ದಾಂಪತ್ಯದಲ್ಲಿ ವಿರಸ : ಮಕ್ಕಳಿಬ್ಬರ ಜೊತೆ ತಂದೆ ಆತ್ಮಹತ್ಯೆ

Wednesday, March 17th, 2021
Chervathuru

ಕಾಸರಗೋಡು : ದಾಂಪತ್ಯದಲ್ಲಿ ವಿರಸ ಮೂಡಿ ಇಬ್ಬರು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ ರಿಕ್ಷಾ ಚಾಲಕ ಮಕ್ಕಳಿಗೆ ವಿಷವುಣಿಸಿ ನಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ  ಚೆರ್ವತ್ತೂರಿನಲ್ಲಿ ನಡೆದಿದೆ. ಪಿಲಿಕ್ಕೋಡು ಮಡಿವಾಯಿಯ ಆಟೋರಿಕ್ಷಾ ಚಾಲಕ ರೂಪೇಶ್ (37) ಮತ್ತು ಮಕ್ಕಳಾದ ವೈದಹಿ (10) , ಶಿವಾನಂದ (6) ಮೃತಪಟ್ಟವರು. ಅವರ ಮೃತದೇಹ ನಿರ್ಮಾಣ ಹಂತದಲ್ಲಿರುವ ಮನೆಯ ಕೋಣೆಯೊಂದರಲ್ಲಿ ಪತ್ತೆಯಾಗಿವೆ. ಮಕ್ಕಳಿಬ್ಬರು ವಿಷ ಸೇವನೆಯಿಂದ ಮೃತಪಟ್ಟರೆ ರೂಪೇಶ್ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ . ಮಕ್ಕಳಿಗೆ ವಿಷ […]

ವಿವಿ ಕಾಲೇಜಿನಲ್ಲಿ ʼರತ್ನಾಕರವರ್ಣಿಯ ಶತಕಗಳು- ಒಂದು ಅವಲೋಕನʼ- ರಾಜ್ಯಮಟ್ಟದ ವಿಚಾರ ಸಂಕಿರಣ ಸಂಪನ್ನ

Wednesday, March 17th, 2021
UCM

ಮಂಗಳೂರು: ರತ್ನಾಕರವರ್ಣಿ ಕೇವಲ ಜೈನ ಕವಿಯಲ್ಲ, ಆತ ವಿಶ್ವಕವಿ, ಸರ್ವಮಾನ್ಯ. ಆತನ ಸಾಹಿತ್ಯದ ಅವಲೋಕನದ ಜೊತೆಗೆ ಹೊಸ ತಲೆಮಾರಿಗೆ ಪರಿಚಯಿಸುವ ಕೆಲಸವಾಗಬೇಕಿದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಎಸ್‌ ಯಡಪಡಿತ್ತಾಯ ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗಗಳು ಜಂಟಿಯಾಗಿ ವಿವಿ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ʼರತ್ನಾಕರವರ್ಣಿಯ ಶತಕಗಳು- ಒಂದು ಅವಲೋಕನʼ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. […]

