ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಈಗಾಗಲೇ ಒಳಒಪ್ಪಂದ ಮಾಡಿಕೊಂಡಿವೆ: ಐವನ್ ಡಿಸೋಜ

Thursday, May 10th, 2018
ivan-desouza

ಮಂಗಳೂರು: ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಈಗಾಗಲೇ ಒಳಒಪ್ಪಂದ ಮಾಡಿಕೊಂಡಿವೆ. ಚುನಾವಣೆಯ ಬಳಿಕ ಒಳಒಪ್ಪಂದ ಮಾಡಿಕೊಳ್ಳಬೇಕಾದ ಈ ಎರಡು ಪಕ್ಷಗಳು ಚುನಾವಣಾ ಪೂರ್ವದಲ್ಲೇ ಒಳ ಒಪ್ಪಂದ ಮಾಡಿಕೊಳ್ಳುವ ಮೂಲಕ ಜನತೆಗೆ ಅನ್ಯಾಯ ಎಸಗಿದೆ. ಅವರ ಈ ತಂತ್ರ ಚುನಾವಣೆಯಲ್ಲಿ ಫಲಿಸುವುದಿಲ್ಲ. ಈ ಬಾರೀ ಕಾಂಗ್ರೆಸ್ ಪಕ್ಷ 130ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದ್ದು, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ. ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, […]

ರಮಾನಾಥ ರೈ ಪರ ಬಿ.ಸಿ.ರೋಡಿನಲ್ಲಿ ಕಾಂಗ್ರೆಸ್ ಭರ್ಜರಿ ‘ರೋಡ್ ಶೋ’..!

Thursday, May 10th, 2018
road-show

ಬಂಟ್ವಾಳ: ಸಚಿವ ರಮಾನಾಥ ರೈ ಪರ ಬಂಟ್ವಾಳ ಕ್ಷೇತ್ರದಾದ್ಯಂತ ವ್ಯಾಪಕ ಬೆಂಬಲ ವ್ರ್ಯಕ್ತವಾಗಿದೆ. ಕ್ಷೇತ್ರದ ಹೃದಯಭಾಗವಾದ ಬಿ.ಸಿ.ರೋಡಿನಲ್ಲಿ ಕಾಂಗ್ರೆಸ್ ಭರ್ಜರಿ ‘ರೋಡ್ ಶೋ’ ನಡೆಸುವ ಮೂಲಕ ಪಕ್ಷದ ಶಕ್ತಿ ಪ್ರದರ್ಶನ ನಡೆಸಿತು. ಸಚಿವ ರೈ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಹಾಗೂ ನಾಗರಿಕರ ಉತ್ಸಾಹಹಾ ಹುಮ್ಮಸ್ಸಿನ ಸಂಕೇತವಾಗಿತ್ತು. ಸಾವಿರಾರು ಜನರ ‘ರೋಡ್ ಶೋ’ದಲ್ಲಿ ಕೇಂದ್ರ ಸಚಿವ ಗುಲಾಂನಬಿ ಅಜಾದ್ ಮುಖ್ಯ ಆಕರ್ಷಣೆಯಾಗಿದ್ದರು. ಸಾವಿರಾರು ಜನರಿಂದ ಕೈಕಂಬದಲ್ಲಿ ಆರಂಭವಾದ ರೋಡ್ ಶೋ ಪಾಣೆಮಂಗಳೂರು ಮೂಲಕ ಮೆಲ್ಕಾರ್ ನಲ್ಲಿ ಸಂಪನ್ನಗೊಂಡಿತು.

ವೇದವ್ಯಾಸ್‌ ಕಾಮತ್‌ಗೆ ವೈಶ್ಯ ವಾಣಿ ಸಮಾಜದ ಸಂಪೂರ್ಣ ಬೆಂಬಲ

Thursday, May 10th, 2018
vedavyas-kamath

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ್‌ ಕಾಮತ್‌ ಅವರು ಡೊಂಗರಕೇರಿ ಪ್ರದೇಶದಲ್ಲಿ ಮತ ಪ್ರಚಾರ ನಡೆಸಿದರು. ವೈಶ್ಯ ವಾಣಿ ಸಮಾಜದ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಡಿ. ವೇದವ್ಯಾಸ್‌ ಕಾಮತ್‌ ದಂಪತಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಶ್ರೀ ದೇಗುಲದ ಹಾಗೂ ಸಮಾಜದ ವತಿಯಿಂದ ಡಿ. ವೇದವ್ಯಾಸ್‌ ಕಾಮತ್‌ ಅವರಿಗೆ ಪ್ರಸಾದ ನೀಡಿ ಆಶೀರ್ವದಿಸಲಾಯಿತು. ಇದೇ ಸಂದರ್ಭದಲ್ಲಿ ದೇಗುಲದ ಮೊಕ್ತೇಸರ ವರದರಾಜ್‌ ನಾಗ್ವೇಕರ್‌, ಮನೋಜ್‌ ನಾಯಕ್‌, ಗೋಪಿಚಂದ್‌ ಶೇಟ್‌, ಯುವಕ […]

ಸತ್ಯಜಿತ್ ಕಣ್ಣೀರು ಬಿಜೆಪಿಯ ಯುವಕರಿಗೆ ಪಾಠವಾಗಲಿ – ಮುನೀರ್ ಕಾಟಿಪಳ್ಳ

Thursday, May 10th, 2018
satyajith

ಮಂಗಳೂರು: “ಬಿಜೆಪಿಯಿಂದ ಧರ್ಮರಾಜಕಾರಣಕ್ಕೆ ಬಳಸಲ್ಪಡುವ ಹಿಂದುಳಿದ ವರ್ಗದ ಯುವಕರನ್ನು ರಾಜಕೀಯ ಪ್ರಾತಿನಿಧ್ಯದ ಪ್ರಶ್ನೆ ಬಂದಾಗ ಕ್ರಿಮಿನಲ್ ಗಳೆಂದು ದೂರ ಇಡಲಾಗುತ್ತದೆ. ಬಿಜೆಪಿ ಹಿರಿಯ ಮುಖಂಡ ಸತ್ಯಜಿತ್ ಸುರತ್ಕಲ್ ಇದಕ್ಕೊಂದು ಉದಾಹರಣೆ” ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ಅವರು ಸಂಜೆ ಕೋಡಿಕಲ್ ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತಾಡುತ್ತಿದ್ದರು. “ಬಿಜೆಪಿ ಹಿಂದುಳಿದ ವರ್ಗಗಳ ಯುವಕರಿಗೆ ಪ್ರಚೋದನೆ ಕೊಟ್ಟು ಅವರನ್ನು ಹಿಂಸಾ ರಾಜಕೀಯಕ್ಕೆ ಬಳಸಿಕೊಳ್ಳುತ್ತದೆ. ಧರ್ಮದ ಅಮಲಿನಲ್ಲಿ ಕೊಲೆ ಆರೋಪ […]

ಪುತ್ತೂರು ನಗರದಲ್ಲಿ ಬಿಜೆಪಿಯಿಂದ ರೋಡ್ ಶೋ..!

Thursday, May 10th, 2018
putturu

ಪುತ್ತೂರು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಪುತ್ತೂರು ನಗರದಲ್ಲಿ ಬಿಜೆಪಿಯಿಂದ ರೋಡ್ ಶೋ ನಡೆಯಿತು. ನಗರದ ಬೊಳುವಾರ ಆಂಜನೇಯ ಮಂತ್ರಾಲಯದ ಬಳಿಯಲ್ಲಿ ಉತ್ತರ ಪ್ರದೇಶದ ಗ್ರಾಮೀಣಾಭಿವೃದ್ಧಿ ಸಚಿವ ಡಾ. ಮಹೇಂದ್ರ ಸಿಂಗ್ ಪಕ್ಷದ ಧ್ವಜವನ್ನು ಹಿರಿಯ ಕಾರ್ಯಕರ್ತ ಗೋಪಾಲ್ ನಾಯ್ಕಿ ಅವರಿಗೆ ಹಸ್ತಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೊಳವಾರಿನಿಂದ ಹೊರಟು ಮುಖ್ಯ ರಸ್ತೆಯಲ್ಲಿ ಸಾಗಿ ದರ್ಬೆಯ ತನಕ ರೋಡ್ ಶೋ ನಡೆಸಲಾಯಿತು. ಪಕ್ಷದ ಅಭ್ಯರ್ಥಿ ಸಂಜೀವ ಮಠಂದೂರು, ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ […]

ವೋಟು ಹಾಕುವವರಿಗಾಗಿ ಉಚಿತ ಸರ್ಕಾರಿ ಬಸ್ ಸೇವೆ: ಶಶಿಕಾಂಥ್ ಸೆಂಥಿಲ್

Thursday, May 10th, 2018
sesikanth-senthil

ಮಂಗಳೂರು: ಮತದಾನದ ದಿನ ಜನರಿಗೆ ಅನುಕೂಲವಾಗಲು ಕೆಎಸ್ಆರ್‌ಟಿಸಿ ದಕ್ಷಿಣ ಕನ್ನಡದಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಸುಳ್ಯ, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕುಗಳಲ್ಲಿ ಬಸ್ಸುಗಳು ಸಂಚಾರ ನಡೆಸಲಿವೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂಥ್ ಸೆಂಥಿಲ್ ಈ ಕುರಿತು ಮಾಹಿತಿ ನೀಡಿದ್ದಾರೆ. 160 ಕೆಎಸ್ಆರ್‌ಟಿಸಿಯ ಬಸ್ಸುಗಳು ಬಸ್ಸುಗಳ ಸಂಚಾರ ಕಡಿಮೆ ಇರುವ ಪ್ರದೇಶದಲ್ಲಿ ಸಂಚಾರ ನಡೆಸಲಿವೆ. ಮತದಾನ ಮಾಡಲು ಆಗಮಿಸುವ ಜನರು ಉಚಿತವಾಗಿ ಇವುಗಳಲ್ಲಿ ಪ್ರಯಾಣಿಸಬಹುದಾಗಿದೆ. ‘ಎಲೆಕ್ಷನ್ ಸ್ಪೆಷಲ್’ ಎಂಬ ಹೆಸರಿನ ನಾಮಫಲಕವನ್ನು ಈ ಬಸ್ಸುಗಳು ಹೊಂದಿರುತ್ತವೆ. ಮೇ 12ರ […]

ರಮಾನಾಥ ರೈ ಆಪ್ತರಿಬ್ಬರ ಮನೆ ಮೇಲೆ ಐಟಿ ದಾಳಿ

Thursday, May 10th, 2018
ramanath-rai

ಮಂಗಳೂರು: ರಮಾನಾಥ ರೈ ಆಪ್ತರಿಬ್ಬರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಮಾನಾಥ ರೈ ಆಪ್ತರಾದ ಸುಧಾಕರ್ ಶೆಟ್ಟಿ ಅವರ ಮೊಗ್ರೋಡಿ ಕನ್ಸ್ಟ್ರಕ್ಸನ್ ಮತ್ತು ಸಂಜೀವ ಪೂಜಾರಿ ಅವರ ಬಿರ್ವ ಸೆಂಟರ್ ಹಾಗೂ ಸುಧಾಕರ್ ಶೆಟ್ಟಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಮಾಹಿತಿ ಕಲೆಹಾಕಿದ್ದಾರೆ. ಆದರೆ ಅಧಿಕಾರಿಗಳಿಗೆ ಯಾವುದೇ ಸರಿಯಾದ ದಾಖಲೆ ಸಿಗಲಿಲ್ಲ ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ ಜತೆ ಒಪ್ಪಂದ ಮಾಡಿಕೊಂಡಿದ್ರೆ ನನ್ನ ಸಾಲ ತೀರ್ತಿತ್ತು : ಸತ್ಯಜಿತ್‌ ಸುರತ್ಕಲ್

Wednesday, May 9th, 2018
satyajith

ಮಂಗಳೂರು: ಹಾಲಿ ಶಾಸಕ, ಕಾಂಗ್ರೆಸ್‌ ಅಭ್ಯರ್ಥಿ ಮೊಯ್ದಿನ್ ಬಾವ ಜತೆ ನಾನು ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಬಿಜೆಪಿ ಟಿಕೆಟ್ ವಂಚಿತ ಸತ್ಯಜಿತ್‌ ಸುರತ್ಕಲ್ ಸ್ಪಷ್ಟಪಡಿಸಿದ್ದಾರೆ. ಇಂದು ನಗರದಲ್ಲಿ ಮಾತನಾಡಿದ ಅವರು, ನಮ್ಮ ಶಾಸಕ ಮೊಯ್ದಿನ್ ಬಾವ ಜತೆ ಯಾವುದೇ ಒಪ್ಪಂದವಿಲ್ಲ. ನಾನು‌‌ ಈಗಲೂ 85 ಲಕ್ಷ ಸಾಲದಲ್ಲಿದ್ದೇನೆ. ಒಂದು ವೇಳೆ ಒಪ್ಪಂದ ಮಾಡಿದ್ದರೆ ಈ ಸಾಲ ತೀರುತ್ತಿತ್ತು. ನನ್ನ ಬಗ್ಗೆ ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ರು. ಕೆಲವರು ನನ್ನನ್ನು ಮೂಲೆಗುಂಪು ಮಾಡಲು ವ್ಯವಸ್ಥಿತ ಸಂಚು […]

ಮತದಾನ ಪ್ರಕ್ರಿಯೆಗೆ ಜಿಲ್ಲಾ ಪೊಲೀಸ್ ಸಕಲ ಸಿದ್ಧತೆ: ಎಸ್ಪಿ ರವಿಕಾಂತೇಗೌಡ

Wednesday, May 9th, 2018
ravikanth-gowda

ಮಂಗಳೂರು: ಮತದಾನ ಪ್ರಕ್ರಿಯೆಗೆ ಜಿಲ್ಲಾ ಪೊಲೀಸ್ ಇಲಾಖೆಯು ಸಕಲ ಸಿದ್ಧತೆ ಮಾಡಿಕೊಂಡಿವೆ ಎಂದು ಎಸ್ಪಿ ರವಿಕಾಂತೇಗೌಡ ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಜ.17ರಿಂದಲೇ ಚುನಾವಣೆಗೆ ಸಂಬಂಧಿಸಿ ಸಿದ್ಧತೆ ಆರಂಭಿಸಲಾಗಿದ್ದು, ನೀತಿ ಸಂಹಿತೆ ಜಾರಿಗೆ ಬಂದ ನಂತರ ಇಲಾಖೆಯು ಎಚ್ಚೆತ್ತುಕೊಂಡು ಸರ್ವ ಸಿದ್ದತೆ ನಡೆಸಿದೆ. ಜಿಲ್ಲಾ ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿ 981 ಮತಗಟ್ಟೆಗಳಿವೆ. ಬಂದೋಬಸ್ತ್‌ಗಾಗಿ ಡಿವೈಎಸ್ಪಿ ಹುದ್ದೆಯ ಅಧಿಕಾರಿಗಳಲ್ಲದೆ 870 ಹೆಡ್‌ಕಾನ್ಸ್‌ಟೇಬಲ್ ಮತ್ತು ಪೊಲೀಸ್ ಕಾನ್‌ಸ್ಟೇಬಲ್‌ಗಳು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅದಲ್ಲದೆ […]

ಕಾಂಗ್ರೆಸ್ ಪಿಎಂ ಅಭ್ಯರ್ಥಿಯನ್ನು ಮೋದಿ ತೀರ್ಮಾನ ಮಾಡೋದಲ್ಲ: ಪಿ. ಚಿದಂಬರಂ

Wednesday, May 9th, 2018
congress

ಮಂಗಳೂರು: ‘ಪ್ರಧಾನಿ ಹುದ್ದೆ ವಹಿಸಿಕೊಳ್ಳಲು ನಾನು ಸಿದ್ಧ’ ಎಂದ ರಾಹುಲ್ ಗಾಂಧಿಯವರನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೇವಡಿ ಮಾಡಿದ್ದರು. ಈ ಸಂಬಂಧ ಇದೀಗ ಪ್ರಧಾನಿ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಯನ್ನು ನರೇಂದ್ರ ಮೋದಿ ತೀರ್ಮಾನ ಮಾಡೋದಲ್ಲ. ಅದನ್ನು ಕಾಂಗ್ರೆಸ್ ಹಿರಿಯ ನಾಯಕರು ನಿರ್ಧಾರ ಮಾಡುತ್ತಾರೆ. ಬಹುಮತ ಬಂದರೆ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ. ಆದರೆ, ಈ ವಿಚಾರವನ್ನು ಕಾಂಗ್ರೆಸಿನ ಹಿರಿಯ ನಾಯಕರು […]