ನಳಿನ್‌ಗೆ ಮಿಥುನ್ ಸರಿಸಾಟಿಯಾದ ಅಭ್ಯರ್ಥಿಯಲ್ಲ: ಹರಿಕೃಷ್ಣ ಬಂಟ್ವಾಳ್

Tuesday, April 9th, 2019
Harikrishna

ಮಂಗಳೂರು :  ನರೇಂದ್ರ ಮೋದಿ ದೇಶದ ಪ್ರತಿಯೊಬ್ಬ ನಾಗರಿಕನ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ಹೇಳಿದುದರ ಬಗ್ಗೆ ದಾಖಲೆ ನೀಡಿದರೆ ತಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ. ದ.ಕ.ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವತ್ತೂ ಕೂಡ 15 ಲಕ್ಷ ರೂ. ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ ಹಾಕುತ್ತೇನೆ ಎಂದು ಹೇಳಲಿಲ್ಲ, ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ […]

ನಾವು ನಿಜವಾದ ಹಿಂದೂ ಧರ್ಮದ ಸಿದ್ದಾಂತ ನಂಬಿ ಬದುಕುತ್ತಿರುವವರು : ಮಿಥುನ್‌ ರೈ

Tuesday, April 9th, 2019
Mithun Rai

ಬೆಳ್ತಂಗಡಿ :  ನಿಜವಾದ ಹಿಂದೂ ಧರ್ಮದ ಸಿದ್ದಾಂತ ಎಂದರೆ ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಿ ಮುನ್ನಡೆಸುವುದು.  ನಾವು  ಹಿಂದೂ ಸಿದ್ದಾಂತವನ್ನು ನಂಬಿ ಬದುಕುತ್ತಿರುವವರು ಎಂದು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಹೇಳಿದರು. ಮಿಥುನ್ ರೈ ಮುಂದೆ ಇರುವ ರಾಜಕೀಯ ಸಿದ್ಧಾಂತ ಸ್ಪಷ್ಟವಾಗಿದೆ. ಈ ಸಿದ್ಧಾಂತದಲ್ಲಿ ಸಮಪಾಲು ಸಹಬಾಳು ಎನ್ನುವ ನೀತಿ ಇದೆ. ಮಾತ್ರವಲ್ಲದೆ ಎಲ್ಲಾ ಜಾತಿ ಬಾಂಧವರನ್ನು ಗೌರವಿಸಿ ಜತೆಯಾಗಿ ಮುನ್ನಡೆಯುವುದೇ ನೈಜ ಹಿಂದೂ ಧರ್ಮ. ಬದಲಾಗಿ ಜಾತಿ -ಧರ್ಮಗಳ ನಡುವೆ ವಿಷ ಬೀಜ ಬೆಳೆಸಿ […]

ಶಿವನಗರದ 12 ಜನ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ

Tuesday, April 9th, 2019
Nalin-Kateel

ಮಂಗಳೂರು  : ಕಳೆದ ಐದು ವರ್ಷಗಳಿಂದ ನರೇಂದ್ರ ಮೋದಿಯವರ ಕೈಯಲ್ಲಿ ಭಾರತ ಬಲಾಡ್ಯವಾಗಿ, ಸುಭದ್ರವಾಗಿ ವಿಶ್ವದೆದುರು ಎದೆಯುಬ್ಬಿಸಿ ನಿಂತಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ. ನಾಗುರಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಈ ಹಿಂದೆ ಭಾರತಕ್ಕೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಪ್ರಮುಖರು ಭೇಟಿ ಕೊಟ್ಟಾಗ ಅವರಿಗೆ ಭಾರತವನ್ನು ಪರಿಚಯಿಸುವಲ್ಲಿ ಕಾಂಗ್ರೇಸ್ ನಿರಾಸಕ್ತಿ ತೋರಿಸಿದೆ.ಆದರೆ ಕಳೆದ ಐದು ವರ್ಷಗಳಿಂದ ಪ್ರಧಾನಿ ಮೋದಿಜೀ ಅವರು ಭಾರತದ ಪರಂಪರೆ ಆಚಾರ ವಿಚಾರಗಳನ್ನು ಜಗತ್ತಿನ […]

