ಉಳ್ಳಾಲದ ಟೆರರಿಸ್ಟ್ ನಂಟು ಆರೋಪಿ ಮನೆಗೆ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಮುತ್ತಿಗೆ

Wednesday, August 11th, 2021
VHp

ಮಂಗಳೂರು : ಉಳ್ಳಾಲದಲ್ಲಿ  ಭಯೋತ್ಪಾದನೆ ನಡೆಯುತ್ತಿದೆ ಎಂದು ಆರೋಪಿಸಿ ವಿಶ್ವಹಿಂದೂ ಪರಿಷತ್ ಮತ್ತು  ಬಜರಂಗದಳ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಉದ್ಯಮಿ ಬಿ.ಎಂ ಬಾಷಾ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. “ಜನಜಾಗೃತಿ”  ಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿ ಮುತ್ತಿಗೆ ಯತ್ನಿಸಿದ ವಿಎಚ್‌ಪಿ ಮುಖಂಡ ಶರಣ್‌ ಪಂಪ್‌ವೆಲ್‌ ಸಹಿತ ಹಲವರನ್ನು ಉಳ್ಳಾಲ‌ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಎಚ್‌ಪಿ ಹಾಗೂ ಬಜರಂಗದಳ ಕಾರ್ಯಕರ್ತರು ಮೊದಲು ರಸ್ತೆಗಳಲ್ಲಿ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದರು. ನಂತರ ಬಿ.ಎಂ. ಬಾಷಾ ಅವರ ಮನೆಯ ಗೇಟ್‌ ಬಳಿ […]

‘ಸರಯೂ ಸಪ್ತಾಹೊ – ತುಳುವೆರೆ ಏಳಾಟೊ ಉದ್ಘಾಟನೆ

Tuesday, August 10th, 2021
Tulu Yelata

ಮಂಗಳೂರು : ‘ಸರಯೂ ಸಪ್ತಾಹ – ತುಳುವೆರೆ ಏಳಾಟೊ’ ಎಂಬ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪ್ರಪ್ರಥಮ ಮಕ್ಕಳ ಮೇಳದ ಸಪ್ತಾಹ ಇಲ್ಲಿ ದ್ವಿತೀಯ ವರ್ಷದಲ್ಲಿ ನಡೆಯುತ್ತಿದೆ. ಅನೇಕ ಹಿರಿ-ಕಿರಿಯ ಕಲಾವಿದರೊಂದಿಗೆ ಸಂಪನ್ನವಾಗುತ್ತಿರುವ ಈ ಸರಣಿ ಯಶಸ್ಸಾಗಲಿ. ತುಳುವಿಗೆ ಕಾಯಕವನ್ನು ಮಾಡುವ ಸಂಸ್ಥೆ ಇದಾಗಿದ್ದು, ಇದರ ಸರ್ವಾಂಗೀಣ ಬೆಳವಣೆಗೆಯಾಗಿ ಎಲ್ಲರಿಗೂ ಶ್ರೇಯಸ್ಸಾಗಲಿ. ತುಳುಭವನವನ್ನು ಇಂತಹಾ ಕಾರ್ಯಕ್ರಮಗಳಿಗಾಗಿ ಸದಾ ತೆರೆದಿರುತ್ತದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್‌ರವರು ‘ಸಿರಿಚಾವಡಿ’ ಯಲ್ಲಿ ಸಪ್ತಾಹವನ್ನು ಉದ್ಘಾಟಿಸುತ್ತಾ, […]

