ರಿಕ್ಷಾ ಚಾಲಕ ನ ಹಲ್ಲುಗಳನ್ನು ಉದುರಿಸಿ ಪರಾರಿಯಾಗಿದ್ದ ವ್ಯಕ್ತಿಯ ಬಂಧನ

Wednesday, November 15th, 2023
Rokesh Rock

ಉಳ್ಳಾಲ : ತೊಕ್ಕೊಟ್ಟು ಸಮೀಪದ ಕುಂಪಲದಲ್ಲಿ ಸಹೋದ್ಯೋಗಿ ರಿಕ್ಷಾ ಚಾಲಕ ನಿಗೆ ಹಲ್ಲೆಗೈದು ಹಲ್ಲುಗಳನ್ನು ಉದುರಿಸಿ ಪರಾರಿಯಾಗಿದ್ದ ಆರೋಪಿ ರಿಕ್ಷಾ ಚಾಲಕನನ್ನು ಘಟನೆ ನಡೆದ 24ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ರೋಕೇಶ್(37) ಯಾನೆ ಸೈಕೋ ರೋಸ್ ಎಂಬಾತನನ್ನು ಬಂಧಿಸಲಾಗಿದೆ. ಸುಶಾಂತ್(31) ಎಂಬವರಿಗೆ ಕಳೆದ ಆದಿತ್ಯವಾರ ಆರೋಪಿ ರೋಕೇಶ್ ಯಾನೆ ಸೈಕೋ ರೋಸ್ ಸುಶಾಂತ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮುಖಕ್ಕೆ ಬಲವಾಗಿ ಥಳಿಸಿದ್ದು ಎರಡು ಹಲ್ಲುಗಳು ಉದುರಿ ಹೋಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸುಶಾಂತ್ […]

ಉಡುಪಿ ನೇಜಾರಿನಲ್ಲಿ ನಾಲ್ವರ ಬರ್ಬರ ಹತ್ಯೆ, ಶಂಕಿತ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು

Wednesday, November 15th, 2023
praveen-arun-chowwgule

ಉಡುಪಿ : ಸಿಸಿಟಿವಿ ದೃಶ್ಯಾವಳಿ ಹಾಗೂ ಫೋನ್ ಕರೆಗಳ ದಾಖಲೆಗಳ ಆಧಾರದ ಮೇಲೆ ಉಡುಪಿ ಯಲ್ಲಿ ಮೂವರು ಮಕ್ಕಳು ಸೇರಿದಂತೆ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಓರ್ವ ವ್ಯಕ್ತಿ ಬೆಳಗಾವಿಯಲ್ಲಿ ವಶಕ್ಕೆ ಪಡೆದು ಉಡುಪಿಗೆ ಕರೆ ತರಲಾಗುತ್ತಿದೆ. ವಶಕ್ಕೆ ಪಡೆದ ಶಂಕಿತನನ್ನು ಪ್ರವೀಣ್ ಅರುಣ್ ಚೌಗಲೆ ಎಂದು ಗುರುತಿಸಲಾಗಿದೆ. ಆತನ ಚಹರೆ, ಎತ್ತರ ಮತ್ತು ಫೋನ್ ಲೊಕೇಶನ್ ಹೊಂದಿಕೆಯಾಗಿದೆ. ಇದರಿಂದ ಆತನನ್ನು ಪೊಲೀಸರು ವಶಕ್ಕೆ ಪಡೆದು ಉಡುಪಿಗೆ ಕರೆ ತರುತ್ತಿದ್ದಾರೆ. ಮೃತಪಟ್ಟ […]

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯುವ ನಾಯಕ ಬಿ ವೈ ವಿಜಯೇಂದ್ರ ಅಧಿಕಾರ ಸ್ವೀಕಾರ

Wednesday, November 15th, 2023
BY Vijayendra

ಬೆಂಗಳೂರು : ಬಿಜೆಪಿಯ ಶಕ್ತಿ ಕೇಂದ್ರ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಜಗನ್ನಾಥ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪುತ್ರ ಶಿಕಾರಿಪುರ ಕ್ಷೇತ್ರದ ಶಾಸಕ, ಯುವ ನಾಯಕ ಬಿ ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಭುಧವಾರ ಅಧಿಕಾರ ಸ್ವೀಕರಿಸಿಕೊಂಡರು. ರಾಜ್ಯ ಬಿಜೆಪಿಯ ಹಿರಿಯ ನಾಯಕರು, ಸಂಸದರು, ಶಾಸಕರು ಮುಂದೆ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿಜಯೇಂದ್ರ ಅವರಿಗೆ ಕೇಸರಿ ಶಾಲು ತೊಡಿಸಿ ಸನ್ಮಾನಿಸಿ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು. ಇದಕ್ಕೂ ಮುನ್ನ […]

