ತಂದೆಯ ಲಾರಿಯ ಚಕ್ರದಡಿ ಸಿಲುಕಿ ಎಂಟು ವರ್ಷದ ಬಾಲಕ ಮೃತ್ಯು

Thursday, March 11th, 2021
Marshid

ಬೆಳ್ತಂಗಡಿ : ತನ್ನ ತಂದೆಯೇ ಚಲಾಯಿಸುತ್ತಿದ್ದ ಲಾರಿಯ ಚಕ್ರದಡಿ ಸಿಲುಕಿ ಎಂಟು ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ಮೂಡುಬಿದಿರೆಯಲ್ಲಿ ನಡೆದಿದೆ. ಉಜಿರೆ ಅತ್ತಾಜೆ‌ ನಿವಾಸಿ ಇಬ್ರಾಹಿಂ ಇಬ್ಬಿ ಅವರ ಪುತ್ರ, ಉಜಿರೆ ಹಳೆಪೇಟೆ ಬದ್ರುಲ್ ಹುದಾ ಮದರಸದ‌ ಮೂರನೇ ತರಗತಿ ವಿದ್ಯಾರ್ಥಿ ಮುರ್ಷಿದ್ (8) ಮೃತಪಟ್ಟ ಬಾಲಕ. ಉಜಿರೆ ಅತ್ತಾಜೆ ಇಬ್ರಾಹಿಂ ಮತ್ತು ರಹಿಮತ್ ದಂಪತಿಯ ಇಬ್ಬರು ಮಕ್ಕಳಲ್ಲಿ‌ ಮುರ್ಷಿದ್ ಮೊದಲನೆಯವನಾಗಿದ್ದ. ತಂದೆ ಮೂಡುಬಿದಿರೆಯ ಕಲ್ಲಿನ‌ಕೋರೆಗೆ ಹೋಗುವಾಗ ಬಾಲಕನೂ ಜತೆಗೆ ತೆರಳಿದ್ದನೆಂದು ಹೇಳಲಾಗಿದೆ. ತಂದೆಯೇ ಚಾಲಕನಾಗಿ ಲಾರಿ […]

ರಸ್ತೆ ಪಕ್ಕದಲ್ಲಿ ಬಸ್ಸಿಗೆ ಕಾಯುತ್ತಿದ್ದವರಿಗೆ ಡಿಕ್ಕಿ ಹೊಡೆದ ಪಿಕಪ್ ವಾಹನ, ಓರ್ವ ಮೃತ್ಯು

Thursday, March 11th, 2021
Marshid

ಸುಳ್ಯ : ರಸ್ತೆ ಪಕ್ಕದಲ್ಲಿ ಬಸ್ಸಿಗೆ ಕಾಯುತ್ತಿದ್ದ ನಾಲ್ವರಿಗೆ ಢಿಕ್ಕಿಯಾದ ಪಿಕಪ್ ವಾಹನ ಓರ್ವ ಯುವಕ ನನ್ನು ಬಲಿಪಡೆದು ಇತರ ಮೂವರನ್ನು ಗಂಭೀರ ಗೊಳಿಸಿದ ಘಟನೆ ಪೆರಾಜೆ ಎಂಬಲ್ಲಿ ಬುಧವಾರ ರಾತ್ರಿ ಸುಮಾರು 10.30ಕ್ಕೆ ನಡೆದಿದೆ. ಪಿಕಪ್ ವಾಹನವೊಂದು ವೇಗ ನಿಯಂತ್ರಣಕ್ಕೆಂದು ಹಾಕಲಾಗಿದ್ದ ಬ್ಯಾರಿಕೇಡ್ ಗೆ ಢಿಕ್ಕಿಯಾಗಿ ಬಳಿಕ ನಾಲ್ವರಿಗೆ ಡಿಕ್ಕಿ ಹೊಡೆದಿದೆ. ಮೃತ ಯುವಕನನ್ನು ದುಗ್ಗಲಡ್ಕ ನಿವಾಸಿ ಮುರ್ಷಿದ್ ಎಂದು ಗುರುತಿಸಲಾಗಿದೆ. ಮುರ್ಷಿದ್, ರಫೀಕ್, ಸತೀಶ್ ಹಾಗೂ ಉಮ್ಮರ್ ಎಂಬವರು ಪೆರಾಜೆ ಕಲ್ಲುಚರ್ಪೆ ಬಳಿ ಬಸ್ ಗಾಗಿ ಕಾಯುತ್ತಿದ್ದ ಸಂದರ್ಭ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ […]

