ಬಿಕ್ಷುಕರ ಕೊಲೋನಿಗೆ ಭೇಟಿ ನೀಡಿದ ಬಿ.ಎಸ್. ಯಡಿಯೂರಪ್ಪ

Saturday, August 21st, 2010
ಬಿಕ್ಷುಕರ ಕೊಲೋನಿಗೆ ಭೇಟಿ ನೀಡಿದ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆಗಿರುವ ಆವಾಂತರಕ್ಕೆ ಇಂದು ಬೆಳಿಗ್ಗೆ 9.30ರ ಹೊತ್ತಿಗೆ ಬಿಕ್ಷುಕರ ಕಾಲೊನಿಗೆ ಭೇಟಿ ನೀಡಿ ವಿಷಾದಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರಾಗಿದ್ದ ಡಿ. ಸುಧಾಕರ್ ಅವರನ್ನು ಎತ್ತಂಗಡಿ ಮಾಡಿದ ನಂತರ ಬಿಕ್ಷುಕರ ಕಾಲೊನಿಗೆ ಭೇಟಿ ನೀಡಿರುವ  ಅವರು ಶೌಚಾಲಯ, ಆಹಾರ ಪೂರೈಕೆ ವ್ಯವಸ್ಥೆ, ಅದರ ಗುಣಮಟ್ಟ, ಭೋಜನಾಲಯ ಮುಂತಾದ ಎಲ್ಲಾ ವಿಭಾಗಗಳನ್ನೂ ಖುದ್ದಾಗಿ ಪರಿಶೀಲನೆ ನಡೆಸಿದರು. ನಿರಾಶ್ರಿತರ ಕೇಂದ್ರದ ಪ್ರತಿಯೊಂದು ಕೊಠಡಿಗೂ ಪ್ರವೇಶಿಸಿ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ  ಯಡಿಯೂರಪ್ಪ, ಇಲ್ಲಿ […]

ಹಿಂದೂ ಜನಜಾಗೃತಿ ಸಮಿತಿಯಿಂದ ಧಾರ್ಮಿಕ ಶ್ರದ್ದಾಕೇಂದ್ರಗಳ ಉಳಿಸಿ ಅಭಿಯಾನ:

Saturday, August 21st, 2010
ಹಿಂದೂ ಜನಜಾಗೃತಿ ಸಮಿತಿಯಿಂದ ಧಾರ್ಮಿಕ ಶ್ರದ್ದಾಕೇಂದ್ರಗಳ ಉಳಿಸಿ ಅಭಿಯಾನ:

ಮಂಗಳೂರು : ಸವೋಚ್ಚ ನ್ಯಾಯಾಲಯವು 2009 ರಲ್ಲಿ ಜಾರಿಗೊಳಿಸಿರುವ ಆದೇಶದಂತೆ. ದ.ಕ. ಜಿಲ್ಲೆಯಲ್ಲಿರುವ 641 ಕ್ಕೂ ಹೆಚ್ಚು ಹಿಂದು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಅನಧೀಕೃತ ಧಾರ್ಮಿಕ ಶ್ರದ್ದಾಕೇಂದ್ರಗಳನ್ನು ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ತೆರವುಗೊಳಿಸಲು ನೋಟೀಸು ಜಾರಿಮಾಡಿದೆ. ಆ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಂಗಳೂರು ಶಾಖೆ ನಗರದ ವುಡ್ ಲ್ಯಾಂಡ್ಸ್ ಹೊಟೇಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು. ನೂರು ವರ್ಷಗಳಿಗೂ ಇತಿಹಾಸವಿರುವ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಅನಧಿಕೃತ ಎಂದು ಕಂದಾಯ ಇಲಾಖೆ ಹಾಗೂ ಸ್ಥಳೀಯ ಜಿಲ್ಲಾಡಳಿತ ನೋಟೀಸು ಜಾರಿ ಮಾಡಿರುವುದು […]

ಇಕೋಲಾರ್ಟ್ 2010 ಪ್ರದರ್ಶನ

Saturday, August 21st, 2010
ಇಕೋಲಾರ್ಟ್ 2010 ಪ್ರದರ್ಶನ

ಮಂಗಳೂರು : ಇಕೋಲಾರ್ಟ್-2010, ಪ್ರಕೃತಿ ಹಾಗೂ ಜಾಗತಿಕ ತಾಪಮಾನ ಬದಲಾವಣೆಯ ಕುರಿತು ಚಿತ್ರಕಲಾ ಪ್ರದರ್ಶನ ಮತ್ತು ಸಿನಿಮಾ ಪ್ರದರ್ಶನವು ಮಂಗಳೂರು ವಿಶ್ವವಿದ್ಯಾನಿಲಯ, ಎನ್.ಜಿ ಪಾವಂಜಿ ಚೇರ್ ಇನ್ ಫೈನ್ ಆರ್ಟ್ಸ್, ಬ್ರಿಟೀಷ್ ಕೌನ್ಸಿಲ್, ಚೆನೈ ಅಸೋಸಿಯೇಶನ್ ಆಫ್ ಬ್ರಿಟೀಷ್ ಸ್ಕಾಲರ್ಸ್ ಆರ್ಟಿಸ್ಟ್ ಕಂಬೈನ್ ಸಯನ್ಸ್ ಪೋರಮ್, ವಿಶ್ವವಿದ್ಯಾನಿಲಯ ಕಾಲೇಜಿನ ಸಹಬಾಗಿತ್ವದಲ್ಲಿ ಶುಕ್ರವಾರ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಟಿ.ಸಿ ಶಿವಶಂಕರ ಮೂರ್ತಿಯವರು, ಕಂಚದಲ್ಲಿ ಚಿತ್ರ ಬಿಡಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. […]

ಸಮತಾ ಬಳಗದಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆ.

Friday, August 20th, 2010
ಸಮತಾ ಬಳಗದಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆ.

ಮಂಗಳೂರು: ಸಮತಾ (ರಿ) ಮಹಿಳಾ ಬಳಗದ, ಬಿಜೈ ಮಂಗಳೂರು (ದ.ಕ.) ಇದರ ವತಿಯಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆಯು ಇಂದು ಸಂಜೆ ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾ ಭವನದಲ್ಲಿ ನಡೆಯಿತು. ಸಮತಾ ಮಹಿಳಾ ಬಳಗವು ಈ ವರ್ಷ ವಿಂಶತಿ ಉತ್ಸವವನ್ನು ಆಚರಿಸುತ್ತಿದ್ದು, ತಲಾ 7 ವರ್ಷಗಳಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆಯನ್ನು ಆಚರಿಸುತ್ತಾ ಬಂದಿದ್ದು, ಸುಮಾರು 400 ಮಹಿಳೆಯರು ಇದರ ಸದಸ್ಯರಾಗಿದ್ದಾರೆ. ಈ ಸಂಘವು ಹಲವಾರು ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಇಂದು ವರಮಹಾಲಕ್ಷೀ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಿತು. […]