ಅಗಸ್ಟ್ 11, 12 ಮತ್ತು 13 ರಂದು ಬರಿಗಣ್ಣಿನಿಂದ ಉಲ್ಕಾಪಾತ ನೋಡಬಹುದು

Tuesday, August 10th, 2021
Ulke

ಮಂಗಳೂರು : 1862ರಲ್ಲಿ ಲೂಯಿಸ್ ಸ್ವಿಪ್ಟ್ ಮತ್ತು ಹೊರೆಸ್ ಪಾರ್ನೆಲ್ ಟಟಲ್ ಕಂಡುಹಿಡಿದ ಧೂಮಕೇತು ಉರಿದು ಉಳಿದ ಅವಶೇಷಗಳು ಈಗಲೂ ಉಲ್ಕಾಪಾತಕ್ಕೆ ಕಾರಣವಾಗುತ್ತಿವೆ. ಅಗಸ್ಟ್ 11, 12 ಮತ್ತು 13 ರಂದು ಮಧ್ಯರಾತ್ರಿಯಿಂದ ಮುಂಜಾನೆಯವರೆಗೆ ಈಶಾನ್ಯ ಭಾಗದಲ್ಲಿ ಪರ್ಸೀಯಸ್ (ಪಾರ್ಥ) ನಕ್ಷತ್ರ ಪುಂಜದ ಬಳಿ ಉಲ್ಕಾಪಾತ ಸಂಭವಿಸಲಿದ್ದು ಇದಕ್ಕೆ ‘ಪರ್ಸೀಡ್ ಉಲ್ಕಾಪಾತ’ ಎಂದು ಕರೆಯಲಾಗುತ್ತದೆ. ಈ ಉಲ್ಕಾಪಾತವು ‘ಸ್ವಿಪ್ಟ್ ಟಟಲ್’ ಧೂಮಕೇತುವಿನ ಅವಶೇಷಗಳು ಭೂಮಿಯ ವಾತಾವರಣ ಪ್ರವೇಶಿಸಿದಾಗ ಹೊತ್ತಿ ಉರಿದು, ಅದರಿಂದ ಆಕಾಶದಲ್ಲಿ ಬೆಳಕು ಪಸರಿಸಿದಂತಾಗುತ್ತದೆ. ಆಕಾಶ […]

ಚಿಕ್ಕಪ್ಪನಿಂದಲೇ ಹೈಸ್ಕೂಲ್ ವಿದ್ಯಾರ್ಥಿನಿಯ ಅತ್ಯಾಚಾರ

Tuesday, August 10th, 2021
Rape

ಮೂಡುಬಿದಿರೆ: ತೆಂಕಮಿಜಾರು ಗ್ರಾಪಂ ಪರಿಸರದಲ್ಲಿ  ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಆಕೆಯ ಚಿಕ್ಕಪ್ಪನೇ ಅತ್ಯಾಚಾರವೆಸಗಿದ ಘಟನೆ ಸೋಮವಾರ ನಡೆದಿದೆ. ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಆಕೆ ಸ್ನೇಹಿತೆ ಜತೆಗೆ ಮನೆಗೆ ತೆರಳುತ್ತಿದ್ದ ಸಂದರ್ಭ ಗುಡ್ಡ ಪ್ರದೇಶದಲ್ಲಿ ಆಕೆಯ ಚಿಕ್ಕಪ್ಪ ಮೂವತ್ತರ ಹರೆಯದ ಕುಮಾರ್ ಅಡ್ಡಗಟ್ಟಿ ವಿದ್ಯಾರ್ಥಿನಿಯರನ್ನು ಹೆದರಿಸಿದ. ಆಗ ಜತೆಗಿದ್ದ ವಿದ್ಯಾರ್ಥಿನಿ ಹೆದರಿ ಓಡಿ ಹೋದಳು. ಈ ಸಂದರ್ಭ ಅತ್ಯಾಚಾರ ನಡೆದಿದೆ. ಮೂಡುಬಿದಿರೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಕೊಲೆಗೆ ಬಳಸಿದ್ದ ಬೈಕ್, ಬೇಕಲ ಪೊಲೀಸ್ ಠಾಣೆಯಿಂದ ಕಾಣೆ

Tuesday, August 10th, 2021
congress-workers

ಕಾಸರಗೋಡು : ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಬೈಕ್ ಪೊಲೀಸ್ ಠಾಣೆಯಿಂದ ನಾಪತ್ತೆಯಾಗಿದೆ. ಎಂಟನೇ ಆರೋಪಿ ಪನಯಾಲ್‌‌ನ ಸುಬೀಶ್ (29) ಕೃತ್ಯ ನಡಿಸಿದ ದಿನ ಸಂಚರಿಸಿದ್ದ ಬೈಕ್ ಬೇಕಲ ಪೊಲೀಸ್ ಠಾಣೆಯಿಂದ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾರಕಾಸ್ತ್ರ, ವಾಹನ ಮೊದಲಾದವುಗಳ ಫಾರೆನ್ಸಿಕ್ ತಪಾಸಣೆಯನ್ನು ಸಿಬಿಐ ನಡೆಸುತ್ತಿದ್ದಂತೆ ಇದೀಗ ಪೊಲೀಸ್ ಠಾಣೆಯಿಂದ ಬೈಕ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. 2019ರ ಫೆಬ್ರವರಿ 17 ರಂದು […]