ರಾಪಟ ತುಳು ಸಿನಿಮಾದ ಟ್ರೇಲರ್ ಬಿಡುಗಡೆ

Tuesday, November 14th, 2023
Rapata

ಮಂಗಳೂರು: ಅವಿಕಾ ಪ್ರೊಡಕ್ಷನ್ ಲಾಂಛನದಲ್ಲಿ ಡಾ ದೇವದಾಸ್ ಕಾಪಿಕಾಡ್ ರ ಚಿತ್ರಕತೆ ಸಾಹಿತ್ಯ ಸಂಭಾಷಣೆಯಲ್ಲಿ ತಯಾರಾದ ಅರ್ಜುನ್ ಕಾಪಿಕಾಡ್ ನಿರ್ದೇಶನದ ರಾಪಟ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭವು ಭಾರತ್ ಮಾಲ್ ನ ಬಿಗ್ ಸಿನಿಮಾಸ್ ನಲ್ಲಿ ನಡೆಯಿತು. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಡಾ. ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಕಿಶೋರ್ ಡಿ ಶೆಟ್ಟಿ, ಪ್ರಕಾಶ್ ಪಾಂಡೇಶ್ವರ್, ಮುಖೇಶ್ ಹೆಗ್ಡೆ, ಸನಿಲ್ ಗುರು, ಉದ್ಯಮಿ ಸಂಜಯ್ ರಾವ್ , ಸಂತೋಷ್ ಸುವರ್ಣ , ರಾಕೇಶ್ ಶೆಟ್ಟಿ , […]

ನಕ್ಸಲ್ ಫೈರಿಂಗ್ : ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಣೆ

Tuesday, November 14th, 2023
Naxal

ಕೊಡಗು : ಕೇರಳದ ಗಡಿ ಜಿಲ್ಲೆ ವಯನಾಡಿನಲ್ಲಿ ನಕ್ಸಲರು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ನಕ್ಸಲರು ಕರ್ನಾಟಕ ಗಡಿ ನುಸುಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನಕ್ಸಲರು ಕರ್ನಾಟಕ ಗಡಿಯತ್ತ ನುಸುಳುವ ಶಂಕೆ ಇದ್ದು ಮುಂಜಾಗೃತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಗಡಿಭಾಗದಲ್ಲಿ ನಿಯೋಜನೆ ಮಾಡಲಾಗಿದೆ. ಕೊಡಗಿನ ಕುಟ್ಟ, ಬಿರುನಾಣಿ, ಪರಕಟಗೇರಿ ಹಾಗೂ ತೆರಾಲು ಭಾಗಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ […]

ಮನೆಯೊಳಗೆ ನುಗ್ಗಿ ನಾಲ್ವರ ಭೀಕರ ಹತ್ಯೆ, ನಾಲ್ಕು ಬಾರಿ ವಾಹನ ಬದಲಿಸಿ ಕೊಲೆಗಾರ ತಪ್ಪಿಸಿಕೊಂಡಿದ್ದ

Tuesday, November 14th, 2023
Udupi-Murder

ಉಡುಪಿ : ನೇಜಾರುವಿನ ತೃಪ್ತಿ ನಗರದಲ್ಲಿ ಮನೆಯೊಳಗೆ ನುಗ್ಗಿ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದು ಚಾಲಾಕಿ ಹಂತಕ ತಪ್ಪಿಸಿಕೊಳ್ಳಲು ನಾಲ್ಕು ಬಾರಿ ವಾಹನ ಬದಲಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಭಾನುವಾರ ನವೆಂಬರ್ 12 ರಂದು ಒಂದೇ ಕುಟುಂಬದ ಮೂಲತಃ ಕೋಡಿಬೆಂಗ್ರೆಯ ಪ್ರಸ್ತುತ ನೇಜಾರು ನಿವಾಸಿಗಳಾದ ಹಸೀನಾ (48) ಮತ್ತು ಅವರ ಮಕ್ಕಳಾದ ಮಂಗಳೂರಿನಲ್ಲಿ ಲಾಜಿಸ್ಟಿಕ್ಸ್ ಒಂದರಲ್ಲಿ ಕೆಲಸದಲ್ಲಿರುವ ಅಫ್ನಾನ್ (23), ಏರ್ ಇಂಡಿಯಾದಲ್ಲಿ ಉದ್ಯೋಗಿಯಾಗಿರುವ ಅಯ್ನಾಝ್ (21) […]

ದಪ್ಪ ಆಗಿದ್ದೇನೆ ಎಂದು ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಮಹಡಿಯಿಂದ ಜಿಗಿದು ಆತ್ಮಹತ್ಯೆ

