ಚೈನೀಸ್ ಕುಕ್ ಜೊತೆ ಪರಾರಿಯಾದ ಎರಡು ಮಕ್ಕಳ ತಾಯಿ

Thursday, January 27th, 2022
lovers

ಸುಳ್ಯ: ಇಬ್ಬರು ಮಕ್ಕಳ ತಾಯಿ ಚೈನೀಸ್ ಕುಕ್ ಜೊತೆ ಪರಾರಿಯಾದ ಘಟನೆ ಇಲ್ಲಿನ ಸುಳ್ಯದ ಪೈಚಾರು ಎಂಬಲ್ಲಿ ನಡೆದಿದೆ. ಅಸ್ಸಾಂ ಮೂಲದ ಕೋಗನ್ ತಾತಿ ಎಂಬಾತ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಕಳೆದ ನಾಲ್ಕು ತಿಂಗಳಿಂದ ಸುಳ್ಯದ ಪೈಚಾರು ಸಂಸ್ಥೆಯೊಂದರಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸವನ್ನು ಮಾಡುತ್ತಿದ್ದನು. ಆದರೆ ಜ. 25 ರಂದು ಆತನ ಪತ್ನಿ ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನನ್ವಯ ತನಿಖೆ ಆರಂಭಿಸಿದ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ […]

ಮರಕಡ ಶ್ರೀ ಗುರು ಪರಾಶಕ್ತಿ ಕ್ಷೇತ್ರದ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ ನಿಧನ

Thursday, January 27th, 2022
Narendranatha-Swamiji

ಮಂಗಳೂರು : ಮರಕಡ ಶ್ರೀ ಗುರು ಪರಾಶಕ್ತಿ ಕ್ಷೇತ್ರದ ಸ್ಥಾಪಕ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ(76) ಬುಧವಾರ ರಾತ್ರಿ 10:40ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ನರೇಂದ್ರ ನಾಥ ಸ್ವಾಮೀಜಿ ಅವರು ಮರಕಡದಲ್ಲಿ ಪರಾಶಕ್ತಿ ಕ್ಷೇತ್ರದ ಸ್ಥಾಪಕರು ಆಗಿದ್ದಾರೆ. ಮರಕಡ ಮಠ ಸ್ಥಾಪಿಸಿ ಅದರ ಅಭಿವೃದ್ಧಿ ಮಾಡಿದ ನರೇಂದ್ರನಾಥ ಸ್ವಾಮೀಜಿ ಅವರಿಗೆ ಅಪಾರ ಸಂಖ್ಯೆಯ ಭಕ್ತರಿದ್ದಾರೆ. ಇವರು ಮೂಲತಃ ಕೋಟೆಕಾರ್ ಸಮೀಪದ ಮಡ್ಯಾರ್ ನಿವಾಸಿಯಾಗಿದ್ದರು. ಅವರು ಮಡ್ಯಾರ್ ನಲ್ಲಿ ಪರಾಶಕ್ತಿ ಕ್ಷೇತ್ರವನ್ನೂ ಸ್ಥಾಪಿಸಿದ್ದರು. ಕಳೆದ 28 ವರ್ಷಗಳಿಂದ ಮರಕಡದಲ್ಲಿ ತನ್ನ ಕುಟುಂಬಿಕರಾದ ಶ್ರೀ ರವೀಂದ್ರ ಕೋಟೆಕಾರ್ […]

ಪರಂಪರಾನುಗತ ಶಿಲ್ಪವಿದ್ಯೆಯನ್ನು ಉಳಿಸಿ ಬೆಳೆಸುವಲ್ಲಿ ಸಮುದಾಯ ನಿರಂತರ ಪ್ರಯತ್ನಿಸಬೇಕಿದೆ : ಡಾ. ಡಿ. ವೀರೇಂದ್ರ ಹೆಗ್ಗಡೆ

