ನಗರದ ಭವಿಷ್ಯಕ್ಕಾಗಿ ರಸ್ತೆ ಅಗಲೀಕರಣ ಅನಿವಾರ್ಯ. ಜನತೆ ಸಹಕರಿಸಬೇಕು:- ಶಾಸಕ ಕಾಮತ್

Wednesday, October 4th, 2023
vedavyas-kamath

ಮಂಗಳೂರು : ನಗರ ಪ್ರಸ್ತುತ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಜನಸಂಖ್ಯೆಯೂ ಏರುತ್ತಿದ್ದು ವಾಹನ ದಟ್ಟಣೆ ತೀವ್ರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಗರದ ಮುಂದಿನ ಭವಿಷ್ಯಕ್ಕಾಗಿ ಈಗಿನಿಂದಲೇ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡು ಸಾಗುವುದು ಅನಿವಾರ್ಯ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಸ್ಥಳೀಯರಲ್ಲಿ ಮನವಿ ಮಾಡಿದರು. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಉರ್ವಸ್ಟೋರ್ ಜಂಕ್ಷನ್ ನಿಂದ ಅಶೋಕನಗರದ ಹಾಸಟ್ಟಿ ಸರ್ಕಲ್ ವರೆಗಿನ ರಸ್ತೆ ಅಗಲೀಕರಣದ ವಿಷಯದಲ್ಲಿ ಉಂಟಾಗಿದ್ದ ಗೊಂದಲಕ್ಕೆ ಸ್ವತಃ ಶಾಸಕರೇ ಖುದ್ದಾಗಿ ಸ್ಥಳೀಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇಲ್ಲಿ […]

ಸಯ್ಯಿದ್ ಮದನಿ ದರ್ಗಾದ ಕಚೇರಿಯ ಬೀಗ ಹೊಡೆದು ಪರಿಶೀಲನೆ ನಡೆಸಿದ ಅಧಿಕಾರಿಗಳು

Tuesday, October 3rd, 2023
ullal-durga

ಉಳ್ಳಾಲ : ಸಯ್ಯಿದ್ ಮದನಿ ದರ್ಗಾ ಇದರ ನೂತನ ಆಡಳಿತ ಸಮಿತಿ ಗೆ, ಹಿಂದಿನ ಆಡಳಿತ ಸಮಿತಿಯು, ಏಳು ತಿಂಗಳಾದರೂ ಮುಖ್ಯ ಕಛೇರಿಯ ಕೀ ಹಸ್ತಾಂತರ ಮಾಡದೇ ಇದ್ದುದರಿಂದ ಸದ್ರಿ ಕಚೇರಿಯನ್ನು ಮಂಗಳವಾರ ಉಳ್ಳಾಲ ತಹಶೀಲ್ದಾರ್ ಹಾಗೂ ವಕ್ಫ್ ಅಧಿಕಾರಿಗಳ ಸಮಕ್ಷಮದಲ್ಲಿ ತೆರೆದು ಪರಿಶೀಲನೆ ನಡೆಸಲಾಯಿತು. ಹೊಸ ಸಮಿತಿ 2023ರ ಮಾ. 8 ರಂದು ಅಧಿಕಾರಕ್ಕೆ ಬಂದಿದೆ. ಹಿಂದೆ ಆಡಳಿತ ದಲ್ಲಿದ್ದ ಸಮಿತಿ ಹೊಸ ಸಮಿತಿಗೆ ಕೊಠಡಿ ಕೀ ನೀಡಿರಲಿಲ್ಲ. ಈ ಕಾರಣದಿಂದ ಎಲ್ಲರ ಸಮಕ್ಷಮದಲ್ಲಿ ಕೊಠಡಿ […]

ಕದ್ರಿ ಕಂಬಳದಲ್ಲಿ ಇಬ್ಬರು ಸಹೋದರಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ

Tuesday, October 3rd, 2023
sisters-suicide

ಮಂಗಳೂರು : ನಗರದ ಕದ್ರಿ ಕಂಬಳದ ಚಂದ್ರಿಕಾ ಬಡಾವಣೆಯಲ್ಲಿ ವಾಸವಾಗಿದ್ದ ಲತಾ ಭಂಡಾರಿ (70) ಮತ್ತು ಸುಂದರಿ ಶೆಟ್ಟಿ (80) ಎಂಬ ಸಹೋದರಿಯರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 78ರ ಹರೆಯದ ಜಗನ್ನಾಥ್ ಭಂಡಾರಿ ಮತ್ತವರ ಪತ್ನಿ ಲತಾ ಭಂಡಾರಿ ಹಾಗೂ ಲತಾ ಭಂಡಾರಿಯ ಅಕ್ಕ ಸುಂದರಿ ಶೆಟ್ಟಿ ಎಂಬವರು ಈ ಮನೆಯಲ್ಲಿ ವಾಸಿಸುತ್ತಿದ್ದರು. ಎಂದಿನಂತೆ ಜಗನ್ನಾಥ್ ಭಂಡಾರಿ ಮಂಗಳೂರಿನ ಯಶ್ ರಾಜ್ ಬಾರಿಗೆ ಕೆಲಸಕ್ಕೆ ಹೋದವರು ಸಂಜೆ 4:30ರ ವೇಳೆಗೆ ಮನೆಗೆ […]

