ಅಧಿಕ ಬಡ್ಡಿ: ಫೈನಾನ್ಸ್‌ಗಳಿಗೆ ಎಚ್ಚರಿಕೆ

Friday, July 10th, 2015
BK Saleem

ಮಂಗಳೂರು : ಇತ್ತೀಚಿನ ದಿನಗಳಲ್ಲಿ ರೈತರು ಸಹಕಾರ ಸಂಘಗಳಿಂದ ಮತ್ತು ಖಾಸಗಿ ಲೇವಾದೇವಿ/ ಹಣಕಾಸು ಸಂಸ್ಥೆಗಳಿಂದ ಸಾಲ ಪಡಕೊಂಡು ಸಾಲ ಮರುಪಾವತಿಸಲು ಅಶಕ್ತರಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಕರ್ನಾಟಕ ಲೇವಾದೇವಿ ಕಾಯ್ದೆ ಹಾಗೂ ಗಿರವಿ ಕಾಯ್ದೆಯಡಿ ಪರವಾನಗಿ ಪಡಕೊಂಡ ಲೇವಾದೇವಿಗಾರರು, ಹಣಕಾಸು ಸಂಸ್ಥೆಗಳು ಹಾಗೂ ಗಿರವಿದಾರರು ಕರ್ನಾಟಕ ಲೇವಾದೇವಿ ಕಾಯ್ದೆ 1961 ಕಲಂ 28ರ ಪ್ರಕಾರ ಭದ್ರತೆ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇ. 14 ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ ಗರಿಷ್ಠ ವಾರ್ಷಿಕ ಶೇ. 16 […]

‘ಜುಗಾರಿ’ ತುಳು ಚಲನಚಿತ್ರಕ್ಕೆ ಮುಹೂರ್ತ

Friday, July 10th, 2015
jugari tulu film

ಮಂಗಳೂರು : ‘ನೈನ್‌ ಓ ಕ್ಲಾಕ್‌’ ಕ್ರಿಯೇಷನ್ಸ್‌ ಲಾಂಛನದಲ್ಲಿ ತಯಾರಾಗುತ್ತಿರುವ ‘ಜುಗಾರಿ’ ತುಳು ಚಲನಚಿತ್ರದ ಮುಹೂರ್ತ ಸಮಾರಂಭ ಗುರುವಾರ ಶ್ರೀ ಭಗವತೀ ದೇವಸ್ಥಾನದ ಬಳಿಯ ಪಿ.ವಿ.ಎಸ್‌. ಕಲಾಕುಂಜದಲ್ಲಿ ಜರಗಿತು. ಕನ್ನಡ ಚಿತ್ರರಂಗದ ನಟಿ ರಾಗಿಣಿ ದ್ವಿವೇದಿ ಆರಂಭದ ಫಲಕ ತೋರಿಸುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಶಾಂಭವಿ ಮುಹೂರ್ತ ಕಾರ್ಯಕ್ರಮ ಉದ್ಘಾಟಿಸಿದರು. ‘ಕುಡ್ಲದ ಜನಕುಲೆಗ್‌ ಎನ್ನ ಸೊಲ್ಮೆಲು’ ಎಂದು ಮಾತು ಪ್ರಾರಂಭಿಸಿದ ರಾಗಿಣಿ ದ್ವಿವೇದಿ, ತುಳು ಚಿತ್ರರಂಗದದಲ್ಲಾಗುತ್ತಿರುವ ಅಭಿವೃದ್ಧಿ, ಬೆಳೆಯುತ್ತಿರುವ ಪರಿ ಕೇಳಿ ಬಹಳಷ್ಟು ಸಂತೋಷವಾಗಿದೆ. ಇಲ್ಲಿನ […]

