ಸರಕಾರದಲ್ಲಿ18 ವಯಸ್ಸಿನವರಿಗೆ ಲಸಿಕೆ ಇಲ್ಲ, ಖಾಸಗಿ ಆಸ್ಪತ್ರೆಯಲ್ಲಿ 850 ರೂ.ಗೆ ಸಿಗುತ್ತದೆ : ಲುಕ್ಮಾನ್

Tuesday, June 1st, 2021
lukman

ಮಂಗಳೂರು : ಸರಕಾರ 18ರಿಂದ 44ರ ವಯೋಮಾನದವರಿಗೆ ಲಸಿಕೆ ನೀಡುವುದನ್ನು ಸ್ಥಗಿತ ಮಾಡಿದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ದರದಲ್ಲಿ ಲಸಿಕೆ ನೀಡಲಾಗುತ್ತಿದೆ ಇದು ಮೋದಿ ಸರಕಾರ  ಶ್ರೀಮಂತರಿಗೆ ಮಾಡಿಕೊಟ್ಟ ಸವಲತ್ತು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ ಹೇಳಿದ್ದಾರೆ. ಮಂಗಳವಾರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಜನರಿಗೆ, ಗ್ರಾಮೀಣ ಪ್ರದೇಶದ ಜನತೆಗೆ, ಬಡವರಿಗೆ ಕೋವಿಡ್ ಲಸಿಕೆ ದೊರೆಯುತ್ತಿಲ್ಲ. ಬಿಜೆಪಿ ಸರಕಾರ ಕೇವಲ ಶ್ರೀಮಂತರಿಗೆ ಮಾತ್ರ ಲಸಿಕೆ ಪೂರೈಸುವ ನೀತಿಯನ್ನು ಅನುಸರಿಸುತ್ತಿದೆ. ಜನ ವಿರೋಧಿ […]

ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿರೀಕ್ಷೆಗೂ ಮೀರಿದ ಹಣ ಸಂಗ್ರಹ

Tuesday, June 1st, 2021
ramamadhir

ಉಡುಪಿ: ಕಳೆದ ವರ್ಷ ಆ.5ರಂದು ಪ್ರಧಾನಿ ಮೋದಿಯವರು ಮಂದಿರ ನಿರ್ಮಾಣದ ಭೂಮಿಪೂಜೆ ನೆರವೇರಿಸಿದ ನಂತರ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ನಿಧಿ ಸಮರ್ಪಣಾ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮಾ.31ರ ವರೆಗಿನ ಲೆಕ್ಕಾಚಾರದ ಪ್ರಕಾರ ಮಂದಿರಕ್ಕೆ 3,200 ಕೋಟಿ ರೂ.ಸಮರ್ಪಣೆಯಾಗಿದೆ. ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ 2 ಸಾವಿರ ಕೋಟಿ ರೂ.ವೆಚ್ಚ ಅಂದಾಜು ಮಾಡಲಾಗಿದೆ. ಉಳಿದ ಧನದ ಸದುಪಯೋಗ ಕುರಿತು ಆರ್ಥಿಕ ತಜ್ಞರ ಸಮಿತಿಯ ಸಲಹೆಯನ್ನೂ ಪಡೆಯಲಾಗಿದೆ. ಈ ಬಗ್ಗೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಮುಂದಿನ […]

ಲಾಕ್ ಡೌನ್ : ಶ್ರೀ ಕ್ಷೇತ್ರ ಕಾರಿಂಜದಲ್ಲಿ ಅನ್ನ ಆಹಾರವಿಲ್ಲದೆ ನರಳಾಡುತ್ತಿದೆ ವಾನರ ಸಂತತಿ

Tuesday, June 1st, 2021
vanara

ಬಂಟ್ವಾಳ :  ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ದೇವಾಲಯ ಶ್ರೀ ಕ್ಷೇತ್ರ ಕಾರಿಂಜದಲ್ಲಿರುವ ಮಂಗಗಳು ಅನ್ನವಿಲ್ಲದೆ ಉಪವಾಸದಿಂದ ನರಳಾಡುತ್ತಿದೆ. ಲಾಕ್ ಡೌನ್  ಸಮಯದಲ್ಲಿ ನಿರ್ಗತಿಕರಿಗೆ ಮತ್ತು ಬಡವರಿಗೆ ಕಿಟ್ ಗಳನ್ನು ಕೊಡುವ ದಾನಿಗಳು, ಈ ಮಂಗಗಳಿಗೆ ಆಹಾರ ನೀಡಿದರೆ ಕೊಂಚ ಪ್ರಾಣಿ ದಯೆಯಾದರೂ ಬರಬಹುದು. ಅಲ್ಲದೆ ಕಾರಿಂಜದಲ್ಲಿ ಮಂಗಗಳ ಆಕರ್ಷಣೆ ಯಿಂದ ಅವುಗಳನ್ನು ದೇವ ಸ್ವರೂಪಿ ಎಂದು ನಂಬಿಕೆಯಿಂದ  ಸಾವಿರಾರು  ಭಕ್ತರು ಬಂದು ದೇವರ ದರ್ಶನ ಪಡೆದು ಕಾಣಿಕೆ ಹಾಕಿದ ದುಡ್ಡಿನಿಂದಾದರೂ ಅವುಗಳಿಗೆ ಅನ್ನದಾನ ಮಾಡಬಹುದು. ಈಗ ಕೊರೊನಾ ಲಾಕ್ ಡೌನ್ […]

ಸುಬ್ರಹ್ಮಣ್ಯ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಸಾವು

Monday, May 31st, 2021
Prathiksha

ಸುಬ್ರಹ್ಮಣ್ಯ:  ಸುಬ್ರಹ್ಮಣ್ಯ ಮೂಲದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು  ಆರೋಗ್ಯದಲ್ಲಿ ದಿಢೀರ್ ಏರುಪೇರುಗೊಂಡ  ಬೆಂಗಳೂರಿನಲ್ಲಿ ಮೃತರಾದರು. ಮಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಯಾಗಿರುವ ಕಡಬ ತಾಲೂಕಿನ ಐನೆಕಿದು ಗ್ರಾಮದ ಕೂಜುಗೋಡು ಕಟ್ಟೆಮನೆ ಮನೆತನದ ಬೆಂಗಳೂರಿನ ಉದ್ಯಮಿ ದಿನೇಶ್ ಕೆ. ಅವರ ಪುತ್ರಿ ಪ್ರತೀಕ್ಷಾ(21) ಬೆಂಗಳೂರಿನಲ್ಲಿ ನಿಧನರಾದರು. ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಪ್ರತೀಕ್ಷಾ ಬೆಂಗಳೂರಿನ ಮನೆಗೆ ಹೋಗಿದ್ದರು. ರಕ್ತದೊತ್ತಡ ಕುಸಿತಕ್ಕೊಳಗಾಗಿ  ಅಸೌಖ್ಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ  ನಿಧನರಾದರು. ಅವರು ತಂದೆ, ತಾಯಿ, ಸಹೋದರಿ ಹಾಗೂ ಸಹೋದರನನ್ನು ಅಗಲಿದ್ದಾರೆ. […]

ಸ್ಥಳೀಯ ಮಾರುಕಟ್ಟೆಗಳಲ್ಲಿ ದಿನಸಿ ಸಾಮಾಗ್ರಿಗಳು, ತರಕಾರಿಗೆ ಗ್ರಾಹಕರಿಂದ ಹೆಚ್ಚು ಹಣ ವಸೂಲಿ, ದೂರು

Monday, May 31st, 2021
vegetable

ಮಂಗಳೂರು : ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಹಕ ರಿಂದ ಕೆಲವೊಂದು ದಿನಸಿ ಸಾಮಾಗ್ರಿಗಳು, ತರಕಾರಿ, ಹಣ್ಣು ಹಂಪಲುಗಳ ವರ್ತಕರು ಸಿಕ್ಕಿದ್ದೇ ಲಾಭ ಎಂಬಂತೆ ಮನ ಬಂದಂತೆ ಹಣ ವಸೂಲಿ ಮಾಡುತ್ತಿರುವ  ಹಿನ್ನಲೆಯಲ್ಲಿ ಸಾರ್ವಜನಿಕರು  ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವುದರಿಂದ,  ಅಂತಹ ವರ್ತಕರನ್ನು ಪತ್ತೆ ಹಚ್ಚಲು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್19 ಸೋಂಕು ಪ್ರಸರಣದ ಸರಪಳಿಯನ್ನು ತುಂಡರಿಸುವ ಸಲುವಾಗಿ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತದ ವತಿಯಿಂದ ಕಾಲಕಾಲಕ್ಕೆ ಎಲ್ಲಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಸರಣದ ಸರಪಳಿಯನ್ನು ತುಂಡರಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಲಾಕ್‍ಡೌನ್‍ನ […]

ಕಾಂಗ್ರೆಸ್ ನಾಯಕರಂತೆ ಯಡಿಯೂರಪ್ಪ ಪಕ್ಷಾಂತರ ಮಾಡಿ ಮುಖ್ಯಮಂತ್ರಿ ಆದವರಲ್ಲ : ನಳಿನ್ ಕುಮಾರ್ ಕಟೀಲ್

Monday, May 31st, 2021
Nalin Kumar Kateel

ಮಂಗಳೂರು  :  ಸಿದ್ದರಾಮಯ್ಯ ಅವರು ತಾವು ಎಲ್ಲಿದ್ದವರು, ತಮ್ಮ ಗುರುಗಳು ಯಾರು ಎಂಬುದನ್ನು ಯೋಚಿಸಬೇಕು. ಕಾಂಗ್ರೆಸ್‍ಗೆ ಹೀನಾಮಾನವಾಗಿ ಬಯ್ಯುತ್ತಿದ್ದ ವ್ಯಕ್ತಿ, ಅದೇ ಪಕ್ಷಕ್ಕೆ ಬಂದು ಸಿಎಂ ಆಗಿದ್ದಾರೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ. “ಕಾಂಗ್ರೆಸ್ ನಾಯಕರಂತೆ ಪಕ್ಷಾಂತರ ಮಾಡಿಯೋ, ಯಾರದೋ ಕಾಲು ಹಿಡಿದು ಯಡಿಯೂರಪ್ಪ ಅವರು ಸಿಎಂ ಆದವರಲ್ಲ. “ಬಿಜೆಪಿ ಸಮರ್ಥ ರಾಜಕೀಯ ಪಕ್ಷ, ನಾಯಕತ್ವದ ಕೊರತೆ ಎದುರಾಗುವುದಿಲ್ಲ. ಅದರಲ್ಲೂ ನಾಯಕತ್ವದ ಪಾಠವನ್ನು ನಾವು ಕಾಂಗ್ರೆಸ್ ಪಕ್ಷದಿಂದ ಕಲಿಯಬೇಕಿಲ್ಲ. ಯಡಿಯೂರಪ್ಪ ಅವರು 40ರಿಂದ […]

ಜೂನ್ 1 ರಿಂದ ನಂದಿನಿ ಗ್ರಾಹಕರಿಗೆ ಉಚಿತವಾಗಿ ‘ಹೆಚ್ಚು ಹಾಲು ಕುಡಿಯಿರಿ’ ಆಫರ್

Monday, May 31st, 2021
Free Milk

ಮಂಗಳೂರು  : ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ಹಾಲು ಉತ್ಪಾದನೆ ಅಧಿಕವಾಗಿದ್ದು, ಎಲ್ಲಾ ಮಾದರಿಯ ನಂದಿನಿ 500 ಮಿ.ಲೀ. ಹಾಗೂ 1 ಲೀ. ಹಾಲಿನ ಪೊಟ್ಟಣಗಳ ಮೇಲೆ ಉಚಿತವಾಗಿ ಗ್ರಾಹಕರಿಗೆ ಜೂನ್ 1 ರಿಂದ ಹೆಚ್ಚುವರಿ ಹಾಲು ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಲಾಕ್‌ಡೌನ್ ಪರಿಣಾಮ ಶುಭ-ಸಮಾರಂಭ, ದೇವಸ್ಥಾನ, ವಿದ್ಯಾ ಸಂಸ್ಥೆ ಹಾಸ್ಟೆಲ್, ಹೋಟೆಲ್‌ಗಳಿಗೆ ನಿರ್ಬಂಧವಿರುವುದರಿಂದ ಹಾಲು ಮತ್ತು ಮೊಸರು ಮಾರಾಟದಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ರಾಜ್ಯಾದ್ಯಂತ ಕೊರೋನಾ ಸೋಂಕಿನ 2ನೇ ಅಲೆಯು ತೀವ್ರವಾಗಿದ್ದು, ದಿನಾಂಕ 28-04-2021 ರಿಂದ ಲಾಕ್‌ಡೌನ್ ಇರುವ ಹಿನ್ನೆಲೆಯಲ್ಲಿ, ಕ್ಲಿಷ್ಟಕರ […]

ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ಆಟೋ ಮೊಬೈಲ್ ಅಂಗಡಿ ಭಾರೀ ಬೆಂಕಿ ಅನಾಹುತ

Monday, May 31st, 2021
Thokkottu-Fire

ತೊಕ್ಕೊಟ್ಟು : ಓವರ್ ಬ್ರಿಡ್ಜ್ ಸಮೀಪ ಇರುವ  ಆಟೋ ಮೊಬೈಲ್ ಅಂಗಡಿಯಲ್ಲಿ ಭಾರೀ ಬೆಂಕಿ  ಅನಾಹುತ  ಉಂಟಾದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ಕೊರಗಜ್ಜನ ಕಟ್ಟೆಯ ಸನಿಹದ ಕಟ್ಟಡದಲ್ಲಿ ಘಟನೆ ನಡೆದಿದ್ದು, ಕುಂಪಲ ನಿವಾಸಿ ಭರತ್ ಎಂಬವರಿಗೆ ಸೇರಿದ ಗೋಲ್ಡನ್ ಸ್ಟಾರ್ ಎಂಬ  ದ್ವಿಚಕ್ರ ವಾಹನಗಳ ಆಟೋ ಮೊಬೈಲ್ಸ್ ಮಳಿಗೆ ಬೆಂಕಿಗಾಹುತಿಯಾಗಿದೆ. ಮುಚ್ಚಿದ್ದ ಅಂಗಡಿಯಲ್ಲಿ ದಟ್ಟವಾಗಿ ಹೊಗೆ ಆವರಿಸಿರುವುದನ್ನು ಕಂಡ ಸ್ಥಳೀಯರು ಶಟರ್ ತೆರೆದು ನೋಡಿದಾಗ ಬೆಂಕಿ ತಗಲಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಸೇರಿ […]

ಪೊಲೀಸರಿಂದ ತಪ್ಪಿಸಿಕೊಳ್ಳಲು ಚಿನ್ನ ನುಂಗಿದ ಕಳ್ಳ

Monday, May 31st, 2021
shibu

ಮಂಗಳೂರು : ಪೊಲೀಸರು ಬಂಧಿಸಿದ್ದ ಕಳ್ಳನೊಬ್ಬ ಕಳ್ಳತನ  ಮಾಡಿದ ಚಿನ್ನದ ಉಂಗುರಗಳನ್ನೇ ನುಂಗಿ ದ ಘಟನೆ ಸುಳ್ಯದಲ್ಲಿ ನಡೆದಿದೆ. ಕೇರಳದ ತ್ರಿಶೂರ್ ಜಿಲ್ಲೆಯ ಶಿಬು ಎಂಬಾತ ಸುಳ್ಯ, ಪುತ್ತೂರಿನಲ್ಲಿ ಕಳ್ಳತನ ಮಾಡಿದ ಚಿನ್ನ ನುಂಗಿ ತೀವ್ರ ಹೊಟ್ಟೆ ನೋವಿನಿಂದ ನೋವಿಗೆ ಒಳಗಾಗಿದ್ದು, ಕೂಡಲೇ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಎಕ್ಸ್ ರೇ ಪರೀಕ್ಷೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಚಿನ್ನದ ಉಂಗುರ ಇರುವುದು ಪತ್ತೆಯಾಗಿದೆ. ಹೊಟ್ಟೆಯಿಂದ 35 ಗ್ರಾಂ ತೂಕದ ಉಂಗುರಗಳನ್ನು ವೈದ್ಯರು ಹೊರ ತೆಗೆದಿದ್ದು,ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.‌ ಬಳಿಕ ಶಿಬುವನ್ನು […]

ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಮತ್ತು 7 ವರ್ಷದ ಆಡಳಿತದಲ್ಲಿ ಆದ ಕುತೂಹಲಕಾರಿ ಬದಲಾವಣೆಗಳು

Sunday, May 30th, 2021
Naredra-Modi

ಮಂಗಳೂರು  : ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ 2ನೇ ಅವಧಿಯ ಮತ್ತು ಒಟ್ಟು 7 ವರ್ಷದ ಆಡಳಿತ ನಡೆಸಿದೆ. ಭಾನುವಾರ ದೇಶದ ನಾಗರಿಕರನ್ನು ಉದ್ದೇಶಿಸಿ ತಮ್ಮ 77ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು  7 ವರ್ಷ ಪೂರೈಸಿದ ಸಂತಸ ವ್ಯಕ್ತ ಪಡಿಸಿದರು ಕೊರೋನಾದಂತಹ ಸಾಂಕ್ರಾಮಿಕ ಪಿಡುಗು ದೇಶದ ಜನರ ಜೀವನಕ್ಕೆ ತೀವ್ರ ಹಾನಿ ಮಾಡಿ, ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದೆ. ಭಾರತವು […]