ಆಸ್ಪತ್ರೆಗೆ ಹೋಗುವ ವೇಳೆ ಸಹೋದರಿಯರಿಬ್ಬರ ದುರ್ಮರಣ

Monday, April 8th, 2019
Bantwal- Accident

ಬಂಟ್ವಾಳ :  ಅಸೌಖ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋಗುವ ವೇಳೆ ಸಹೋದರಿಯರಿಬ್ಬರು ಮೃತಪಟ್ಟ ಘಟನೆ ಸೋಮವಾರ ಸಂಜೆ ಸಜೀಪದಲ್ಲಿ ನಡೆದಿದೆ. ಕಾರು ಹಾಗೂ ರಿಕ್ಷಾದ ನಡುವೆ ಮುಖಾಮುಖಿ ಡಿಕ್ಕಿಯಾಗಿ ರಿಕ್ಷಾದಲ್ಲಿದ್ದ ಮಂಚಿ ನಿವಾಸಿಗಳಾದ ಜೈನಾಬಾ(45) ಹಾಗೂ ಜೋಹರಾ(55) ಮೃತಪಟ್ಟ ಮಹಿಳೆಯರು. ಮಂಚಿ ನಿವಾಸಿಗಳಾದ ಈ ಸಹೋದರಿಯರು ಆಸ್ಪತ್ರೆಗೆ ಹೋಗುವ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಜೋಹರಾರವರ ಅಸೌಖ್ಯದ ಹಿನ್ನೆಲೆಯಲ್ಲಿ ಜೈನಾಬಾ ಅವರು ಮಂಚಿಯಿಂದ ರಿಕ್ಷಾ ಬಾಡಿಗೆಗೆಪಡೆದುಕೊಂಡು ಚೇಲೂರಿಗೆ ವೈದ್ಯರ ಬಳಿ ತೆರಳುತ್ತಿದ್ದರು. ಈ ಸಂದರ್ಭ ಸಜೀಪ […]

ಸ್ವಯಂಪ್ರೇರಿತರಾಗಿ ಮಿಥುನ್ ರೈ ಪರ ಪ್ರಚಾರದಲ್ಲಿ ಯುವಕರು

Monday, April 8th, 2019
congress

ಮಂಗಳೂರು : ಕುಳೂರು ಪ್ರದೇಶದ ನೂರಕ್ಕೂ ಹೆಚ್ಚು ಯುವಕರು ಸ್ವಯಂ ಪ್ರೇರಿತರಾಗಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಕುಳೂರು ನಿವಾಸಿ ಅನಿಲ್ ಡೆವಿಡ್ ಅವರ ನೇತೃತ್ವದಲ್ಲಿ 120 ಮಂದಿ ಯುವಕರು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರ ಭಾವಚಿತ್ರ ಮತ್ತು ಚುನಾವಣಾ ಚಿಣ್ನೆ ಇರುವ ಟೀ ಶರ್ಟ್ ಮತ್ತು ಟೊಪ್ಪಿಗಳನ್ನು ಧರಿಸಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಮಿಥುನ್ ರೈ  ಅವರಂತಹ ಯುವಕ, ವಿದ್ಯಾವಂತ ನಮ್ಮ ಜಿಲ್ಲೆಗೆ ಸಂಸದನಾಗಿ […]

