳ ಮುನ್ನಡೆ ತರೀಕೆರೆ ಪಕ್ಷೇತರ ಅಭ್ಯರ್ಥಿ ಜಿ.ಹೆಚ್.ಶ್ರೀನಿವಾಸ್ ಮುನ್ನೆಡೆ ಕಡೂರು ಜೆಡಿಎಸ್ ವೈಎಸ್ ವಿ ದತ್ತಾ ಮುನ್ನೆಡೆ ಶ್ರೀನಿವಾಸ್ ಮುನ್ನೆಡೆ : 400 ಮತಗಳು […]

ಮತದಾನ ಮಾಡಿದರೆ ತಪಾಸಣೆ ವೆಚ್ಚದಲ್ಲಿ ರಿಯಾಯಿತಿ..!

Friday, May 11th, 2018
election

ಬೆಂಗಳೂರು: ಮತದಾನ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದಕ್ಕೆ ಪೂರಕವಾಗಿ ಕೆಲವು ಖಾಸಗಿ ಸಂಸ್ಥೆಗಳು ತಾವು ನೀಡುವ ಸೇವೆಗಳಲ್ಲಿ ಹಲವು ವಿನಾಯಿತಿ ಮತ್ತು ರಿಯಾಯಿತಿಗಳನ್ನು ಘೋಷಣೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಮತ ಜಾಗೃತಿ ಮೂಡಿಸುತ್ತಿದೆ. ಚಾಮರಾಜಪೇಟೆಯಲ್ಲಿರುವ ಬೃಂದಾವಣ ಆಸ್ಪತ್ರೆಯು ಮತದಾನ ಮಾಡಿದವರಿಗೆ ತಪಾಸಣೆ ಹಾಗೂ ಪ್ರಯೋಗಾಲಯದ ವೆಚ್ಚದಲ್ಲಿ ಶೇ.10ರಷ್ಟು ರಿಯಾಯಿತಿಯನ್ನು ಘೋಷಿಸಿದೆ. ಮೇ 12 ಶನಿವಾರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವವರು ಮತದಾನದ ಗುರುತು ತೋರಿಸಿದರೆ […]

ಚುನಾವಣೆಗೆ 2 ದಿನ ಮುನ್ನ ಬಿಜೆಪಿ ಸೇರ್ಪಡೆಯಾದ ನಟಿ ಭಾವನಾ

Thursday, May 10th, 2018
bavana

ಬೆಂಗಳೂರು: ಬಿಜೆಪಿಗೆ ಇನ್ನೋರ್ವ ನಟಿ ಸೇರ್ಪಡೆಯಾಗಿದ್ದು, ಚುನಾವಣೆಗೆ 2 ದಿನಗಳಿರುವಾಗ ಕಾಂಗ್ರೆಸ್‌ ತೊರೆದಿದ್ದ ನಟಿ , ನಿರ್ಮಾಪಕಿ ಭಾವನಾ ರಾಮಣ್ಣ ಕಮಲ ಹಿಡಿದಿದ್ದಾರೆ. ಪಕ್ಷದ ಕಚೇರಿಯಲ್ಲಿ ಗುರುವಾರ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಅವರ ಸಮ್ಮುಖದಲ್ಲಿ ಭಾವನಾ ಪಕ್ಷಕ್ಕೆ ಸೇರ್ಪಡೆಯಾಗದರು. ಈ ವೇಳೆ ಬಿಜೆಪಿ ರಾಜ್ಯ ವಕ್ತಾರೆ ತೇಜಸ್ವಿನಿ ಸೇರಿದಂತೆ ಪ್ರಮುಖ ಮುಖಂಡರು ಹಾಜರಿದ್ದರು. ಭಾವನಾ ಚಿತ್ರದುರ್ಗ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಟಿಕೆಟ್‌ ಕೈ ತಪ್ಪಿದ ಕೂಡಲೆ ಪಕ್ಷದಿಂದ ಹೊರ ಬಂದಿದ್ದರು. ಕೆಲ ದಿನಗಳ […]