ಕರಾವಳಿ ಹುಡುಗಿ ನೇಹಾ ಕನ್ನಡ ಚಿತ್ರ ‘ಮುಂಗಾರು ಮಳೆ 2′ ರಲ್ಲಿ ನಾಯಕಿ

Thursday, July 9th, 2015
Neha Shetty

ಮಂಗಳೂರು : ಶಶಾಂಕ್ ನಿರ್ದೇಶನದಲ್ಲಿ ಮೂಡಿಬರಲಿರುವ ‘ಮುಂಗಾರು ಮಳೆ 2’ ಚಿತ್ರಕ್ಕೆ ಕರಾವಳಿ ಬೆಡಗಿ 2014ರ ‘ಮಿಸ್ ಮಂಗಳೂರು ಚೆಲುವೆ’ ನೇಹಾ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದ ನಾಯಕ ನಟನಾಗಿ ಆಭಿನಯಿಸಲಿದ್ದಾರೆ. ನಿರ್ದೇಶಕ ಶಶಾಂಕ್ ತಮ್ಮ ಚಿತ್ರಕ್ಕೆ ಗ್ಲಾಮರಸ್ ಲುಕ್, ಜೊತೆಗೆ ಸ್ಟೈಲೀಷ್ ಆಗಿರುವ ಹೊಸ ಹುಡುಗಿಯ ಹುಡುಕಾಟದಲ್ಲಿದ್ದರು. ಅಡೀಷನ್ ಸಂದರ್ಭದಲ್ಲಿ ಕೊನೆಯದಾಗಿ ನೇಹಾ ಶೆಟ್ಟಿ ಆಯ್ಕೆಯಾದರು. ಇದೀಗ ‘ಮುಂಗಾರು ಮಳೆ 2’ ಚಿತ್ರಕ್ಕೆ ನಾಯಕಿ ಪಕ್ಕಾ ಆಗಿರುವುದರಿಂದ ಇದೇ ಜುಲೈ 28 […]

ಒಡಿಯೂರು ಗ್ರಾಮ ವಿಕಾಶ ಯೋಜನೆಯ ವಾರ್ಷಿಕೊತ್ಸವ

Monday, June 29th, 2015
Odiyuru

ಬಂಟ್ವಾಳ: ಆಧುನಿಕತೆಯ ಬದುಕಿನಲ್ಲಿ ಹೆಜ್ಜೆ ಇಡುವಾಗ ಸಂಸ್ಕಾರವನ್ನು ಮೈಗೂಡಿಸಿಕೊಂಡಲ್ಲಿ ಧರ್ಮಕ್ಕೆ ಚ್ಯುತಿ ಬರುವುದಿಲ್ಲ, ಧರ್ಮದ ಉಳಿವು ಆದರೆ ಮಾತ್ರ ರಾಷ್ಟ್ರದ ಗೆಲುವು ಸಾಧ್ಯ ಎಂದು ಒಡಿಯೂರು ಕ್ಷೇತ್ರದ ಶ್ರೀ ಶ್ರೀ ಶ್ರೀ ಗುರುದೇವನಂದ ಸ್ವಾಮೀಜಿ ಹೇಳಿದರು. ಅವರು ಶ್ರೀ ಶಾರದ ಭಜನಾ ಮಂದಿರ ನಗ್ರಿ ಇಲ್ಲಿ ನಡೆದ ಒಡಿಯೂರು ಗ್ರಾಮ ವಿಕಾಶ ಯೋಜನೆಯ ವಾರ್ಷಿಕೊತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಬದುಕಿಗೆ ಸಂಸ್ಕಾರ ಸಿಕ್ಕಾಗ ಸಂಘಟನ್ಮಾತಕವಾಗಿ ಬೆಳೆಯಲು ಸಾಧ್ಯ , ಅ ನಿಟ್ಟಿನಲ್ಲಿ ಒಡಿಯೂರು ಗ್ರಾಮ ವಿಕಾಶ […]

ಒಂದು ಕೋಟಿ ಸಾಲ ತೀರಿಸದ ಪೂಜಾ ಗಾಂಧಿ, ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

Saturday, June 27th, 2015
pooja Gandhi

ಬೆಂಗಳೂರು : ನಟಿ ಪೂಜಾ ಗಾಂಧಿ ವಿರುದ್ಧ ಒಂದು ಕೋಟಿ ರೂಪಾಯಿ ಸಾಲ ತೀರಿಸದ ಆರೋಪ ಕೇಳಿಬಂದಿದೆ. ‘ಅಭಿನೇತ್ರಿ’ ಚಿತ್ರದಿಂದಾಗಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದಾಗ, ಆ ಸಿನಿಮಾ ಕಂಪ್ಲೀಟ್ ಮಾಡುವುದಕ್ಕೆ ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ಆಕೆಯ ತಂದೆ ಪವನ್ ಗಾಂಧಿ, ಡಾ.ಸುನೀಲ್ ಶರ್ಮಾ ಅವರಿಂದ ಒಂದು ಕೋಟಿ ರೂಪಾಯಿ ಸಾಲ ಪಡೆದಿದ್ದರು. ‘ ಅಭಿನೇತ್ರಿ’ ಸಿನಿಮಾದ ಸ್ಯಾಟಲೈಟ್ ಹಕ್ಕು ಮಾರಿ ಬಂದ ಹಣದಲ್ಲಿ ಸಾಲ ತೀರಿಸುವುದಾಗಿ ಹೇಳಿದ್ದ ಪೂಜಾ ಗಾಂಧಿ ಈವರೆಗೂ ಹಣ ಹಿಂದಿರುಗಿಸಿಲ್ಲ […]