Tuesday, November 14th, 2023
Prakruti Shetty

ಮಂಗಳೂರು : ಎಷ್ಟೇ ಪ್ರಯತ್ನ ಪಟ್ಟರು ತೂಕ ಇಳಿಸಲು ಸಾಧ್ಯವಾಗದೆ ವೈದ್ಯಕೀಯ ವಿದ್ಯಾರ್ಥಿನಿ ಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಎಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ ನಲ್ಲಿ ನಡೆದಿದೆ. ಬೆಳಗಾವಿಯ ಅಥಣಿ ಮೂಲದ ಪ್ರಕೃತಿ ಶೆಟ್ಟಿ (20) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಪ್ರಕೃತಿ ಶೆಟ್ಟಿ ಮಂಗಳೂರಿನ ಎಜೆ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಸೋಮವಾರ ಬೆಳಗಿನ ಜಾವ 3 ಗಂಟೆಗೆ ಕಾಲೇಜಿನ ಹಾಸ್ಟೆಲ್‌ ಕಟ್ಟಡದ 6ನೇ ಮಹಡಿಯಿಂದ ಜಿಗಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ” ನಾನು ತುಂಬಾ ದಪ್ಪಾ […]

ಮಂಗಳೂರು : ಲಕ್ಷ್ಮೀ ಪ್ಯಾನ್ಸಿ ಸೆಂಟರ್ ನಲ್ಲಿ ದೀಪಾವಳಿ ಗೂಡು ದೀಪಗಳ ಮಾರಾಟ

Saturday, November 11th, 2023
Laxmi-Fancy

ಮಂಗಳೂರು : ವರ್ಷಕ್ಕೊಮ್ಮೆ ಬರುವ ದೀಪಾವಳಿ ಯನ್ನು ಆಚರಿಸಲು ಜನ ಸಿದ್ದರಾಗಿದ್ದಾರೆ. ಮನೆ ಯನ್ನು ಬಣ್ಣದ ದೀಪಗಳಿಂದ ಅಲಂಕರಿಸಲು ಗೂಡು ದೀಪಗಳನ್ನು ಖರೀದಿಸಲು ಉತ್ಸುಕರಾಗಿದ್ದಾರೆ. ದೀಪಾವಳಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಮಂಗಳೂರಿನ ಮಾರ್ಕೆಟ್ ರಸ್ತೆಯಲ್ಲಿರುವ ಲಕ್ಷ್ಮೀ ಪ್ಯಾನ್ಸಿ ಸೆಂಟರ್ ಸಜ್ಜಾಗಿದೆ. ಇಲ್ಲಿ ಗ್ರಾಹಕರಿಗೆ ಇಷ್ಟವಾಗುವ ಬಟ್ಟೆಗಳಿಂದ ಮಾಡಿದ ಗೂಡುದೀಪಗಳು, ಬಿದಿರಿನ ಗೂಡುದೀಪಗಳು, ತೆಂಗಿನ ನಾರಿನಿಂದ ಮಾಡಿದ ಸಂಪ್ರದಾಯಿಕ ಗೂಡು ದೀಪಗಳು, ಕೈಯಿಂದ ಮಾಡಿದ ಸಾಂಪ್ರದಾಯಿಕ ಗೂಡು ದೀಪಗಳು ನಾನಾ ಅಕಾರದಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಅತೀ ಕಡಿಮೆ ಬೆಲೆ ಎಂದರೆ […]

ಮೋಸ, ವಂಚನೆ ಮಾಡಿ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಪತ್ನಿ ಕೊಲೆ, ಆರೋಪಿಗೆ ಒಂದು ವರ್ಷ ಜೈಲುಶಿಕ್ಷೆ

Saturday, November 11th, 2023
Padmapriya

ಉಡುಪಿ : 2008 ರಲ್ಲಿ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಠಿಸಿರುವ ಪ್ರಕರಣದಲ್ಲಿ ಆರೋಪಿ ಅತುಲ್ ರಾವ್‌ಗೆ ಒಂದು ವರ್ಷ ಜೈಲುಶಿಕ್ಷೆ ವಿಧಿಸಿ ಉಡುಪಿ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ. ಶಾಸಕ ರಘುಪತಿಭಟ್ ಪತ್ನಿ ಪದ್ಮಪ್ರಿಯ ಕರಂಬಳ್ಳಿಯ ತನ್ನ ಮನೆಯಿಂದ 2008 ಜೂನ್ 10ರಂದು ನಾಪತ್ತೆಯಾಗಿದ್ದರು, ಅಂದು ರಘುಪತಿ ಭಟ್ ಅವರ ಬಾಲ್ಯ ಸ್ನೇಹಿತ, ಅದೇ ಊರಿನ ಆತುಲ್ […]

ನವೆಂಬರ್ 21ರಂದು ಪತ್ರಕರ್ತರ ದ.ಕ ಜಿಲ್ಲಾ ಸಮ್ಮೇಳನ : ಲಾಂಛನ ಬಿಡುಗಡೆ

Saturday, November 11th, 2023
Sammelana

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿ ಯಿಂದ ನವೆಂಬರ್ 21ರಂದು ಮಂಗಳೂರಿನ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ನಡೆಯಲಿರುವ 4 ನೆ ಜಿಲ್ಲಾ ಸಮ್ಮೇಳನದ ಲಾಂಛನ ವನ್ನು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯ ಸಭಾಸ ದಸ್ಯರಾದ ಶ್ರೀ. ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು. ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ,ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ […]