ವಿನಾಯಕ ಬಾಳಿಗಾ ಕೊಲೆ : ತೇಜೋ ವಧೆ ಯತ್ನ ಸಲ್ಲದು

Tuesday, March 27th, 2018
vinayak-baliga

ಮಂಗಳೂರು: ಹತ್ಯೆಗೀಡಾದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಅವರ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಿ ತೇಜೋವಧೆ ಮಾಡುವ ಪ್ರಯತ್ನ ನಡೆದಿದೆ. ಅದು ಸಹ್ಯವಲ್ಲ ಎಂದು ಜಿ.ಹನುಮಂತ ಕಾಮತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿನಾಯಕ ಬಾಳಿಗ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ ಎಂದರು. ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ನರೇಶ ಶೆಣೈ ಅವರಿಗೂ ನನಗೂ 25 ವರ್ಷಗಳ ಸ್ನೇಹ. ಒಬ್ಬ ವ್ಯಕ್ತಿಯ ಮೇಲೆ ಆರೋಪ ಬಂತು ಎಂದ ಮೇಲೆ ಆತನ […]

‘ಕಸ ಬೀಳುವ ಜಾಗದಲ್ಲಿ ಪಾರ್ಕ್‌ ಮೂಡಲಿ’

Monday, March 26th, 2018
j-r-lobo

ಮಂಗಳೂರು: ರಾಮಕೃಷ್ಣ ಮಿಷನ್‌ ಸ್ವಚ್ಛತಾ ಅಭಿಯಾನ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಶುಭ ಘಳಿಗೆಯಲ್ಲಿ ಕರಂಗಲ್ಪಾಡಿಯಲ್ಲಿ ನವೀಕೃತಗೊಳಿಸಿರುವ ಅಕ್ಯುಪ್ರಶರ್‌ ವಾಕಿಂಗ್‌ ಟ್ರ್ಯಾಕ್ ‘ಅರೈಸ್‌ ಅವೇಕ್‌’ ಪಾರ್ಕನ್ನು ರವಿವಾರ ಉದ್ಘಾಟಿಸಲಾಯಿತು. ಶಾಸಕ ಜೆ.ಆರ್‌. ಲೋಬೋ ಅವರು ಪಾರ್ಕ್‌ ಉದ್ಘಾಟಿಸಿದರು. ಮನಸ್ಸಿನ ಸ್ವಚ್ಛತೆಯಿಂದ ಎಲ್ಲವೂ ಸಾಧ್ಯವಾಗುತ್ತದೆ. ರಾಮಕೃಷ್ಣ ಮಠದವರು ಮಾಡುತ್ತಿರುವ ಸ್ವಚ್ಛತಾ ಅಭಿಯಾನ ಸಾಕಷ್ಟು ಮಂದಿಯ ಮನಸ್ಸು ಪರಿವರ್ತನೆಯ ಜತೆಯಲ್ಲಿ ಜಾಗೃತಿಯನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು. ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದ ಸ್ವಾಮೀಜಿ ಮಾತನಾಡಿ, ನಗರದಲ್ಲಿ ಕಸ […]

3ಡಿ ತಾರಾಲಯ; ಪ್ರದರ್ಶನವೆಲ್ಲ ಹೌಸ್‌ಫುಲ್‌!

