ಸಿಎಂ ಸಿದ್ದರಾಮಯ್ಯ ಅವರ ಸಮಾಜವಾದಕ್ಕೆ ಬಸವಣ್ಣ ಪ್ರೇರಣೆ : ಬಸವರಾಜ ಬೊಮ್ಮಾಯಿ

Thursday, November 16th, 2023
Bommai

ಬೆಂಗಳೂರು: ಮನುಷ್ಯನ ಎಲ್ಲ ಪ್ರಶ್ನೆಗಳಿಗೂ ವಚನದಲ್ಲಿ ಉತ್ತರ ಇದೆ. ಕಳಬೇಡ ಕೊಲಬೇಡ ಎನ್ನುವುದು ನಮ್ಮ ಧ್ಯೇಯವಾಗಬೇಕು. ಅದನ್ನು ಪಾಲಿಸಿದರೆ ಮನುಷ್ಯ ಸಂತೋಷ ಮತ್ತು ಸಮಾಧಾನದಿಂದ ಸರಳ ಜೀವನ ನಡೆಸಬಹುದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. ಇಂದು ಬೆಂಗಳೂರಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹದಿನೆಂಟನೇ ವರ್ಷದ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಹಾಗೂ ಎಸ್.ಷಡಕ್ಷರಿ ಅವರ “ಕ್ಷಣ ಹೊತ್ತು ಅಣಿಮುತ್ತು” ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ […]

ಗಿರಿಧರ್ ಸಾಲಿಯಾನ್ ಗೆ ಫಿಲಿಫೈನ್ಸ್‍ನ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ

Thursday, November 16th, 2023
ಗಿರಿಧರ್ ಸಾಲಿಯಾನ್ ಗೆ ಫಿಲಿಫೈನ್ಸ್‍ನ ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ

ಮಂಗಳೂರು : ನವಂಬರ್ 8ರಿಂದ 12ರವರೆಗೆ ಫಿಲಿಫೈನ್ಸ್‍ನ ಟಾರ್ಲಾಕ್‍ನಲ್ಲಿ ನಡೆದ 22ನೇ ಏಶಿಯನ್ ಮಾಸ್ಟರ್ಸ್ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಮಾಸ್ಟರ್ಸ್ ಅತ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಮೂಲಕ ಭಾರತವನ್ನು ಪ್ರತಿನಿಧಿಸಿದ್ದ ಗಿರಿಧರ ಸಾಲಿಯಾನ್ ಅವರು ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಅವರು ಮಂಗಳೂರು ಹಾಗೂ ಕಾರ್ಕಳದಲ್ಲಿರುವ ಕೆಜಿಟಿಟಿಐ ಸಂಸ್ಥೆಗಳ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2017ರಲ್ಲಿ ಚೀನಾದ ರುಗಾವೋದಲ್ಲಿ ನಡೆದ 20ನೇ ಏಶಿಯನ್ ಮಾಸ್ಟರ್ಸ್ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ 4ನೇ ಸ್ಥಾನ ಹಾಗೂ 2021ರಲ್ಲಿ ಮಲೇಶಿಯಾದ ಕುಚ್ಚಿಂಗ್‍ನಲ್ಲಿ […]

ಉಡುಪಿ ಒಂದೇ ಕುಟುಂಬದ ನಾಲ್ವರ ಹತ್ಯೆ, ಆರೋಪಿ ಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

Wednesday, November 15th, 2023
ಉಡುಪಿ ಒಂದೇ ಕುಟುಂಬದ ನಾಲ್ವರ ಹತ್ಯೆ, ಆರೋಪಿ ಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಉಡುಪಿ : ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಪ್ರವೀಣ್ ಅರುಣ್ ಚೌಗುಲೆ ಯನ್ನು ಪೊಲೀಸರು ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಮುಂದೆ ಹಾಜರುಪಡಿಸಲಾಗಿದ್ದು, ಒಂದನೇ ಹೆಚ್ಚುವರಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಪೊಲೀಸರು ಆರೋಪಿ ಅರುಣ್ ಚೌಗುಲೆಗೆ 14 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ನ. 28ರ ವರೆಗೆ ಆರೋಪಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಆರೋಪಿ ಪ್ರವೀಣ್ ಚೌಗುಲೆಗೆ ಮದುವೆಯಾಗಿತ್ತು ತಾಂತ್ರಿಕ ಸಾಕ್ಷಿಗಳ […]