ಯಕ್ಷಗಾನದ ವೇಳೆ ಕುಸಿದು ಬಿದ್ದ ಕಲಾವಿದ

Tuesday, August 10th, 2021
Mohan Kumar

ಮೂಡುಬಿದಿರೆ :  ಅಲಂಗಾರಿನಲ್ಲಿ ಸೋಮವಾರ ರಾತ್ರಿ ನಡೆದ ಯಕ್ಷಗಾನದ ವೇಳೆ ಕಲಾವಿದರೊಬ್ಬರು ಕುಸಿದು ಬಿದ್ದಿದ್ದು, ಕೆಲವು ನಿಮಿಷಗಳ ಕಾಲ ಯಕ್ಷಗಾನ ಸ್ಥಗಿತ ಗೊಂಡ ಘಟನೆ ನಡೆಯಿತು. ಅಲಂಗಾರು ಶ್ರೀಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕರ್ಣಪರ್ವ ಪ್ರಸಂಗದಲ್ಲಿ ಖ್ಯಾತ ಕಲಾವಿದ ಮೋಹನ ಕುಮಾರ್ ಅಮ್ಮಂಜೆ ಪಾತ್ರಧಾರಿಯಾಗಿದ್ದರು. ಈ ಸಂದರ್ಭ ಅತೀವ ಬಳಲಿಕೆಯಿಂದ ಅವರು ರಂಗಸ್ಥಳದಲ್ಲಿ ಕುಸಿದು ಬಿದ್ದಿದ್ದು, 15 ನಿಮಿಷಗಳ ಕಾಲ ಯಕ್ಷಗಾನವನ್ನು ಸ್ಥಗಿತಗೊಳಿಸಲಾಯಿತು. ಬಳಿಕ ಅಮ್ಮುಂಜೆ ಅವರು ಸುಧಾರಿಸಿಕೊಂಡ ಬಳಿಕ ಮತ್ತೆ  ಯಕ್ಷಗಾನ ಆರಂಭಗೊಂಡಿತು. ಮೋಹನ ಕುಮಾರ್ ಅವರು ತಲೆಸುತ್ತು ಬಂದು ಬಿದ್ದಿರುವುದಾಗಿ […]

ಚುಟುಕು ಸಾಹಿತ್ಯಕ್ಕೆ ಪತ್ರಿಕೆಗಳಲ್ಲಿ ಓದುಗರ ಸಂಖ್ಯೆ ಹೆಚ್ಚಾಗಿದೆ’: ಬಿ ಎಂ ಮಾಣಿಯಾಟ್

Monday, August 9th, 2021
BM Panipat

ಮಂಗಳೂರು : ಪತ್ರಿಕೆಗಳಿಗೆ ಎಲ್ಲಾ ಪ್ರಕಾರಗಳ ಸಾಹಿತ್ಯವೂ ಬೇಕಾಗುತ್ತದೆ. ಅದರಂತೆ ಚುಟುಕು ಸಾಹಿತ್ಯವು ಪತ್ರಿಕೆಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದೆ. ಪತ್ರಿಕೆಗಳ ಶೀರ್ಷಿಕೆಯಿಂದ ಹಿಡಿದು ಭಗವದ್ಗೀತೆಯ ಶ್ಲೋಕಗಳೆಲ್ಲವೂ ಚುಟುಕು ಸಾಹಿತ್ಯದ ಪ್ರತಿರೂಪಗಳು.ಚುಟುಕು ಎಂದರೆ ಹರಿತವಾದ ಪಟ್ಟ ಪದ್ಯಗಳು.ಹಾಗಾಗಿ ಅವುಗಳಿಗೆ ಓದುಗರು ಹೆಚ್ಚು’ ಎಂದು ಹಿರಿಯ ಪತ್ರಕರ್ತ, ಬಹುಭಾಷಾ ಕಾದಂಬರಿಕಾರ ಬಿ.ಎಂ.ಮಾಣಿಯಾಟ್ ಹೇಳಿದರು ಪಟ್ಟರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವೆಬಿನಾರ್ ಮೂಲಕ ಮಂಗಳೂರಿನಲ್ಲಿ ಶನಿವಾರ (ಆಗಸ್ಟ್ 7) ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಪತ್ರಿಕೆಗಳಲ್ಲಿ ಚುಟುಕು ಸಾಹಿತ್ಯ’ ಎಂಬ ವಿಷಯದ […]