ಅತ್ಯಾಚಾರ : ಮಗಳ ಕೈಗೆ ಗಂಡು ಮಗು ನೀಡಿದ ಅಪ್ಪನಿಗೆ 12 ವರ್ಷ ಜೈಲು

Wednesday, March 17th, 2021
Sirsi Baby

ಶಿರಸಿ : ಹರೆಯದ ಮಗಳ ಮೇಲೆ ಸತತ ಅತ್ಯಾಚಾರ ನಡೆಸಿ ಆಕೆಯ ಕೈಗೆ ಗಂಡು ಮಗು ನೀಡಿದ್ದ ನಗರದ ಹುಬ್ಬಳ್ಳಿ ರಸ್ತೆಯ ನಿವಾಸಿಗೆ ಕಾರವಾರದ ಹೆಚ್ಚುವರಿ ಮತ್ತು ಸತ್ರ ಎಫ್‌ಟಿಎಸ್‌ಸಿ 1ನೇ ನ್ಯಾಯಾಲಯ 12 ವರ್ಷಗಳ ಜೈಲು ಮತ್ತು 30 ಸಾವಿರ ರು. ದಂಡ ವಿಧಿಸಿದೆ. ಮಹಮ್ಮದ್‌ ಉಬೇದುಲ್ಲಾ ಶೇಖ್‌ ಶಿಕ್ಷೆಗೊಳಗಾದ ವ್ಯಕ್ತಿ. ಆರೋಪಿ 2018ರ ಜೂನ್‌ ತಿಂಗಳಿನಲ್ಲಿ ಈ ಕೃತ್ಯ ನಡೆಸಿದ್ದ. ಅತ್ಯಾಚಾರ ನಡೆಸಿದ ವಿಷಯವನ್ನು ಯಾರಿಗಾದರೂ ಹೇಳಿದರೆ ವಿಷ ಹಾಕಿ ಕೊಂದುಬಿಡುವುದಾಗಿಯೂ ಬೆದರಿಕೆ ಹಾಕಿದ್ದ. […]

ಏಪ್ರಿಲ್ 6ರಂದು ನಡೆಯಲಿರುವ ಕಾಸರಗೋಡು ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ

Tuesday, March 16th, 2021
Election

ಕಾಸರಗೋಡು : ಏಪ್ರಿಲ್ 6ರಂದು ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಎಲ್.ಡಿ,ಎಫ್ ಅಭ್ಯರ್ಥಿಗಳು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಕಾಞ೦ಗಾಡ್ ನ ಸಿಪಿಐ ಅಭ್ಯರ್ಥಿ ಇ.ಚಂದ್ರಶೇಖರನ್ , ಉದುಮ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಸಿ. ಎಚ್ ಕುಞ೦ಬು , ತೃಕ್ಕರಿಪುರ ದ ಸಿಪಿಎಂ ಅಭ್ಯರ್ಥಿ ಎಂ. ರಾಜಗೋಪಾಲ್ ನಾಮಪತ್ರ ಸಲ್ಲಿಸಿದರು. ಚಂದ್ರಶೇಖರನ್ ಕಾಞ೦ ಗಾಡ್ ಕಂದಾಯಾಧಿಕಾರಿ ಹಾಗೂ ಕುಞ೦ಬು ಜಿಲ್ಲಾಧಿಕಾರಿ ಕಚೇರಿ ಹಾಗೂ ರಾಜಗೋಪಾಲ್ ನೀಲೇಶ್ವರ ಬ್ಲಾಕ್ ಪಂಚಾಯತ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ […]

ತಮ್ಮಎಂದು ನಂಬಿದ್ದವನಿಂದ ಅಶ್ಲೀಲ ಮೆಸೇಜ್ : ಮಹಿಳೆಯಿಂದ ಚಪ್ಪಲಿ ಏಟು

Tuesday, March 16th, 2021
Tanda

ಕೊಪ್ಪಳ: ತಮ್ಮ ಎಂದು ಸಲುಗೆ ಕೊಟ್ಟಿದ್ದ ಮಹಿಳೆಗೆ ಯುವಕನೊಬ್ಬ ಅಶ್ಲೀಲ ಮೆಸೇಜ್  ಕಳುಹಿಸಿ ಚಪ್ಪಲಿ ಏಟು ತಿಂದ ಘಟನೆ ಕೊಪ್ಪಳದ  ಜಿಲ್ಲಾ ಆಸ್ಪತ್ರೆ ಮುಂಭಾಗ  ನಡೆದಿದೆ. ಚಪ್ಪಲಿ ಏಟು ತಿಂದ ಯವಕನನ್ನು ಕೊಪ್ಪಳ ತಾಲೂಕಿನ ನರೇಗಲ್ ನಿವಾಸಿ ವೀರಯ್ಯ ಎಂದು ಗುರುತಿಸಲಾಗಿದೆ. ವೀರಯ್ಯ ಅವನಿಗಿಂತ ದೊಡ್ಡವಳು, ಅದರಲ್ಲೂ ಮದುವೆಯಾಗಿರೋ ಮಹಿಳೆಗೆ ಅಶ್ಲೀಲ ಸಂದೇಶ ಕಳಿಸಿದ್ದಾನೆ. ಪದೇ ಪದೇ ಮೊಬೈಲ್ ಗೆ ಅಶ್ಲೀಲ ಸಂದೇಶದ ಜೊತೆಗೆ ನಾನು ಅವಳನ್ನ ಲವ್ ಮಾಡ್ತೀನಿ ಎಂದೂ ಊರವರ ಮುಂದೆ ಹೇಳಿಕೊಂಡಿದ್ದನು. ಹೀಗಾಗಿ ರೊಚ್ಚಿಗೆದ್ದ ಮಹಿಳೆ ವೀರಯ್ಯನನ್ನು […]