ದ.ಕ.ಜಿಲ್ಲೆಯ 8 ಕ್ಷೇತ್ರದಲ್ಲೂ ಕಾಂಗ್ರೆಸ್‌ಗೆ ಗೆಲುವು: ಜನಾರ್ದನ ಪೂಜಾರಿ

Wednesday, May 9th, 2018
j-r-lobo

ಮಂಗಳೂರು: ದ.ಕ. ಜಿಲ್ಲೆಯ 8 ಕ್ಷೇತ್ರದಲ್ಲೂ ಕೂಡ ಕಾಂಗ್ರೆಸ್ ಸ್ಪಷ್ಟ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಹೇಳಿದರು. ನಗರದ ಕದ್ರಿಯಲ್ಲಿರುವ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 7 ಸ್ಥಾನಗಳನ್ನು ಗೆದ್ದಿದ್ದರೆ ಈ ಬಾರಿ 8 ಸ್ಥಾನವನ್ನೂ ಗೆಲ್ಲಲಿದೆ. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಶಕ್ತಿಮೀರಿ ಶ್ರಮಿಸಲಿದ್ದಾರೆ ಎಂದರು. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಜೆ.ಆರ್.ಲೋಬೊ ವಿರುದ್ಧ ತೀವ್ರ ಅಪಪ್ರಚಾರ ಮಾಡಲಾಗುತ್ತಿದೆ. ಇದು […]

ಎಸ್‌ಎಸ್‌‌ಎಲ್‌ಸಿ ಫಲಿತಾಂಶ ಪ್ರಕಟ…ರಾಜ್ಯಕ್ಕೆ ಇಬ್ಬರು ವಿದ್ಯಾರ್ಥಿಗಳು ಟಾಪರ್ಸ್‌!

Monday, May 7th, 2018
topers

ಬೆಂಗಳೂರು: ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಈ ಸಾಲಿನ ಎಸ್‌‌ಎಸ್‌ಎಲ್‌ಸಿಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಈ ಸಲ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್ಸ್‌ ಆಗಿ ಹೊರಹೊಮ್ಮಿದ್ದಾರೆ. ಮೈಸೂರು ದಕ್ಷಿಣ ತಾಲೂಕಿನ ಸದ್ವಿದ್ಯಾ ಹೈಸ್ಕೂಲ್‌ನ ವಿದ್ಯಾರ್ಥಿ ಯಶಸ್‌ ಎಂ.ಎಸ್‌. ಮತ್ತು ಬೆಂಗಳೂರು ದಕ್ಷಿಣ-1 ತಾಲೂಕಿನ ಹೋಲಿ ಚೈಲ್ಡ್‌ ಇಂಗ್ಲಿಷ್‌ ಹೈಸ್ಕೂಲಿನ ಸುದರ್ಶನ್‌ ಕೆ.ಎಸ್‌ 625/625 ಅಂಕ ಪಡೆದು ರಾಜ್ಯಕ್ಕೆ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. 8 ವಿದ್ಯಾರ್ಥಿಗಳು 624 ಅಂಕಗಳನ್ನು ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ. 12 ವಿದ್ಯಾರ್ಥಿಗಳು 623 […]

ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ 1 ಲಕ್ಷ ರೂ. ಸಾಲ ಮನ್ನಾ: ಯಡಿಯೂರಪ್ಪ

Friday, May 4th, 2018
yedeyurappa

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಘೋಷಿಸಿದರು. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ 1 ಲಕ್ಷ ರೂ. ಸಾಲ ಮನ್ನಾ ಹಾಗೂ ಸಹಕಾರಿ ಸಂಘಗಳಲ್ಲಿನ ಸಾಲ50 ಸಾವಿರದಿಂದ 1 ಲಕ್ಷಕ್ಕೆ ವಿಸ್ತರಣೆ ಮಾಡಲಾಗುತ್ತದೆ ಎಂದು ಘೋಷಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಶಾಸಕ ವಿಜಯಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಬಳಿಕ ಸುರೇಶ್ ಕುಮಾರ್ ನೇತೃತ್ವದ ಸಮಿತಿ ರಚಿಸಿರುವ ಪ್ರಣಾಳಿಕೆಯನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ […]

