ಸಚಿವ ಸುನಿಲ್ ಕುಮಾರ್ ಪೊಳಲಿ ರಾಜರಾಜೇಶ್ವರಿ ಕ್ಷೇತ್ರ ಕ್ಕೆ ಭೇಟಿ

Monday, August 9th, 2021
Sunil V

ಬಂಟ್ವಾಳ : ಇಂಧನ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೊಸತನವನ್ನು ತರುವ ಮೂಲಕ ರಾಜ್ಯದ ಜನತೆಗೆ ಒಳಿತನ್ನು ಮಾಡುತ್ತೇನೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಪೊಳಲಿ ರಾಜರಾಜೇಶ್ವರಿ ಕ್ಷೇತ್ರ ಕ್ಕೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂದಿನ ಶುಕ್ರವಾರ ತಾನು ಸಚಿವನಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ಪೂರ್ವಭಾವಿಯಾಗಿ ರಾಜರಾಜೇಶ್ವರಿ ಭಕ್ತನಾದ ತಾನು ಇಂದು ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದೇನೆ. ಎಲ್ಲರ ಒಳಿತಿಗಾಗಿ ಕೆಲಸ ಮಾಡುತ್ತೇನೆ ಎಂದರು. ಬಂಟ್ವಾಳ ಶಾಸಕ […]

ತವರು ಮನೆಗೆ ಬಂದಿದ್ದ ತಾಯಿ ಮಗು ಕೆರೆಯಲ್ಲಿ ಮುಳುಗಿ ಸಾವು

Sunday, August 8th, 2021
Abhishek

ಸುಳ್ಯ: ತವರು ಮನೆಗೆ ಪೂಜೆಗೆ ಬಂದಿದ್ದ ತಾಯಿ ಮಗು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದ ಪರಿಣಾಮ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನೆಲ್ಲೂರು ಕೇಮ್ರಾಜೆ ಗ್ರಾಮದಲ್ಲಿ ನಡೆದಿದೆ. ನೆಲ್ಲೂರು ಕೇಮ್ರಾಜೆ ಗ್ರಾಮದ ಮಾಪಲಕಜೆಯಲ್ಲಿ ತವರು ಮನೆ ಹೊಂದಿರುವ ಮೆಲ್ಕಾರ್ ನಿವಾಸಿ ಅಮಿತ್ ಎಂಬವರ ಪತ್ನಿ ಸಂಗೀತಾ(30) ಮತ್ತು ಆಕೆಯ ಮಗು‌ ನಾಲ್ಕು ವರ್ಷದ ಅಭಿಮನ್ಯು ಮೃತರು. ತಾಯಿ ಮಗು  ನಾಳೆ ಮೆಲ್ಕಾರ್ಗೆ ಹೋಗುವವರಿದ್ದರು ಎನ್ನಲಾಗಿದೆ. ಪಕ್ಕದ ನೆಂಟರೋರ್ವರ ಮನೆಗೆ ಹೋಗುವಾಗ ಮಗು ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ […]

ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಕುಕ್ಕೆ ಸುಬ್ರಹ್ಮಣ್ಯ ಶಿಕ್ಷಣ ಸಂಸ್ಥೆಯಾ ಶಿಕ್ಷಕ ಬಂಧನ

Sunday, August 8th, 2021
Gururaj

ಸುಬ್ರಹ್ಮಣ್ಯ :  ವಿದ್ಯಾರ್ಥಿನಿಯ ಮೇಲೆ  ಲೈಂಗಿಕ ದೌರ್ಜನ್ಯ ಆರೋಪದಡಿ ಶಿಕ್ಷಕನೊಬ್ಬ ಬಂಧನಕ್ಕೊಳಗಾದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ರಾಯಚೂರು ಮೂಲದ ಗುರುರಾಜ್ ಬಂಧಿತ ವ್ಯಕ್ತಿ. ಕುಕ್ಕೆ ಸುಬ್ರಹ್ಮಣ್ಯ ಶಿಕ್ಷಣ ಸಂಸ್ಥೆಯೊಂದರ ಪ್ರೌಢಶಾಲಾ ವಿಭಾಗದ ಶಿಕ್ಷಕನಾಗಿರುವ ಈತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ನೀಡಿದ ದೂರಿನನ್ವಯ ಶಾಲಾ ಶಿಕ್ಷಕನನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದು, ಫೋಕ್ಸೊ ಪ್ರಕರಣ ದಾಖಲಿಸಿದ್ದಾರೆ.

