ಹೊಟೇಲೊಂದರ ಉದ್ಯೋಗಿ ಲಿಫ್ಟ್‌ನಲ್ಲಿಯೇ ಕುಸಿದು ಬಿದ್ದು ಸಾವು

Tuesday, September 26th, 2023
lIFT

ಉಡುಪಿ : ಹೊಟೇಲೊಂದರ ಉದ್ಯೋಗಿ ಲಿಫ್ಟ್‌ನಲ್ಲಿಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ. ಮೃತರನ್ನು ಹೋಟೆಲಿನ ಬಾರ್ ಕ್ಯಾಪ್ಟನ್ ರಾಜ್(51) ಎಂದು ಗುರುತಿಸಲಾಗಿದೆ. ಇವರು ಲೆಡ್ಜರ್ ಬುಕ್ ತರಲು 8ನೇ ಮಹಡಿಗೆ ಲಿಫ್ಟ್‌ನಲ್ಲಿ ಹೋಗುತ್ತಿದ್ದ ವೇಳೆ ಲಿಫ್ಟ್ ಒಳಗಯೇ ಕುಸಿದು ಬಿದ್ದರೆನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಆದರೆ ಪರೀಕ್ಷಿಸಿದ ವೈದ್ಯರು ರಾಜ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

Sunday, September 24th, 2023
ಕಾಲೇಜು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು : ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಬನ್ನೂರು ಸಮೀಪದ ಸನ್ನಿಧಿ ಲೇಔಟ್ ನಲ್ಲಿ ನಡೆದಿದೆ. ಖಾಸಗಿ ಕಾಲೇಜಿನಲ್ಲಿ ತೃತೀಯ ಬಿಸಿಎ ಓದುತ್ತಿದ್ದ ಕೀರ್ತಿಕಾ (19) ಮೃತ ಯುವತಿ. ಕೀರ್ತಿಕಾ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ತಂದೆ, ತಾಯಿ, ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ರೈತರ ಬೆಳೆಗೆ ಬೆಲೆ ಮೊದಲೇ ನಿಗದಿಯಾಗುವ ಕಾನೂನು ಬರಬೇಕು: ಬಸವರಾಜ ಬೊಮ್ಮಾಯಿ

Sunday, September 24th, 2023
ರೈತರ ಬೆಳೆಗೆ ಬೆಲೆ ಮೊದಲೇ ನಿಗದಿಯಾಗುವ ಕಾನೂನು ಬರಬೇಕು: ಬಸವರಾಜ ಬೊಮ್ಮಾಯಿ

ಚಿತ್ರದುರ್ಗ: ರೈತರ ಬೆಳೆಗೆ ಬೆಲೆಯು ಮೊದಲೇ ನಿಗದಿಯಾಗುವ ಕಾನೂನು ಜಾರಿಯಾಗಬೇಕು. ರೈತನನ್ನು ಗಟ್ಟಿ ಮಾಡಿದರೆ ಕೃಷಿ ಗಟ್ಟಿಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು. ಸಿರಿಗೆರೆಯಲ್ಲಿ ಭಾನುವಾರ ಜರುಗಿದ ಲಿಂ.ಶಿವಕುಮಾರ ಸ್ವಾಮೀಜಿಯವರ 31ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳಿಗೆ ಮುಂದಿನ ಚುನಾವಣೆ ಮೇಲೆ ಕಣ್ಣಿದ್ದರೆ, ಪ್ರಸ್ತುತ ನಮ್ಮ ಪೂಜ್ಯರಿಗೆ ಮುಂದಿನ ಜನಾಂಗದ ಮೇಲೆ ಕಣ್ಣಿರುತ್ತದೆ. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ರೈತರ ನೀರಾವರಿ ಯೋಜನೆಗಳಿಗೆ ಒತ್ತು ನೀಡಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ […]

ಮಂಗಳೂರು ಕಲ್ಲಿದ್ದಲು ಲಾರಿ ಮುಷ್ಕರ : ಲಾರಿ ಮಾಲಕರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಸಚಿವ ದಿನೇಶ್ ಗುಂಡೂರಾವ್

Sunday, September 24th, 2023
ಮಂಗಳೂರು ಕಲ್ಲಿದ್ದಲು ಲಾರಿ ಮುಷ್ಕರ : ಲಾರಿ ಮಾಲಕರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ನವಮಂಗಳೂರು ಕೋಲ್ ಟರ್ಮಿನಲ್ (JSW) ದಿಂದ ದಿನಂಪ್ರತಿ ಸಾವಿರಾರು ‌ಮೆಟ್ರಿಕ್ ಟನ್ ಕಲ್ಲಿದ್ದಲು ಸಾಗಾಟ ಮಾಡಲಾಗುತ್ತಿದ್ದು ಲಾರಿ ಮಾಲಕರಿಗೆ ಸರಕಾರ ನಿಗದಿ ಪಡಿಸಿದ ಕನಿಷ್ಟ ಬಾಡಿಗೆ ದರವನ್ನು ನೀಡುತ್ತಿಲ್ಲ, ಇದರಿಂದಾಗಿ ಲಾರಿ ಮಾಲಕರು ಸಂಕಷ್ಟದಲ್ಲಿದ್ದು ಈ ಬಗ್ಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಲಾಯಿತು. ಬೆಂಗಳೂರು ಡಾಲರ್ಸ್ ಕಾಲನಿಯಲ್ಲಿರುವ ಸಚಿವರ ನಿವಾಸದಲ್ಲಿ ಭೇಟಿಯಾದ ಮಂಗಳೂರು ಲಾರಿ ಯೂನಿಯನ್ ಪದಾಧಿಕಾರಿಗಳು ಈ ಬಗ್ಗೆ ಸೆ.25 ಸೋಮವಾರದಿಂದ ಲಾರಿ ಮಾಲಕರು ಸ್ವಯಂಪ್ರೇರಿತರಾಗಿ […]

