ಪ್ರವಾಸೋದ್ಯಮ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಕೋವಿಡ್‌ನಿಂದ ಸಾವು

Monday, June 7th, 2021
Somashekara

ಉಡುಪಿ : ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ ಬನವಾಸಿ ಮಂಗಳೂರಿನ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಸೋಮವಾರ ನಿಧನರಾಗಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯವರಾದ ಸೋಮಶೇಖರ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಉಡುಪಿ ಸಹಾಯಕ ನಿರ್ದೇಶಕರಾಗಿ 2020ರ ನ. 24 ರಂದು ಅಧಿಕಾರ ಸ್ವೀಕರಿಸಿದ್ದ ಇವರು, ಪಡುಬಿದ್ರೆ ಬೀಚ್ ಗೆ ಬ್ಲೂ ಫ್ಲ್ಯಾಗ್ ಅಂತಾರಾಷ್ಟ್ರೀಯ ಮಾನ್ಯತೆ ಸಿಗುವಲ್ಲಿ ಶ್ರಮಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದ […]

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

Monday, June 7th, 2021
Youth Congress

ಮಂಗಳೂರು : ದ.ಕ. ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ  ಸೋಮವಾರ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಮುಖಂಡ ಇಬ್ರಾಹಿಂ ಕೋಡಿಜಾಲ್, ಪ್ರಧಾನಿ ಮೋದಿ ನೇತೃತ್ವದ ಸರಕಾರ ಪದೇ ಪದೇ ಡೀಸೆಲ್, ಪೆಟ್ರೋಲ್ ಜತೆಗೆ ಅಡುಗೆ ಅನಿಲ ಬೆಲೆ ಏರಿಕೆ ಮಾಡಿ ಈ ಕೊರೋನ ಸಂಕಷ್ಟದಲ್ಲಿ ಮತ್ತಷ್ಟು ತೊಂದರೆ ಕೊಡುತ್ತಿದೆ ಎಂದರು. ಒಂದು ತಿಂಗಳ ಅವಧಿಯಲ್ಕಿ 18 ಬಾರಿ ತೈಲಗಳ ಬೆಲೆ ಏರಿಕೆ ಮಾಡಲಾಗಿದೆ. […]

ಕೊರೋನ ಸೋಂಕು ಜೂನ್ 5 : ದಕ್ಷಿಣ ಕನ್ನಡ 609 – 5 ಸಾವು, ಉಡುಪಿ 494 – 2 ಸಾವು

Sunday, June 6th, 2021
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ 609 ಮಂದಿಗೆ ಕೊರೋನ ಸೋಂಕು ದೃಢಪಡುವುದರೊಂದಿಗೆ ಈವರೆಗೆ ಕೊರೋನ ಸೋಂಕಿಗೊಳಗಾದವರ ಸಂಖ್ಯೆ 80,080ಕ್ಕೇರಿದೆ. 5 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 950ಕ್ಕೇರಿದೆ. ಭಾನುವಾರ 862 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅದರಂತೆ ಈವರೆಗೆ ಗುಣಮುಖ ರಾದವರ ಸಂಖ್ಯೆ 71,580ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ 7,550 ಸಕ್ರಿಯ ಪ್ರಕರಣವಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರಗೆ 8,71,018 ಮಂದಿಯ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ […]

ಇಂಡಸ್ಟ್ರಿಯಲ್ ಸೈಟ್‌‌ನಲ್ಲಿ ಟಿಪ್ಪರ್ ಅಡಿಗೆ ಬಿದ್ದು ಚಾಲಕ ಮೃತ್ಯು

Sunday, June 6th, 2021
Harish-Kumar

ಉಡುಪಿ :  ಟಿಪ್ಪರ್‌ನಿಂದ ಮಣ್ಣು ಅನ್‌‌ಲೋಡ್ ಮಾಡುವ ವೇಳೆ ಟಿಪ್ಪರ್ ಅಡಿಗೆ ಬಿದ್ದು ಚಾಲಕ ಮೃತಪಟ್ಟ ಘಟನೆ ಉಡುಪಿಯ ನಂದಿಕೂರಿನಲ್ಲಿ ನಡೆದಿದೆ. ಮೃತ ಟಿಪ್ಪರ್ ಚಾಲಕನನ್ನು ಹರೀಶ್ ಕುಮಾರ್ ಎಂದು ಗುರುತಿಸಲಗಿದೆ. ಟಿಪ್ಪರ್‌‌ನಿಂದ ಮಣ್ಣು ಅನ್‌‌ಲೋಡ್ ಆಗದೇ ಇರುವುದನ್ನು ಗಮನಿಸಿ ಪರೀಕ್ಷಿಸಿಲು ಡ್ರೈವರ್ ಸೀಟ್ ನಿಂದ ಕೆಳಗಿಳಿದ ವೇಳೆ ನಿಯಂತ್ರಣ ತಪ್ಪಿದ ಟಿಪ್ಪರ್ ಚಾಲಕನ ಮೇಲೆ ಬಿದ್ದಿದೆ. ಮಂಗಳೂರು ಉದ್ಯಮಿಗೆ ಸೇರಿದ್ದ ಇಂಡಸ್ಟ್ರಿಯಲ್ ಸೈಟ್‌‌ನಲ್ಲಿ ನಡೆಯುತಿದ್ದ ಕೆಲಸದ ವೇಳೆ ಈ ದುರ್ಘಟನೆ ನಡೆದಿದ. ಮೃತ‌‌‌ ಹರೀಶ್ ಕುಮಾರ್ ಈ […]