ಮಲೆಕುಡಿಯರ ಕಾಲನಿಗಳಿಗೆ ಸರ್ವ ಸೌಕರ್ಯ: ಜಿಲ್ಲಾಧಿಕಾರಿ ಸೂಚನೆ

Friday, June 26th, 2015
Malekudiya

ಮಂಗಳೂರು : ಮಲೆಕುಡಿಯ ಜನಾಂಗದ ಅಭಿವೃದ್ಧಿಗೆ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಕಾಲನಿಗಳನ್ನು ಗುರುತಿಸಿ ಅಲ್ಲಿ ಸಕಲ ರೀತಿಯ ಮೂಲಸೌಕರ್ಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ. ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಮಲೆಕುಡಿಯ ಜನಾಂಗದವರ ವಿಶೇಷ ಅಭಿವೃದ್ಧಿ ಯೋಜನೆಯಡಿ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉತ್ತಮ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 4 ಹಾಗೂ ಉಳಿದ ತಾಲೂಕುಗಳಲ್ಲಿ ತಲಾ ಒಂದೊಂದು ಮಲೆಕುಡಿಯ ಜನಾಂಗದವರು […]

ಪುತ್ತೂರು ರೋಟರ‍್ಯಾಕ್ಟ್ ಕ್ಲಬ್‌ಗೆ ಪ್ರಶಸ್ತಿ

Tuesday, June 23rd, 2015
Rotract club

ಪುತ್ತೂರು : ರೋಟರ‍್ಯಾಕ್ಟ್ ಸಂಸ್ಥೆಯ ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ಮಂಗಳೂರು ರೋಟರ‍್ಯಾಕ್ಟ್ ಕ್ಲಬ್ ಸಿಟಿ ಸಂಸ್ಥೆ ಆಶ್ರಯದಲ್ಲಿ ಭಾನುವಾರ ನಗರದ ಹೋಟೆಲ್ ವುಡ್‌ಲ್ಯಾಂಡ್ಸ್ ಸಭಾಂಗಣದಲ್ಲಿ ಜರಗಿದ ರೋ! ಶಾಂತರಾಮ್ ವಾಮಂಜೂರು ಸ್ಮಾರಕ ರೋಟರ‍್ಯಾಕ್ಟ್ ಜಿಲ್ಲಾ 3180ರ ಅಂತರ್ ರೋಟರ‍್ಯಾಕ್ಟ್ ಕ್ಲಬ್ ರಸಪ್ರಶ್ನೆ ಸ್ಪರ್ಧಾ ಕೂಟದಲ್ಲಿ ಪುತ್ತೂರು ರೋಟರ‍್ಯಾಕ್ಟ್ ಕ್ಲಬ್‌ನ ಸದಸ್ಯರಾದ ರೋ! ರಜಕ್ ಪ್ರಥಮ ಸ್ಥಾನ ಪಡೆದು ಪ್ರತಿಷ್ಟಿತ ರೋಟರ‍್ಯಾಕ್ಟ್ ಪ್ರಶಸ್ತಿ ಪುರಸ್ಕೃತರಾದರು. ಸುಭ್ರಮಣ್ಯ ರೋಟರ‍್ಯಾಕ್ಟ್ ಕ್ಲಬ್ ಸಂಸ್ಥೆಯ ಸದಸ್ಯರಾದ ರೋ! ಗಣೇಶ್ ದ್ವಿತೀಯ […]

ಕಲ್ಲು ಕ್ವಾರಿ ಗುಂಡಿಗಳ ಸುತ್ತ ರಕ್ಷಣಾಗೋಡೆ ನಿರ‍್ಮಿಸಲು ರೂ.22 ಲಕ್ಷ ಬಿಡುಗಡೆ-ಎ.ಬಿ.ಇಬ್ರಾಹಿಂ

