ರಾಮ ಮಂದಿರ ಕರಸೇವಕನನ್ನು 31 ವರ್ಷಗಳ ಬಳಿಕ ಬಂಧಿಸಿದ ಪೊಲೀಸರು, ಬಿಜೆಪಿಯಿಂದ ಪ್ರತಿಭಟನೆ

Wednesday, January 3rd, 2024
ರಾಮ ಮಂದಿರ ಕರಸೇವಕನನ್ನು 31 ವರ್ಷಗಳ ಬಳಿಕ ಬಂಧಿಸಿದ ಪೊಲೀಸರು, ಬಿಜೆಪಿಯಿಂದ ಪ್ರತಿಭಟನೆ

ಮಂಗಳೂರು : ಹುಬ್ಬಳ್ಳಿಯಲ್ಲಿ ಮೂರು ದಶಕಗಳ ಹಿಂದೆ ರಾಮ ಮಂದಿರ ಹೋರಾಟದಲ್ಲಿ ಭಾಗಿಯಾಗಿದ್ದ 75ರ ಹರೆಯದ ಕರಸೇವಕ ಶ್ರೀಕಾಂತ್ ಪೂಜಾರಿಯನ್ನು 31 ವರ್ಷಗಳ ಬಳಿಕ ಬಂಧಿಸಿರುವುದನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಬುಧವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಮೂರು […]

ಬಿ.ಕೆ ಹರಿಪ್ರಸಾದ್ ಕಾಂಗ್ರೆಸ್ ನಲ್ಲಿ ನಿರ್ಲಕ್ಷಕ್ಕೆ ಒಳಪಟ್ಟ ದೇಶದ್ರೋಹಿ

Wednesday, January 3rd, 2024
Yashpal

ಉಡುಪಿ : ಕಾಂಗ್ರೆಸ್ ನಲ್ಲಿ ನಿರ್ಲಕ್ಷಕ್ಕೆ ಒಳಪಟ್ಟ ನಾಯಕ ಬಿ.ಕೆ ಹರಿಪ್ರಸಾದ್ ಹಿಂದೂವೇ ಅಲ್ಲ. ಅವರು ದೇಶದ್ರೋಹಿ. ಎಂದು ಶಾಸಕ ಯಶ್ ಪಾಲ್ ಸುವರ್ಣ ವಾಗ್ದಾಳಿ ನಡೆಸಿದ್ದಾರೆ. ಅಯೋಧ್ಯೆ ಮಂದಿರ ವಿಷಯದಲ್ಲಿ ಬಿ.ಕೆ ಹರಿಪ್ರಸಾದ್ ಬಿಜೆಪಿ ಪಕ್ಷದ ರಾಜಕೀಯ ಮಂದಿರ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಯಶ್ ಪಾಲ್ ಸುವರ್ಣ‌ ಇಂದು ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ನವರೇ ಹರಿಪ್ರಸಾದ್ ಅನ್ನು ಲೆಕ್ಕಿಸುವುದಿಲ್ಲ, ಬದಿಗಿಟ್ಟಿದ್ದಾರೆ. ರಾಮ ಮಂದಿರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ಅಯೋಧ್ಯೆಗೆ […]