ಮಂಗಳೂರು ಉಪನೋಂದಣಿ ಕಚೇರಿಯಲ್ಲಿ ಮಾಹಿತಿ ಸೋರಿಕೆ, ಹಲವು ಜನರ ಬ್ಯಾಂಕ್‌ ಖಾತೆಗೆ ಸೈಬರ್‌ ವಂಚಕರ ಕನ್ನ

Tuesday, October 3rd, 2023
ಮಂಗಳೂರು ಉಪನೋಂದಣಿ ಕಚೇರಿಯಲ್ಲಿ ಮಾಹಿತಿ ಸೋರಿಕೆ, ಹಲವು ಜನರ ಬ್ಯಾಂಕ್‌ ಖಾತೆಗೆ ಸೈಬರ್‌ ವಂಚಕರ ಕನ್ನ

ಮಂಗಳೂರು : ನಿವೇಶನ, ಫ್ಲ್ಯಾಟ್‌ ನೋಂದಣಿಗಾಗಿ ಮಂಗಳೂರು ಮಿನಿ ವಿಧಾನಸೌಧದ ಉಪನೋಂದಣಿ ಕಚೇರಿಗೆ ಹೋಗಿ ಬಯೋಮೆಟ್ರಿಕ್‌ ನೀಡುತ್ತಿರುವ ಹಲವು ಜನರ ಬ್ಯಾಂಕ್‌ ಖಾತೆಗೆ ಸೈಬರ್‌ ವಂಚಕರು ಕನ್ನ ಹಾಕಿದ್ದು ಲಕ್ಷಾಂತರ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ನಡೆದಿದ್ದು ಇದರಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಕಳವಳ ವ್ಯಕ್ತಪಡಿಸಿದರು. ಕಳೆದ ತಿಂಗಳಿನಿಂದ ಸಾರ್ವಜನಿಕರು ಜಾಗ ಮಾರಾಟ ಮತ್ತು ಖರೀದಿಗಾಗಿ ಬಯೋಮೆಟ್ರಿಕ್‌ ನೀಡಿದ ಕೆಲವೇ ದಿನಗಳಲ್ಲಿ ಖಾತೆಯಿಂದ 10 ಸಾವಿರ ರೂ. ಡ್ರಾ ಆಗುತ್ತಿದೆ. ಸೈಬರ್‌ ವಂಚಕರು […]

ವಿಷಕಾರಿ ಹಣ್ಣಿನ ಜ್ಯೂಸ್ ತಯಾರಿಸಿ ಕುಡಿದ ಮಹಿಳೆ ಸಾವು

Tuesday, October 3rd, 2023
Leelavathi

ಸುಳ್ಯ: ವಿಷಕಾರಿ ಹಣ್ಣಿನ ಜ್ಯೂಸ್ ತಯಾರಿಸಿ ಕುಡಿದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟ ಘಟನೆ ಅಮರಪಡ್ಡೂರು ಗ್ರಾಮದ ಕುಳ್ಳಾಜಿ ಎಂಬಲ್ಲಿ ನಡೆದಿದೆ. ಲೀಲಾವತಿ (35) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಒಂದು ವಾರದ ಹಿಂದೆ ಕಾಡಿನಲ್ಲಿ ಸಿಗುವ ಮೈರೋಳ್ ಹಣ್ಣನ್ನು , ತಿನ್ನಬಹುದಾದ ಹಣ್ಣು ಎಂದು ಭಾವಿಸಿ ಮನೆಗೆ ತಂದು, ಅದರ ರಸ ತೆಗೆದು ಶರ್ಬತ್ ಮಾಡಿ ಲೀಲಾವತಿ ಹಾಗೂ ಅವರ ತಂದೆ ಸೇವನೆ ಮಾಡಿದ್ದರು. ಇದರ ಪರಿಣಾಮವಾಗಿ ತಂದೆ ಮಗಳಿಬ್ಬರೂ ಅಸ್ವಸ್ಥರಾಗಿದ್ದರು. ಅವರಲ್ಲಿ ಲೀಲಾವತಿಯವರಿಗೆ ವಾಂತಿ, ಭೇದಿ ಆರ೦ಭವಾಗಿ […]