Thursday, January 27th, 2022
Veerendra Hegde

ಮಂಗಳೂರು  : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಬುಧವಾರ ಬೆಳಿಗ್ಗೆ ಶತಚಂಡಿಕಾ ಯಾಗಪೂರ್ಣಾಹುತಿ ನಡೆಯಿತು.  ಶ್ರದ್ದೆ ನಿಸ್ವಾರ್ಥ ಸೇವೆ ಎಲ್ಲರೂ ಮಾಡಿದುದರಿಂದ ಬ್ರಹ್ಮ ಕಲಶ ವ್ಯವಸ್ಥಿತ ವಾಗಿ ಮೂಡಿ ಬಂದಿದೆ. ಕ್ಷೇತ್ರದಲ್ಲಿ ಇಂದು ನಡೆದ ಚಂಡಿಕಾ ಯಾಗದ ಫಲದಿಂದ ಕೊರೋನ ಲೋಕವನ್ನೇ ಬಿಟ್ಟು ತೊಲಗಲಿ. ಕ್ಷೇತ್ರದ ಬ್ರಹ್ಮ ಕಲಶ 13 ದಿನಗಳ ಕಾಲ ಬೆಳಗ್ಗೆ ಉದಯರಾಗ, ವಿವಿಧ ಧಾರ್ಮಿಕ ಕಾರ್ಯಕ್ರಮ, ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲಾ ಮುಗಿದ ನಂತರ ಮಹಿಳೆಯರು ಸ್ವಚ್ಛತೆ ಮಾಡಿಕೊಂಡು ಬಂದಿರುವುದು ನಿಜಕ್ಕೂ ಸುತ್ಯಾರ್ಹ ಎಂದು […]

ಆರ್ಯಭಟ ಪ್ರಶಸ್ತಿ ವಿಜೇತ ಸಂಗೀತ ಕಲಾವಿದೆ ಶೀಲಾ ದಿವಾಕರ್ ನಿಧನ

Thursday, January 27th, 2022
Sheela Diwakar

ಮಂಗಳೂರು :  ಆರ್ಯಭಟ ಪ್ರಶಸ್ತಿ ಪುರಸ್ಕೃತೆ, 28 ವರ್ಷಗಳಿಂದ ಸಂಗೀತ ರಂಗದ ನೂರಾರು ಮೇರು ಪ್ರತಿಭೆಗಳಿಗೆ ಗುರುವಾಗಿರುವ ಶೀಲಾ ದಿವಾಕರ್ (53) ಬುಧವಾರ ನಿಧನರಾಗಿದ್ದಾರೆ. ‘ಕರಾವಳಿ ಕೋಗಿಲೆ’ ಖ್ಯಾತಿಯ ಸಂಗೀತ ಗುರುಗಳಾದ ವಿದುಷಿ ಶ್ರೀಮತಿ ಶೀಲಾ ದಿವಾಕರ್ ಅನಾರೋಗ್ಯದ ಹಿನ್ನೆಲೆ ಕೆಲ ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ  ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವಿದ್ವತ್ ಸನ್ಮಾನ ಸ್ವೀಕರಿಸಿದ ಕರಾವಳಿ ಕೋಗಿಲೆ, 3000ಕ್ಕೂ ಅಧಿಕ ಪ್ರತಿಷ್ಠಿತ ವೇದಿಕೆಗಳಲ್ಲಿ ಜನಮೆಚ್ಚುಗೆಯ ಕಾರ್ಯಕ್ರಮ ನೀಡಿದ ಖ್ಯಾತ ಗಾಯಕಿಯಾಗಿದ್ದರು. ಶೀಲಾರವರು ಮಂಗಳೂರು, […]

ವಿವಿ ಕಾಲೇಜು: ರಾಷ್ಟ್ರೀಯ ಮತದಾರರ ದಿನಾಚರಣೆ

Wednesday, January 26th, 2022
Voters day

ಮಂಗಳೂರು: ಭಾರತೀಯ ಚುನಾವಣಾ ಆಯೋಗದ ಆಶಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮಂಗಳವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 12 ನೇ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಯಿತು. ಚುನಾವಣೆಯನ್ನು ‘ಎಲ್ಲರೂ ಒಳಗೊಳ್ಳುವ, ಸುಗಮ ಮತ್ತು ಪ್ರತಿಯೊಬ್ಬರೂ ಭಾಗವಹಿಸುವ ಪ್ರಕ್ರಿಯೆಯಾಗಿ ಮಾಡುವʼ ಆಶಯದೊಂದಿಗೆ ನಡೆದ ಈ ಬಾರಿಯ ಆಚರಣೆಗೆ ಪ್ರಾಂಶುಪಾಲೆ ಡಾ. ಅನಸೂಯ ರೈ ಚಾಲನೆ ನೀಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳು ತಮ್ಮ ಬಲಗೈ […]