Thursday, June 18th, 2015
quari

ಮಂಗಳೂರು : ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಹಾಗೂ ಸ್ಥಗಿತಗೊಂಡಿರುವ ಕಲ್ಲು ಕ್ವಾರಿಗಳು ಸಾರ್ವಜನಿಕರಿಗೆ ಅಪಾಯಕಾರಿಯಾಗಿ ತೊಂದರೆಯಾಗದಂತೆ ಅವುಗಳ ಸುತ್ತ ಆವರಣಗೋಡೆ ನಿರ‍್ಮಿಸಿ ರಕ್ಷಣೆ ಒದಗಿಸಲು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಈಗಾಗಲೆ ಎರಡು ಸುತ್ತಿನ ಸಭೆಗಳನ್ನು ನಡೆಸಿ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದರೂ ಇನ್ನೂ ಕಾರ್ಯಗತವಾದ ಬಗ್ಗೆ ಮಂಗಳವಾರ ಸಂಜೆ ತಮ್ಮ ಕಚೇರಿಯಲ್ಲಿ ಈ ಬಗ್ಗೆ ನಡೆದ ಪ್ರಗತಿ ಪರಿಶಿಲನಾ ಸಭೆಯಲ್ಲಿ ಕೂಡಲೇ ತಡೆಗೋಡೆ ನಿರ‍್ಮಿಸಲು ಜಿಲ್ಲಾಧಿಕಾರಿಗಳು ಕಾರ್ಪಸ್ ಫಂಡ್‌ನಿಂದ ರೂ.22 ಲಕ್ಷಗಳನ್ನು ಬಿಡುಗಡೆಮಾಡಿ […]

ತೌಡುಗೋಳಿ ಕ್ಷೇತ್ರದಲ್ಲಿ : ವನಮಹೋತ್ಸವ – ಜೀರ್ಣೋದ್ದಾರ ಸಭೆ

Tuesday, June 16th, 2015
Vana Mahotsava

ತೌಡುಗೋಳಿ : ವನಮಹೋತ್ಸವ ಆಚರಣೆ ಕಾಟಾಚಾರಕ್ಕೆ ಮಾತ್ರ ಆಗಬಾರದು. ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಅಗಲೀಕರಣ ಮಾಡುವಾಗ ಮರ ಕಡಿಯುವುದು ವನ ಮಹೋತ್ಸವ ಅಲ್ಲ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರ ಹಾಗೂ ಅಯ್ಯಪ್ಪ ಸ್ವಾಮಿ ಮಂದಿರಗಳ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. ಅವರು ಶ್ರೀ ದುರ್ಗಾದೇವಿ ಕ್ಷೇತ್ರ ಹಾಗೂ ಅಯ್ಯಪ್ಪ ಸ್ವಾಮಿ ಮಂದಿರಗಳ ವತಿಯಿಂದ ಭಾನುವಾರ(ಜೂನ್14)ರಂದು ನಡೆದ ಸಾರ್ವಜನಿಕ ಸಸಿ ವಿತರಣೆ, […]

ಗ್ರಾ.ಪಂ. ವ್ಯಾಪ್ತಿಯ ವಾಣಿಜ್ಯ ಕಟ್ಟಡಗಳಿಗೆ ನಿಖರ ತೆರಿಗೆ: ಕೆಡಿಪಿ ನಿರ್ಣಯ

Thursday, June 11th, 2015
KDP

ಮಂಗಳೂರು : ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲಿರುವ ಎಲ್ಲಾ ವಾಣಿಜ್ಯ ಸಂಕೀರ್ಣ ಮತ್ತು ಬೃಹತ್ ಕಟ್ಟಡಗಳ ನಿಖರ ಅಳತೆ ಮಾಡಿ, ಗ್ರಾಮ ಪಂಚಾಯತ್‌ಗಳು ಕಟ್ಟಡ ತೆರಿಗೆ ವಿಧಿಸಲು ಇಂದು ನಡೆದ ಕೆಡಿಪಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು. ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಕಟ್ಟಡ ತೆರಿಗೆಯಲ್ಲಿ ಏಕರೂಪತೆ […]