ಪ್ರಶಸ್ತಿ ವಿಜೇತೆ ಪರಿಸರ ಪ್ರೇಮಿ, ಸಮಾಜ ಸೇವಕಿ : ಆರ್. ಜೆ ರಶ್ಮಿ ಉಳ್ಳಾಲ್

Wednesday, March 10th, 2021
Rashmi Ullal

ಮಂಗಳೂರು  : ತುಳುನಾಡಿನ ಕರಾವಳಿ ಪ್ರದೇಶವು ಇಂದು ಸ್ವಚ್ಚತೆಯನ್ನು ಕಾಪಾಡುದರೊಂದಿಗೆ ತನ್ನ ಪರಿಸರವನ್ನು ಹಸಿರಾಗಿರಿಸಿ ಶುದ್ದ ಗಾಳಿಯನ್ನು ಪರಿಸರಕ್ಕೆ ನೀಡುತ್ತಿದ್ದು ಅದಕ್ಕೆ ಕೇವಲ ಸರಕಾರ, ನಗರ ಪಾಲಿಕೆ ಮಾತ್ರವಲ್ಲದೆ ಇತರ ಅನೇಕರ ಕೊಡುಗೆಯಿದೆ. ಇಂತವರಲ್ಲಿ ತನ್ನ ಪರಿಸರದಲ್ಲಿ ಹಸಿರನ್ನೇ ತನ್ನ ಹುಸಿರಾಗಿಸಿಕೊಂಡ ಇತ್ತೀಚೆಗೆ ಕೇವಲ ಒಂದು ವಾರದ ಅಂತರದಲ್ಲಿ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ತುಳುನಾಡಿನ ಹೆಮ್ಮೆಯ ಪುತ್ರಿ ಆರ್. ಜೆ. ರಶ್ಮಿ ಉಳ್ಳಾಲ್ ಪ್ರಮುಖರು. ರಶ್ಮಿ ಉಳ್ಳಾಲ್ ಅವರು ಬ್ಯಾಂಕ್ ಸಿಬ್ಬಂದಿ ಆಗಿದ್ದ ಯು. ಎ. ಪ್ರೇಮನಾಥ್ […]

ಕುಂಪಲ ಆಶ್ರಯ ಕಾಲೋನಿಯ ಮನೆಯಲ್ಲಿ ಮಾಡೆಲ್ ಶವ ಪತ್ತೆ, ಮೂವರ ಮೇಲೆ ಅನುಮಾನ !

Wednesday, March 10th, 2021
Preksha

ಉಳ್ಳಾಲ : ಮಾಡೆಲಿಂಗ್ ಯುವತಿ, ಪೋಟೋ ಶೂಟ್ ನಲ್ಲಿ ಭಾಗವಹಿಸಲು  ಬೆಂಗಳೂರಿಗೆ ತೆರಳಲು ಸಿದ್ದತೆ ಮಾಡಿಕೊಂಡಿದ್ದವಳು ಕುಂಪಲದ ಆಶ್ರಯ ಕಾಲೋನಿಯ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮೃತ ಯುವತಿಯನ್ನು ಆಶ್ರಯ ಕಾಲನಿ ನಿವಾಸಿ ಎಚ್ಪಿ ಗ್ಯಾಸ್ ಏಜನ್ಸಿಯಲ್ಲಿ ಕಾರ್ಮಿಕರಾಗಿರುವ ಚಿತ್ತಪ್ರಸಾದ್ ಮತ್ತು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ವನಿತಾ ದಂಪತಿಯ ಕಿರಿಯ ಪುತ್ರಿ ಪ್ರೇಕ್ಷಾ (17)  ಎಂದು ಗುರುತಿಸಲಾಗಿದೆ. ಮಂಗಳೂರು ನಂತೂರು ಬಳಿಯ ನಿಟ್ಟೆ ಪಿಯುಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಈಕೆ ಇಂದು ರಜೆ ಪಡೆದುಕೊಂಡು ಮನೆಯಲ್ಲೇ […]

ಬ್ರಹತ್ ಗಾತ್ರದ ಮರ ಬಿದ್ದು ಮೂವರು ಯುವಕರ ದಾರುಣ ಸಾವು

Wednesday, March 10th, 2021
patrame

ಧರ್ಮಸ್ಥಳ :  ಖಾಸಗಿ ಸ್ಥಳವೊಂದರಲ್ಲಿ ಮರ ಕಡಿಯುತ್ತಿದ್ದ ವೇಳೆ  ಆಕಸ್ಮಿಕವಾಗಿ ಬ್ರಹತ್ ಗಾತ್ರದ ಮರವೊಂದು ಬಿದ್ದ ಪರಿಣಾಮ  ಮೂವರು ಯುವಕರು ಧಾರುಣವಾಗಿ ಮೃತಪಟ್ಟ ಘಟನೆ  ಮಂಗಳವಾರ  ಮಧ್ಯಾಹ್ನ ಪಟ್ರಮೆ ಗ್ರಾಮದ ಅನಾರು ಸಮೀಪ ಕಾಯಿಲ ಎಂಬಲ್ಲಿ ನಡೆದಿದೆ. ಪಟ್ರಮೆ ಗ್ರಾಮದ ರಾಮಣ್ಣ ಕುಂಬಾರ ಎಂಬವರ ಪುತ್ರ ಪ್ರಶಾಂತ್ ಕುಂಬಾರ (21), ಸೇಸಪ್ಪ ಪೂಜಾರಿಯವರ ಮಗ ಸ್ವಸ್ತಿಕ್ ಪೂಜಾರಿ ಮತ್ತು ಗಣೇಶ್ ಉಪ್ಪಿನಂಗಡಿ ಮೃತಪಟ್ಟವರು. ಪಟ್ರಮೆ ಗ್ರಾಮದ ಅನಾರು ಸಮೀಪ ಕಾಯಿಲ ಎಂಬಲ್ಲಿ ಲೋಕಯ್ಯ ಗೌಡರಿಗೆ ಸೇರಿದ  ಧೂಪದ ಮರವೊಂದನ್ನು ಕಡಿದುರುಳಿಸುವ ಸಂದರ್ಭ ಮರ […]

ರಂಗ-ಭಾಸ್ಕರ 2021 ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಐ.ಕೆ.ಬೊಳುವಾರು ಆಯ್ಕೆ

Tuesday, March 9th, 2021
IK Boluvaru

ಮಂಗಳೂರು :  ಕಳೆದ 42 ವರ್ಷಗಳಿಂದ ರಂಗಭೂಮಿಗೆ ಸಂಬಂಧಿಸಿದಂತೆ ನಟನೆ, ನಿರ್ದೇಶನ, ನಾಟಕ ರಚನೆ, ನೇಪಥ್ಯ, ಪ್ರಕಟಣೆ, ತರಬೇತಿ, ಸಂಘಟನೆ ಮುಂತಾದ ವಿವಿಧ ವಿಭಾಗಗಳಲ್ಲಿ ನಿರಂತರವಾಗಿ ಕಾರ್ಯ ನಿರ್ವಹಣೆ ಮಾಡಿ, ಮಕ್ಕಳ ರಂಗಭೂಮಿಯಲ್ಲೂ ಗಮನಾರ್ಹ ಕೆಲಸ ಮಾಡಿದ ಹಿರಿಯ ರಂಗಕರ್ಮಿ ಶ್ರೀ ಐ.ಕೆ.ಬೊಳುವಾರು ರವರಿಗೆ, ಪ್ರತಿಭಾವಂತ ರಂಗ ನಿರ್ದೇಶಕ ದಿವಂಗತ ಭಾಸ್ಕರ ನೆಲ್ಲಿತೀರ್ಥರವರ ನೆನಪಿನಲ್ಲಿ ಕೊಡಮಾಡುವ, 2021 ನೆ ಸಾಲಿನ, ರಂಗಭಾಸ್ಕರ-2021 ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಗೋಪಾಲಕೃಷ್ಣ ಶೆಟ್ಟಿ […]

“ಮಂಜೂಷಾ” ವಾಹನ ಸಂಗ್ರಹಾಲಯಕ್ಕೆ ಎರಡು ಡಬಲ್ ಡೆಕ್ಕರ್ ಬಸ್ ಸೇರ್ಪಡೆ

Tuesday, March 9th, 2021
Manjusha

ಧರ್ಮಸ್ಥಳ:   ಧರ್ಮಸ್ಥಳದಲ್ಲಿರುವ “ಮಂಜೂಷಾ” ವಾಹನ ಸಂಗ್ರಹಾಲಯಕ್ಕೆ ಮುಂಬೈನಲ್ಲಿರುವ ಧರ್ಮಸ್ಥಳದ ಭಕ್ತರು ಸಂಗ್ರಹಿಸಿ ಕಳುಹಿಸಿದ ಎರಡು ಡಬಲ್ ಡೆಕ್ಕರ್ ಬಸ್‍ಗಳು ಧರ್ಮಸ್ಥಳಕ್ಕೆ ತಲುಪಿವೆ. ಮುಂಬೈನಿಂದ ಧರ್ಮಸ್ಥಳಕ್ಕೆ ಡಬಲ್ ಡೆಕ್ಕರ್ ಬಸ್‍ಗಳ ಸಾಗಾಟವನ್ನು ವಿ.ಆರ್.ಎಲ್. ಲಾಜಿಸ್ಟಿಕ್ ಸಂಸ್ಥೆಯವರು ಉಚಿತವಾಗಿ ಮಾಡಿಕೊಟ್ಟಿದ್ದು ಧರ್ಮಾಧಿಕಾರಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಅವರಿಬ್ಬರಿಗೂ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದವನ್ನು ಕೋರಿ ಶುಭ ಹಾರೈಸಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕರ ಉಡುಪಿ, ಕಾರವಾರ ಮನೆಗೆ ದಾಳಿ