SCDCC Bank – ಠೇವಣಿಗಳಿಗೆ 9% ಬಡ್ಡಿ ದರ

Sunday, November 12th, 2023
SCDCC Bank  - ಠೇವಣಿಗಳಿಗೆ 9% ಬಡ್ಡಿ ದರ

ಮೋಸ, ವಂಚನೆ ಮಾಡಿ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಪತ್ನಿ ಕೊಲೆ, ಆರೋಪಿಗೆ ಒಂದು ವರ್ಷ ಜೈಲುಶಿಕ್ಷೆ

Saturday, November 11th, 2023
Padmapriya

ಉಡುಪಿ : 2008 ರಲ್ಲಿ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಠಿಸಿರುವ ಪ್ರಕರಣದಲ್ಲಿ ಆರೋಪಿ ಅತುಲ್ ರಾವ್‌ಗೆ ಒಂದು ವರ್ಷ ಜೈಲುಶಿಕ್ಷೆ ವಿಧಿಸಿ ಉಡುಪಿ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ. ಶಾಸಕ ರಘುಪತಿಭಟ್ ಪತ್ನಿ ಪದ್ಮಪ್ರಿಯ ಕರಂಬಳ್ಳಿಯ ತನ್ನ ಮನೆಯಿಂದ 2008 ಜೂನ್ 10ರಂದು ನಾಪತ್ತೆಯಾಗಿದ್ದರು, ಅಂದು ರಘುಪತಿ ಭಟ್ ಅವರ ಬಾಲ್ಯ ಸ್ನೇಹಿತ, ಅದೇ ಊರಿನ ಆತುಲ್ […]

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆ

Friday, November 10th, 2023
BY-Vijayendra

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಬಿಜೆಪಿ ನಾಯಕ ಬಿಎಲ್ ಸಂತೋಷ್ ಅವರಿಗೆ ಬಿವೈ ವಿಜಯೇಂದ್ರ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಸಂಘದ ಹಾಗೂ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಸರ್ವರ ನಿರೀಕ್ಷೆ ಹಾಗೂ ಜನರ ಅಪೇಕ್ಷೆಗೆ ಪೂರಕವಾಗಿ ರಾಜ್ಯದಲ್ಲಿ […]

ಹೊಟ್ಟೆ ಮತ್ತು ಕುತ್ತಿಗೆ ಮೇಲೆ ಚೂರಿ ಇರಿತ, ಕರ್ನಾಟಕ ಬ್ಯಾಂಕ್​ ಜನರಲ್ ಮ್ಯಾನೇಜರ್ ಸಾವು

Thursday, November 9th, 2023
ಹೊಟ್ಟೆ ಮತ್ತು ಕುತ್ತಿಗೆ ಮೇಲೆ ಚೂರಿ ಇರಿತ, ಕರ್ನಾಟಕ ಬ್ಯಾಂಕ್​ ಜನರಲ್ ಮ್ಯಾನೇಜರ್ ಸಾವು

