ಇಸ್ಪೀಟ್‌ ಚಟಕ್ಕೆ ಬಿದ್ದು ತನ್ನ ಮನೆಯಿಂದಲೇ ಕಳ್ಳತನ ಮಾಡಿ ಪೊಲೀಸರ ಅತಿಥಿಯಾದ

Wednesday, April 24th, 2019
poonjal katte

ಪುಂಜಾಲಕಟ್ಟೆ : ಇಸ್ಪೀಟ್‌ ಚಟಕ್ಕೆ ಬಿದ್ದ ತನ್ನ ಮನೆಯಿಂದಲೇ  ಕಳ್ಳತನವೆಸಗಿ ಆತನೇ ಪೊಲೀಸರ ಅತಿಥಿಯಾದ ಘಟನೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಕುಕ್ಕಳ ಗ್ರಾಮದ ಗಂಪದಡ್ಡದಲ್ಲಿ ನಡೆದಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ ಏ.19ರಂದು ಸಾದಿಕ್‌ (30) ಎಂಬಾಂತ ಪೊಲೀಸರಿಗೆ ದೂರು ನೀಡಿದ್ದ.  ಅಂದು ಯೂಸುಬ್‌ ಬ್ಯಾರಿಯ ಮನೆಯವರು ಹಾಗೂ ಸಂಬಂಧಿಕರಾದ ನೆರೆಮನೆಯವರು ವಿವಾಹ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದರು. ಆದರೆ ಸಂಜೆ ವೇಳೆಗೆ ಮನೆಗೆ ಹಿಂದಿರುಗಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ಕಂಡುಬಂದಿದೆ. ಕಪಾಟನ್ನು ಒಡೆದು ಒಳಗಿದ್ದ ಚಿನ್ನದ ಒಡವೆಗಳು ಹಾಗೂ ನಗದನ್ನು ಕಳವು ಮಾಡಲಾಗಿತ್ತು. ಇಸ್ಪೀಟ್‌ ಚಟಕ್ಕೆ […]

ಶ್ರೀ ಕ್ಷೇತ್ರಕದ್ರಿಯಲ್ಲಿ ಬ್ರಹ್ಮಕಲಶೋತ್ಸವಕ್ಕೆ ಗೊನೆಮೂಹೂರ್ತ

Wednesday, April 24th, 2019
Kadri-Gone-muhurtha

ಮಂಗಳೂರು  : ಶ್ರೀ ಕ್ಷೇತ್ರ ಕದ್ರಿಯಲ್ಲಿ ಜರಗಲಿರುವ ಬ್ರಹ್ಮಕಲಶ, ಮಹಾರುದ್ರಯಾಗ ಹಾಗೂ ಮಹಾದಂಡ ರುದ್ರಾಭಿಷೇಕದಿಂದ ಸರ್ವರಿಗೂ ಒಳಿತಾಗುವ ಮೂಲಕ ಲೋಕ ಕಲ್ಯಾಣವಾಗಲಿ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಹಾಗೂ ಶಾಸಕ ವೇದವ್ಯಾಸಕಾಮತ್ ನುಡಿದರು. ಶ್ರೀ ಕ್ಷೇತ್ರಕದ್ರಿಯಲ್ಲಿ ಬ್ರಹ್ಮಕಲಶೋತ್ಸವ ಗೊನೆಮೂಹೂರ್ತ, ಚಪ್ಪರ ಮುಹೂರ್ತ ಹಾಗೂ ಮಹಾದಂಡ ಮುಹೂರ್ತ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು. ಕ್ಷೇತ್ರದ ತಂತ್ರಿಗಳಾದ ವಿಠಲದಾಸ ತಂತ್ರಿಗಳು ದೀಪ ಪ್ರಜ್ವಲನಗೊಳಿಸಿ ಮಾತನಾಡಿ ವೈಜ್ಞಾನಿಕ ಪ್ರಕ್ರಿಯೆಗಳಿಗೆ ಅನುಗುಣವಾಗಿ ಬ್ರಹ್ಮಕಲಶೋತ್ಸವದಎಲ್ಲಾ ವಿಧಿ ವಿಧಾನಗಳು ನೆರವೇರಲಿವೆ ಎಂದರು. ಗಣ್ಯರಾದ ಅಜಿತ್‌ಕುಮಾರ್ ರೈ […]