ತೊಟ್ಟಿಲಲಿ ಮ್ಯೂಸಿಕ್ ಆಲ್ಬಮ್ ಬಿಡುಗಡೆ

Sunday, June 6th, 2021
Thottilalli

ಮಂಗಳೂರು  : ಯುವ ಸಂಗೀತಗಾರ ಹರಿಕಿರಣ ಹೆಚ್ ಮತ್ತು ತಂಡದವರಿಂದ ಕನ್ನಡದ ಜೋಗುಳ ಹಾಡುಗಳ ಸಾಲಿಗೆ ಹೊಸದೊಂದು ಸೇರ್ಪಡೆ “ತೊಟ್ಟಿಲಲಿ”. ನಿನ್ನೆ ಹರಿಕಿರಣ ಹೆಚ್ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ಮುಖಾಂತರ ತೆರೆಕಂಡ “ತೊಟ್ಟಿಲಲಿ” ಹಾಡು ಕೇಳುಗರ ಮನ ಮೆಚ್ಚಿದೆ. ತಮ್ಮ ಮೊದಲ ಪ್ರಯತ್ನದಲ್ಲೇ  ಹಾಡು ಬಿಡುಗಡೆಯಾದ ಒಂದು ದಿನದೊಳಗೆ ಸಾವಿರಾರು ಜನ ವೀಕ್ಷಿಸಿರುವುದು ಸಾಕ್ಷಿಯಾಗಿದೆ. ಜಿಯೋ ಸಾವನ್, ಗಾನ, ಆಪಲ್ ಮ್ಯೂಸಿಕ್, ಅಮೆಜಾನ್ ಮ್ಯೂಸಿಕ್, ವಿಂಕ್ ಮ್ಯೂಸಿಕ್ ಮುಂತಾದ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಗಳಲ್ಲಿಯೂ ಈ ಹಾಡು ಲಭ್ಯವಿದೆ. […]

ಪಿಲಿಕುಳದ ಮೃಗಾಲಯದಲ್ಲಿ ಹಾವು ಸೇರಿ ಆರು ಪ್ರಾಣಿ ಪಕ್ಷಿಗಳ ಸಂತಾನಾಭಿವೃದ್ಧಿ

Sunday, June 6th, 2021
Rani Huli

ಮಂಗಳೂರು : ಪಿಲಿಕುಳದ ಮೃಗಾಲಯದಲ್ಲಿ ರಾಣಿ ಹುಲಿ, ಕಾಡುಶ್ವಾನ ‘ದೋಳ್‌’ , ‘ರಿಯಾ’ ಪಕ್ಷಿ, ‘ಲಟಿಕ್ಯುಲೇಟಿಡ್‌’ ಹೆಬ್ಬಾವು, ಕಾಳಿಂಗ ಸರ್ಪ ಇವು ಸಂತಾನಾಭಿವೃದ್ದಿಯನ್ನು ಮಾಡಿದೆ  ಪಿಲಿಕುಳ ಜೈವಿಕ ಉದ್ಯಾವನದ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿಯವರು ತಿಳಿಸಿದ್ದಾರೆ. ಪಿಲಿಕುಳ ಮೃಗಾಲದಲ್ಲಿರುವ 10 ವರ್ಷ ಪ್ರಾಯದ ‘ರಾಣಿ’ ಹುಲಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಹಿಂದೆ 2019ರಲ್ಲಿ ರೇವಾ, ಸುಧಾ, ಜಯರಾಮ, ಸಂಜಯ ಮತ್ತು ವಿಜಯ ಎಂಬ 5 ಮರಿಗಳಿಗೆ ಜನ್ಮ ನೀಡಿದ್ದು, ಅದು ಈಗ ಬೆಳೆದು ದೊಡ್ಡದಾಗಿವೆ. ಈಗ ಜನಿಸಿದ ಮರಿಗಳು ಆರೋಗ್ಯವಾಗಿದ್ದು […]