ರಾಜ್ಯದ ಅಭಿವೃದ್ಧಿಗೆ ಪಕ್ಷ ಭೇದ ಮರೆತು ಕಾರ್ಯ ಮಾಡುತ್ತಿದ್ದ ವ್ಯಕ್ತಿ ಅನಂತಕುಮಾರ್: ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್

Sunday, September 24th, 2023
Ananth-KUmar

ಬೆಂಗಳೂರು : ರಾಜ್ಯದ ಅಭಿವೃದ್ಧಿಗೆ ಪಕ್ಷ ಭೇದ ಮರೆತು ಕಾರ್ಯ ನಿರ್ವಹಿಸುತ್ತಿದ್ದ ನಾಯಕ ಅನಂತಕುಮಾರ್. ರಾತ್ರಿ ಹಗಲೆನ್ನದೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿದ್ದ ವ್ಯಕ್ತಿಯನ್ನು ರಾಜ್ಯ ಕಳೆದುಕೊಂಡಂತೆ ಆಗಿದೆ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು. ಇಂದು ನಗರದ ಧೊಂಡುಸಾ ಸಭಾಂಗಣದಲ್ಲಿ ಆಯೋಜಿಸಿದ್ದ ಅನಂತ ನಮನ 64 – ಅನಂತಕುಮಾರ್ ಅವರ 64 ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಹಸಿರು ಭಾನುವಾರ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಬಹಳ ಸಂತೋಷದಿಂದ ಭಾಗಿಯಾಗಿದ್ದನೆ. […]

ಸುಳ್ಯ: ಗಣೇಶ ಚತುರ್ಥಿ ಹೆಸರಿನಲ್ಲಿ ಮದ್ಯದ ಬಾಟಲಿಯ ಬಹುಮಾನದ ಲಕ್ಕಿಡಿಪ್, ಹಿಂದೂ ಸಂಘಟನೆಯ ಆಕ್ರೋಶ

Saturday, September 23rd, 2023
ಸುಳ್ಯ: ಗಣೇಶ ಚತುರ್ಥಿ ಹೆಸರಿನಲ್ಲಿ ಮದ್ಯದ ಬಾಟಲಿಯ ಬಹುಮಾನದ ಲಕ್ಕಿಡಿಪ್, ಹಿಂದೂ ಸಂಘಟನೆಯ ಆಕ್ರೋಶ

ಸುಳ್ಯ: ಹಳೆಗೇಟು ಗಣೇಶ ಚತುರ್ಥಿ ಹೆಸರಿನಲ್ಲಿ ಮದ್ಯದ ಬಾಟಲಿಯ ಲಕ್ಕಿ ಕೂಪನ್ ಆಯೋಜನೆ ಮಾಡಲಾಗಿದ್ದು, ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹಳೆಗೇಟು ಗಣೇಶ ಚತುರ್ಥಿ ಸಂದರ್ಭ ಗಣೇಶ ಹಬ್ಬದ ಹೆಸರಿನಲ್ಲಿ ಲಕ್ಕಿ ಕೂಪನ್ ಆಯೋಜನೆ ಮಾಡಲಾಗಿತ್ತು. ಈ ಲಕ್ಕಿ ಕೂಪನ್ ಗೆ ಸುಳ್ಯ ಪರಿಸರದಲ್ಲಿ ವಿರೋಧ ವ್ಯಕ್ತವಾಗಿತ್ತು. ಹಿಂದೂ ಧರ್ಮದ ಹಬ್ಬದಲ್ಲಿ ಇಂತಹ ಲಕ್ಕಿ ಕೂಪನ್ ಮಾಡಿದವನ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ವಿರೋಧ ವ್ಯಕ್ತವಾಗಿತ್ತು. ಇದೀಗ […]

ಕುಂಟಿಕಾನ ದ ಬಳಿ ಪಾರ್ಕ್ ಮಾಡಲಾಗಿದ್ದ ಟೆಂಪೋ ಟ್ರಾವೆಲರ್ ಕಳ್ಳತನ, ಮೂವರ ಬಂಧನ

Saturday, September 23rd, 2023
ಕುಂಟಿಕಾನ ದ ಬಳಿ ಪಾರ್ಕ್ ಮಾಡಲಾಗಿದ್ದ ಟೆಂಪೋ ಟ್ರಾವೆಲರ್ ಕಳ್ಳತನ, ಮೂವರ ಬಂಧನ