ರಸ್ತೆ ಅಫಘಾತ : ಮೃತ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ಹಸ್ತಾಂತರ

Sunday, August 8th, 2021
noor

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವ್ಯಕ್ತಿಯೊಬ್ಬರು ವಾಹನ ಅಪಘಾತದಲ್ಲಿ ಮೃತರಾಗಿದ್ದರು. ಅವರ ಕುಟುಂಬಕ್ಕೆ ಇದೀಗ 25 ಲಕ್ಷ ರೂ. ಪರಿಹಾರ ಮೊತ್ತ ಬಿಡುಗಡೆಯಾಗಿದೆ. ಒಮಾನ್‌ ದೇಶದ ಮಬೇಲದಲ್ಲಿ 2 ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ತೀರಾ ಬಡಕುಟುಂಬದ ಯುವಕ ಬೆಳ್ತಂಗಡಿ ತಾಲೂಕಿನ ಸುನ್ನತ್‌ ಕೆರೆ ನಿವಾಸಿ ನೂರ್‌ ಮುಹಮ್ಮದ್‌ (25) ಅವರು “ಮಸ್ಕತ್‌ ವಾಟರ್‌’ ಬಾಟಲಿ ನೀರು ಕಂಪೆನಿಯಲ್ಲಿ ಸೇಲ್ಸ್‌ಮನ್‌ ಆಗಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. 2019ರ ಮೇ 11ರಂದು ಸಂಭವಿಸಿದ ವಾಹನ ಅಪಘಾತದಲ್ಲಿ ಅವರು ಮತ್ತು ಚಾಲಕ […]

ಪಾರ್ಕ್ ಮಾಡಿದ ಕಾರುಗಳ ಗ್ಲಾಸ್ ಒಡೆದು ದೋಚುವ ಉತ್ತರ ಭಾರತದ ಖತರ್ನಾಕ್ ಗ್ಯಾಂಗ್ ಮಂಗಳೂರಿನಲ್ಲಿ !

Sunday, August 8th, 2021
Car Glass Breaking

ಮಂಗಳೂರು :  ಉತ್ತರ ಭಾರತದ ಖತರ್ನಾಕ್ ಗ್ಯಾಂಗ್ ವೊಂದು ನಗರದಲ್ಲಿ ಕಾರ್ಯಾಚರಿಸುತ್ತಿದ್ದು, ಪಾರ್ಕ್ ಮಾಡಿದ ಕಾರುಗಳ ಗ್ಲಾಸ್ ಒಡೆದು ಒಳಗಿದ್ದ ಬ್ಯಾಗ್, ಲ್ಯಾಪ್‌ಟಾಪ್ ಮೊದಲಾದ ಸೊತ್ತುಗಳನ್ನು ದೋಚುವ ಪ್ರಕರಣ ಶುಕ್ರವಾರ ದಾಖಲಾಗಿವೆ. ಲೈಟ್‌ಹೌಸ್ ಹಿಲ್ ರಸ್ತೆಯಲ್ಲಿರುವ ಖಾಸಗಿ ಕಂಪನಿ ಏರಿಯಾ ಮ್ಯಾನೇಜರ್ ಪ್ರದೀಪ್ ರೈ ಮಾಲೀಕತ್ವದ ಕಾರನ್ನು ಕಚೇರಿಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಅದರ ಬಲಭಾಗದ ಹಿಂಬದಿ ಗಾಜು ಒಡೆದು ಕಾರಿನೊಳಗಿದ್ದ 40 ಸಾವಿರ ರೂ., ಕಚೇರಿಗೆ ಸಂಬಂಧಿಸಿದ ದಾಖಲಾತಿಗಳಿದ್ದ ಬ್ಯಾಗನ್ನು ಕಳ್ಳರು ದೋಚಿದ್ದಾರೆ. ಬಂದರು ಠಾಣೆಯಲ್ಲಿ […]

ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಭೇಟಿ ಮಾಡಿ ಮಾತುಕತೆ ನಡೆಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

Saturday, August 7th, 2021
Srinivas pooajary

ಬಂಟ್ವಾಳ  : ನೂತನ ಸಚಿವ ಸಂಪುಟದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಅವರ ಕಾಲಿಗೆ ಬಿದ್ದು  ಆರ್ಶೀವಾದ ಪಡೆದರು. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಆಗಮಿಸಿ ಡಾ|ಪ್ರಭಾಕರ ಭಟ್ ಅವರನ್ನು ಭೇಟಿ ಮಾಡಿ ಕಾಲು ಮುಟ್ಟಿ ನಮಸ್ಕಾರ ಮಾಡಿದರು.  ಪ್ರಭಾಕರ್ ಭಟ್ ಅವರಿಗೆ  ಶಾಲು ಹೊದಿಸಿ ಸಿಹಿತಿಂಡಿ ಬಾಯಿಗೆ ತಿನ್ನಿಸಿದರು. ಬಳಿಕ ಕೆಲ ಹೊತ್ತು ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು.

ಸಂಘಟನಾತ್ಮಕ ಕರಾವಳಿ ಜಿಲ್ಲೆಗೆ ಪ್ರಮುಖ ಖಾತೆ ಬಿಜೆಪಿ ಹರ್ಷ : ಸುದರ್ಶನ ಎಂ.

Saturday, August 7th, 2021
Sudarshana-M

ಮಂಗಳೂರು  : ಬಿಜೆಪಿ ಕಾರ್ಯಕರ್ತರ ಪಾರ್ಟಿ. ಪ್ರಾಮಾಣಿಕತೆ, ನಿಷ್ಠೆಯಿಂದ ಕಾರ್ಯ ಮಾಡುವವರನ್ನು ಯಾವತ್ತೂ ಬಿಜೆಪಿ ಕೈ ಬಿಡುವುದಿಲ್ಲ. ರಾಜ್ಯ ಸರ್ಕಾರಕ್ಕೆ 29 ಶಾಸಕರುಗಳನ್ನು ನೀಡಿದ ಕರಾವಳಿ ಜಿಲ್ಲೆಗೆ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೂಕ್ತ ಸ್ಥಾನಮಾನ ನೀಡಿದ್ದು ದಕ್ಷಿಣ ಕನ್ನಡ ಬಿಜೆಪಿ ಕಾರ್ಯಕರ್ತರಿಗೆ ಹರ್ಷ ತಂದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಸುದರ್ಶನ ಎಂ. ತಿಳಿಸಿದರು. ಎಸ್. ಅಂಗಾರರವರಿಗೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಖಾತೆ, ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗ ಅಭಿವೃದ್ದಿ ಖಾತೆ, ವಿ.ಸುನಿಲ್ […]

ಆಯುಷ್ಮಾನ್ ಕಾರ್ಡ್ ಇದ್ದರೂ, ರೋಗಿಗಳಿಂದ ಹೆಚ್ಚು ಹಣ ವಸೂಲಿ ಮಾಡಿದ ಏಳು ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ

Saturday, August 7th, 2021
Ayushman

ಮಂಗಳೂರು : ಕೊರೋನಾ ಸೋಂಕು ಬಂದ ಮೇಲಂತೂ ಖಾಸಗಿ ಆಸ್ಪತ್ರೆಗಳ ಸುಲಿಗೆಗಳಿಂದ ಜನ ಮನೆ ಮಠ ಮಾರಿ ತಮ್ಮವರನ್ನೂ ಕಳಕೊಂಡಿದ್ದಾರೆ. ಅದರಲ್ಲೂ ಸರಕಾರದ ಅಯುಷ್ಮಾನ್ ಕಾರ್ಡ್ ಇದ್ದರೂ ಅದನ್ನು ತಿರಸ್ಕರಿಸಿದ ಆಸ್ಪತ್ರೆಗಳು ಹೆಚ್ಚು ಬಿಲ್ಲು ವಸೂಲಿ ಮಾಡುತ್ತಿದ್ದವು. ಅಂತಹ  ಮಂಗಳೂರಿನ ಏಳು ಖಾಸಗಿ ಆಸ್ಪತ್ರೆಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕುಂದು ಕೊರತೆ ಪರಿಹಾರ ಸಮಿತಿ ಸಭೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಸಂತ್ರಸ್ತರು ದಾಖಲಿಸಿದ್ದ […]

ಚಾಲಕ, ಕೃಷಿಕ ಇರಾ ಆಚೇಬೈಲು ಪದ್ಮನಾಭ ನಿಧನ

Friday, August 6th, 2021
padmanabha

ಮಂಗಳೂರು : ಬಂಟ್ವಾಳ ತಾಲೂಕು ಇರಾ ಆಚೇಬೈಲು ಪದ್ಮನಾಭ ಬೆಳ್ಚಡ್ಡ (63) ನಿಧನರಾಗಿದ್ದಾರೆ. ಚಾಲಕರಾಗಿದ್ದ ಅವರು ಕೃಷಿಕರಾಗಿಯೂ ಇದ್ದರು. ಅಲ್ಪಕಾಲದ ಅಸೌಖ್ಯದ ಬಳಿಕ ಅವರು ಶುಕ್ರವಾರ ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ ಇಬ್ಬರು ಪುತ್ರಿಯರು, ಒಬ್ಬ ಪುತ್ರನನ್ನ ಅಗಲಿದ್ದಾರೆ.

ಸ್ನಾತಕ/ಸ್ನಾತಕೋತ್ತರ ಪರೀಕ್ಷೆಗಳು ಆಗಸ್ಟ್‌ 11 (ಬುಧವಾರ) ರಿಂದ ಮರು ಪ್ರಾರಂಭ

Thursday, August 5th, 2021
Mangalore University

ಮಂಗಳೂರು :  ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳ ನಿರ್ದೇಶನ ಮತ್ತು ಮಾನ್ಯ ಜಿಲ್ಲಾಧಿಕಾರಿಗಳ ಸಲಹೆಯಂತೆ ಇಂದು (ಆಗಸ್ಟ್‌ 05) ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯಲ್ಲಿ, ಈ ಹಿಂದೆ ಜಿಲ್ಲಾಧಿಕಾರಿಗಳ ಆದೇಶದಂತೆ ಮುಂದೂಡಲಾಗಿದ್ದ ಸ್ನಾತಕ/ಸ್ನಾತಕೋತ್ತರ ಪರೀಕ್ಷೆಗಳನ್ನು ಆಗಸ್ಟ್‌ 11 (ಬುಧವಾರ) ರಿಂದ ಕೊವಿಡ್‌ ಶಿಷ್ಟಾಚಾರದೊಂದಿಗೆ ಮರುಪ್ರಾರಂಭಿಸಲು ನಿರ್ಧರಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಕಾಲೇಜಿನ ವೆಬ್‌ಸೈಟ್‌ ಮೂಲಕ ತಿಳಿಸಲಾಗುವುದು. ವಾಹನ ಸೌಲಭ್ಯ ಅಥವಾ ಕೊವಿಡ್‌ ಕಾರಣಗಳಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆಯನ್ನು ನಡೆಸಲಾಗುವುದು.