ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ 28ನೇ ವರ್ಷದ ಚಾತುರ್ಮಾಸ ವೃತ ಆರಂಭ

Sunday, July 21st, 2024
shirali-matt

ಮಂಗಳೂರು : ಶಿರಾಲಿ ಶ್ರೀ ಚಿತ್ರಾಪುರ ಮಠ ಸಂಸ್ಥಾನದ ಪೀಠಾಧಿಪತಿಗಳಾಗಿರುವ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ 28ನೇ ವರ್ಷದ ಚಾತುರ್ಮಾಸ ವೃತದ ಆಚರಣೆಯು ಈ ಬಾರಿ ಮಂಗಳೂರಿನ ರಥಬೀದಿ ಬಳಿ ಇರುವ ಶ್ರೀ ವಾಮನಾಶ್ರಮ ಸಮಾಧಿ ಮಠದಲ್ಲಿ ಪ್ರಾರಂಭಗೊಂಡಿತು . ಪ್ರಾತಃ ಕಾಲ ಶ್ರೀ ಉಮಾ ಮಹೇಶ್ವರ ದೇವರ ಸನ್ನಿಧಿಯಲ್ಲಿ ಮಹಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು , ಶ್ರೀಗಳವರು ಶ್ರೀ ದೇವರ ಪೂಜೆ ಪುರಸ್ಕಾರಗಳನ್ನು ತಮ್ಮ ದಿವ್ಯ ಹಸ್ತಗಳಿಂದ ನೆರವೇರಿಸಿದರು . ಬಳಿಕ ಶ್ರೀಗಳವರಿಂದ ಮಂಡಲ ಪೂಜೆ , […]

ಸುರತ್ಕಲ್ ಬಂಟರ ಸಂಘದಲ್ಲಿ ಸಸಿ ವಿತರಣೆ, ಸಾಧಕರಿಗೆ ಸನ್ಮಾನ

Sunday, July 21st, 2024
Surathkal Bunts

ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್, ರೋಟರಿ ಕ್ಲಬ್ ಬೈಕಂಪಾಡಿ ಹಾಗೂ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಸುರತ್ಕಲ್ ಇದರ ಸಹಯೋಗದಲ್ಲಿ ಮೇಬೈಲು ಸದಾಶಿವ ಶೆಟ್ಟಿ ನೇತೃತ್ವದಲ್ಲಿ 15ನೇ ವರ್ಷದ ಸಸಿ ವಿತರಣಾ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ ಕಾರ್ಯಕ್ರಮ ಆದಿತ್ಯವಾರ ಇಲ್ಲಿನ ಬಂಟರ ಭವನದಲ್ಲಿ ಜರುಗಿತು. ಉದ್ಘಾಟನೆಯನ್ನು ನೆರವೇರಿಸಿ ಮಾತಾಡಿದ ವಿ.ಕೆ ಸಮೂಹ ಸಂಸ್ಥೆ ಮುಂಬಯಿ ಇದರ ಸಿಎಂಡಿ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಅವರು, “ಸಸಿ ವಿತರಣೆ ಬರೀ […]

ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಗುರು ಪೂರ್ಣಿಮಾ ಉತ್ಸವ

Sunday, July 21st, 2024
Mataamrutanandamai

ಮಂಗಳೂರು : ಗುರುಪೂರ್ಣಿಮೆಯು ವ್ಯಕ್ತಿಯೊಳಗಿನ ದೋಷಗಳನ್ನೆಲ್ಲ ಪರಿಹರಿಸಿ ಆತನನ್ನು ಸ್ವಯಂಪೂರ್ಣ ಮತ್ತು ಸರ್ವಾಂಗೀಣ ವ್ಯಕ್ತಿಯಾಗಿ ರೂಪಿಸುವ ದಿವ್ಯದಿನವಾಗಿದೆ. ಗುರು ಮತ್ತು ಗುರಿ ಎರಡೂ ಆತನನ್ನು ಗೊಂದಲರಹಿತನನ್ನಾಗಿ ಮಾಡುತ್ತದೆ ಎಂದು ಮಾತಾ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಹೇಳಿದರು. ನಗರದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಜುಲೈ21 ರಂದು ಭಾನುವಾರ ಗುರು ಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಮಠದ ಮುಖ್ಯಸ್ಥರಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣರವರು ಆಶೀರ್ವಚನವಿತ್ತು ಇಂದು […]