ಸಂಶೋಧನೆ ಪೇಪರ್‌ನಿಂದ ಜನರಿಗೆ ತಲುಪಲಿ: ಡಾ. ಧರ್ಮಾಧಿಕಾರಿ ಎನ್‌.ಎಸ್‌

Monday, August 9th, 2021
Naganath

ಮಂಗಳೂರು: ಸಂಶೋಧನೆಯನ್ನು ಪೇಪರ್‌ನಿಂದ ಜನರ ಬಳಿಗೆ, ಪ್ರಯೋಗಾಲಯಗಳಿಂದ ಸಮಾಜಕ್ಕೆ ತಲುಪಿಸುವುದು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್‌) ಯ ಆಧ್ಯತೆಯಾಗಿದೆ, ಎಂದು ಶಿಕ್ಷಣ ತಜ್ಞ, ನ್ಯಾಕ್‌ ಮತ್ತು ಯುಜಿಸಿ ಸಮಿತಿ ಸದಸ್ಯ ಡಾ. ನಾಗನಾಥ್‌ ಧರ್ಮಾಧಿಕಾರಿ ಎನ್‌.ಎಸ್‌ ತಿಳಿಸಿದ್ದಾರೆ. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ), ʼನ್ಯಾಕ್‌ ಸಂಬಂಧಿಸಿದಂತೆ ಗುಣಮಟ್ಟ ವರ್ಧನಾ ತಂತ್ರಗಳುʼ ಎಂಬ ಕುರಿತು ಸೋಮವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅವರು, ಕಾಲೇಜುಗಳ ಆಡಳಿತ ಮಂಡಳಿಗಳು ಜಾಗತಿಕ […]

ಕಾರ್ಪೋರೇಟ್ ಕಂಪೆನಿ ಗಳಿಂದ ದೇಶ ಉಳಿಸಿ – ಪ್ರತಿಭಟನಾ ಪ್ರದರ್ಶನ

Monday, August 9th, 2021
cpim

ಮಂಗಳೂರು  : ದೇಶದ ಸಂಪತ್ತನ್ನು ಕಬಳಿಸುತ್ತಿರುವ ಕಾರ್ಪೋರೇಟ್ ಕಂಪೆನಿಗಳ ವಿರುದ್ಧ ಹಾಗೂ ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ,CITU ನೇತ್ರತ್ವದಲ್ಲಿ ಸೋಮವಾರ ಕ್ಲಾಕ್ ಟವರ್ ಬಳಿಯಲ್ಲಿ  ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ಕ್ವಿಟ್ ಇಂಡಿಯಾ ಚಳುವಳಿಯ ದಿನವಾದ ಇಂದು ದೇಶಾದ್ಯಂತ ರೈತ ಕಾರ್ಮಿಕರು ಜಂಟಿಯಾಗಿ ಹಮ್ಮಿಕೊಂಡ ಕಾರ್ಪೋರೇಟ್ ಕಂಪೆನಿಗಳಿಂದ ದೇಶವನ್ನು ಉಳಿಸಿ ದಿನಾಚರಣೆಯ ಭಾಗವಾಗಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ಧಿಕ್ಕರಿಸಿ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನು […]

ಪರಿಶಿಷ್ಟ ಜಾತಿಯ ಮನೆ ನಿರ್ಮಾಣದ ಅನುದಾನ 5 ಲಕ್ಷಕ್ಕೆ ಏರಿಕೆ

Monday, August 9th, 2021
kota Srinivasa Poojary

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿನ ಬಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನವನ್ನು ತಲಾ ₹ 5 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಸೋಮವಾರ ವಿಕಾಸಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈಗ ಪರಿಶಿಷ್ಟ ಜಾತಿಯ ಪ್ರತಿ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ₹ 1.70 ಲಕ್ಷ ನೆರವು ನೀಡಲಾಗುತ್ತಿದೆ. ಈ ಮೊತ್ತದಿಂದ ಒಳ್ಳೆಯ ಮನೆ ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ […]