ದಕ್ಷಿಣ ಕನ್ನಡ ಜಿಲ್ಲೆ 474 , ಉಡುಪಿಯಲ್ಲಿ 274 ಕೊರೊನಾ ವೈರಸ್‌ ಪ್ರಕರಣಗಳು ಪತ್ತೆ

Friday, April 23rd, 2021
corona

ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ವರದಿಯಾದ 474 ಕೊರೊನಾ ವೈರಸ್‌ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 39,718 ಕ್ಕೆ ಏರಿವೆ. ಈ ಪೈಕಿ 2,825 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ. ಒಟ್ಟು 7,00,688 ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಅದರಲ್ಲಿ 6,60,970 ಮಾದರಿಗಳು ನೆಗೆಟಿವ್‌‌ ಆಗಿದೆ. ಗುರುವಾರ 121 ಜನರು ಗುಣಮುಖರಾಗಿದ್ದು ಒಟ್ಟು ಗುಣಮುಖರಾದವರ ಸಂಖ್ಯೆ 36,145ಕ್ಕೆ ಏರಿದೆ. ಈವರೆಗೆ ಒಟ್ಟು 745 ಸಾವುಗಳು ಸಂಭವಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 47,706 ಮಾಸ್ಕ್‌ […]

ನಾಯಿಯನ್ನು ಬೈಕ್‌ನ ಹಿಂಬದಿಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದುಕೊಂಡು ಹೋದ ದುರುಳರು

Friday, April 23rd, 2021
Dog Draging

ಮಂಗಳೂರು : ನಾಯಿಯನ್ನು ಬೈಕ್‌ನ ಹಿಂಬದಿಗೆ ಕಟ್ಟಿ  ರಸ್ತೆಯುದ್ದಕ್ಕೂ ಎಳೆದುಕೊಂಡು ಹೋಗಿರುವ ಅಮಾನುಷ ಘಟನೆ ಎನ್‌ಐಟಿಕೆ ಸುರತ್ಕಲ್‌ ಮುಖ್ಯ ರಸ್ತೆಯಲ್ಲಿ ನಡೆದಿದೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ನಾಯಿಗೆ ಹಿಂಸೆ ನೀಡಿ ಸಂತೋಷ ಪಡುವ ಈ ಕಿಡಿಗೇಡಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯು 2021 ರ ಏಪ್ರಿಲ್ 15 ರಂದು ನಡೆದಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ಡಿಸಿಪಿ ಹರಿರಾಮ್ ಶಂಕರ್, “ಈ ಪ್ರಕರಣದ ಬಗ್ಗೆ ಪರಿಶೀಲನೆ […]

ಯಾಕೆ ಈ ಪಾರ್ಷಿಯಾಲಿಟಿ ? ಮಂದಿರ, ಮಸೀದಿ, ಚರ್ಚ್ ಸಂಪೂರ್ಣ ಬಂದ್ !

Thursday, April 22nd, 2021
mandhir

ಉಡುಪಿ : ಸರಕಾರದ ಆದೇಶದಂತೆ ಕೊವಿಡ್ -19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ  ಮೇ4 ರವರೆಗೆ ಕರೋನ ನೈಟ್ ಕರ್ಫ್ಯೂ ಮತ್ತು ವಾರಂತ್ಯ ಕರ್ಫ್ಯೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಜಾರಿ ಗೊಳಿಸಿದ್ದು, ಅದರಂತೆ ಮಸೀದಿ, ದೇವಸ್ಥಾನ, ಚಚ್೯ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳನ್ನು ಸಾರ್ವಜನಿಕರಿಗೆ ಮುಂದಿನ ಆದೇಶವರೆಗೆ ಮುಚ್ಚಬೇಕು ಎಂದು ಉಡುಪಿ ಜಿಲ್ಲಾಧಿಕಾರಿ‌ ಜಿ.ಜಗದೀಶ್ ತಿಳಿಸಿದ್ದಾರೆ. ಪೂಜಾ ಸ್ಥಳದ ಸೇವೆಯಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಗಳು ಯಾವುದೇ ಸಂದರ್ಶಕರನ್ನು ಒಳಗೊಳ್ಳದೆ ತಮ್ಮ ಆಚರಣೆ ಗಳನ್ನು ಮತ್ತು ಕರ್ತವ್ಯಗಳನ್ನು ನಿರ್ವಹಿಸಬಹುದಾಗಿದೆ. ಅಲ್ಲದೆ ಕಾನೂನು ಉಲ್ಲಂಘನೆ ಮಾಡಿದ್ದಲ್ಲಿ […]

ಶಿರೂರು ಮಠದ ಉತ್ತರಾಧಿಕಾರಿ ಘೋಷಣೆ, ಮೇ.14ರಂದು ಪಟ್ಟಾಭಿಷೇಕ

Wednesday, April 21st, 2021
Anirudha

ಉಡುಪಿ : ಶಿರೂರು ಮಠದ ಉತ್ತರಾಧಿಕಾರಿಯಾಗಿ ಅನಿರುದ್ಧ ಸರಳತ್ತಾಯ, ಎಂಬ ವಟುವನ್ನು ಆಯ್ಕೆ ಮಾಡಲಾಗಿದೆ ಎಂದು ಶಿರೂರು ಮಠದ ದ್ವಂದ್ವ ಮಠವಾದ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥರು ಹಿರಿಯಡ್ಕ ಸಮೀಪದ ಶಿರೂರು ಮೂಲ ಮಠದಲ್ಲಿ ಘೋಷಣೆ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀವಿಶ್ವವಲ್ಲಭ ತೀರ್ಥರು ವಟು ಅನಿರುದ್ಧ 10ನೇ ತರಗತಿಯಲ್ಲಿ ವ್ಯಾಸಂಗ ಪೂರೈಸಿದ್ದು, ಬಾಲ್ಯದಿಂದಲೇ ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿ ಹೊಂದಿದ್ದರು. ತಾನೇ ಸ್ವತಃ ಶೀರೂರು ಮಠಕ್ಕೆ ಯತಿಯಾಗಿ ತೆರಳುವೆನೆಂದು ತನ್ನ ಅಭಿಪ್ರಾಯವನ್ನು ತಂದೆಯ ಬಳಿ ವ್ಯಕ್ತಪಡಿಸಿದ್ದರು. ಈ ವೇಳೆ ಜಾತಕ ವಿಮರ್ಶಿಸಿದಾಗ ಪೀಠಾಧಿಪತ್ಯದ ಯೋಗ ಇದೆ ಎಂದು ತಿಳಿಯಿತು […]

ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಸಚಿವರಾಗಿ ಡಾ. ಕಿಶೋರ್‌ ಕುಮಾರ್‌ ಸಿಕೆ ಅಧಿಕಾರ ಸ್ವೀಕಾರ

Wednesday, April 21st, 2021
Dr Kishor Kumar

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಕಿಶೋರ್‌ ಕುಮಾರ್‌ ಸಿಕೆ (ಎಂ.ಪಿ.ಎಡ್‌, ಪಿ.ಹೆಚ್‌.ಡಿ) ಅವರು ನೂತನ ಕುಲಸಚಿವರಾಗಿ (ಆಡಳಿತ) ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ (ಉನ್ನತ ಶಿಕ್ಷಣ ಇಲಾಖೆ) ಮಹೇಶ್‌ ಆರ್‌ ಹೊರಡಿಸಿದ ಆದೇಶಾನುಸಾರ, ಮಾರ್ಚ್‌ 22 ರಿಂದ ಕೆ. ರಾಜು ಮೊಗವೀರ (ಕೆ.ಎ.ಎಸ್‌) ಅವರ ವರ್ಗಾವಣೆಯ ಬಳಿಕ ಉಸ್ತುವಾರಿ ಕುಲಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ ಎಲ್‌ ಧರ್ಮ ಅವರು ಅಧಿಕಾರ ಹಸ್ತಾಂತರಿಸಿದರು. ಸುಮಾರು ಮೂರು […]

ಕೊರೊನಾ ನಿಯಮ ನಿರ್ಲಕ್ಷ್ಯ ; ಸೋಮೇಶ್ವರ ದೇವಸ್ಥಾನ ಆಡಳಿತ ಸಮಿತಿಯ ವಿರುದ್ದ ದೂರು ದಾಖಲು

Tuesday, April 20th, 2021
Ullal Police

ಉಳ್ಳಾಲ:   ಸರ್ಕಾರದ ಆದೇಶ ಉಲ್ಲಂಘಿಸಿ ದೇವಸ್ಥಾನದ ಜಾತ್ರೋತ್ಸವ ನಡೆಸಿದೆ ಎಂಬ ಆರೋಪದ ಮೇರೆಗೆ ಉಳ್ಳಾಲದ ಸೋಮೇಶ್ವರ ದೇವಸ್ಥಾನ ಆಡಳಿತ ಸಮಿತಿಯ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮೇಶ್ವರ ದೇವಸ್ಥಾನದಲ್ಲಿ ಈಗ ಬ್ರಹ್ಮಕಲಶೋತ್ಸವದ ಸಂಭ್ರಮ ನಡೆಯುತ್ತಿದ್ದು, ಸರ್ಕಾರದ ಆದೇಶ ಪಾಲಿಸಿ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದ್ದರು. ಆದರೆ ನಿನ್ನೆ ದೇವಸ್ಥಾನಕ್ಕೆ ನೂತನ ರಥ ಮತ್ತು ಹೊರೆ ಕಾಣಿಕೆ ಮೆರವಣಿಗೆ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಾವಿರಾರು ಜನರು ಭಾಗಿಯಾಗಿದ್ದರು ಎನ್ನಲಾಗಿದೆ. ಆದರೆ ಈ ಕುರಿತು […]

ಅಜಾನ್ ಮೂಲಕ ಲ್ಯಾಂಡ್ ಜಿಹಾದ್, ಇದು ಹಿಂದೂಗಳನ್ನು ಹತ್ತಿಕ್ಕುವ ಯತ್ನ

Tuesday, April 20th, 2021
ajan

ಮಸೀದಿಯಲ್ಲಿ ಅನಧಿಕೃತ ಧ್ವನಿವರ್ಧಕದ ಸಮಸ್ಯೆ, ಇದು ಕೇವಲ ಧ್ವನಿಮಾಲೀನ್ಯಕ್ಕೆ ಮಾತ್ರ ಸೀಮಿತವಲ್ಲ, ಇದು ಹಿಂದೂಗಳನ್ನು ಹತ್ತಿಕ್ಕುವ ‘ಲ್ಯಾಂಡ್ ಜಿಹಾದ್’ ! – ಶ್ರೀ. ಸಂತೋಷ ಪಾಚಲಗ, ಅರ್ಜಿದಾರ ‘ಮುಂಬಯಿಯ ಕಪಾಡಿಯಾನಗರ(ಕುರ್ಲಾ) ಇಲ್ಲಿ ಶೇ. 50 ರಷ್ಟು ಹಿಂದೂಗಳು ವಾಸವಾಗಿದ್ದಾರೆ. ಇಲ್ಲಿ ಅನೇಕ ಮಸೀದಿಯ ಮೇಲೆ ಅನಧಿಕೃತವಾಗಿ ಧ್ವನಿವರ್ಧಕವನ್ನು ಅಳವಡಿಸಿ ಅದರಿಂದ ಕರ್ಕಶವಾದ ಧ್ವನಿಯಲ್ಲಿ ಆಜಾನ ನೀಡಲು ಆರಂಭವಾಗಿದೆ. ಸತತವಾಗಿ ತೊಂದರೆಯಿಂದ ಬೇಸತ್ತ ಇಲ್ಲಿಯ ಹಿಂದೂಗಳು ತಮ್ಮ ಮನೆಮಾರುಗಳನ್ನು ಮುಸಲ್ಮಾನರಿಗೆ ಮಾರಿ ಹೋಗಿದ್ದಾರೆ. ಇಂದು ಇಲ್ಲಿ ಕೇವಲ ಶೇ. 3 […]

ಕೊರೋನ ಹಿನ್ನೆಲೆಯಲ್ಲಿ ಸೋಮೇಶ್ವರದ ಶ್ರೀ ಸೋಮನಾಥ ದೇವಳದ ಬ್ರಹ್ಮಕಲಶೋತ್ಸವ ರದ್ದು

Tuesday, April 20th, 2021
Somanatha

ಮಂಗಳೂರು :  ಸೋಮೇಶ್ವರದ ಶ್ರೀ ಸೋಮನಾಥ ದೇವಳದ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಉತ್ಸವವನ್ನು ರದ್ದುಗೊಳಿಸಲಾಗಿದೆ ಎಂದು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಎ.18ರಿಂದ ಆರಂಭಗೊಂಡು ಮೇ 1ರವರೆಗೆ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ಕೊರೋನ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿಯ ಆದೇಶದಂತೆ ಧಾರ್ಮಿಕ ಕಾರ್ಯಕ್ರಮ ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ 272 ಮಂದಿಗೆ ಕೊರೋನಾ ಸೋಂಕು ಪತ್ತೆ

Monday, April 19th, 2021
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ  272 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ರವಿವಾರ 131 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಕೊರೋನಾಗೆ ಜಿಲ್ಲೆಯಲ್ಲಿ ಈವರೆಗೆ 744 ಮಂದಿ ಬಲಿಯಾಗಿದ್ದಾರೆ. ದ. ಕ.ಜಿಲ್ಲೆಯಲ್ಲಿ ಈವರೆಗೆ ಒಟ್ಟು 38,143 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 1,764 ಸಕ್ರಿಯ  ಕೇಸ್ ಗಳಿವೆ. ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 622 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈವರೆಗೆ 37,372 ಮಂದಿ ಗೆ ಸೋಂಕು ದೃಢಪಟ್ಟಿದೆ.

ಕಾರ್ಮಿಕನನ್ನು ಕೊಲೆಗೈದ ಪ್ರಕರಣ, ಓರ್ವನ ಬಂಧನ

Monday, April 19th, 2021
BagalKot Umesh

ಕಾಸರಗೋಡು : ಕರ್ನಾಟಕ ಮೂಲದ ಕಾರ್ಮಿಕನೋರ್ವನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಗಲಕೋಟೆ ನಿವಾಸಿಯೋರ್ವನನ್ನು ಬೇಕಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಾಗಲಕೋಟೆಯ ಉಮೇಶ್ ಗೌಡ (37) ಎಂದು ಗುರುತಿಸಲಾಗಿದೆ. ಕೊಲೆಗೀಡಾದ ವ್ಯಕ್ತಿಯ  ಹೆಸರು ಮತ್ತು ವಿಳಾಸ ಪತ್ತೆಯಾಗದ ಹಿನ್ನೆಲೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಮೃತ ವ್ಯಕ್ತಿ ಕೋಟಿಕುಳಂ ಪರಿಸರದಲ್ಲಿ ದುಡಿದು ರೈಲ್ವೆ ಪ್ಲಾಟ್ ಫಾರ್ಮ್ ಅಥವಾ ಬಸ್ಸು ನಿಲ್ದಾಣಗಳಲ್ಲಿ ರಾತ್ರಿ ಕಾಲ ಕಳೆಯುತ್ತಿದ್ದರು. ಎಪ್ರಿಲ್ 14 ರಂದು ಉಮೇಶ್ ಗೌಡ […]