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಅಧ್ಯಕ್ಷರಾಗಿ ರೋನ್ಸ್ ಬಂಟ್ವಾಳ್

Monday, April 8th, 2019
Maharastra-Patrakartaru

ಮುಂಬಯಿ : ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) 2019-2021 ರ ಸಾಲಿನ ಪದಾಧಿಕಾರಿಗಳ ಆಯ್ಕೆ ಇಂದಿಲ್ಲಿ ಶನಿವಾರ ಪೂರ್ವಾಹ್ನ ನಗರದ ಬಾಂದ್ರಾ ಪೂರ್ವದ ಖೇರ್‌ವಾಡಿ ಅಲ್ಲಿನ ರಾಜಯೋಗ್ ಹೊಟೇಲು ಸಭಾಗೃಹದಲ್ಲಿ ನಡೆದಿದ್ದು ನೂತನ ಅಧ್ಯಕ್ಷರಾಗಿ ರೋನ್ಸ್ ಬಂಟ್ವಾಳ್ (ವಿಜಯ ಕರ್ನಾಟಕ), ಗೌರವ ಪ್ರಧಾನ ಕಾರ್ಯದರ್ಶಿ ಆಗಿ ಅಶೋಕ್ ಎಸ್.ಸುವರ್ಣ (ಮೊಗವೀರ) ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ಗೊಳಿಸಿತು. ಉಪಾಧ್ಯಕ್ಷ ರಂಗ ಎಸ್.ಪೂಜಾರಿ, (ಚಿಗುರು ಚಂದನ), ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ (ಕರ್ನಾಟಕ ಮಲ್ಲ), ಗೌರವ […]

30 ಅಂಶಗಳ ದ.ಕ. ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ

Sunday, April 7th, 2019
congress - manifesto

ಮಂಗಳೂರು : ದ.ಕ. ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ರವಿವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾ ಉಸ್ತುವಾರಿ ಬಿ.ರಮಾನಾಥ ರೈ ಬಿಡುಗಡೆಗೊಳಿಸಿದರು. ಒಟ್ಟು 30 ಅಂಶಗಳು ಪ್ರಣಾಳಿಕೆಯಲ್ಲಿ ಸೇರಿವೆ ಅರಬ್ಬೀ ಸಮುದ್ರದ ಉಪ್ಪು ನೀರನ್ನು ಶುದ್ಧೀಕರಿಸಿ ದಿನದ 24 ಗಂಟೆಯೂ ಜಿಲ್ಲೆಗೆ ಶುದ್ಧ ಕುಡಿಯುವ ನೀರು ಪೂರೈಕೆ, ಹೈಕೋರ್ಟ್ ವಿಭಾಗೀಯ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಪ್ರಯತ್ನ, ದ.ಕ. ಜಿಲ್ಲೆಯಲ್ಲಿ ರಾಷ್ಟ್ರೀಯ ಮಟದ್ಟ ಮೀನುಗಾರಿಕಾ ಕೇಂದ್ರ ಸ್ಥಾಪನೆ, ಐಟಿ-ಬಿಟಿ ಮೂಲಕ ಶಾಶ್ವತ ಉದ್ಯೋಗ ಕಲ್ಪಿಸಲು ಪ್ರಯತ್ನ, […]

ಜಿಲ್ಲೆಯಲ್ಲಿ ಈ ಬಾರಿ ಮೋದಿ ಅಲೆ ವರ್ಕೌಟ್ ಆಗಲ್ಲ: ಮಧು ಬಂಗಾರಪ್ಪ

Saturday, April 6th, 2019
Madhu Bangarappa

ಮಂಗಳೂರು :  ಬಿಜೆಪಿ ಜಿಲ್ಲೆಯಲ್ಲಿ ಮಾತ್ರವಲ್ಲದೇ, ರಾಜ್ಯದಲ್ಲಿ ನಿರ್ಮೂಲನೆಯಾಗಲಿದೆ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮೋದಿ ಅಲೆ ವರ್ಕೌಟ್ ಆಗಲ್ಲ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಮಂಗಳೂರಿನಲ್ಲಿ ಪತ್ರಕರ್ತ  ರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪಗೆ ಸಿಎಂ ಸ್ಥಾನ ದೊರಕಿದಾಗ ತಮ್ಮ ಸ್ಥಾನ ಉಳಿಸಿಕೊಳ್ಳಲಾಗಿರಲಿಲ್ಲ. ಅವರು ಇದೀಗ ಕುಮಾರಸ್ವಾಮಿಯವರಿಗೆ ಮುಹೂರ್ತ ಇಡಲು ಮುಂದಾಗಿದ್ದಾರೆ. ಅವರ ಮುಹೂರ್ತರಿಂದ ಕರಾವಳಿಯಲ್ಲಿ ಬಿಜೆಪಿ ನಿರ್ನಾಮಗೊಳ್ಳಲಿದೆ. ಕರಾವಳಿಯಲ್ಲಿ ಬಿಜೆಪಿ ನಿರ್ಮೂಲನೆಯಾಗಬೇಕಿದೆ ಎಂದರು. ಇನ್ನು ಶಿವಮೊಗ್ಗದಿಂದ ಮಧುಬಂಗಾರಪ್ಪ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ […]

ಮಿಥುನ್ ರೈ ಕೇಸರಿ ಶಾಲು ಹಾಕಿ ಜನರನ್ನು ಮರುಳು ಮಾಡುತ್ತಿದ್ದಾರೆ : ಆರ್. ಅಶೋಕ್

Saturday, April 6th, 2019
R-Ashok

ಮಂಗಳೂರು : ಕಾಂಗ್ರೆಸ್ ಧರ್ಮ ರಾಜಕಾರಣ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ರಾಜಕಾರಣ ಸರಿಯಲ್ಲ.ಕಾಂಗ್ರೆಸ್ ಪಕ್ಷವೂ ಪ್ರಣಾಳಿಕೆಯಲ್ಲಿ ದೇಶದ್ರೋಹದ ಕೇಸ್ ವಾಪಾಸ್ ಪಡೆಯುವುದಾಗಿ ಹೇಳಿದೆ. ಇದರಿಂದ ದೇಶದ್ರೋಹ ಕೃತ್ಯ ಜಾಸ್ತಿಯಾಗುತ್ತೆ ಎಂದು ಆರ್. ಅಶೋಕ್, ಕಳವಳ ವ್ಯಕ್ತಪಡಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಆರ್. ಅಶೋಕ್, ಮಿಥುನ್ ರೈ ಕೇಸರಿ ಶಾಲು ಹಾಕಿ ಪ್ರಚಾರಕ್ಕೆ ಇಳಿದಿದ್ದಾರೆ. ಆದರೆ ಕೇಸರಿ ಶಾಲು ಹಾಕಿದ ತಕ್ಷಣ ಜನ ಅವರನ್ನು ನಂಬಲ್ಲ ಎಂದು ಹೇಳಿದರು. ತೇಜಸ್ವಿ ಸೂರ್ಯ […]

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ’ಯನ್ನು ಬಿಡುಗಡೆಗೊಳಿಸಿದ ಕೆಪಿಸಿಸಿ ಉಪಾಧ್ಯಕ್ಷ

Friday, April 5th, 2019
Sudarshan

ಮಂಗಳೂರು : ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್  ‘ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ’ಯನ್ನು ಶುಕ್ರವಾರ ಬಿಡುಗಡೆಗೊಳಿಸಿದರು. ಕಾಂಗ್ರೆಸ್ ಹಾಗೂ ಸಮಾನ ಮನಸ್ಥಿತಿಯ ಪಕ್ಷಗಳು ಈ ಬಾರಿ ಬಿಜೆಪಿಯನ್ನು ಸೋಲಿಸುವುದು ಖಚಿತ ಎಂದು  ಸುದರ್ಶನ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ದ್ವೇಷದ ರಾಜಕಾರಣ ನಡೆಸಿದ ಪರಿಣಾಮ ದೇಶಾದ್ಯಂತ ಆತಂಕದ ವಾತಾವರಣ ಸೃಷ್ಟಿಯಾಗಿದೆ. ನ್ಯೂ ಇಂಡಿಯಾ ಹೆಸರಿನಲ್ಲಿ ದ್ವೇಷ ಮತ್ತು ಆತಂಕದ ವಾತಾವರಣ ಸೃಷ್ಟಿಸಿದ್ದೇ ಬಿಜೆಪಿ ಸರ್ಕಾರದ ಬಹುದೊಡ್ಡ ಸಾಧನೆಯಾಗಿದೆ ಎಂದು ಅವರು ವ್ಯಂಗ್ಯವಾಡಿದರು. ರೈತರ ಸಾಲ ಮನ್ನಾ […]