Tuesday, March 9th, 2021
ACB raid

ಉಡುಪಿ : ಸರಕಾರಿ ಅಧಿಕಾರಿಯೋರ್ವರ ಮನೆಯೊಂದಕ್ಕೆ ಎಸಿಬಿ ಅಧಿಕಾರಿಗಳು ಮಾ.9, ಮಂಗಳವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯ ಕೆ. ವಡ್ಡಾರು ಅವರ ಮನೆಗೆ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ. ಇವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕರು ಆಗಿದ್ದರು. ಉಡುಪಿಯ ಹೊರವಲಯದ ಪುತ್ತೂರು ಎಂಬಲ್ಲಿರುವ ಮನೆ ಮೇಲೆ ಮಂಗಳೂರು ವಿಭಾಗದ ಎಸಿಬಿ ಅಧಿಕಾರಿಗಳ ತಂಡದಿಂದ ತಪಾಸಣೆ ನಡೆಯುತ್ತಿದೆ. ಮ್ಯೆಸೂರಿನಲ್ಲಿ ಮನೆ, ಕಚೇರಿ, ಕಾರವಾರದಲ್ಲಿರುವ ಮನೆ, ಸಹಿತ ಅವರ ನಿವೇಶನ […]

ಪಿಲಿಕುಳದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

Monday, March 8th, 2021
Pilikula-Womens-Day

ಮಂಗಳೂರು : ಪ್ರತಿದಿನವೂ ಮಹಿಳೆಯರ ದಿನ, ಮಹಿಳೆಯರು ತಮ್ಮ ಮಹತ್ವವನ್ನು ಅರಿತುಕೊಂಡು ಮಾನಸಿಕವಾಗಿ ಸಬಲರಾಗಬೇಕು, ಮಹಿಳೆಯರು ಮತ್ತು ಪುರುಷರು ಜೊತೆ ಜೊತೆಯಲ್ಲಿ ನಡೆದು ಸಮಾಜದಲ್ಲಿ ಅಭಿವೃದ್ಧಿಯನ್ನು ತರಬೇಕು ಎಂದು ಮಾನಸಿಕ ಆರೋಗ್ಯ ತಜ್ಞೆ ಡಾ. ರಮೀಲಾ ಶೇಖರ್ ಹೇಳಿದರು. ಅವರು ಇಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಬೆಂಗಳೂರು, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಮಂಗಳೂರು, ಧರ್ಮಜ್ಯೋತಿ ಸಮಾಜ ಸೇವಾ ಕೇಂದ್ರ ಮತ್ತು ಸೌಹಾರ್ದ ಮಹಿಳಾ ಒಕ್ಕೂಟ, ವಾಮಂಜೂರು ಇವರ ಸಹಕಾರದೊಂದಿಗೆ ಪಿಲಿಕುಳ ಪ್ರಾದೇಶಿಕ […]

ದೇವಸ್ಥಾನದಿಂದ ಕಾಣಿಕೆ ಡಬ್ಬಿ ಕಳವು ವಿಶ್ವ ಹಿಂದೂ ಪರಿಷತ್​ನ ಪ್ರಖಂಡ ಸಂಚಾಲಕ ಬಂಧನ

Monday, March 8th, 2021
Mohan

ಮಂಗಳೂರು : ದೇವಸ್ಥಾನದಿಂದ ಕಾಣಿಕೆ ಡಬ್ಬಿ ಹಾಗೂ ಮೊಂಟೆಪದವು ಬಳಿಯ ಮನೆಯೊಂದರಿಂದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ನ ಉಳ್ಳಾಲ ಗ್ರಾಮಾಂತರ ಪ್ರಖಂಡದ ಸಂಚಾಲಕ ಮೊಂಟೆಪದವು ನಿವಾಸಿ ತಾರನಾಥ್ ಮೋಹನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಮಂಜನಾಡಿ ದೇವಸ್ಥಾನದಿಂದ ಕಾಣಿಕೆ ಡಬ್ಬಿ ಹಾಗೂ ಮೊಂಟೆಪದವು ಬಳಿಯ ಮನೆಯೊಂದರಿಂದ ಬೈಕ್ ಕಳವು ಮಾಡಿದ್ದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ಹಿನ್ನೆಲೆ ಸಾರ್ವಜನಿಕರು ಆತನನ್ನು ಹಿಡಿದು ಹತ್ತಿರದ ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.