’ಕಲ್ಕೂರ ಸಾಂಸ್ಕೃತಿಕ ಸಿರಿ – ಯಕ್ಷಸಿರಿ ಪ್ರಶಸ್ತಿ’ ಪ್ರದಾನ

Wednesday, April 24th, 2019
Kalkura

ಮಂಗಳೂರು :  ಮಹಾರಾಷ್ಟ್ರದ ಸಾಂಗ್ಲಿ-ಮೀರಾಜ್ ತುಳುಭವನ ನಿರ್ಮಾಣದ ರೂವಾರಿಗಳಲ್ಲೋರ್ವರಾಗಿ ತುಳು- ಕನ್ನಡ ಸಂಸ್ಕೃತಿಯನ್ನು ಹೊರರಾಜ್ಯಗಳಲ್ಲಿ ಪಸರಿಸಿದ ಹಿರಿಯ ಸಂಘಟಕ ಶ್ರೀನಿವಾಸ ಮಂಕುಡೆಯವರಿಗೆ ’ಕಲ್ಕೂರ ಸಾಂಸ್ಕೃತಿಕ ಸಿರಿ’ ಹಾಗೂ ಹಿರಿಯ ಹವ್ಯಾಸಿ ಯಕ್ಷಗಾನಕಲಾವಿದಉಡುಪಿ ತಾಲೂಕಿನ ಸಾಂತೂರುಜಗನ್ನಾಥ ಶೆಟ್ಟಿಯವರಿಗೆ’ ಕಲ್ಕೂರಯಕ್ಷ ಸಿರಿ’ ಪ್ರಶಸ್ತಿ ನೀಡುವ ಮೂಲಕ ಅಭಿನಂದಿಸಲಾಯಿತು. ಇತ್ತೀಚೆಗೆ ನಗರದಕದ್ರಿ ಮಲ್ಲಿಕಾ ಬಡಾವಣೆಯ ಮಂಜುಪ್ರಾಸಾದದಲ್ಲಿಕಲ್ಕೂರ ಪ್ರತಿಷ್ಠಾನದ ವತಿಯಿಂದಏರ್ಪಡಿಸಲಾಗಿದ್ದ ವಿಷುಕಣಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಷ್ಠಾನದಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ಸನ್ಮಾನಿತರನ್ನು ಅಭಿನಂದಿಸಿದರು. ಕರ್ಣಾಟಕ ಬ್ಯಾಂಕಿನಅಧ್ಯಕ್ಷರಾದ ಶ್ರೀ ಜಯರಾಮ ಭಟ್, ಶಾರದಾ ಸಮೂಹ […]

ಆಳ್ವಾಸ್ ಪತ್ರಿಕೋದ್ಯಮ ಪರೀಕ್ಷೆಯಲ್ಲಿ ಅಶ್ವಿನಿ ಜೈನ್ ಪ್ರಥಮ ರ‍್ಯಾಂಕ್

Wednesday, April 24th, 2019
Ashwini

ಮೂಡಬಿದಿರೆ : ಮಂಗಳೂರು ವಿಶ್ವವಿದ್ಯಾನಿಲಯವು 2017-18 ನೇ ಸಾಲಿನ ಮೇ ತಿಂಗಳಲ್ಲಿ ನಡೆಸಿದ ಸ್ನಾತಕೋತ್ತರ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಅಶ್ವಿನಿ ಜೈನ್ ಪ್ರಥಮ ರ‍್ಯಾಂಕ್ ಗಳಿಸುವುದರ ಜೊತೆಗೆ ಎರಡು ಚಿನ್ನದ ಪದಕ ಹಾಗೂ ಮೂರು ನಗದು ಬಹುಮಾನಕ್ಕೆ ಪುರಸ್ಕೃತರಾಗಿದ್ದಾರೆ. ಡಾ. ಟಿ.ಎಮ್.ಎ ಪೈ ಎಂಡೋವ್‌ಮೆಂಟ್ ಹಾಗೂ ರಾಮಕೃಷ್ಣ ಮಲ್ಯ ಟ್ರಸ್ಟ್‌ನಿಂದ ಚಿನ್ನದ ಪದಕಗಳು, ದಕ್ಷಿಣ ಕನ್ನಡ ಚಿಲ್ಡ್ರನ್ಸ್ ಫಿಲ್ಮ್ ಫೆಸ್ಟಿವಲ್, ಪಬ್ಲಿಕ್ ರಿಲೇಶನ್ಸ್ ಸೊಸೈಟಿ ಆಫ್ ಇಂಡಿಯಾ ಕ್ಯಾಶ್ […]

ರಸ್ತೆಯಲ್ಲಿ ಇರಿಸಿದ್ದ ಬ್ಯಾರಿಕೇಡ್ ಗೆ ಸ್ಕೂಟಿ ಢಿಕ್ಕಿ ಹೊಡೆದು ಸವಾರ ಮೃತ್ಯು

Monday, April 22nd, 2019
shakith

ಪಡುಬಿದ್ರಿ :  ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರಿಸಿದ್ದ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಮೃತಪಟ್ಟ ಘಟನೆ ಎ.20ರಂದು ನಸುಕಿನ ವೇಳೆ ಎರಡು ಗಂಟೆ ಸುಮಾರಿಗೆ ನಡೆದಿದೆ. ಮೃತರನ್ನು ಸ್ಕೂಟಿ ಸವಾರ ಕಾಪು ಕೈಪುಂಜಾಲಿನ ಶಕೀತ್(24) ಎಂದು ಗುರುತಿಸಲಾಗಿದೆ. ಹಿಂಬದಿ ಸವಾರ ಹರ್ಷಿತ್ ಎಂಬವರು ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೆಜಮಾಡಿ ಕೋಡಿಯಲ್ಲಿ ಮದರಂಗಿ ಕಾರ್ಯಕ್ರಮಕ್ಕೆ ಲೈಟಿಂಗ್ ಹಾಗೂ ಸೌಂಡ್ ಸಿಸ್ಟಮ್ ಅಳವಡಿಸಲು ಬಂದಿದ್ದ ಶಕೀತ್ ತನ್ನ ಸ್ಕೂಟಿಯಲ್ಲಿ ಹರ್ಷಿತ್‌ರನ್ನು ಹಿಂಬದಿ ಸವಾರರಾಗಿ ಕರೆದು […]

ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಆಗಿ – ಡಾ. ಎಸ್. ಎಂ.ಶಿವಪ್ರಕಾಶ್ ನೇಮಕ

Monday, April 22nd, 2019
Dean- M shivaprakash

ಮಂಗಳೂರು : ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಇದರ ಅಂಗಸಂಸ್ಥೆಯಾದ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ನೂತನ ಡೀನ್ ಆಗಿ ಪ್ರಾದ್ಯಾಪಕ ಡಾ. ಎಸ್. ಎಂ. ಶಿವಪ್ರಕಾಶ್ ಅವರು ನೇಮಕ ಗೊಂಡಿದ್ದಾರೆ. ಮೂರು ದಶಕಗಳ ಪ್ರಾದ್ಯಾಪಕ ವೃತ್ತಿಯ ಅನುಭವ ಹೊಂದಿರುವ ಇವರು ಈ ಮೊದಲು ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾನಿಲಯ, ಬೀದರ ಇಲ್ಲಿನ ವಿಸ್ತರಣಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ನಾರ್ವೆಯ ಬರ್ಗೆನ್ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಪಿಜಿ ಡಿಪ್ಲೊಮಾ, ಇಂಗ್ಲೆಂಡಿನ ಸ್ಟರ್ಲಿಂಗ್ ವಿಶ್ವವಿದ್ಯಾಲಯದಲ್ಲಿ […]

ಮಾನಸಿಕ ಸ್ವಾಸ್ಥ್ಯದಿಂದ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ : ನ್ಯಾ. ಸತ್ಯನಾರಾಯಣಾಚಾರ್ಯ

Monday, April 22nd, 2019
jail

ಮಂಗಳೂರು : ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯದಿಂದ ಇಡೀ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಈ ಹಿನ್ನೆಲೆಯಿಂದ ಜೈಲು ನಿವಾಸಿಗರ ದೈಹಿಕ ಹಾಗೂ ಮಾನಿಸಿಕ ಆರೋಗ್ಯ ತಪಾಸಣೆಯ ಕ್ರಮ ಶ್ಲಾಘನೀಯ ಎಂದು ದ. ಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ಹೇಳಿದರು. ಭಾರತೀಯ ರೆಡ್‍ಕ್ರಾಸ್‍ನ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಜಿಲ್ಲಾ ಕಾರಾಗೃಹ, ಜಿಲ್ಲಾ ಸರಕಾರಿ ವೆನ್‍ಲಾಕ್ ಆಸ್ಪತ್ರೆ, ದ. ಕ. ಜಿಲ್ಲಾ ಆರೋಗ್ಯ ಇಲಾಖೆ, ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ದೇರಳಕಟ್ಟೆ […]