Monday, March 26th, 2018
taralaya

ಪಿಲಿಕುಳ: ಇಲ್ಲಿನ ಡಾ. ಶಿವರಾಮ ಕಾರಂತ ಬಯೋಲಾಜಿಕಲ್‌ ಪಾರ್ಕ್‌ನಲ್ಲಿ ಮಾ. 1ರಿಂದ ಆರಂಭವಾಗಿರುವ ವಿಶ್ವದ 21ನೇ ಅತ್ಯಾಧುನಿಕ ಹೈಬ್ರಿಡ್‌ ತ್ರಿಡಿ ‘ಸ್ವಾಮಿ ವಿವೇಕಾನಂದ ತಾರಾಲಯ’ದ ಪ್ರದರ್ಶನಕ್ಕೆ 25 ದಿನದ ಅಂತರದಲ್ಲಿ ಸುಮಾರು 11,000 ಜನರು ಆಗಮಿಸಿ ನಭೋಮಂಡಲದ ವಿಸ್ಮಯ ವೀಕ್ಷಿಸಿದ್ದಾರೆ. ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ದೂರದೂರಿನಿಂದ ಪಿಲಿಕುಳಕ್ಕೆ ಆಗಮಿಸಿ ತಾರಾಲಯದಲ್ಲಿ ನಭದ ವಿಸ್ಮಯ ನೋಡಲು ಹಾತೊರೆಯುವ ಹಿನ್ನೆಲೆಯಲ್ಲಿ ಟಿಕೆಟ್‌ ಬೇಗನೆ ಖಾಲಿಯಾಗುತ್ತಿದೆ. ಈಗ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ರಜೆ ದೊರೆಯಲಿದೆ. ಆಗ ಭಾರೀ […]

ಕುಡಿಯುವ ನೀರಿಗಾಗಿ ಉಳ್ಳಾಲ ನಗರಸಭೆಗೆ ಮುತ್ತಿಗೆ

Monday, March 26th, 2018
protest

ಮಂಗಳೂರು: ಶುದ್ಧ ಕುಡಿಯುವ ನೀರಿಗಾಗಿ ಅಬ್ಬಂಜರ ಪರಿಸರದ ದಲಿತ ಕಾಲನಿಯ ನಿವಾಸಿಗಳು ಡಿವೈಎಫ್‌ಐ ಮತ್ತು ದಲಿತ ಹಕ್ಕುಗಳ ಸಮಿತಿಯ ನೇತೃತ್ವದಲ್ಲಿ ಸೋಮವಾರ ಉಳ್ಳಾಲ ನಗರಸಭೆಗೆ ಮುತ್ತಿಗೆ ಹಾಕಿದರು. *ಗೇಟು ಮುಚ್ವಿದ ನಗರಸಭೆ: ದಲಿತರಿಗೆ ಕುಡಿಯಲು ಯೋಗ್ಯವಾದ ನೀರು ಕೊಡಿ ಎಂದು ಕೇಳಿ ದಲಿತ ಕಾಲನಿಯ ನಿವಾಸಿಗಳು ಹೋರಾಟ ನಡೆಸಲು ಮುಂದಾದಾಗ ನಗರಸಭಾ ಆಡಳಿತವು ಕಚೇರಿಯ ಆವರಣ ಪ್ರವೇಶಿಸದಂತೆ ಗೇಟನ್ನು ಹಗ್ಗದಿಂದ ಕಟ್ಟಿದ ವಿದ್ಯಮಾನವೂ ಈ ಸಂದರ್ಭ ನಡೆಯಿತು. ಆದರೆ, ಪ್ರತಿಭಟನಾಕಾರರು ಅದನ್ನು ಲೆಕ್ಕಿಸದೆ ಒಳ ಪ್ರವೇಶಿಸಿ ಆಕ್ರೋಶ […]

