ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು: ನೂತನ ಪ್ರಾಂಶುಪಾಲರಾಗಿ ಡಾ. ಅನಸೂಯಾ ರೈ ನೇಮಕ

Friday, April 2nd, 2021
Anusuya Rai

ಮಂಗಳೂರು ವಿಶ್ವವಿದ್ಯಾನಿಲಯದ ಅಧೀನ ಕಾಲೇಜಾದ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಿಕೆ ಡಾ. ಅನಸೂಯಾ ರೈ, ನೂತನ ಪ್ರಾಂಶುಪಾಲರಾಗಿ (ಪ್ರಭಾರ) ಮಾರ್ಚ್‌ 31 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಸುಮಾರು 35 ವರ್ಷಗಳಿಂದ ವಾಣಿಜ್ಯಶಾಸ್ತ್ರ ಬೋಧಿಸುತ್ತಿರುವ ಡಾ. ಅನಸೂಯಾ ರೈ, ದಿ.ಪಠೇಲ್‌ ಶ್ರೀ ಇಂದುಹಾಸ ರೈ- ಸುಲೋಚನಾ ರೈ ದಂಪತಿಯ ಪುತ್ರಿ. ತಮ್ಮ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಸಂತ ಆಗ್ನೇಸ್‌ ವಿದ್ಯಾಸಂಸ್ಥೆಯಲ್ಲಿ ಪೂರೈಸಿದ್ದಾರೆ. ಕಲಿಕೆಯಲ್ಲಿ ಯಾವತ್ತೂ ಮುಂದಿದ್ದ ಅವರು ರಾಜ್ಯದಲ್ಲೇ 66ನೇ ರ‍್ಯಾಂಕ್ನೊಂದಿಗೆ […]

ಯುವತಿಯೊಂದಿಗಿದ್ದ ಅನ್ಯ ಕೋಮಿನ ಯುವಕನಿಗೆ ಹಲ್ಲೆ : ಎಂಟು ಶಂಕಿತರು ವಶಕ್ಕೆ

Friday, April 2nd, 2021
Shashikumar

ಮಂಗಳೂರು : ಬೆಂಗಳೂರಿಗೆ ಕೆಲಸ ಹುಡುಕಲು ಅನ್ಯ ಕೋಮಿನ ಯುವಕನೊಂದಿಗೆ ಗುರುವಾರ ರಾತ್ರಿ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಯುವತಿಯೊಂದಿಗಿದ್ದ ಇದ್ದ ಯುವಕನ ಮೇಲೆ ಹಿಂದೂ ಸಂಘಟನೆಗಳು ಹಲ್ಲೆ ನಡೆಸಿದ  ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ  ಎನ್.ಶಶಿಕುಮಾರ್,  ಕಂಕನಾಡಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ತಡೆದು ಅದರಲ್ಲಿ ಯುವತಿಯೊಂದಿಗೆ ಪ್ರಯಾಣಿಸುತ್ತಿದ್ದ ಯುವಕನ ಮೇಲೆ ಹಲ್ಲೆ ಮಾಡಿದ್ದು, ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ,  ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 8 ಶಂಕಿತರನ್ನು ವಿಚಾರಣೆಗಾಗಿ […]

