ನಾರಂಪಾಡಿಯಲ್ಲಿ ಸ್ಪೋಟ: ನಾಯಿ ಸಾವು

Friday, July 8th, 2016
dog death

ಬದಿಯಡ್ಕ: ನಾರಂಪಾಡಿ ಬಳಿಯ ನೆಲ್ಲಿಯಡ್ಕದಲ್ಲಿ ವ್ಯಕ್ತಿಯೊಬ್ಬರ ಹಿತ್ತಿಲಿನಲ್ಲಿ ಆಕಸ್ಮಿಕ ಸ್ಪೋಟ ಸಂಭವಿಸಿ ನಾಯಿಯೊಂದು ಸತ್ತು ಬಿದ್ದಿದೆ. ಸ್ಪೋಟದ ಸದ್ದು ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ ನೋಡಿದಾಗ ನಾಯಿಯ ತಲೆ ಛಿದ್ರವಾಗಿತ್ತು. ಮಾಹಿತಿ ಲಭಿಸಿ ಸ್ಥಳಕ್ಕೆ ಬಂದ ಬದಿಯಡ್ಕ ಪೊಲೀಸರು ತನಿಖೆ ನಡೆಸಿದರು. ಸಿಡಿದಿರುವುದು ಸ್ಪೋಟಕ ವಸ್ತು ಎಂಬುದು ಖಚಿತಗೊಂಡಿದೆ. ಕಾಡು ಹಂದಿಗೆ ಇರಿಸಿದ ಸ್ಪೋಟಕ ಸಿಡಿದಿದ್ದು ಇದರಿಂದ ನಾಯಿ ಸತ್ತಿದೆ ಎಂದು ಅಂದಾಜಿಸಲಾಗಿದೆ. ಆದರೆ ಸ್ಪೋಟಕ ಇರಿಸಿದವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆನೆಕಲ್ಲು ಶಾಲೆಯಲ್ಲಿ ತುಳು ಸೌರಭ

Friday, July 8th, 2016
Thulu sourabha

ಮಂಜೇಶ್ವರ: ಗಡಿನಾಡು ಕಾಸರಗೋಡು ರಾಷ್ಟ್ರದಲ್ಲೇ ಬಹು ಭಾಷಾ ಸಂಗಮ ಭೂಮಿಯಾಗಿ ಗುರುತಿಸಿಕೊಂಡಿದ್ದು ವಿಶೇಷತೆಯಾಗಿದೆ. ಇಲ್ಲಿಯ ಬಹುಸಂಖ್ಯೆಯ ಜನರ ಮನೆಮಾತಾದ ತುಳು ಸಹಿತ ಇತರ ಭಾಷೆಗಳು ವಿದ್ಯಾರ್ಥಿಗಳಲ್ಲಿ ಶಾಲಾ ಕಲಿಕೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀಳಬಾರದೆಂಬ ಉದ್ದೇಶದಿಂದ ಆಯೋಜಿಸಲಾಗುವ ಕಾರ್ಯಕ್ರಮ ಉತ್ತಮ ಬೆಳವಣಿಗೆ ಎಂದು ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ವ ಶಿಕ್ಷಾ ಅಭಿಯಾನ್ ಕಾಸರಗೋಡು, ಬಿಆರ್‌ಸಿ ವತಿಯಿಂದ ನಡೆಸಲ್ಪಡುವ ‘ತುಳು ಸೌರಭ ಆನೆಕಲ್ಲು ಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ತುಳು ಭಾಷಾ […]