ಕುಂದಾಪುರ ವೃದ್ಧೆ ಕೊಲೆ ಪ್ರಕರಣ: ತಪ್ಪಿತಸ್ಥನಿಗೆ ಜೀವಾವಧಿ ಶಿಕ್ಷೆ

Monday, March 26th, 2018
kundapura

ಕುಂದಾಪುರ: ಕುಂದಾಪುರದ ಲಾಡ್ಜ್‌ನಲ್ಲಿ ನಡೆದಿದ್ದ ವೃದ್ಧೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಅಜರ್‌ಖಾನ್ ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ, 50 ಸಾವಿರ ರೂ . ದಂಡ ವಿಧಿಸಿ ಆದೇಶ ಹೊರಡಿಸಿದೆ. ಶಿಕ್ಷೆಗೆ ಗುರಿಯಾಗಿರುವ ಅಜರ್‌ಖಾನ್ ಅಲಿಯಾಸ್ ಅಜಯ್ ಬಾಬು ಗುಜರಾತ್ ಮೂಲದವ. ಈತ ಗಂಗೊಳ್ಳಿಯ ಲಲಿತಾ ದೇವಾಡಿಗ ಎಂಬ ವೃದ್ಧೆಯನ್ನು 2015 ಏಪ್ರಿಲ್ 15ರಂದು ಕೊಲೆ ಮಾಡಿದ್ದ. ವೃದ್ಧೆ ಲಲಿತಾ ಅವರ ಮಗಳ ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಅಜರ್‌ ಈ ಕೃತ್ಯವೆಸಗಿದ್ದ. ಲಲಿತಾರನ್ನು […]

ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರ ಲೋಕಾರ್ಪಣೆ

Monday, March 26th, 2018
PutturuGopura1

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿರ್ಮಾಣಗೊಂಡಿರುವ ರಾಜಗೋಪುರ ಸಮರ್ಪಣೆ ಕಾರ್ಯಕ್ರಮ ಮಾ.25ರಂದು ಜರಗಿತು. ಬೆಳಿಗ್ಗೆ ಗಣಪತಿ ಹವನ, ಸಹಸ್ರ ಕಲಶಾಭಿಷೇಕ ನಂತರ ರಾಜಗೋಪುರ ಸಮರ್ಪಣೆ, ಉದ್ಘಾಟನೆ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಸಂಪುಟ ನರಸಿಂಹಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜ್ಯ ಸಂಸದೀಯ ಕಾರ್ಯದರ್ಶಿಯಾಗಿರುವ ಶಾಸಕಿ ಶಕುಂತಳಾ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. […]

ಸಂತ ಆಂತೋನಿ ಆಶ್ರಮದಲ್ಲಿ ಶಿಲುಬೆ ಹಾದಿ ಭಕ್ತಿ ಕಾರ್ಯಕ್ರಮ

Monday, March 26th, 2018
jeppu-church

ಮಂಗಳೂರು: ಮಾರ್ಚ್ 25, ಗರಿಗಳ ಬಾನುವಾರದಂದು ಜೆಪ್ಪು ಸಂತ ಆಂತೋನಿ ಆಶ್ರಮದಲ್ಲಿ ಶಿಲುಬೆ ಹಾದಿ ಭಕ್ತಿ ಕಾರ್ಯಕ್ರಮ ನಡೆಸಲಾಯ್ತು. ಪ್ರಖ್ಯಾತ ಗಾಯಕರಾದ ಮಿಲಾಗ್ರಿಸ್‌ನ ಶ್ರೀ ಪ್ರೇಮ್ ಲೋಬೊರವರು ತಾವೇ ರಚಿಸಿದ ’ಮಾತೆ ಮರಿಯಮ್ಮನವರ ಜೊತೆ ಯೇಸು ಸ್ವಾಮಿಯ ಶಿಲುಬೆ ಹಾದಿ’ ಯನ್ನು ನಡೆಸಿ ಕೊಟ್ಟರು. ಆಶ್ರಮದ ನಿರ್ದೇಶಕ ಫಾ. ಒನಿಲ್ ಡಿ’ಸೋಜ ಸಂದೇಶ ನೀಡಿ ಶಿಲುಬೆ ಹಾದಿ ಭಕ್ತಿ ಕಾರ್ಯಕ್ರಮ ನಮ್ಮ ಜೀವನದ ಶಿಲುಬೆ ಹಾದಿ ನಡೆಯಲು ಪ್ರೇರಣೆಯಾಗಲಿ ಎಂದರು. ’ಯಾರಾದರೂ ನನ್ನನ್ನು ಹಿಂಬಾಲಿಸಲು ಇಛ್ಛಿಸುತ್ತಾರಾದರೆ ತಮ್ಮ […]