ಎನ್ ಐ ಟಿ ಕೆ ಕ್ಯಾಂಪಸ್ ಒಣ ಹುಲ್ಲಿಗೆ ಬೆಂಕಿ, ಗಾಳಿಗೆ ವೇಗವಾಗಿ ಹರಡಿದ ಬೆಂಕಿ ಕೆನ್ನಾಲಿಗೆ

Tuesday, March 16th, 2021
NITK Fire

ಸುರತ್ಕಲ್ : ಎನ್ ಐ ಟಿ ಕೆ ಕ್ಯಾಂಪಸ್ ನ ಹುಲ್ಲಿಗೆ ಸೋಮವಾರ ಸಂಜೆ ಯಾರೋ ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ್ದು ಅದು ಸುತ್ತ ಮುತ್ತ ವ್ಯಾಪಿಸಿತ್ತು. ಕೂಡಲೇ  ಕದ್ರಿ ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಅಕ್ಕಪಕ್ಕ ಯಾವುದೇ ಕಟ್ಟಡಗಳು ಇಲ್ಲದಿರುವುದರಿಂದ ಹೆಚ್ಚಿನ ಅನಾಹುತವಾಗಿಲ್ಲ. ಒಣಗಿದ ಹುಲ್ಲುಗಳಿಗೆ ಬೆಂಕಿ ಹತ್ತಿಕೊಂಡಿದೆ. ಸಮುದ್ರದಿಂದ ಕೆಲವೇ ಅಂತರದಲ್ಲಿರುವ ಕಾರಣ ಜೋರಾಗಿ ಗಾಳಿ ಬೀಸುತ್ತಿದ್ದು ಬೆಂಕಿ ಕೆನ್ನಾಲಿಗೆ ಹರಡುತ್ತಿದೆ. ಅಗ್ನಿಶಾಮಕ ಸಿಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬ್ಯಾಟರಿ ಶಾರ್ಟ್ ಸರ್ಕ್ಯೂಟ್ – ಕಾರು ಚಲಿಸುತ್ತಿರುವಾಗಲೇ ಬೆಂಕಿ

Tuesday, March 16th, 2021
Mudradi Car

ಹೆಬ್ರಿ :  ಮಂಗಳವಾರ ಮುಂಜಾನೆ ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಮೇಶ್ವರ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾವೇರಿ ಮೂಲದ ರಮೇಶ್ ಎಂಬವರು ಹಿರಿಯಡ್ಕದಲ್ಲಿ ಪೂಜೆ ಕಾರ್ಯಕ್ರಮ ಮುಗಿಸಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ತನ್ನ ಮಾರುತಿ ಆಲ್ಟೋ ಕಾರಿನಲ್ಲಿ ಮನೆಗೆ ವಾಪಾಸುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ತಕ್ಷಣ ಅವರು ಕಾರಿನಿಂದ ಕೆಳಗಿದು ಬಚಾವ್ ಆಗಿದ್ದಾರೆ. ಸ್ಥಳಕ್ಕಾಗಮಿಸಿದ […]