ಶ್ರದ್ದೆ ಹಾಗೂ ಭಕ್ತಿಯಿಂದ ಮಂಗಳೂರಿನ ಪ್ರಾರ್ಥನಾ ಮಂದಿರಗಳಲ್ಲಿ ಗುಡ್‌ ಫ್ರೈಡೇ ಆಚರಣೆ

Friday, April 2nd, 2021
good friday

ಮಂಗಳೂರು : ಕ್ರೈಸ್ತ ಬಾಂಧವರು  ಏಸು ಕ್ರಿಸ್ತ ಶಿಲುಬೆಗೇರಿದ ದಿನ (ಗುಡ್‌ ಫ್ರೈಡೇ) ಯನ್ನು ಶ್ರದ್ದೆ ಹಾಗೂ ಭಕ್ತಿಯಿಂದ  ಮಂಗಳೂರಿನ ಪ್ರಾರ್ಥನಾ ಮಂದಿರಗಳಲ್ಲಿ ಆಚರಿಸಿದರು.  ಇಂದು ಬೆಳಗ್ಗಿನಿಂದಲೇ ಉಪವಾಸದ ಮೂಲಕ ವೃತ ಕೈಗೊಂಡಿರುವ ಸಾವಿರಾರು ಭಕ್ತರು ನಗರದ ಚರ್ಚ್‌ಗಳಿಗೆ ತೆರಳಿ ವಿಶೇಷವಾದ ಪ್ರಾರ್ಥನೆ ಸಲ್ಲಿಸಿದರು. ಗುಡ್‌ ಫ್ರೈಡೇ ಸಮಯದಲ್ಲಿ ಮಾಂಸಾಹಾರ ಸೇವಿಸುವಂತಿಲ್ಲ ಹಾಗೂ ಮೋಜಿನ ಬದುಕು ನಡೆಸುವಂತಿಲ್ಲ. ಯಾವುದೇ, ಶುಭ ಸಮಾರಂಭಗಳೂ ಕೂಡಾ ನಡೆಯುವುದಿಲ್ಲ. ಈಸ್ಟರ್‌ ದಿನದಂದು ತಪಸ್ಸಿನ ಕಾಲಕ್ಕೆ ವಿದಾಯ ಹೇಳಲಾಗುತ್ತದೆ. ಈಸ್ಟರ್ ಭಾನುವಾರ ಏಸುಕ್ರಿಸ್ತರ ಪುನರುತ್ಥಾನ […]

ತಮ್ಮದೇ ಮಗನಿಂದ ಮಂಗಳೂರು ಮೂಲದ ದಂಪತಿ ನ್ಯೂಜಿಲ್ಯಾಂಡ್​​ನಲ್ಲಿ ಹತ್ಯೆ

Friday, April 2nd, 2021
sheel

ಮಂಗಳೂರು: ಮಂಗಳೂರು ಮೂಲದ ದಂಪತಿಯು ನ್ಯೂಜಿಲ್ಯಾಂಡ್ನಲ್ಲಿ ತಮ್ಮದೇ ಮಗನಿಂದ  ಭೀಕರವಾಗಿ ಹತ್ಯೆಗೊಳಗಾಗಿರುವ ಘಟನೆ ನಡೆದಿದೆ. ನಗರದ ಬಲ್ಮಠ ನಿವಾಸಿಗಳಾಗಿರುವ ಎಲ್ಸಿ ಬಂಗೇರ ಮತ್ತು‌ ಹರ್ಮನ್ ಬಂಗೇರ ಹತ್ಯೆಗೀಡಾದವರು. ಅವರ ಪುತ್ರ ಶೀಲ್(23) ಹತ್ಯೆ ಮಾಡಿದವನೆಂದು ಆರೋಪಿಸಲಾಗಿದ್ದು, ಪೊಲೀಸರು ಆತನನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಶೀಲ್ ಇತ್ತೀಚಿನ ದಿನಗಳಲ್ಲಿ ಹೆತ್ತವರಿಂದ ದೂರ ಇರಲು ಪ್ರಯತ್ನಿಸಿ, ತನ್ನಿಚ್ಛೆಯಂತೆ ಬದುಕಲು ಅಭಿಲಾಷೆ ಹೊಂದಿದ್ದನು. ಈ ಹಿನ್ನೆಲೆಯಲ್ಲಿ ಹೆತ್ತವರೊಂದಿಗೆ ಜಗಳ ಮಾಡುತ್ತಿದ್ದನು. ಕಳೆದ ಶುಕ್ರವಾರ ಕೂಡಾ ಇದೇ ಕಾರಣಕ್ಕಾಗಿ ಜಗಳ ಮಾಡಿ ಹೆತ್ತ ತಾಯಿ […]

ಕರ್ನಾಟಕ ಬ್ಯಾಂಕ್ ವತಿಯಿಂದ ಮಂಗಳಾದೇವಿ ದೇವಸ್ಥಾನಕ್ಕೆ ಡಿಶ್ ವಾಶ್ ಯಂತ್ರ

Friday, April 2nd, 2021
dish wash

ಮಂಗಳೂರು : ಮಹಾತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಸಂದರ್ಭದಲ್ಲಿ ತಟ್ಟೆಗಳ ಶುಚಿತ್ವಕ್ಕಾಗಿ ಡಿಶ್ ವಾಶ್ ಅನ್ನು ಕರ್ನಾಟಕ ಬ್ಯಾಂಕ್ ವತಿಯಿಂದ ಬ್ಯಾಂಕ್ ನ ಅಧ್ಯಕ್ಷ ಶ್ರೀ ಮಹಾಬಲೇಶ್ವರ ಭಟ್ ಅವರು ಗುರುವಾರ ಶ್ರೀ ಕ್ಷೇತ್ರಕ್ಕೆ ಸಮರ್ಪಸಿದರು. ಮೇಯರ್ ಪ್ರೇಮಾನಂದ ಶೆಟ್ಟಿ, ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ, ಕ್ಷೇತ್ರದ ಅರ್ಚಕರು ಮುಂತಾದವರು ಉಪಸ್ಥಿತರಿದ್ದರು