ಅಂಬೇಡ್ಕರ್ ಸಮಾನತೆಯ ಪ್ರಜ್ಞೆ ಭಾರತಕ್ಕೆ ಬಲಿಷ್ಠ ಸಂವಿಧಾನವನ್ನು ನೀಡುವಂತೆ ಪ್ರೇರೆಪಿಸಿತು

Monday, April 22nd, 2019
Alvas

ಮೂಡಬಿದಿರೆ: ಅಂಬೇಡ್ಕರ್ ಎಂಬ ಮಹಾನ್ ಚೇತನ ಸಂಘರ್ಷದ ಅನುಭವದಿಂದ ಹುಟ್ಟಿಕೊಂಡ ವ್ಯಕಿತ್ವ. ಅವರ ಮನಸ್ಸಿನಲ್ಲಿ ಅಂದು ಮೂಡಿದ ಸಮಾನತೆಯ ಪ್ರಜ್ಞೆ ,ಭವ್ಯ ಭಾರತಕ್ಕೆ ಬಲಿಷ್ಠ ಸಂವಿಧಾನವನ್ನು ನೀಡುವಂತೆ ಪ್ರೇರೆಪಿಸಿತು ಎಂದು ಆಳ್ವಾಸ್ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಪಕ ಡಾ ಯೋಗೀಶ್ ಕೈರೋಡಿ ನುಡಿದರು. ಅವರು ಆಳ್ವಾಸ್ ಪದವಿ ಕಾಲೇಜಿನ ಐಕ್ಯೂಎಸಿವತಿಯಿಂದ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ನಮ್ಮ ಇಂದಿನ ದಿನ ನಿತ್ಯದ ಜೀವನ ನಮ್ಮ ಸಂವಿಧಾನದ ತಳಹದಿಯ ಮೇಲೆ ನಿಂತಿದೆ. ಅಂದು ಅಂಬೇಡ್ಕರ್ […]

ದ.ಕ. ಲೋಕಸಭಾ ಚುನಾವಣೆಯಲ್ಲಿ ಶೇ.77.25 ಮತದಾನ

Friday, April 19th, 2019
Control-room

ಮಂಗಳೂರು  : ದ.ಕ. ಲೋಕಸಭಾ ಚುನಾವಣೆಯಲ್ಲಿ ಶೇ.77.25 ಮತದಾನವಾಗಿದೆ. ದ.ಕ.ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಸಂಜೆ 6 ಗಂಟೆಗೆ ಮತದಾನ ಪ್ರಕ್ರಿಯೆ ಮುಗಿದ ಮೇಲೆ ಬೆಳ್ತಂಗಡಿಯಲ್ಲಿ ಶೇ.80.92, ಮೂಡಬಿದ್ರೆ ಶೇ.73.17, ಬಂಟ್ವಾಳ ಶೇ. 80.31, ಪುತ್ತೂರು ಶೇ.80.71 ಸುಳ್ಯ ಶೇ.84.10, ಮಂಗಳೂರು ಉತ್ತರ ( ಸುರತ್ಕಲ್) ಶೇ.74.83, ಮಂಗಳೂರು ದಕ್ಷಿಣ ಶೇ. 69.15 ಹಾಗೂ ಮಂಗಳೂರು (ಉಳ್ಳಾಲ) ಶೇ.75.62 ಮತದಾನವಾಗಿದೆ. ಇದರಲ್ಲಿ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯದಲ್ಲಿ ಅತೀ ಹೆಚ್ಚು ಮತದಾನವಾಗಿದೆ. 2014ರ […]

ಜಿಲ್ಲೆಯ ಸಾಮರಸ್ಯದ ಪರಂಪರೆಯ ಉಳಿವಿಗೆ ಮತದಾರರು ಬೆಂಬಲಿಸುತ್ತಾರೆ : ಮಿಥುನ್ ರೈ

Thursday, April 18th, 2019
Mithun-Rai

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಬಲ್ಮಠ ಮಹಿಳಾ ಕಾಲೇಜಿನಲ್ಲಿ ಮತ ಚಲಾಯಿಸಿದರು. ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಸಾಮರಸ್ಯದ ಪರಂಪರೆಯ ಉಳಿವಿಗೆ ಮತದಾರರು ಬೆಂಬಲಿಸುತ್ತಾರೆಂಬ  ಸಂಪೂರ್ಣ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಕೇಸರಿ ಎಂಬುದು ತ್ಯಾಗ, ಸೌಹಾರ್ದತೆಯ ಸಂಕೇತ. ದುರದೃಷ್ಟವೆಂದರೆ ಕೆಲ ದಿನಗಳಿಂದ ಕೇಸರಿ ಅಂದರೆ ಭೀತಿಯನ್ನು ಹುಟ್ಟಿಸುವ ಕೆಲಸ ನಡೆಯುತ್ತಿದೆ. ಈ ತಪ್ಪು ಅಭಿಪ್ರಾಯ ನಿವಾರಣೆಗೆ ಕೇಸರಿ ಶಾಲು ನಿರಂತರ ಬಳಸುತ್ತಿದ್ದೇನೆ ಎಂದು ಸಮರ್ಥನೆ ನೀಡಿದ್ದಾರೆ.