ಉಳ್ಳಾಲ ತಾಲೂಕು ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಆಮಂತ್ರಣ ಪತ್ರ ಬಿಡುಗಡೆ

Monday, March 15th, 2021
Beary Invitation

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಮೇಲ್ತೆನೆ (ಬ್ಯಾರಿ ಎಲ್ತ್‌ಕಾರ್ ಪಿನ್ನೆ ಕಲಾವಿದಮ್ಮಾರೊ ಕೂಟ, ದೇರಳಕಟ್ಟೆ)ಯ ಸಹಕಾರದಲ್ಲಿ ಮಾ.27ರಂದು ಉಳ್ಳಾಲ ಅಳೇಕಲದ ಮದನಿ ಪಿಯು ಕಾಲೇಜಿನಲ್ಲಿ ನಡೆಯಲಿರುವ ಉಳ್ಳಾಲ ತಾಲೂಕು ಪ್ರಥಮ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಆಮಂತ್ರಣ ಪತ್ರವನ್ನು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಕೆ.ಎಂ.ಮುನೀರ್ ಬಾವಾ ಸೋಮವಾರ ಅಕಾಡಮಿಯ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಉಳ್ಳಾಲ ತಾಲೂಕು ಘೋಷಣೆಯಾದ ಬಳಿಕ ನಡೆಯುವ ಪ್ರಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನ ಇದಾಗಿದೆ. […]

ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಚಾಲನೆ

Monday, March 15th, 2021
Gunashree

ಬಂಟ್ವಾಳ : ಶಿಸ್ತುಬದ್ಧ ಕ್ರೀಡೆಯಲ್ಲಿ ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಾಗ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅಪ್ರತಿಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈಚೆಗೆ ಅಸ್ಸಾಂ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜಾವಲಿನ್ ಎಸೆತ ಪಂದ್ಯಾಟದಲ್ಲಿ ಇಲ್ಲಿನ ವಿದ್ಯಾಥರ್ಿನಿ ರಮ್ಯಶ್ರೀ ಜೈನ್ ಚಿನ್ನದ ಪದಕ ಗಳಿಸಿರುವುದು ಇದಕ್ಕೆ ಸೂಕ್ತ ಉದಾಹರಣೆ ಆಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಹೇಳಿದರು. ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟಿಸಿ […]

ಹಿರಿಯ ಕಲ್ಲಂಗಡಿ ಕೃಷಿಕ, ಶತಾಯುಷಿ ಕೆ.ಸೇಸು ಸಪಲ್ಯ ನಿಧನ

Monday, March 15th, 2021
Sesu Sapalya

ಬಂಟ್ವಾಳ: ಇಲ್ಲಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಕಂಚೇಶ್ವರ ನಿವಾಸಿ, ಹಿರಿಯ ಕಲ್ಲಂಗಡಿ ಕೃಷಿಕ ಶತಾಯುಷಿ ಕೆ.ಸೇಸು ಸಪಲ್ಯ (102) ಇವರು ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಸೊಸೈಟಿ ಮಾಜಿ ಅಧ್ಯಕ್ಷ ಎಸ್.ಎ. ವಿಶ್ವನಾಥ್ ಬಿ.ಸಿ.ರೋಡು ಸಹಿತ ಮೂವರು ಪುತ್ರರು ಮತ್ತು ಏಳು ಮಂದಿ ಪುತ್ರಿಯರು ಇದ್ದಾರೆ. ಮೃತರು ಪ್ರಗತಿಪರ ಕೃಷಿಕರಾಗಿ, ತರಕಾರಿ ಮತ್ತು ಕಲ್ಲಂಗಡಿ ಕೃಷಿ ಜೊತೆಗೆ ಜಾನಪದ ಕ್ರೀಡೆ ಕಂಬಳ ಪ್ರೇಮಿಯಾಗಿ, ಪೊಳಲಿ ವಲಯ ಗಾಣಿಗ […]