ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಶೇ. 11 ಹೆಚ್ಚಳ

Tuesday, March 27th, 2018
sesikanth-senthil

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಕ್ರಿಯಗೊಂಡಿದೆ. ಚುನಾವಣೆಯ ಪೂರ್ವ ತಯಾರಿಯ ಕುರಿತು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಈ ಕುರಿತು ವಿವರ ನೀಡಿದರು.ಜಿಲ್ಲೆಗೆ ಇವಿಎಂ ಯಂತ್ರಗಳು ಈಗಾಗಲೇ ಬಂದಿದ್ದು, ಪರಿಶೀಲನೆ ನಡೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16,67,194 ಮತದಾರರಿದ್ದು, ಕಳೆದ ಸಾಲಿಗಿಂತ ಶೇ.11ರಷ್ಟು ಮತದಾರರು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಹೇಳಿದರು. ಜಿಲ್ಲೆಯಲ್ಲಿ 8,21,123 ಪುರುಷ ಹಾಗೂ 8,46,030 ಮಹಿಳೆ ಮತದಾರರು ಜಿಲ್ಲೆಯಲ್ಲಿದ್ದಾರೆ. ಈ ಬಾರಿ ಚುನಾವಣೆಯಲ್ಲಿ 41 […]

ನೀತಿ ಸಂಹಿತೆ ಜಾರಿ: ಸರ್ಕಾರಿ ಕಾರು ಬಿಟ್ಟು ಬಸ್‌ನಲ್ಲೇ ಪ್ರಯಾಣಿಸಿದ ಶಾಸಕಿ ಶಕುಂತಲಾ ಶೆಟ್ಟಿ

Tuesday, March 27th, 2018
shakuntala-shetty

ಪುತ್ತೂರು: ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಪರಿಣಾಮವಾಗಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಸರ್ಕಾರಿ ಕಾರು ಬಿಟ್ಟು ಬಸ್‌ನಲ್ಲಿ ಪ್ರಯಾಣ ಬೆಳಸಿದರು. ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಶಕುಂತಲಾ ಶೆಟ್ಟಿ ಅವರು ಸರ್ಕಾರಿ ಕಾರು ಬಿಟ್ಟು ಬಿಟ್ಟು ಬಸ್‌ನಲ್ಲೇ ಪ್ರಯಾಣಿಸಿದರು. ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಇಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಹಾಗಿಗಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.

ನಿಷ್ಕಲ್ಮಶ ಭಕ್ತಿಗೆ ಜಾತಿಭೇದಗಳಿಲ್ಲ: ಪೇಜಾವರ ಶ್ರೀ

Tuesday, March 27th, 2018
shreeram

ಬೆಳ್ತಂಗಡಿ: ನಿಷ್ಕಲ್ಮಶ ಭಕ್ತಿಗೆ ಜಾತಿ ಭೇದವಿಲ್ಲ, ಯಾರು ಬೇಕಾದರೂ ಭಗವಂತನ ಆರಾಧನೆ ಮಾಡಬಹುದು. ಧ್ಯಾನ, ದೇವರ ಪ್ರಾರ್ಥನೆಯ ಮೂಲಕ ದೇವಸ್ಮರಣೆ ಮಾಡುವುದು ಮುಖ್ಯ ಎಂದು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು. ಅವರು ರವಿವಾರ ಕಣಿಯೂರು ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀರಾಮ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀರಾಮ ನವಮಿ ಉತ್ಸವ, ದುರ್ಗಾಹೋಮ ಮತ್ತು ಕಟೀಲು ಮೇಳದ ಸೇವಾ ಬಯಲಾಟದ ರಜತ ಮಹೋತ್ಸವದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಶ್ರೀರಾಮ ಮನುಕುಲಕ್ಕೆ ಆದರ್ಶ ಪ್ರಾಯನಾಗಿದ್ದು, ಕಷ್ಟದಲ್ಲೂ ಹೇಗೆ […]