ಕೊರಗಜ್ಜನ ದೈವಸ್ಥಾನ ಅಪವಿತ್ರ : ತಪ್ಪು ಕಾಣಿಕೆ ಹಾಕಿ ಕ್ಷಮೆಯಾಚಿಸಿದ ಆರೋಪಿಗಳು – ಇಬ್ಬರ ಬಂಧನ

Thursday, April 1st, 2021
Koragajja

ಮಂಗಳೂರು : ಎರಡು ತಿಂಗಳ ಹಿಂದೆ ಮಂಗಳೂರಿನ ವಿವಿಧ ಕೊರಗಜ್ಜನ ದೈವಸ್ಥಾನವನ್ನು ಅಪವಿತ್ರಗೊಳಿಸಿ, ಅವಾಚ್ಯ ಪದಗಳ ಪತ್ರವನ್ನು ಕಾಣಿಕೆ ಡಬ್ಬಿಗೆ ಹಾಕಿ ಅಪಮಾನ ಮಾಡಲಾಗಿತ್ತು.  ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ  ಏಪ್ರಿಲ್ 1 ರ ಗುರುವಾರ ಇಬ್ಬರು ಆರೋಪಿಗಳನ್ನು ಕೊರಗಜ್ಜನ ಕಾಣಿಕೆ ಡಬ್ಬಿಗೆ ತಪ್ಪು ಕಾಣಿಕೆ ಹಾಕಿ ಪೊಲೀಸರಿಗೆ ಶರಣಾಗಿದ್ದಾರೆ. ಬಂಧಿತರನ್ನು ರಹೀಮ್ ಮತ್ತು ತೌಫಿಕ್ ಎಂದು ಗುರುತಿಸಲಾಗಿದೆ. ಬುಧವಾರ  ರಾತ್ರಿ ಎಮ್ಮೆಕೆರೆಯಲ್ಲಿ ಕೋಟೆ ಬಬ್ಬುಸ್ವಾಮಿ ದೈವಸ್ಥಾನದ ಜಾತ್ರೆ ನಡೆದಿದ್ದು, ಅಲ್ಲಿಂದ ಬಂದ ವ್ಯಕ್ತಿಯೋರ್ವ ಘಟನೆಯ ಹಿನ್ನೆಲೆಯಲ್ಲಿ ಕ್ಷಮಾಪಣೆ […]

ಪಿಕಪ್ ವಾಹನವನ್ನು ಅಡ್ಡಗಟ್ಟಿ ಇಬ್ಬರಿಗೆ ಮಾರಣಾಂತಿಕ ಹಲ್ಲೆ, ನಾಲ್ವರು ಆರೋಪಿಗಳ ಬಂಧನ

Thursday, April 1st, 2021
Abdul Rahim

ಬೆಳ್ತಂಗಡಿ : ಪಿಕಪ್ ವಾಹನವನ್ನು ಅಡ್ಡಗಟ್ಟಿ ದನ ಕಳ್ಳತನದ ಆರೋಪ ಹೊರಿಸಿ ಅದರಲ್ಲಿದ್ದ ಇಬ್ಬರಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಜೇಶ್ ಭಟ್, ರಾಕೇಶ್ ಭಟ್, ಗುರುಪ್ರಸಾದ್, ಲೋಕೇಶ್ ಮತ್ತು ಚಿದಾನಂದ ಎಂದು ಗುರುತಿಸಲಾಗಿದೆ. ಪಿಕ್ ಅಪ್ ವಾಹನ ದುರಸ್ತಿ ಮಾಡಿಸಿ ಹಿಂತಿರುಗುತ್ತಿದ್ದ ಸಂದರ್ಭ ಇಬ್ಬರ ಮೇಲೆ ಗುಂಪೊಂದು ದನ ಕಳ್ಳತನದ ಆರೋಪ ಹೊರಿಸಿ ದೊಣ್ಣೆ ಮತ್ತು ಪಾದರಕ್ಷೆಗಳಿಂದ ಹಲ್ಲೆ ನಡೆಸಿದ ಘಟನೆ ಮೇಲಂತಬೆಟ್ಟು ಗ್ರಾಮ ಪಂಚಾಯತ್ […]