ಹೊಸ ವರ್ಷದ ಪಾರ್ಟಿಯಲ್ಲಿ ಸ್ನೇಹಿತನ ಮೂಗು ಕಚ್ಚಿದಾತನ ಬಂಧನ

Wednesday, January 3rd, 2024
Nose-bite

ಬೆಳ್ತಂಗಡಿ : ಹೊಸ ವರ್ಷದ ಆಚರಣೆಯ ಪಾರ್ಟಿಯಲ್ಲಿ ಸ್ನೇಹಿತನ ಜೊತೆ ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿ ಕುಡಿದ ಮತ್ತಿನಲ್ಲಿ ಯುವಕನೋರ್ವನ ಮೂಗು ಕಚ್ಚಿದ ಪ್ರಕರಣ ನಡೆದಿದ್ದು ಆರೋಪಿಯನ್ನು ವೇಣೂರು ‘ಪೊಲೀಸರು ಬಂಧಿಸಿದ್ದಾರೆ. ಮೂಡಿಗೆರೆ ತಾಲೂಕಿನ ರಾಕೇಶ್ (21) ಬಂಧಿತ ಆರೋಪಿಯಾಗಿದ್ದಾನೆ. ಪ್ರಸಕ್ತ ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮದ ಮಾರಿಗುಡಿ ಬಳಿಯ ಸಂಬಂಧಿಕರ ಮನೆಯಲ್ಲಿ ವಾಸವಿದ್ದ ರಾಕೇಶ್, ಡಿಸೆಂಬರ್ 31ರಂದು ರಾತ್ರಿ ಹೊಸ ವರ್ಚಾಚರಣೆ ಸಂದರ್ಭ ಮದ್ಯ ಸೇವಿಸಿ ಕ್ಷುಲ್ಲಕ ವಿಚಾರದಲ್ಲಿ ಸ್ನೇಹಿತನ ಜೊತೆ ಗಲಾಟೆ ಮಾಡಿದ್ದ. ಗಲಾಟೆ […]

ಪ್ರೊ.ಜಯರಾಜ್ ಅಮೀನ್ ನಕಲಿ ವಾಟ್ಸಪ್ ಖಾತೆ, ಸೈಬರ್ ಕ್ರೈಮ್ ಪೊಲೀಸರಿಗೆ ದೂರು

Saturday, December 30th, 2023
Jayaraj-Amin

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿಯಾಗಿರುವ ಪ್ರೊ.ಜಯರಾಜ್ ಅಮೀನ್ ಅವರ ಛಾಯಾಚಿತ್ರವನ್ನು ಬಳಸಿಕೊಂಡು ನಂಬರಿಂದ ವಾಟ್ಸಪ್ ಖಾತೆಯನ್ನು ಸೃಷ್ಟಿ ಮಾಡಿ ಹಲವು ಸಂದೇಶಗಳು ಪ್ರಾಧ್ಯಾಪಕರಿಗೆ ಹಾಗೂ ಇತರರಿಗೆ ರವಾನೆಯಾಗಿದ್ದು, ಈ ಕುರಿತು ಕುಲಪತಿಯವರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಶನಿವಾರ ಮಧ್ಯಾಹ್ನದಿಂದ ಇಂತಹ ಸಂದೇಶಗಳು ಈ ನಕಲಿ ಖಾತೆಯಿಂದ ರವಾನೆಯಾಗಿದ್ದು, ಈ ಬಗ್ಗೆ ಹಲವು ಪ್ರಾಧ್ಯಾಪಕರು ಕುಲಪತಿಯವರ ಗಮನಕ್ಕೆ ತಂದಿದ್ದರು. ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನುಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಬೀಚ್ ಗಳಲ್ಲಿ ಹೊಸ ವರ್ಷಾಚರಣೆ ರಾತ್ರಿ 10ಕ್ಕೆ ಮುಕ್ತಾಯ : ಪೊಲೀಸ್ ಕಮಿಷನರ್

Saturday, December 30th, 2023
ಬೀಚ್ ಗಳಲ್ಲಿ ಹೊಸ ವರ್ಷಾಚರಣೆ ರಾತ್ರಿ 10ಕ್ಕೆ ಮುಕ್ತಾಯ : ಪೊಲೀಸ್ ಕಮಿಷನರ್

ಮಂಗಳೂರು : ಹೊಸ ವರ್ಷಾಚರಣೆ ಯನ್ನು ಆಚರಿಸುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಕಲ ರೀತಿಯ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಚರ್ಚ್, ಹೊಟೇಲ್, ರೆಸ್ಟೋರೆಂಟ್, ಖಾಸಗಿ ಸಭಾಂಗಣ ಸೇರಿದಂತೆ ಒಳಾಂಗಣಗಳಲ್ಲಿಕಾರ್ಯಕ್ರಮ ನಡೆಸಲು ಕೋರಿ 36 ಅರ್ಜಿಗಳು ಬಂದಿವೆ. ಹಲವು ನಿಬಂಧನೆಗಳೊಂದಿಗೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದ್ದು, ಒಳಾಂಗಣದಲ್ಲಿ ಕಾರ್ಯಕ್ರಮ ನಡೆಸುವವರು ಮಧ್ಯರಾತ್ರಿ 12.30ರವರೆ ಅವಕಾಶ ನೀಡಲಾಗಿದೆ ಎಂದರು. ಬೀಚ್ ಅಥವಾ ಇತರೆಡೆ ಹೊರಾಂಗಣಗಳಲ್ಲಿ […]