ಡಿಕೆ ಶಿವಕುಮಾರ್ ಜನರ ದಾರಿ ತಪ್ಪಿಸುತ್ತಿದ್ದಾರೆ : ಬಸವರಾಜ ಬೊಮ್ಮಾಯಿ

Monday, October 2nd, 2023
ಡಿಕೆ ಶಿವಕುಮಾರ್ ಜನರ ದಾರಿ ತಪ್ಪಿಸುತ್ತಿದ್ದಾರೆ : ಬಸವರಾಜ ಬೊಮ್ಮಾಯಿ

ಬೆಂಗಳೂರು: ಕಾವೆರಿ ನದಿಗೆ ಬರುತ್ತಿರುವ ಒಳ ಹರಿವಿನ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, . ಡಿ ಕೆ ಶಿವಕುಮಾರ್ ಅವರು ಅತಿ ಹೆಚ್ಚು ನೀರು ಬರುತ್ತಿದೆ ಅಂತ ಹೇಳಿದ್ದಾರೆ. ಆದರೆ, ಅಧಿಕಾರಿಗಳಿಂದ ಮಾಹಿತಿ ಪಡೆದಾಗ ಸುಮಾರು 2000 ಕ್ಯೂಸೆಕ್ಸ್ ನೀರು ಬರುತ್ತಿದೆ ಅಂತ ಹೇಳಿದ್ದಾರೆ. ಡಿಕೆಶಿವಕುಮಾರ್ ಅವರು ಯಾಕೆ ಜನರ ದಾರಿ ತಪ್ಪಿಸುತ್ತಿದ್ದಾರೆ. ಯಾಕೆ ಇಷ್ಟೊಂದು ಹಗುರವಾಗಿ ಮಾತನಾಡುತ್ತಿದ್ದಾರೆ […]

ಕೊಲೆ ಆರೋಪಿಯನ್ನು ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಪೊದೆಗೆ ಎಸೆದರು

Monday, October 2nd, 2023
ಕೊಲೆ ಆರೋಪಿಯನ್ನು ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಪೊದೆಗೆ ಎಸೆದರು

ಕಾಸರಗೋಡು : ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಪ್ರಕರಣದ ಆರೋಪಿಯೋರ್ವನ ಕೊಲೆಗೈದು ಮೃತ ದೇಹವನ್ನು ಪೊದೆಗೆ ಎಸೆದ ಘಟನೆ ಕುಂಬಳೆಯಲ್ಲಿ ನಡೆದಿದೆ. ಕುಂಬಳೆ ಶಾಂತಿ ಪಳ್ಳದ ಅಬ್ದುಲ್ ರಶೀದ್ (38) ಮೃತಪಟ್ಟ ವ್ಯಕ್ತಿ ಎನ್ನಲಾಗಿದೆ. ಕುಂಬಳೆ ಸಮೀಪದ ಪೊದೆಯೊಂದರಲ್ಲಿ ಇಂದು ಬೆಳಿಗ್ಗೆ ಅಬ್ದುಲ್ ರಶೀದ್ ಮೃತ ದೇಹ ಪತ್ತೆಯಾಗಿದೆ. ಈತ ಮಧೂರು ಪಟ್ಲದ ಶಾನ್ ವಾಜ್ ( 24) ಕೊಲೆ ಪ್ರಕರಣದ ಆರೋಪಿ. ಸೋಮವಾರ ಬೆಳಿಗ್ಗೆ ಮೈದಾನಕ್ಕೆ ಆಟವಾಡಲು ಬಂದಿದ್ದ ಮಕ್ಕಳು ಮೈದಾನದಲ್ಲಿ ರಕ್ತದ ಕಲೆಗಳನ್ನು […]

ಸೆಕ್ಯುಲರ್ ಮುಖವಾಡದ ಕಾಂಗ್ರೆಸ್ ಸರ್ಕಾರ ಶಿವಮೊಗ್ಗದ ಕೋಮುದಳ್ಳುರಿಗೆ ಕಾರಣ : ವೇದವ್ಯಾಸ್ ಕಾಮತ್