ಕುಂದಾಪುರ : ಕಾರು ಚಲಾಯಿಸಿ ವ್ಯಕ್ತಿಯನ್ನು ಕೊಲೆ ಮಾಡಿದ ಪಂಚಾಯತ್ ಅಧ್ಯಕ್ಷ

Sunday, June 6th, 2021
Udaya Ganiga

ಕುಂದಾಪುರ : ಗ್ರಾಮ ಪಂಚಾಯತ್ ಅಧ್ಯಕ್ಷ ನೊಬ್ಬ ದ್ವೇಷದಲ್ಲಿ ವ್ಯಕ್ತಿಯೊಬ್ಬರನ್ನು ತನ್ನ ಕಾರು ಢಿಕ್ಕಿ ಹೊಡೆಸಿ ಕೊಲೆಗೈದ  ಘಟನೆ ಶನಿವಾರ ರಾತ್ರಿ ಯಡಮೊಗೆ ಗ್ರಾಪಂ ವ್ಯಾಪ್ತಿಯ ಹೊಸಬಾಳು ಎಂಬಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ಯನ್ನು ಹೊಸಬಾಳು ನಿವಾಸಿ ಉದಯ ಗಾಣಿಗ(40)  ಎಂದು ಗುರುತಿಸಲಾಗಿದೆ. ತನ್ನ ಪತಿಯನ್ನು ಕೊಲೆ ಮಾಡಿರುವುದಾಗಿ  ಮೃತರ ಪತ್ನಿ ನೀಡಿದ ದೂರಿನಂತೆ ಕೊಲೆ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿ ಯಡಮೊಗೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಳವೆ ಬಾವಿ […]

ಎಂಆರ್ ಪಿಎಲ್ ಉದ್ಯೋಗ ನೇಮಕಾತಿಯಲ್ಲಿ ತುಳುವರಿಗೆ ಅನ್ಯಾಯ, ಮನೆಮನೆ ಯಲ್ಲಿ ಪ್ರತಿಭಟನೆ

Saturday, June 5th, 2021
mrpl

ಮಂಗಳೂರು : ಎಂಆರ್ ಪಿಎಲ್ ಉದ್ಯೋಗ ನೇಮಕಾತಿಯಲ್ಲಿತುಳುವರಿಗೆ ಅನ್ಯಾಯ ಆಗಿದೆ ಎಂದು ಸಮಾನ ಮನಸ್ಕ ಸಂಘಟನೆಗಳು “ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕುಲೆಗ್ ಮಲ್ಲಪಾಲ್” ಎಂಬ ವಿಷಯಗಳನ್ನು ಮುಂದಿಟ್ಟು ಮನೆ ಮನೆ ಪ್ರತಿಭಟನೆ ಗೆ ಕರೆ ನೀಡಿದ್ದವು. ಈ ಕರೆಗೆ ಅವಳಿ ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲಸಿಕ್ಕಿದೆ. ಡಿವೈಎಫ್‍ಐ ನೇತೃತ್ವದ ಸಮಾನ ಮನಸ್ಕ ಸಂಘಟನೆಗಳ ಜೊತೆಗೆ ಯುವ ಕಾಂಗ್ರೆಸ್, ಯುವ ಜನತಾ ದಳ, ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು, ಕಾರ್ಮಿಕ, ಮಹಿಳಾ ಸಂಘಟನೆಗಳು ಮಾತ್ರ ವಲ್ಲದೆ ಜಿಲ್ಲೆಯ ವಿವಿಧ ಯುವಕ […]

ಗ್ರಾಮ ಪಂಚಾಯತ್ ಮತ್ತು ನಗರ, ಸ್ಥಳೀಯಾಡಳಿತ ಜನಪ್ರತಿನಿಧಿಗಳಿಗೆ ಲಸಿಕೆ ನೀಡಲು ಸರ್ಕಾರಿ ಆದೇಶ – ಸಚಿವ ಕೋಟ ಹೇಳಿಕೆ

Saturday, June 5th, 2021
kota srinivas poojary

ಮಂಗಳೂರು :  ರಾಜ್ಯದಾದ್ಯಂತ 6020ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಮತ್ತು ಇತರ ನಗರ, ಸ್ಥಳೀಯಾಡಳಿತ ಸಂಸ್ಥೆಗಳ ಸುಮಾರು 1ಲಕ್ಷ ಜನಪ್ರತಿನಿಧಿಗಳನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ ತುರ್ತು ಲಸಿಕೆ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಇಲಾಖೆಯ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರಿಗೆ ಮಾಡಿದ […]

ಉತ್ತಮ ಪರಿಸರ ನಮ್ಮೆಲ್ಲರ ಹೊಣೆಃ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ

Saturday, June 5th, 2021
World Environmental day

ಮಂಗಳೂರು :  ದೈವದತ್ತವಾದ ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಬಿಟ್ಟುಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು. ಅವರು ಮಂಗಳೂರಿನ ಕದ್ರಿ ಆಶ್ರಮ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಮಂಗಳೂರು ಮಹಾನಗರಪಾಲಿಕೆ, ನೆಹರು ಯುವ ಕೇಂದ್ರ, ಮಂಗಳೂರು ಗ್ರೀನ್ ಬ್ರಿಗೇಡ್ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು. ಅರಣ್ಯ ಮತ್ತು ಪರಿಸರವನ್ನು ಉಳಿಸುವುದಲ್ಲದೆ ಅಭಿವೃದ್ಧಿಯ ಹೆಸರಲ್ಲಿ ನಾಶವಾಗುತ್ತಿರುವ ಅರಣ್ಯಕ್ಕೆ ಬದಲಿಯಾಗಿ ಅರಣ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಜನರಲ್ಲಿ […]