ರಾಜ್ಯದಿಂದ ಲೆಕ್ಕ ಕೇಳಲು ನರೇಂದ್ರ ಮೋದಿ ಚಕ್ರವರ್ತಿಯಲ್ಲ: ರಮಾನಾಥ ರೈ

Monday, March 26th, 2018
ramanath-rai

ಮಂಗಳೂರು: ರಾಜ್ಯ ಸರಕಾರದಿಂದ ಲೆಕ್ಕ ಕೇಳಲು ನರೇಂದ್ರ ಮೋದಿ ಚಕ್ರವರ್ತಿಯಲ್ಲ. ಲೆಕ್ಕ ಕೊಡೋಕೆ ನಾವೇನು ಸಾಮಂತ ರಾಜರುಗಳಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಗಳೂರಿನಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲೆಕ್ಕ ಕೊಡುವ ಪದ್ಧತಿ ಇಲ್ಲ ಎಂದು ತಿಳಿಸಿದರು. ರೈ ಚಕ್ರವರ್ತಿಗೆ ಸಾಮಂತರಸರು ಮಾತ್ರ ಲೆಕ್ಕ ಕೊಡಬೇಕಷ್ಟೆ. ಪ್ರಧಾನಿ ನರೇಂದ್ರ ಮೋದಿ ದೇಶದ ಚಕ್ರವರ್ತಿಯಂತೆ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಮಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಜನಾಶೀರ್ವಾದ […]

ಮೀನಿಗಿಂತಲೂ ದುಬಾರಿ ಆಯ್ತೇ ಮರಳು… ನೋಡಿ ಹೀಗಿದೆ ಅಕ್ರಮ ಸಾಗಾಟ!

Monday, March 26th, 2018
sand-ullal

ಮಂಗಳೂರು: ಮೀನು ಸಾಗಾಟದ ರೀತಿಯಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವೊಂದು ಬಯಲಿಗೆ ಬಂದಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ವಿಜಯ ಬ್ಯಾಂಕ್ ಸಮೀಪ ಇರುವ ಹೊಗೆಹಿತ್ಲು ಎಂಬಲ್ಲಿ ಕಂಟೈನರ್ ಹಾಗೂ ಮೀನು ಸಾಗಾಟದ ಮುಚ್ಚಿದ ಲಾರಿಯಲ್ಲಿ ಅಕ್ರಮವಾಗಿ ಸಾಮಾನ್ಯ ಮರಳನ್ನು ಗುಪ್ತವಾದ ರೀತಿಯಲ್ಲಿ ಹೊರ ನೋಟಕ್ಕೆ ಮೀನು ಸಾಗಾಟ ಮಾಡುವ ರೀತಿಯಲ್ಲಿ ಕೇರಳದ ಕಡೆಗೆ ಮಾರಾಟ ಮಾಡಲು ತುಂಬಿಸಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ಮತ್ತು […]

ಮಂಗಳೂರಿನಲ್ಲಿ ರೈತ ಮುಖಂಡ ನಿಗೂಢ ಸಾವು

Monday, March 26th, 2018
sucide

ಮಂಗಳೂರು: ಬಂಟ್ವಾಳ ನಂದಾವರ ದೇವಸ್ಥಾನದ ಪಕ್ಕ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಸಜೀಪಮುನ್ನೂರು ಗ್ರಾಮದ ರೈತ ಮುಖಂಡ, ಬಳಕೆದಾರರ ಹೋರಾಟಗಾರ ಶರತ್ ಕುಮಾರ್(45) ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕಾಲು ಜಾರಿ ಬಿದ್ದು ಸಾವನ್ನಪ್ಪಿರಬೇಕು ಎಂದು ಶಂಕಿಸಲಾಗಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷರಾಗಿದ್ದ ಶರತ್, ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತರ ಹೋರಾಟ, ಎತ್ತಿನಹೊಳೆ ಹೋರಾಟ, ಸ್ಥಳೀಯವಾಗಿ […]