‘ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ನಡಿಗೆ’ ವಾಹನ ಜಾಥಾಕ್ಕೆ ಚಾಲನೆ

Wednesday, January 26th, 2022
jatha

ಮಂಗಳೂರು:  ಅವಿಭಜಿತ ದ.ಕ. ಜಿಲ್ಲೆಯ ಬಿಲ್ಲವ ಸಂಘಗಳು, ಸಂಘಟನೆಗಳು ಹಾಗೂ ಬಿಲ್ಲವ ಸಮಾಜದ ವತಿಯಿಂದ ‘ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ’ ಬುಧವಾರ ಬೆಳಗ್ಗೆ ಪ್ರಾರಂಭವಾಗಿದೆ. ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಗೆ ಕ್ಷೇತ್ರದ ಅರ್ಚಕರು ಪೂಜೆ ಸಲ್ಲಿಸುವ ಮೂಲಕ ಸ್ವಾಭಿಮಾನ ನಡಿಗೆಗೆ ಚಾಲನೆ ನೀಡಲಾಯಿತು. ಕಂಕನಾಡಿ ಗರೋಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಉಪಸ್ಥಿತಿಯಲ್ಲಿ ವಾಹನ ಜಾಥಾಕ್ಕೆ ಚಾಲನೆ ನೀಡಲಾಯಿತು. ‘ಇದು ರಾಜಕೀಯ ಪ್ರೇರಿತ ನಡಿಗೆ ಅಲ್ಲ, ಇದು ಸ್ವಾಭಿಮಾನದ ನಡಿಗೆ’  ಗಣರಾಜ್ಯೋತ್ಸವ ಪರೇಡ್‌ಗೆ […]

ಮಂಗಳೂರು ನೆಹರೂ ಮೈದಾನದಲ್ಲಿ 73ನೇ ಗಣರಾಜ್ಯೋತ್ಸವ ಆಚರಣೆ

Wednesday, January 26th, 2022
Republic day

ಮಂಗಳೂರು : ದ.ಕ. ಜಿಲ್ಲಾಡಳಿತದ ವತಿಯಿಂದ 73ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಮಂಗಳೂರು ನೆಹರೂ ಮೈದಾನದಲ್ಲಿ ಆಚರಿಸಲಾಯಿತು. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು. ಜಿಲ್ಲೆಯಲ್ಲಿ 20 ವರ್ಷಗಳಿಂದ ಜೀವಂತ ಸಮಸ್ಯೆ ಆಗಿರುವ ಡೀಮ್ಡ್ ಫಾರೆಸ್ಟ್ ಸಮಸ್ಯೆ ಯನ್ನು ಪರಿಹರಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಜಿಲ್ಲೆಯಲ್ಲಿ ಗುರುತಿಸಲಾಗಿರುವ 66000 ಹೆಕ್ಟೇರ್ […]

ನಾರಾಯಣ ಗುರುಗಳ ಸ್ತಬ್ಧ ಚಿತ್ರದ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಖಂಡನೀಯ

Tuesday, January 25th, 2022
Biruver Kudla

ಮಂಗಳೂರು : ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ದ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಪಕ್ಷಗಳು ರಾಜಕಾರಣ ಮಾಡುತ್ತಾ  ಕಚ್ಚಾಡುತ್ತಿದೆ. ಸ್ವಾಭಿಮಾನ ಜಾಥಾ ರಾಜಕೀಯ ರಹಿತವಾಗಿದ್ದರೆ ಮಾತ್ರ ಬೆಂಬಲ ನೀಡುವುದಾಗಿ ಬಿರುವೆರ್ ಕುಡ್ಲ ಸ್ಪಷ್ಟ ಪಡಿಸಿದೆ. ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಸಂಘಟನೆ ಮುಖಂಡ ಲಕ್ಷ್ಮೀಶ್, ಬಿರುವೆರ್ ಕುಡ್ಲ ನಗರದ ವೃತ್ತಕ್ಕೆ ನಾರಾಯಣ ಗುರು ಹೆಸರಿಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದಾಗ ಬೆಂಬಲ ನೀಡದವರು ಇಂದು ಜಾಥಾದಲ್ಲಿರುವುದು ರಾಜಕೀಯದ ಹುನ್ನಾರದಂತೆ ಕಾಣುತ್ತಿದೆ  ಎಂದರು. ಗಣರಾಜ್ಯೋತ್ಸವಕ್ಕಾಗಿ ಕೇರಳ ಸರಕಾರ […]

ಕಾರ್ಕಳಕ್ಕೆ ಬಿ.ಎಸ್ಸಿ ನರ್ಸಿಂಗ್ ಕಾಲೇಜು ಮಂಜೂರು : ವಿ ಸುನಿಲ್ ಕುಮಾರ್

Tuesday, January 25th, 2022
Sunil Kumar

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳು ಮಲೆನಾಡಿನ ತಪ್ಪಲಿನ ಪ್ರದೇಶಗಳನ್ನು ಹೊಂದಿದ್ದು ಹೆಚ್ಚಿನ ಪ್ರದೇಶಗಳು ತಾಲೂಕು ಕೇಂದ್ರದಿಂದ 20 ಕಿ.ಮೀ ವ್ಯಾಪ್ತಿಯನ್ನು ಹೊಂದಿರುತ್ತದೆ. ಕಾರ್ಕಳದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನರ್ಸಿಂಗ್, ಮೆಡಿಕಲ್ ಸೇರಿದಂತೆ ವೃತ್ತಿಪರ ಕೋರ್ಸುಗಳನ್ನು ವ್ಯಾಸಂಗ ಮಾಡಬೇಕಾದರೆ ಜಿಲ್ಲಾ ಕೇಂದ್ರಗಳಿಗೆ ಹೋಗಬೇಕಾಗಿತ್ತು. ಬಿ.ಎಸ್ಸಿ ನರ್ಸಿಂಗ್ ಮಾಡಬೇಕಾದರೆ ಮಂಗಳೂರು ವೆನ್ಲಾಕ್ ಇಲ್ಲವೇ ಅಧಿಕ ಪ್ರವೇಶ ಶುಲ್ಕ ಪಾವತಿಸಿ ಖಾಸಗಿ ನರ್ಸಿಂಗ್ ಕಾಲೇಜುಗಳನ್ನು ಆಶ್ರಯಿಸಬೇಕಾಗಿತ್ತು. ಕಾರ್ಕಳ ತಾಲೂಕಿನ ಗ್ರಾಮೀಣ ಭಾಗದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳ […]

ಪ್ರತಿಷ್ಠಾ ದಶಮಾನೋತ್ಸವ ಪ್ರಯುಕ್ತ ವಿಶೇಷ “ದೀಪಾಲಂಕಾರ ಸೇವೆ”

Monday, January 24th, 2022
Venkataramana Deepotsava

ಮಂಗಳೂರು : ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ ಇದರ ಪ್ರತಿಷ್ಠಾ ದಶಮಾನೋತ್ಸವ ಪ್ರಯುಕ್ತ ಇಂದು ಶ್ರೀದೇವಳ ದಲ್ಲಿ ವಿಶೇಷ ” ದೀಪಾಲಂಕಾರ ಸೇವೆ ” ನಡೆಯಿತು . ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ದೀಪಪ್ರಜ್ವಲನೆ ನಡೆದು ಬಳಿಕ ಶ್ರೀ ದೇವರ ಪ್ರತಿಷ್ಠಾ ದಶಮಾನೋತ್ಸವ ಪ್ರಯುಕ್ತ ಮಹಾ ಪ್ರಾರ್ಥನೆ ನೆರವೇರಿತು. ಶ್ರೀ ಗಳವರಿಂದ ಮಹಾ ಮಂಗಳಾರತಿ ನಡೆದು ತದನಂತರ ಪ್ರಸಾದ ವಿತರಿಸಲಾಯಿತು . ದೇವಳದ ಮೊಕ್ತೇಸರರಾದ ಸಿ ಎಲ್ […]