ಚೀಟಿ ಇಲ್ಲದೇ 15 ನಿಮಿಷ ಮಾತನಾಡುವ ಚಾಲೆಂಜ್‌‌ ಸ್ವೀಕರಿಸಿ: ರಾಹುಲ್‌ಗೆ ಉಮರ್‌ ಅಬ್ದುಲ್ಲಾ ಸಲಹೆ

Wednesday, May 2nd, 2018
rahul-gandhi

ಶ್ರೀನಗರ: ರಾಹುಲ್ ಗಾಂಧಿ ಚೀಟಿ ಇಲ್ಲದೇ ಕರ್ನಾಟಕ ಸರ್ಕಾರದ ಸಾಧನೆಯನ್ನು 15 ನಿಮಿಷ ಭಾಷಣ ಮಾಡಲಿಕ್ಕೆ ಆಗುತ್ತಾ? ವಿಶ್ವೇಶ್ವರಯ್ಯ ಹೆಸರನ್ನು 5 ಬಾರಿ ಸ್ಪಷ್ಟವಾಗಿ ಹೇಳಲು ಸಾಧ್ಯವೇ ಎಂದು ಮೋದಿ ಹಾಕಿರುವ ಬಹಿರಂಗ ಸವಾಲು ಸ್ವೀಕರಿಸಿ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್‌ ಅಬ್ದುಲ್ಲಾ ರಾಹುಲ್‌ ಗಾಂಧಿಗೆ ಸಲಹೆ ನೀಡಿದ್ದಾರೆ. ಕೈಯಲ್ಲಿ ಚೀಟಿ ಹಿಡಿದುಕೊಳ್ಳದೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಮಾಡಿರುವ ಸಾಧನೆಯ ಬಗ್ಗೆ ನಿಮಗೆ ತಿಳಿದಿರುವ ಹಿಂದಿ, ಇಂಗ್ಲಿಷ್‌ ಅಥವಾ ಯಾವುದೇ ಭಾಷೆಯಲ್ಲಿ ಹದಿನೈದು ನಿಮಿಷಗಳ ಮಾತನಾಡಿ […]

‘ಕಟಪಾಡಿ ಕಟ್ಟಪ್ಪ’ನ ಆಡಿಯೋ ರಿಲೀಸ್‌ಗೆ ಸುದೀಪ್‌!

Thursday, April 26th, 2018
sudeep

ಮಂಗಳೂರು: ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್‌ ಬ್ರಹ್ಮಾವರ ನಿರ್ಮಾಣದ ‘ಕಟಪಾಡಿ ಕಟ್ಟಪ್ಪ’ ಸಿನೆಮಾ ಈಗ ರಿಲೀಸ್‌ನ ಹೊಸ್ತಿಲಲ್ಲಿದೆ. ಇದರ ಪೂರ್ವಭಾವಿಯಾಗಿ ಚಿತ್ರದ ಆಡಿಯೋ ರಿಲೀಸ್‌ ಎ. 29ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ. ವಿಶೇಷವೆಂದರೆ ಅಭಿನಯ ಚಕ್ರವರ್ತಿ ಸುದೀಪ್‌ ಆಡಿಯೋ ರಿಲೀಸ್‌ ಗಾಗಿ ಮಂಗಳೂರಿಗೆ ಆಗಮಿಸಲಿದ್ದಾರೆ. ತುಳು ಸಿನೆಮಾದ ಕಾರ್ಯಕ್ರಮದಲ್ಲಿ ಸುದೀಪ್‌ ಭಾಗವಹಿಸಲು ಒಪ್ಪಿಕೊಂಡಿರುವುದು ಕೋಸ್ಟಲ್‌ವುಡ್‌ನ‌ಲ್ಲಿ ಗರಿ ಮೂಡಿಸಿದಂತಾಗಿದೆ. ಹಲವಾರು ಸಿನೆಮಾ ಹಾಗೂ ರಾಷ್ಟ್ರೀಯ ಗೌರವ ಪಡೆಯುತ್ತಿರುವ ತುಳು ಸಿನೆಮಾ ರಂಗವನ್ನು […]