ಸೋಮೇಶ್ವರ ಪುರಸಭೆ : ಪತಿಗೆ ಒಂದು ಮತದ ಅಂತರದಲ್ಲಿ ಸೋಲು, ಪತ್ನಿ ಜಯಶಾಲಿ

Saturday, December 30th, 2023
ಸೋಮೇಶ್ವರ ಪುರಸಭೆ : ಪತಿಗೆ ಒಂದು ಮತದ ಅಂತರದಲ್ಲಿ ಸೋಲು, ಪತ್ನಿ ಜಯಶಾಲಿ

ಉಳ್ಳಾಲ : ಸೋಮೇಶ್ವರ ಪುರಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಎರಡು ವಾರ್ಡ್ ಗಳಲ್ಲಿ ಸ್ಪರ್ಧಿಸಿದ್ದ ದಂಪತಿಗಳಲ್ಲಿ ಪತ್ನಿ ಜಯಶಾಲಿಯಾದರೆ, ಇನ್ಬೊಂದು ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಪತಿ ಒಂದು ಮತದ ಅಂತರದಲ್ಲಿ ಸೋಲನ್ಬು ಅನುಭವಿಸಿದ್ದಾರೆ. ಒಂದನೇ ಮುಂಡೋಳಿ ವಾರ್ಡ್ ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಮೀನಾ ಬಶೀರ್ ಬಿಜೆಪಿಯ ಅಭ್ಯರ್ಥಿ ಸುನಿತಾ ರಾಜೇಶ್ ಎದುರು 271 ಮತಗಳ ಅಂತರದಲ್ಲಿ ವಿಜಯಿಯಾದರೆ, 2ನೇ ಪ್ರಕಾಶ್ ನಗರ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಅಮೀನಾ ಬಶೀರ್ ಪತಿ ಬಶೀರ್ ಮುಂಡೋಳಿ […]

ಮಂಗಳಾ ಕೇಟರಿಂಗ್ ವತಿಯಿಂದ ವಧೂವರರಿಗೆ ಚಿನ್ನದ ಉಡುಗೊರೆ

Friday, December 29th, 2023
ಮಂಗಳಾ ಕೇಟರಿಂಗ್ ವತಿಯಿಂದ ವಧೂವರರಿಗೆ ಚಿನ್ನದ ಉಡುಗೊರೆ

ಮಂಗಳೂರು : ಉಳ್ಳಾಲ ಚೀರಂಭ ಭಗವತಿ ಕ್ಷೇತ್ರದ ಮಾಂಗಲ್ಯಮ್ ಸಭಾಗ್ರಹದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ನೂತನ ವಧೂವರರಿಗೆ ಚಿನ್ನದ ಉಡುಗೊರೆಯನ್ನು ಮಂಗಳಾ ಕೇಟರಿಂಗ್ ಮಾಲಕರಾದ ಸತೀಶ್ ಎಮ್ಮೆಕೆರೆ ನೀಡಿ ಶುಭ ಹಾರೈಸಿದರು. ಉಳ್ಳಾಲ ಶ್ರೀ ಚೀರುಂಭ ಭಗವತಿ ತೀಯಾ ಸಮಾಜದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಮಾತನಾಡಿ ಮಂಗಳಾ ಕೇಟರಿಂಗ್ ಮಾಲಕರಾದ ಸತೀಶ್ ಎಮ್ಮೆಕೆರೆ ಅನೇಕ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಕ್ಷೇತ್ರದ ಮಾಂಗಲ್ಯಮ್ ಸಭಾಗ್ರಹ ಮುನ್ನಡೆಸುವಲ್ಲಿ ಸತೀಶ್ ಎಮ್ಮೆಕೆರೆ ಅವರ ಪಾತ್ರ ಮಹತ್ವದ್ದಾಗಿದೆ ಎಂದರು. ನೂತನ […]