ಮಂಗಳೂರು: ಮಂಗಳೂರಿನ ಕುಂಟಿಕಾನ ಫ್ಲೈಓವರ್ ಬಳಿ ಪಾರ್ಕ್ ಮಾಡಿದ್ದ ಟೆಂಪೋ ಟ್ರಾವೆಲರ್ ವಾಹನವನ್ನು ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಬೆಳಗಾವಿಯಲ್ಲಿ ಪತ್ತೆ ಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೊರ ರಾಜ್ಯದ ನಿವಾಸಿಗಳಾದ ಅರೀಫ್ ಉಲ್ಲಾಖಾನ್ ಯಾನೆ ಅರೀಫ್, ಅಮಿತ್ ಬಾಹುಬಲಿ ಪಂಚೋಡಿ ಯಾನೆ ಬೇಬಿ ಮತ್ತು ಸುರೇಂದ್ರ ಕುಮಾರ್ ಬಂಧಿತ ಆರೋಪಿಗಳು. ಟೆಂಪೋ ಟ್ರಾವೆಲರ್ ಸೆ. 14 ರಂದು ರಾತ್ರಿ ಕಳವಾಗಿದ್ದು ಸುಮಾರಾಕ್ 15 ಲಕ್ಷ ರೂ. ಮೌಲ್ಯದ್ದಾಗಿತ್ತು ಈ ಬಗ್ಗೆ ಉರ್ವ ಠಾಣೆಯಲ್ಲಿ […]

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳ

Saturday, September 23rd, 2023
MIA

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಕಾರ್ಯಾಚರಿಸುತ್ತಿರುವ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳ ಆಗಮನದ ದತ್ತಾಂಶವನ್ನು ಪರಿಶೀಲಿಸಿದಾಗ, ವಿಮಾನಯಾನ ಸಂಸ್ಥೆಗಳು – ಇಂಡಿಗೊ ಮತ್ತು ಏರ್ ಇಂಡಿಯಾ ಅವರು ನೇರವಾಗಿ ಸಂಪರ್ಕಿಸುವ ದೇಶೀಯ ತಾಣಗಳಲ್ಲಿ 87.5% ಪ್ರಯಾಣಿಕರ ಹೊರೆಯನ್ನು ದಾಖಲಿಸಿವೆ ಎಂದು ಸೂಚಿಸುತ್ತದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಇಂಡಿಗೊ ಅಂತರರಾಷ್ಟ್ರೀಯ ಮಾರ್ಗಗಳಲ್ಲಿ 81.7% ಲೋಡ್ ಅನ್ನು ಹೊಂದಿವೆ. ಬೆಂಗಳೂರು, ಚೆನ್ನೈ, […]

ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ

Friday, September 22nd, 2023
drug-peddler

ಮಂಗಳೂರು : “ಡ್ರಗ್ಸ್ ಫ್ರಿ ಮಂಗಳೂರು” ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಮುಂದುವರಿಸಿದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರದಾದ್ಯಂತ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ MDMA ನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ದಸ್ತಗಿರಿ ಮಾಡಿದ್ದಾರೆ. ಮಂಗಳೂರು ನಗರದ ಕೆ ಎಸ್ ರಾವ್ ರಸ್ತೆ ಪರಿಸರದಲ್ಲಿ ವ್ಯಕ್ತಿಗಳಿಬ್ಬರು ಅಕ್ರಮವಾಗಿ MDMA ಮಾದಕ ವಸ್ತುವನ್ನು ವಶದಲ್ಲಿರಿಸಿಕೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ MDMA ಎಂಬ […]

ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ವಿದ್ಯಾರ್ಥಿಗಳಲ್ಲಿ ಜಾಗೃತಿ: ಡಾ. ಆನಂದ್

Friday, September 22nd, 2023
dr-Anand

ಮಂಗಳೂರು : ಪ್ರತಿಯೊಂದು ಶಾಲೆಗಳಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಜಾರಿಗೊಂಡರೆ ವಿದ್ಯಾರ್ಥಿಗಳು ಜಾಗೃತರಾಗಲು ಅನುಕೂಲವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ನ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಅವರು ಅಭಿಪ್ರಾಯಪಟ್ಟರು. ಅವರು ಸೆ.22ರ ಶುಕ್ರವಾರ ನಗರದ ಲಾಲ್‍ಬಾಗ್ ನ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಹಮ್ಮಿಕೊಂಡ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್‍ನಲ್ಲಿ ಹಮ್ಮಿಕೊಳ್ಳುವ ಚಟುವಟಿಕೆಗಳು ಮಕ್ಕಳಲ್ಲಿ ಸಾಮಾಜಿಕ ಕಳಕಳಿ, ಶಿಸ್ತು, ಸಂಯಮ, ಕರ್ತವ್ಯ ಮತ್ತು ಜವಾಬ್ದಾರಿಯನ್ನು ತಿಳಿಸಿಕೊಡುತ್ತವೆ, […]