ಮಂಗಳೂರು: ಕರ್ನಾಟಕ ಬ್ಯಾಂಕ್​ ನ ಪ್ರಧಾನ ಕಚೇರಿಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ ವಾದಿರಾಜ ಕೆ.ಎ(51) ಬೊಂದೇಲ್​ನಲ್ಲಿರುವ ಅಪಾರ್ಟ್ಮೆಂಟ್​ನಲ್ಲಿ ಹೊಟ್ಟೆ ಮತ್ತುಕುತ್ತಿಗೆ ಮೇಲೆ ಚೂರಿ ಇರಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ನಗರ ಹೊರವಲಯದ ಬೊಂದೇಲ್​ನಲ್ಲಿರುವ ಅಪಾರ್ಟ್ಮೆಂಟ್​ನಲ್ಲಿ ಕತ್ತುಕೊಯ್ದ ಸ್ಥಿತಿಯಲ್ಲಿ ಕರ್ನಾಟಕ ಬ್ಯಾಂಕ್​ನ ಜನರಲ್ ಮ್ಯಾನೇಜರ್ ಪತ್ತೆಯಾಗಿದ್ದು, ಇದೊಂದು ಕೊಲೆ ಯತ್ನವೋ ಅಥವಾ ತಾವೇ ಆತ್ಮಹತ್ಯೆ ಮಾಡಿಕೊಂಡರೋ ಎನ್ನುವ ಬಗ್ಗೆ ಸಂಶಯ ಮೂಡಿದೆ. ವಾದಿರಾಜ ಅವರ ಪತ್ನಿ ಮಕ್ಕಳು ಹೊರಗಡೆ ಹೋಗಿದ್ದಾಗ ಈ ಘಟನೆ ನಡೆದಿದ್ದು, […]

ದೀಪಗಳ ಸಾಲು, ಹೊಸ ಬಟ್ಟೆಬರೆ, ಬಗೆ-ಬಗೆಯ ತಿಂಡಿ-ತಿನಿಸು, ರಂಗೋಲಿಗಳ ಹಬ್ಬ ದೀಪಾವಳಿ

Wednesday, November 8th, 2023
ದೀಪಗಳ ಸಾಲು, ಹೊಸ ಬಟ್ಟೆಬರೆ, ಬಗೆ-ಬಗೆಯ ತಿಂಡಿ-ತಿನಿಸು, ರಂಗೋಲಿಗಳ ಹಬ್ಬ ದೀಪಾವಳಿ

ಮಂಗಳೂರು : ದೀಪಾವಳಿ ಎಂದರೆ ದೀಪಗಳ ಸಾಲು, ಹೊಸ ಬಟ್ಟೆಬರೆ, ಬಗೆ-ಬಗೆಯ ತಿಂಡಿ-ತಿನಿಸು, ರಂಗೋಲಿಗಳು ಇವೇ ಕಣ್ಮುಂದೆ ಕಾಣಿಸುತ್ತವೆ. ದೀಪಾವಳಿಯಂತಹ ಹಬ್ಬವನ್ನು ಆಚರಿಸುವಾಗ, ಶಾಸ್ತ್ರವನ್ನರಿತು ಆಚರಿಸಿದರೆ, ಆನಂದದೊಂದಿಗೆ ಚೈತನ್ಯದ ಅನುಭೂತಿಯನ್ನೂ ಪಡೆಯಬಹುದು. ಶ್ರೀ ಲಕ್ಷ್ಮೀದೇವಿ, ಶ್ರೀಕೃಷ್ಣ, ಶ್ರೀರಾಮ, ಧನ್ವಂತರಿ ದೇವತೆ, ಯಮದೇವತೆ ಮುಂತಾದ ದೇವತೆಗಳನ್ನು ಸ್ಮರಿಸುವ ಈ ದೀಪೋತ್ಸವವನ್ನು ಶಾಸ್ತ್ರಕ್ಕನುಸಾರ ಆಚರಿಸೋಣ ಹಾಗೂ ಆನಂದವನ್ನು ದ್ವಿಗುಣಗೊಳಿಸೋಣ ದೀಪಾವಳಿ – ವಿವಿಧ ದಿನಗಳ ಮಹತ್ವ ಧನತ್ರಯೋದಶಿ (10.11.2023)ಸಾಧನೆಗಾಗಿ ಅನುಕೂಲ ಪರಿಸ್ಥಿತಿ ಮತ್ತು ಐಶ್ವರ್ಯವನ್ನು ಪಡೆಯಲು ಈ ದಿನ ಧನಲಕ್ಷ್ಮೀಯನ್ನು […]