ವಿಶ್ವ ಮಾನವ ಸಂದೇಶ ನೀಡಿದ ಮಹಾನ್ ಚೇತನ ಕುವೆಂಪು : ಮುಂಡಾಜೆ

Friday, December 29th, 2023
ವಿಶ್ವ ಮಾನವ ಸಂದೇಶ ನೀಡಿದ ಮಹಾನ್ ಚೇತನ ಕುವೆಂಪು : ಮುಂಡಾಜೆ

ಮಂಗಳೂರು : ವಿಶ್ವ ಮಾನವ ರಾಗಲು ವಿದ್ಯೆಯ ಕೇಂದ್ರೀಕರಣ ಮಾತ್ರವಲ್ಲ ಸಮಗ್ರವಾದ ಜ್ಞಾನವನ್ನು ಗ್ರಹಿಸುವುದು ಮುಖ್ಯ ಎಂದು ಕಾಸರಗೋಡು ಪೆರಿಯ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಪ್ರೋ.ಚೇತನ್ ಮುಂಡಾಜೆ ಹೇಳಿದರು. ಅವರು ಶುಕ್ರವಾರ ನಗರದ ರಥಬೀದಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಮಾನವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಕವಿತೆ, ವೈಚಾರಿಕ ಕಾದಂಬರಿ, ಮಹಾಕಾವ್ಯದಲ್ಲಿ ಸ್ಥಾಪಿತವಾದ ಚಿಂತನೆಗೆ ಹೊಸ ರೂಪವನ್ನು ನೀಡಿದರು. ಕೃಷಿ ಸದೃಶವಾದ ಬರವಣಿಗೆಯಲ್ಲಿ ಕುವೆಂಪು ಅನ್ನು ರಸ ಋಷಿ ಕವಿ […]

ಗೋಲ್ಡ್ ಫಿಂಚ್ ಸಿಟಿಯಲ್ಲಿ ಡಿ.30ಕ್ಕೆ “ಮಂಗಳೂರು ಕಂಬಳ”

Friday, December 29th, 2023
ಗೋಲ್ಡ್ ಫಿಂಚ್ ಸಿಟಿಯಲ್ಲಿ ಡಿ.30ಕ್ಕೆ "ಮಂಗಳೂರು ಕಂಬಳ"

ಮಂಗಳೂರು: ನಗರದ ಬಂಗ್ರಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಸಿಟಿಯಲ್ಲಿ ಡಿಸೆಂಬರ್ 30ರಂದು “ಮಂಗಳೂರು ಕಂಬಳ” ಅದ್ಧೂರಿಯಾಗಿ ನಡೆಯಲಿದ್ದು ಇದರ ಅಂಗವಾಗಿ ಛಾಯಾಚಿತ್ರ ಸ್ಪರ್ಧೆ, ಕಲರ್ ಕೂಟ ಮತ್ತು ರೀಲ್ ಕಂಟೆಸ್ಟ್ ಆಯೋಜಿಸಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬ್ರಿಜೇಶ್ ಚೌಟ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಡಿ.30ರಂದು ಬೆಳಗ್ಗೆ 8:30ಕ್ಕೆ ದಿ. ರತ್ನ ಮಾಧವ ಶೆಟ್ಟಿ ವೇದಿಕೆಯಲ್ಲಿ ಕಂಬಳ ಉದ್ಘಾಟನೆಗೊಳ್ಳಲಿದೆ. ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಉದ್ಘಾಟನೆ ನೆರವೇರಿಸಲಿದ್ದು ರಾಣಿ […]

ಮಂಗಳೂರಿನಲ್ಲಿ 13 ಮಂದಿಯಲ್ಲಿ ಕೋವಿಡ್ ಸೋಂಕು

Friday, December 29th, 2023
Corona

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಶುಕ್ರವಾರ 348 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 13 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಅಲ್ಲದೆ 25 ಸಕ್ರಿಯ ಪ್ರಕರಣದ ವರದಿ ಪ್ರಕಟವಾಗಿದೆ. ಪಾಸಿಟಿವ್‌ಗೊಳಗಾದ 13 ಮಂದಿಯ ಪೈಕಿ ಒಬ್ಬರು ನಗರದ ಖಾಸಗಿ ಆಸ್ಪತ್ರೆ ಮತ್ತು 12 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಆರು ಮಂದಿ ಮಹಿಳೆಯರು ಮತ್ತು ಏಳು ಮಂದಿ ಪುರುಷರಿದ್ದಾರೆ. 27ರಿಂದ 84 ವರ್ಷ ಪ್ರಾಯದವರೂ ಇದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.