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿಗೆ ನಿವೃತ್ತಿ

Thursday, April 1st, 2021
bayari

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಡಾ. ರಾಮಚಂದ್ರ ಬಾಯರಿ ಅವರು ಇಂದು ಸೇವೆಯಿಂದ ನಿವೃತ್ತಿಯಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದಾಗ ಡಾ.ರಾಮಚಂದ್ರ ಬಾಯರಿ ಅವರನ್ನು ಸರ್ಕಾರ ದ.ಕ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ನೇಮಿಸಿತ್ತು. ರಾಮಚಂದ್ರ ಬಾಯರಿ ಅವರು ಆರೋಗ್ಯಾಧಿಕಾರಿಯಾದ ಬಳಿಕ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದ ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಆರಂಭಿಸಿದ್ದರು. ಇದೇ ವೇಳೆ ಅವರಿಗೂ ಕೊರೊನಾ ಕಾಣಿಸಿತ್ತು. ಗುಣಮುಖರಾದ ಬಳಿಕ ಮತ್ತೆ ಸೇವೆಗೆ ಮರಳಿದ್ದರು. ಆರೋಗ್ಯ ಸಚಿವರ ನೇತೃತ್ವದಲ್ಲಿ ನಡೆದ ಆರೋಗ್ಯ […]

ತಲಪಾಡಿ, ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌ಗಳ ದರ ಹೆಚ್ಚಳ

Wednesday, March 31st, 2021
Sasthana Toll

ಮಂಗಳೂರು :  ಎಪ್ರಿಲ್ 1ರಿಂದ ತಲಪಾಡಿ,  ಹೆಜಮಾಡಿ ಹಾಗೂ ಸಾಸ್ತಾನ  ಟೋಲ್‌ಗಳ ದರ ವನ್ನು  ನವಯುಗ ಸಂಸ್ಥೆಯು ಪರಿಷ್ಕರಣೆ ಮಾಡದೆ.  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೇರ ನಿರ್ವಹಣೆ ಮಾಡುವ ಬ್ರಹ್ಮರಕೂಟ್ಲು ಮತ್ತು ಎನ್‌ಐಟಿಕೆ ಟೋಲ್‌ಗೇಟ್‌ಗಳ ಪರಿಷ್ಕೃತ ದರ ಎಪ್ರಿಲ್ 1ರಂದು ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ತಲಪಾಡಿ: ಲಘುವಾಹನ- ಏಕಮುಖ ಸಂಚಾರಕ್ಕೆ ಯಥಾವತ್ 40 ರೂ., ದ್ವಿಮುಖ ಸಂಚಾರಕ್ಕೆ 60ರಿಂದ 65ರೂ.ಗೆ ಏರಿಕೆ. ಮಾಸಿಕ ಪಾಸ್ ದರ 1,400 ರೂ. ಲಘು ವಾಣಿಜ್ಯ ವಾಹನ- ಮಿನಿ ಬಸ್ ಏಕಮುಖ ಸಂಚಾರಕ್ಕೆ 65 […]

ಹೆಣ್ಣು ಮಗುವಿನೊಂದಿಗೆ ನಾಪತ್ತೆಯಾದ ತಂದೆ

Wednesday, March 31st, 2021
Hasim

ಮಂಗಳೂರು : ಮಂಗಳೂರಿನ ಕದ್ರಿ ಬಳಿಯ ಆಳ್ವಾರೀಸ್ ರೋಡ್, ಫಾಲ್ಕಾಮ್ ಕ್ರಿಸ್ಟ್ ನಿವಾಸಿ 32 ವರ್ಷದ ಅಬ್ದುಲ್ ಹಾಸೀಮ್ ತನ್ನ 1 ವರ್ಷ 2 ತಿಂಗಳು ಹೆಣ್ಣು ಮಗುವಿನೊಂದಿಗೆ ಮಾರ್ಚ್ 23 ರಂದು ಕಾಣೆಯಾಗಿರುವ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ವ್ಯಕ್ತಿಯು 5.9 ಅಡಿ ಎತ್ತರವಿದ್ದು, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು, ಅಗಲ ಮುಖ, ಎಡ ಕೈಯಲ್ಲಿ ಕಪ್ಪು ಎಳ್ಳು ಮಚ್ಚೆ ಹೊಂದಿದ್ದು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯನ್ನು ಮಾತನಾಡುತ್ತಾರೆ. ಕಾಣೆಯಾದ […]