ಮಂಗಳೂರು ಐಜಿ ಕಚೇರಿಯ ಡಿವೈಎಸ್ಪಿ ಆತ್ಮಹತ್ಯೆ

Friday, July 8th, 2016
Ganapathi

ಮಂಗಳೂರು : ಮಂಗಳೂರಿನ ಐಜಿ ಕಚೇರಿಯಲ್ಲಿ ಡಿವೈ ಎಸ್ ಪಿಯಾಗಿ ಕೆಲಸ ಮಾಡುತ್ತಿದ್ದ ಕೊಡಗು ಕುಶಾಲನಗರದ ಎಂ ಕೆ ಗಣಪತಿ ಗುರುವಾರ ಸಂಜೆ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳಲು ಹಿರಿಯ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಹೇಳಲಾಗಿದೆ. ಗಣಪತಿ ಅವರನ್ನು ಇತ್ತೀಚೆಗೆ ಬೆಂಗಳೂರಿನಿಂದ ಮಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಮಾಧ್ಯಮಗಳಿಗೆ ಸಿಕ್ಕಿರುವ ವಿಡಿಯೋ ಒಂದರಲ್ಲಿ ಗಣಪತಿ ಹಿರಿಯ ಅಧಿಕಾರಿಗಳ ಮೇಲೆ ನೇರವಾಗಿ ಆರೋಪ ಮಾಡಿದ್ದು ದಾಖಲಾಗಿದೆ. ಸಬ್ ಇನ್ಸ್ ಪೆಕ್ಟರ್ […]

ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಿಗೆ ಪ್ರತಿ ತಿಂಗಳು ಎರಡು ಬಾರಿ ಭೇಟಿ ನೀಡಲಾಗುವುದು: ಕಟೀಲ್‌

Thursday, July 7th, 2016
Nalin

ಪುತ್ತೂರು: ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಿಗೆ ಪ್ರತಿ ತಿಂಗಳು ಎರಡು ಬಾರಿ ಭೇಟಿ ನೀಡಲಾಗುವುದು. ಈ ಹಿಂದೆ ಯೋಜನೆ ರೂಪಿಸಲಾಯಿತಾದರೂ ಕಾರ್ಯಕ್ರಮದ ಒತ್ತಡದಿಂದ ಭೇಟಿ ನೀಡಲು ಆಗಿರಲಿಲ್ಲ. ಮುಂದೆ ಕ್ಷೇತ್ರ ಪ್ರವಾಸ ಹಮ್ಮಿಕೊಂಡು ಜನರ ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆದರ್ಶ ರೈಲು ನಿಲ್ದಾಣದ ಜೊತೆಗೆ ಜೆಪ್ಪು ಕುಡಿಪ್ಪಾಡಿ, ಸುಬ್ರಹ್ಮಣ್ಯ, ಎಡಮಂಗಲದಲ್ಲಿ ರಚನೆಯಾದ ಸೇತುವೆಗಳ ಉದ್ಘಾಟನೆ ನಡೆಯಲಿದೆ. […]

ರಾಜ್ಯಾದ್ಯಂತ ಜು.8ರಿಂದ ಕೆಜಿ ತೊಗರಿ ಬೇಳೆ 130 ರೂ.ಗೆ ಲಭ್ಯವಾಗಲಿದೆ: ಖಾದರ್

Thursday, July 7th, 2016
Khadar

ಮಂಗಳೂರು: ರಾಜ್ಯಾದ್ಯಂತ ಜು.8ರಿಂದ ಕೆಜಿ ತೊಗರಿ ಬೇಳೆ 130 ರೂ.ಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ತೊಗರಿ ದಾಸ್ತಾನಿಗೂ ಮಿತಿ ನಿಗದಿ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಬಗೆಯ ತೊಗರಿಗೂ ಮುಂದಿನ ಮೂರು ತಿಂಗಳವರೆಗೆ ಇದೇ ದರ ಅನ್ವಯವಾಗಲಿದೆ. ವ್ಯಾಪಾರಿಗಳಿಗೂ ಸ್ವಲ್ಪ ಲಾಭ ದೊರೆಯಲಿದೆ. ಬೆಂಗಳೂರಿನ ಯಶವಂತಪುರ ಎಪಿಎಂಸಿ ಯಾರ್ಡ್‌ನಲ್ಲಿ ಜು. 8ರಂದು ಸಭೆ ನಡೆಸಿ ನಂತರ ಈ ಕುರಿತು ಆದೇಶ ಹೊರಡಿಸಲಾಗುವುದು ಎಂದರು. […]

ಕಡಲ್ಕೊರೆತದಿಂದ ಅಪಾಯದ ಅಂಚಿನಲ್ಲಿರುವ ಮನೆಗಳು

Thursday, July 7th, 2016
sea erosion

ಉಳ್ಳಾಲ: ಉಳ್ಳಾಲ ಹಾಗೂ ಉಚ್ಚಿಲದಲ್ಲಿ ಕಡಲ್ಕೊರೆತ ಮುಂದುವರಿದಿದ್ದು, ಉಚ್ಚಿಲದಲ್ಲಿ ಮೂರು ಮನೆ ಸಹಿತ ಒಟ್ಟು 16 ಮನೆಗಳಿಗೆ ಹಾನಿಯಾಗಿದ್ದು, 49 ಮನೆಗಳು ಅಪಾಯದ ಅಂಚಿ ನಲ್ಲಿದ್ದರೆ, ಉಳ್ಳಾಲದ ಕಿಲೇರಿಯಾ ನಗರ ದಲ್ಲಿ 6 ಮನೆಗಳು, ಮುಕ್ಕಚ್ಚೇರಿ 4 ಮನೆಗಳು, ಮೊಗವೀರಪಟ್ಣದಲ್ಲಿ 3 ಮನೆಗಳಿಗೆ ಹಾನಿಯಾಗಿದೆ. ಒಟ್ಟು ಮೂರು ಮನೆಗಳನ್ನು ಸ್ಥಳಾಂತರಿಸ ಲಾಗಿದ್ದು, ಮುಸ್ಲಿಂ ಸಮುದಾಯವೇ ಹೆಚ್ಚಿರುವ ಪ್ರದೇಶದಲ್ಲಿ ಬುಧವಾರ ಸಂಭ್ರಮದಲ್ಲಿರಬೇಕಾದವರು ಕಡಲ್ಕೊ ರೆತದಿಂದಾಗಿ ಹಬ್ಬದ ಆಚರಣೆ ಕಳೆಗುಂದಿತ್ತು. ತಾತ್ಕಾಲಿಕ ತಡೆಗೋಡೆಯಾಗಿ ಕಲ್ಲು ಗಳನ್ನು ಹಾಕಿದ್ದರೂ ಕೆಲವೊಂದು ಕಡೆ […]

ರಿಕ್ಷಾ ಚಾಲಕ, ಪಡೀಲ್ ನಿವಾಸಿ ಮುಖೇಶ್ ಮೇಲೆ ಹಲ್ಲೆ

Thursday, July 7th, 2016
Mukhesh

ಮಂಗಳೂರು: ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಪಡೀಲ್ ಭಜರಂಗದಳದ ಸದಸ್ಯನೂ ಆಗಿರುವ ಯುವಕನೋರ್ವನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಘಟನೆ ನಿನ್ನೆ ಸಂಜೆ ನಗರದ ಫೈಸಲ್‍ನಗರದಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಪಡೀಲ್ ನಿವಾಸಿ ಮುಖೇಶ್ ಎಂದು ಗುರುತಿಸಲಾಗಿದೆ. ಮುಖೇಶ್ ತನ್ನ ರಿಕ್ಷಾದಲ್ಲಿ ಫೈಸಲ್‍ನಗರಕ್ಕೆ ಬಾಡಿಗೆಗೆ ತೆರಳಿದ್ದ. ಈ ವೇಳೆ ರಸ್ತೆಯಲ್ಲಿ ಶೇಖರಣೆಯಾಗಿದ್ದ ಕೆಸರು ನೀರು ರಸ್ತೆ ಬದಿ ನಿಂತಿದ್ದ ಯುವಕನೋರ್ವನ ಮೇಲೆ ಎರಚಿದೆ. ಇದನ್ನೇ ನೆಪವಾಗಿರಿಸಿದ ಸ್ಥಳೀಯ ಯುವಕರು ಮುಖೇಶ್‍ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳಕ್ಕೆ […]

ಸರ್ವೀಸ್ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸಾವು

Thursday, July 7th, 2016
Sarfaraj

ಮಂಗಳೂರು: ಸರ್ವೀಸ್ ಬಸ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ನಗರದ ಮೋತಿಮಹಲ್ ಹೋಟೆಲ್ ಬಳಿ ನಡೆದಿದೆ. ಗೋವಾ ಮೂಲದ ಸರ್ಫರಾಜ್(34) ಮೃತ ವ್ಯಕ್ತಿ. ಬಿ.ಸಿ.ರೋಡ್‌ನಿಂದ ಮಂಗಳೂರಿಗೆ ವೇಗವಾಗಿ ಬರುತ್ತಿದ್ದ ಎನ್ಎಸ್‌ ಬಸ್ ಮೋತಿ ಮಹಲ್ ಬಳಿ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸರ್ಫರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ , ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಮಂಗಳೂರಿನ ಎಕ್ಕೂರು ಗ್ರಾಮದ ಯುವತಿಯನ್ನು ಮದುವೆಯಾಗಿದ್ದ […]

ತಾಲೂಕಿನಲ್ಲಿ ಕೃಷಿ ಆರ್ಥಿಕ ವಲಯ ನಿರ್ಮಿಸಲು ಪ್ರಸ್ತಾವನೆ

Wednesday, July 6th, 2016
Nalin kumar

ಸುಳ್ಯ: ತಾಲೂಕಿನಲ್ಲಿ ಕೃಷಿ ಆರ್ಥಿಕ ವಲಯ ನಿರ್ಮಿಸಲು ಉದ್ದೇಶಿಸಿದ್ದು, ಈ ಕುರಿತ ಪ್ರಸ್ತಾವವನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ವೇಕಾರ್ಯ ಆರಂಭಗೊಳ್ಳಲಿದೆ ಎಂದು ಸಂಸದ ನಳಿನ್‌ಕುಮಾರ್‌ ಕಟೀಲು ಹೇಳಿದರು. ಅವರು ಮಂಗಳವಾರ ಸುಳ್ಯದಲ್ಲಿ ಸಾರ್ವಜನಿಕ ಆಹವಾಲು ಸ್ವೀಕರಿಸಿ ಮಾತನಾಡಿ, ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ವಾಣಿಜ್ಯ ಬೆಳೆಗಳ ಕೃಷಿ ಜಾಸ್ತಿಯಾಗಿದೆ. ಈ ದೃಷ್ಟಿಯಿಂದ ಕೃಷಿಕ, ಕಾರ್ಮಿಕ ಆರ್ಥಿಕವಾಗಿ ಮುಂದೆ ಬರಲು ಯೋಜನೆ ರೂಪಿಸಿ ಕೃಷಿ ಆರ್ಥಿಕ ವಲಯ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು. ವಾಣಿಜ್ಯ ಕೃಷಿಗಳು ಉಳಿಯುವ ದೃಷ್ಟಿಯಿಂದ, […]

ಸಹಕಾರ ಭಾರತಿ ಕಾಸರಗೋಡು ತಾಲೂಕು ಸಮಾವೇಶ

Wednesday, July 6th, 2016
Sahakara-bharathi

ಬದಿಯಡ್ಕ: ಸಹಕಾರ ಭಾರತಿ ಕಾಸರಗೋಡು ತಾಲೂಕು ಸಮಾವೇಶವು ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಜಿಲ್ಲಾಧ್ಯಕ್ಷ ಗಣಪತಿ ಕೋಟೆಕಣಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಾವೇಶದಲ್ಲಿ ಸಹಕಾರ ಭಾರತಿ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಕರುಣಾಕರನ್ ನಂಬ್ಯಾರ್, ರಾಜ್ಯ ನೇತಾರ ಐತ್ತಪ್ಪ ಮವ್ವಾರ್, ಮಹಿಳಾ ವಿಭಾಗದ ರಾಜ್ಯ ಸಹಸಂಚಾಲಕಿ ಗೀತಾ ಚಿದಂಬರಂ, ಸಹಕಾರ ಭಾರತಿ ಮಂಜೇಶ್ವರ ತಾಲೂಕು ಅಧ್ಯಕ್ಷ ಕೃಷ್ಣ ಕುಮಾರ್ ,ಪೆರ್ಲ ತಾಲೂಕು ಅಧ್ಯಕ್ಷ ವಿಘ್ನೇಶ್ವರ ಭಟ್ ಮುಂತಾದವರು ಉಪಸ್ಥಿತರಿದ್ದರು. ಸಹಕಾರಿ ಕ್ಷೇತ್ರವನ್ನು ನಾಶಪಡಿಸುವಂತಹ ಯಾವುದೇ ಕ್ರಮವನ್ನು ಎದುರಿಸಲು ಸಹಕಾರಿಗಳು ಸದಾ […]