Monday, October 2nd, 2023
Vedavyasa-Kamath

ಮಂಗಳೂರು : ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಜಿಹಾದಿ ಮನಸ್ಥಿತಿಯ ಕಿಡಿಗೇಡಿಗಳು ಪೊಲೀಸರೂ ಸೇರಿದಂತೆ ಹಲವು ಮನೆಗಳ ಮೇಲೆ ಕಲ್ಲು ತೂರಿರುವ ಘಟನೆ ನಡೆದಿದ್ದು ಹಿಂದೂಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಇದೇ ಶಿವಮೊಗ್ಗದಲ್ಲಿ ಕಳೆದ ವಾರ ಭಾರೀ ಸಂಖ್ಯೆಯೊಂದಿಗೆ ಯಾವ ಗಲಭೆಯೂ ಇಲ್ಲದೇ ಗಣೇಶ ವಿಸರ್ಜನೆ ಆಯಿತು.ಆದರೆ ಈದ್ ಮೆರವಣಿಗೆಯಲ್ಲಿ ಕೋಮುದಳ್ಳುರಿ ಹೊತ್ತಿಸಲಾಗಿದೆ. ಇದಕ್ಕೆಲ್ಲ ಕಾರಣ ಜಿಹಾದಿ ಮಾನಸಿಕತೆಯ ಕಿಡಿಗೇಡಿಗಳು ಹಾಗೂ ಸೆಕ್ಯುಲರ್ ಮುಖವಾಡದ ಕಾಂಗ್ರೆಸ್ ಸರ್ಕಾರ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು […]

ರಾಮರಾಜ್ಯದ ಕನಸು ಕಂಡಿದ್ದ ಮಹಾತ್ಮ ಗಾಂಧಿ ಸ್ವದೇಶಿ ಪರಿಕಲ್ಪನೆಗೆ ಒತ್ತು ನೀಡಿದ್ದರು : ಸಂಸದ ನಳಿನ್ ಕುಮಾರ್ ಕಟೀಲ್

Monday, October 2nd, 2023
Gandhi-jayanti

ಮಂಗಳೂರು : ಜಿಲ್ಲಾಡಳಿತ ಹಾಗೂ ಭಾರತ್ ಸೇವಾದಳದ ಸಂಯುಕ್ತಾಶ್ರಯದಲ್ಲಿ ಮಂಗಳೂರಿನ ಪುರಭವನದ ಎದುರಿನ ರಾಜಾಜಿ ಪಾರ್ಕ್ ನಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಾತ್ಮ ಗಾಂಧಿ ಪ್ರತಿಮೆಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಮಾಲಾರ್ಪಣೆ ಮಾಡಿದರು ಅಹಿಂಸಾ ಚಳವಳಿಯ ಮೂಲಕ ದೇಶದ ಜನರನ್ನು ಒಗ್ಗೂಡಿಸಿ ಗುಲಾಮಗಿರಿಯಿಂದ ಹೊರತಂದ ಮಹಾತ್ಮ ಗಾಂಧಿ ಅವರ ಜೀವನ ಅಧ್ಯಯನದ ಪಾಠ ಶಾಲೆ ನಳಿನ್ ಕುಮಾರ್ ಕಟೀಲು ಅಭಿಪ್ರಾಯಿಸಿದ್ದಾರೆ. ರಾಮರಾಜ್ಯದ ಕನಸು ಕಂಡಿದ್ದ ಮಹಾತ್ಮ ಗಾಂಧಿ ದುಶ್ಚಟಗಳಿಂದ ದೇಶವನ್ನು […]

ಹಿಂದೆಯೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು, ಆಗ ಮುಸ್ಲಿಮರಿಗೆ ಯಾವುದಾದರೂ ಸಮಸ್ಯೆಗಳು ಆಗಿತ್ತಾ?’ : ಬಿ.ಎಂ.ಫಾರೂಕ್

Sunday, October 1st, 2023
BM-Farooq

ಬೆಂಗಳೂರು : ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಜೊತೆ 20 ತಿಂಗಳು ಉತ್ತಮ ಸರಕಾರ ನೀಡಿದೆ. ಆಗ ರಾಜ್ಯದಲ್ಲಿರುವ ಮುಸ್ಲಿಮರಿಗೆ ಯಾವುದಾದರೂ ಸಮಸ್ಯೆಗಳು ಆಗಿತ್ತಾ?’ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಪ್ರಶ್ನಿಸಿದ್ದಾರೆ. ರಾಮನಗರ ಜಿಲ್ಲೆಯ ಬಿಡದಿ ಬಳಿಯಿರುವ ಕುಮಾರಸ್ವಾಮಿಯವರ ತೋಟದ ಮನೆಯಲ್ಲಿ ಆಯೋಜಿಸಿದ್ದ ಜೆಡಿಎಸ್ ನಾಯಕರ ಸಭೆಯಲ್ಲಿ ಭಾಗವಹಿಸಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ ‘ಜೆಡಿಎಸ್ ಪಕ್ಷವು ಈ ಹಿಂದೆಯೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು ಎಂದಿದ್ದಾರೆ. ಈಗ ಕಾಂಗ್ರೆಸ್ […]