ಸಿವಿಲ್ ಎಂಜಿನಿಯರ‍್ಸ್ ದೇಶದ ನಿರ್ಮಾಣ ಕ್ಷೇತ್ರದ ಉತ್ಕೃಷ್ಟ ಸಂಪನ್ಮೂಲ: ಶಾಸಕ ಬಾವಾ

Tuesday, March 27th, 2018
mohauiddin-bava

ಸುರತ್ಕಲ್: ಕೌಶಲ್ಯಯುಕ್ತ ಯುವ ಸಿವಿಲ್ ಎಂಜಿನಿಯರ‍್ಸ್ ದೇಶದ ನಿರ್ಮಾಣ ಕ್ಷೇತ್ರದ ಉತ್ಕೃಷ್ಟ ಸಂಪನ್ಮೂಲ. ದೇಶದ ನಿರ್ಮಾಣ ಕ್ಷೇತ್ರವು ಸಿವಿಲ್ ಎಂಜಿನಿಯರ್ ಅವರ ಕೈಯಲ್ಲಿ ಇದೆ ಎಂದು ಶಾಸಕ ಮೊಹಿಯುದ್ದೀನ್ ಬಾವಾ ಹೇಳಿದರು. ಎಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ‍್ಸ್ ಇಂಡಿಯಾ ಇದರ ವತಿಯಿಂದ ಸುರತ್ಕಲ್‌ನ ಎನ್‌ಐಟಿಕೆ ಸಿವಿಲ್ ಎಂಜಿನಿಯರ್ ವಿಭಾಗದಲ್ಲಿ ಎಂಜಿನಿಯರ‍್ಸ್ ವೀಕ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಅವರು ಹೇಳಿದರು. ಯಾವುದೇ ಕ್ಷೇತ್ರ ಬೆಳೆಯಬೇಕಾದರೆ ನಿರ್ಮಾಣ ಕ್ಷೇತ್ರವು ಪ್ರಥಮವಾಗಿ ಬೆಳೆಯಬೇಕು. ಇದರಿಂದಾಗಿ ಅಭಿವೃದ್ಧಿಶೀಲ ದೇಶವಾದ ಭಾರತದಲ್ಲಿ ಸಿವಿಲ್ […]

ಐ.ಎಸ್.ಟಿ.ಡಿ.ಮಂಗಳೂರು – ಉಡುಪಿ ಶಾಖೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಘಾಟನೆ

Tuesday, March 27th, 2018
alwas-college

ಮೂಡುಬಿದಿರೆ: ದೇಶದ ಅತಿ ದೊಡ್ಡ ತರಬೇತಿ ಸೊಸೈಟಿ ಎಂಬ ಹೆಗ್ಗಳಿಕೆಯಿರುವ ಇಂಡಿಯನ್ ಸೊಸೈಟಿ ಆಫ್ ಟ್ರೈನಿಂಗ್ ಎಂಡ್ ಡೆವಲಪ್ಮೆಂಟ್‍ನ 53 ನೇ ಶಾಖೆಯು (ಮಂಗಳೂರು-ಉಡುಪಿ) ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಘಾಟನೆಗೊಂಡಿತು . ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಐಎಸ್‍ಟಿಡಿ ಬೆಂಗಳೂರು ಶಾಖೆಯ ಅಧ್ಯಕ್ಷೆ ಡಾ.ಮೀರಾ ವೆಂಕಟ್ ಭಾಗವಹಿಸಿ, ಆಳ್ವಾಸ್‍ನಲ್ಲಿ ಐಎಸ್‍ಟಿಡಿ ಶಾಖೆ ಪ್ರಾರಂಭವಾಗುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಟಿ.ಸಿ ಸುಜಿತ್ ಮಾತನಾಡಿ , ವಿದ್ಯಾರ್ಥಿಗಳು ಮಾನವ […]

ಅಲ್ಪಸಂಖ್ಯಾತರ ಓಲೈಕೆಗೆ ಕೇಂದ್ರ ಸರ್ಕಾರ ಯತ್ನ ಆರೋಪ, ಪ್ರತಿಭಟನೆ

Tuesday, March 27th, 2018
hindu-janagrate

ಮಂಗಳೂರು: ಹಜ್ ಯಾತ್ರೆ ಅನುದಾನ ರದ್ದುಗೊಳಿಸಿ ವಿಮಾನ ಪ್ರಯಾಣದಲ್ಲಿ ಅಗಾಧ ರಿಯಾಯಿತಿ ಘೋಷಣೆ ಮಾಡುವ ಮೂಲಕ ಕೇಂದ್ರ ಸರ್ಕಾರವು ಅಲ್ಪಸಂಖ್ಯಾತರ ಒಲೈಕೆ ಮಾಡಲು ಮುಂದಾಗಿದೆ ಎಂದು ಆರೋಪಿಸಿ ಹಿಂದೂ ಜನಜಾಗೃತಿ ಸಮಿತಿಯವರು ಪುತ್ತೂರಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ಜನಾರ್ಧನ ಗೌಡ, ಸುಪ್ರೀಂ ಕೋರ್ಟ್‌ನ ಆದೇಶವಿದ್ದರೂ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಹಜ್ ಯಾತ್ರೆಗೆ ನೀಡಲಾಗುತ್ತಿದ್ದ ಅನುದಾನವನ್ನು ರದ್ದು ಪಡಿಸಿರಲಿಲ್ಲ. ಕಳೆದ ಮೂರು ವರ್ಷಗಳಿಂದ […]

ಸ್ಕೂಟರ್-ಬಸ್ ನಡುವೆ ಡಿಕ್ಕಿ… ಸವಾರ ಸ್ಥಳದಲ್ಲೇ‌ ಸಾವು

Tuesday, March 27th, 2018
accident

ಮಂಗಳೂರು: ಸ್ಕೂಟರ್ ಹಾಗೂ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು ಸ್ಕೂಟರ್ ಸವಾರ ಸ್ಥಳದಲ್ಲೇ‌ ಸಾವಿಗೀಡಾಗಿರುವ ಘಟನೆ ಉಪ್ಪಿನಂಗಡಿ ಸಮೀಪದ ಕಲ್ಲೇರಿ ಎಂಬಲ್ಲಿ ನಡೆದಿದೆ. ಕಲ್ಲೇರಿ ನಿವಾಸಿ ಚಂದ್ರಶೇಖರ್ ಮೃತ ಸವಾರ. ಚಂದ್ರಶೇಖರ್ ಮೇಲೆ ಬಸ್‌‌ ಹರಿದಿದ್ದು, ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪಿಕಪ್ ವಾಹನವೊಂದು ಬೈಕಿಗೆ ಢಿಕ್ಕಿ; ಬೈಕ್ ಸವಾರನಿಗೆ ಗಾಯ

Tuesday, March 27th, 2018
kadaba

ಕಡಬ: ಪಿಕಪ್ ವಾಹನವೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಕಡಬದಲ್ಲಿ ಸೋಮವಾರ ರಾತ್ರಿ ನಡೆದಿದೆ. ಗಾಯಾಳು ಬೈಕ್ ಸವಾರನನ್ನು ಕೋಡಿಂಬಾಳ‌ ನಿವಾಸಿ ನವೀನ್ ಎಂದು ಗುರುತಿಸಲಾಗಿದೆ. ಈತ ತನ್ನ ಬೈಕಿನಲ್ಲಿ ತೆರಳುತ್ತಿದ್ದಾಗ ಕಡಬ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪಿಕಪ್ ಢಿಕ್ಕಿ ಹೊಡೆದಿದೆ. ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಕಪ್ ಚಾಲಕ ರಾಜು ಎಂಬಾತ ಕೆಲದಿನಗಳ ಹಿಂದೆ ಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ಬಂಧಿತನಾಗಿದ್ದು, ಆ ಕಾರಣಕ್ಕಾಗಿ ಉದ್ದೇಶಪೂರ್ವಕವಾಗಿ ಅಪಘಾತ ಎಸಗಿದ್ದಾರೆ […]

ಮೋದಿ ಅವರ ‘ಮನ್ ಕೀ ಬಾತ್’ನಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ: ಐವನ್ ಡಿಸೋಜ

Tuesday, March 27th, 2018
ivan-desouza

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ನಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುವುದನ್ನು ಬಿಜೆಪಿ ತಿಳಿದುಕೊಳ್ಳಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ತಿಳಿಸಿದ್ದಾರೆ.ಮಂಗಳೂರಿನಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು ಅಮಿತ್ ಶಾ ಅವರ ಕುವೆಂಪು ಸ್ಮಾರಕಕ್ಕೆ ಭೇಟಿ ನೀಡುವ ಮೊದಲು ಒಮ್ಮೆ ಯೋಚಿಸಬೇಕು ಎಂದು ಹೇಳಿದರು. ಬಿಜೆಪಿಯ ಸಿದ್ಧಾಂತಕ್ಕೂ ಕುವೆಂಪು ನಿಲುವಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಹೇಳಿದರು. ಸದಾನಂದ ಗೌಡರು ಕಾಂಗ್ರೆಸ್ ಗೆ ಕೊನೆ ಚುನಾವಣೆ ಎಂದಿದ್ದಾರೆ. ಆದರೆ ಕಾಂಗ್ರೆಸ್ […]

ಪ್ರೇಮ ವೈಫಲ್ಯ… ನಿಶ್ವಿತಾರ್ಥವಾಗಿದ್ದ ಯುವಕ ನೇಣಿಗೆ ಶರಣು

Tuesday, March 27th, 2018
guruprasad-shettiger

ಮಂಗಳೂರು: ಪ್ರೇಮ ವೈಫಲ್ಯದಿಂದ ಮನನೊಂದು ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಪಕ್ಷಿಕೆರೆ ಪೆಟ್ರೋಲು ಬಂಕ್ ಬಳಿಯ ಮನೆಯೊಂದರಲ್ಲಿ ನಡೆದಿದೆ. ಗುರುಪ್ರಸಾದ ಶೆಟ್ಟಿಗಾರ (26) ಎಂಬಾತನೆ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಪಕ್ಷಿಕೆರೆಯ ಪೆಟ್ರೋಲು ಬಂಕಿನ ಎದುರುಗಡೆ ಇರುವ ರಸ್ತೆಯ ಬದಿಯಲ್ಲಿ ವರ್ಕ್‌ಶಾಪ್ ನಡೆಸುತ್ತಿದ್ದ. ಸೋಮವಾರ ತನ್ನ ಮನೆಯ ಕೋಣೆಯ ಪ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಮನೆಯಲ್ಲಿ ಯಾರೂ ಇಲ್ಲದಾಗ ಗುರುಪ್ರಸಾದ ಫ್ಯಾನ್‌‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಗುರುಪ್ರಸಾದ್‌‌‌ಗೆ […]