ಕರಾವಳಿ ಕುರುಬ ಸಮಾಜ (ರಿ) ಮಂಗಳೂರು ಇವರಿಂದ ಶ್ರೀ ಐವನ್ ಡಿಸೋಜ ರವರಿಗೆ ಸನ್ಮಾನ

Sunday, July 21st, 2024
ivan-d-souza

ಮಂಗಳೂರು : ಕುರುಬ ಸಮುದಾಯದ ವತಿಯಿಂದ ದ್ವಿತೀಯ ಬಾರಿಗೆ ವಿಧಾನ ಪರಿಷತ್ ಶಾಸಕರಾಗಿ ಆಯ್ಕೆಯಾದ ಐವನ್ ಡಿಸೋಜ ರವರಿಗೆ ಅಭಿನಂದಿಸಿ ಶುಭ ಕೊರಲಾಯಿತು. ಮೊದಲನೆಯ ಬಾರಿ ಶಾಸಕರಾಗಿದ್ದಾಗ ತಮ್ಮ ಸಮಾಜದ ಬೆಳವಣಿಗೆಗೆ ನೀಡಿದ ಸಹಕಾರದ ಬಗ್ಗೆ ಸ್ಮರಿಸಿ , ಮುಂದಿನ ದಿನಗಳಲ್ಲಿ ಕುರುಬ ಸಮುದಾಯದ ಜನರಿಗೆ ರೇಶನ್ ಕಾರ್ಡ್ ಶೈಕ್ಷಣಿಕವಾಗಿ ಸ್ಕಾಲರ್ಶಿಪ್ ನ ಹಾಗೂ ಇತರ ಸಮಸ್ಯೆಯ ಬಗ್ಗೆ ವಿವರಿಸಿದರು, ಈ ಬಗ್ಗೆ ಸರಕಾರದ ಗಮನ ಸೆಳೆಯಬೇಕೆಂದು ಕುರುಬ ಸಮಾಜದ ನಾಯಕರು ಹಾಗೂ ಗೌರವಾಧ್ಯಕ್ಷರು ಮಂಗಳೂರು ಮಹಾನಗರ […]

ಟಿವಿ 5 ಚಾನೆಲ್‌ನ ಮಂಗಳೂರು ಕ್ಯಾಮೆರಾಮೆನ್ ವಿರೇಶ್ ಕಡ್ಲಿಕೊಪ್ಪ ನಿಧನ

Saturday, July 20th, 2024
ಟಿವಿ 5 ಚಾನೆಲ್‌ನ ಮಂಗಳೂರು ಕ್ಯಾಮೆರಾಮೆನ್ ವಿರೇಶ್ ಕಡ್ಲಿಕೊಪ್ಪ ನಿಧನ

ಮಂಗಳೂರು : ಮಂಗಳೂರಿನಲ್ಲಿ ಟಿವಿ 5 ಚಾನೆಲ್‌ನಲ್ಲಿ ಕ್ಯಾಮೆರಾಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿರೇಶ್ ಕಡ್ಲಿಕೊಪ್ಪ ಅವರು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಮೂಲತಃ ಗದಗ ಜಿಲ್ಲೆಯ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದವರಾಗಿದ್ದ ವಿರೇಶ್ ಕಳೆದ ಹಲವಾರು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಮಂಗಳೂರಿನ ಖಾಸಗಿ ಚಾನೆಲ್ ನಲ್ಲಿ ಉದ್ಯೋಗಿಯಾಗಿದ್ದ ಅವರು ಇತ್ತೀಚೆಗೆ ಟಿವಿ 5 ಚಾನೆಲ್‌ನಲ್ಲಿ ಕ್ಯಾಮೆರಾಮೆನ್ ಆಗಿ ಜಾಯಿನ್ ಆಗಿದ್ದರು. ಕಳೆದ ಜುಲೈ 7 ರಂದು ಹುಟ್ಟು ಹಬ್ಬ ಹಾಗೂ ಊರ ಜಾತ್ರೆಯಲ್ಲಿ ಭಾಗವಹಿಸಲು ಊರಿಗೆ ತೆರಳಿದ್ದ […]

ಸತ್ತ ನಾಯಿಯನ್ನು ಸ್ಕೂಟರ್ ಗೆ ಕಟ್ಟಿ ಎಳೆದ ವ್ಯಕ್ತಿ

Saturday, July 20th, 2024
shirva dog-drag

ಕಾರ್ಕಳ : ಸತ್ತ ನಾಯಿಯನ್ನು ಸ್ಕೂಟರ್ ಗೆ ಕಟ್ಟಿಕೊಂಡು ಎಳೆದೊಯ್ದ ಘಟನೆ ಶಿರ್ವ ಮುಖ್ಯ ರಸ್ತೆಯಲ್ಲಿ ನಡೆದಿದ್ದು, ಇದೀಗ ಘಟನೆಯ ವಿಡಿಯೋ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಮಾನವೀಯ ಕೃತ್ಯ ನಡೆಸಿದ ವ್ಯಕ್ತಿ ಕೊಂಬಗುಡ್ಡೆಯ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದ್ದು ಶಿರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪ್ರಾಣಿ ದಯಾಸಂಘದವರು ಕೇಸು ದಾಖಲಿಸುವ ಸಿದ್ಧತೆಯಲ್ಲಿದ್ದಾರೆ ಎನ್ನಲಾಗಿದೆ.

ಪೊಳಲಿಯ ಚೆಂಡಿನಗದ್ದೆಯಲ್ಲಿ 5 ನೇ ವರ್ಷದ ಭದ್ರತಳಿಯ ಯಾಂತ್ರೀಕೃತ ಭತ್ತ ನಾಟಿಗೆ ಬಂಟ್ವಾಳ ಶಾಸಕರಿಂದ ಚಾಲನೆ

Saturday, July 20th, 2024
Rajesh-Naik

ಬಂಟ್ವಾಳ : ಕೃಷಿ ಇಲಾಖೆ ವತಿಯಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಮುತುವರ್ಜಿಯಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಚೆಂಡಿನಗದ್ದೆಯಲ್ಲಿ ಸುಮಾರು 2.50 ಎಕರೆ ಗದ್ದೆಯಲ್ಲಿ 5 ನೇ ವರ್ಷದ ಭದ್ರತಳಿಯ ಯಾಂತ್ರೀಕೃತ ಭತ್ತ ನಾಟಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಯಂತ್ರದ ಮೂಲಕ ನೇಜಿ ನೆಟ್ಟು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೃಷಿ ಇಲಾಖೆ ಹಾಗೂ ಊರಿನವರ ಸಹಕಾರದಿಂದ ಭತ್ತದ ಕೃಷಿ ನಾಟಿಯನ್ನು ಮಾಡಲಾಗಿದೆ. ಕಳೆದ ಬಾರಿ ಮಾಡಿದ […]

ಶನಿವಾರ ಸಂಜೆ ಶ್ರೀ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರ ಪುರ ಪ್ರವೇಶ

Saturday, July 20th, 2024
chitrapura

ಮಂಗಳೂರು : ಉತ್ತರ ಕನ್ನಡ ಜಿಲ್ಲೆಯ ಶಿರಾಲಿ ಶ್ರೀ ಚಿತ್ರಾಪುರ ಮಠ ಸಂಸ್ಥಾನದ ಪೀಠಾಧಿಪತಿಗಳಾಗಿರುವ ಶ್ರೀ ಸದ್ಯೋಜಾತಶಂಕರಾಶ್ರಮ ಸ್ವಾಮೀಜಿಯವರ 28ನೇ ವರ್ಷದ ಚಾತುರ್ಮಾಸ ವೃತದ ಆಚರಣೆಯನ್ನು ಈ ಬಾರಿ ಮಂಗಳೂರಿನ ರಥಬೀದಿ ಬಳಿ ಇರುವ ಶ್ರೀ ವಾಮನಾಶ್ರಮ ಸಮಾಧಿ ಮಠದಲ್ಲಿ ಕೈಗೊಳ್ಳಲಿರುವರು. ಆ ಪ್ರಯುಕ್ತ ಇಂದು ಶನಿವಾರ ಸಂಜೆ 6-00 ಗಂಟೆಗೆ ಶ್ರೀಗಳ ಪುರಪ್ರವೇಶ ಮೆರವಣಿಗೆಯು ರಥಬೀದಿಯ ಬಾಲಾಜಿ ಜಂಕ್ಷನ್ (ವೃತ್ತ) ನಿಂದ ಆರಂಭವಾಗಿ ಶ್ರೀ ವಾಮನಾಶ್ರಮ ಮಠದವರೇಗೆ ಸಾಗಿ ಸಂಪನ್ನಗೊಳ್ಳುವುದು ಎಂದು ಕೊಡಿಯಾಲ್ಚಾ ತುರ್ಮಾಸದ ಕಮಿಟಿಯ […]

ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ ಸಿ.ಎಲ್. ಅವರಿಗೆ ಸೇರಿದ ಆರು ಸ್ಥಳಗಳಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ

Saturday, July 20th, 2024
cl Anand

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ ಸಿ.ಎಲ್. ಅವರಿಗೆ ಸೇರಿದ ಆರು ಸ್ಥಳಗಳಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮ ಆಸ್ತಿಯ ಬಗ್ಗೆ ಪರಿಶೀಲನೆ ನಡೆಸಿದೆ. ಈ ವೇಳೆ, ಮೂರು ವಾಸದ ಮನೆಗಳು ಸೇರಿದಂತೆ ಚಿನ್ನಾಭರಣ, ಜಮೀನು ಮಾಡಿಕೊಂಡಿರುವುದು ಪತ್ತೆಯಾಗಿದೆ. ಮೈಸೂರು, ಬೆಂಗಳೂರು ಸೇರಿದಂತೆ ಮೂರು ಮನೆಗಳಿವೆ. ಇದಲ್ಲದೆ, ನಾಲ್ಕು ಎಕರೆ 27 ಗುಂಟೆ ಕೃಷಿ ಜಮೀನು ಹೊಂದಿದ್ದಾರೆ. ಇದರ ಆಸ್ತಿ ಮೌಲ್ಯ 2.12 ಕೋಟಿ ಆಗಿರುತ್ತದೆ. 19.40 ಲಕ್ಷ ಮೌಲ್ಯದ ಚಿನ್ನಾಭರಣಗಳು, 20.50 ಲಕ್ಷ […]

ಕೆಎಸ್ಸಾರ್ಟಿಸಿ ಸಂಸ್ಥೆ ಯ ಐರಾವತ ಬಸ್ಸಿನ ಎಸಿಗೆ ಬೆಂಕಿ, ತಪ್ಪಿದ ಬಾರಿ ಅನಾಹುತ

Thursday, July 18th, 2024
iravatha

ಉಪ್ಪಿನಂಗಡಿ : ಕೆಎಸ್ಸಾರ್ಟಿಸಿ ಸಂಸ್ಥೆ ಯ ಐರಾವತ ಬಸ್ಸೊಂದಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಇಲ್ಲಿನ ಹಳೆಗೇಟು ಬಳಿ ಜುಲೈ 18 ಗುರುವಾರ ಬೆಳಗ್ಗೆ ನಡೆದಿದೆ. ಬೆಂಗಳೂರಿನಿಂದ – ಮಂಗಳೂರಿಗೆ ಆಗಮಿಸುತ್ತಿದ್ದ ಐರಾವತ ಬಸ್ಸಿನ ಹಿಂಬದಿ ಎಸಿಗೆ ಬೆಂಕಿ ಹತ್ತಿಕೊಂಡಿದ್ದು, ಇದನ್ನು ಗಮನಿಸಿದ ಚಾಲಕ ಹಳೆಗೇಟು ಬಳಿ ಬಸ್ಸನ್ನು ನಿಲ್ಲಿಸಿದ್ದಾನೆ. ಆಗ ಪ್ರಯಾಣಿಕರೆಲ್ಲರೂ ಬಸ್ಸಿನಿಂದ ಇಳಿದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಉಪ್ಪಿನಂಗಡಿ ಗ್ರಾ.ಪಂ. ಸಿಬ್ಬಂದಿ ಇಸಾಕ್, ಅಟೋ ಚಾಲಕರು ರಸ್ತೆಯಲ್ಲಿದ್ದ ಕೆಸರು, ಮಣ್ಣು, ನೀರನ್ನು ಬಸ್ಸಿಗೆ ಎರಚಿ ಬೆಂಕಿಯನ್ನು ಹತೋಟಿಗೆ […]