ಕುಕ್ಕೆ ಸುಬ್ರಹ್ಮಣ್ಯದ ದುಡ್ಡಿನಲ್ಲಿ ನಾಲ್ಕು ವರ್ಷಗಳಿಂದ ಇನ್ನೋವಾ ಕಾರಿನಲ್ಲಿ ತಿರುಗುತ್ತಿದ್ದ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು

Tuesday, November 7th, 2023
kuuke-subrahmanya

ಮಂಗಳೂರು : ಕುಕ್ಕೆ ಸುಬ್ರಹ್ಮಣ್ಯಕ್ಕೆ ನಾಲ್ಕು ವರ್ಷಗಳ ಹಿಂದೆ ದೇವಸ್ಥಾನದ ಬಳಕೆಗೆಂದು ಖರೀದಿಸಿದ್ದ ಇನ್ನೋವಾ ಕ್ರಿಸ್ಟಾ ಕಾರನ್ನು ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ದೇವಳದ ಖರ್ಚಿನಲ್ಲೇ ಬೆಂಗಳೂರಿನಲ್ಲಿ ಉಪಯೋಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 2019ರಲ್ಲಿ ಹೊಸ ಇನ್ನೋವಾ ಕಾರನ್ನು ಖರೀದಿಸಲಾಗಿತ್ತು. ಆರಂಭದಲ್ಲಿ ದೇವಸ್ಥಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರೇ ಈ ಕಾರನ್ನು ಬಳಕೆ ಮಾಡುತ್ತಿದ್ದರು. ಎರಡೇ ತಿಂಗಳಲ್ಲಿ ಈ ಕಾರು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಇಲಾಖಾ ಆಯುಕ್ತರ ಕಚೇರಿಗೆ ಕಳುಹಿಸಿಕೊಡಲು ಸೂಚನೆ […]

ಮೂಡಬಿದ್ರೆ : ರಾಯಲ್ ಎನ್ ಫೀಲ್ಡ್ ಬೈಕ್ ಕದ್ದು ಪೊದೆಯ ಮದ್ಯೆ ಬಚ್ಚಿಟ್ಟ ಇಬ್ಬರು ಕಳ್ಳರ ಬಂಧನ

Tuesday, November 7th, 2023
ಮೂಡಬಿದ್ರೆ : ರಾಯಲ್ ಎನ್ ಫೀಲ್ಡ್ ಬೈಕ್ ಕದ್ದು ಪೊದೆಯ ಮದ್ಯೆ ಬಚ್ಚಿಟ್ಟ ಇಬ್ಬರು ಕಳ್ಳರ ಬಂಧನ

ಮಂಗಳೂರು : ಮೂಡಬಿದ್ರೆ ಪೊಲೀಸ್ ನಿರೀಕ್ಷಕರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಅವರು ಹಾಗೂ ಅವರ ಠಾಣಾ ಸಿಬ್ಬಂದಿಯವರು ಬೆಳಗಿನ ಜಾವ ಮೂಡಬಿದ್ರೆ ಠಾಣ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಸಾವಿರ ಕಂಬದ ಬಸದಿಯ ಬಳಿ ಇರುವ ಕೊಂಡೆ ಸ್ಟ್ರೀಟ್ ಎಂಬಲ್ಲಿ , ಇಬ್ಬರು ಯುವಕರನ್ನು ಹಾಗೂ ಅವರ ವಶದಲ್ಲಿದ್ದ ನಂಬ್ರ ಪ್ಲೇಟ್ ಇಲ್ಲದ ಮೋಟಾರು ಸೈಕಲ್ ವಶಪಡಿಸಿ ಕೊಂಡಿರುತ್ತಾರೆ. ರಾಯಲ್ ಎನ್ ಫೀಲ್ಡ್ Royal Enfield Classic 350 ಮೋಟಾರು ಸೈಕಲಿನ ಸಮೇತ ವಶಕ್ಕೆ ಪಡೆದು ಠಾಣೆಗೆ […]