ಬಡ್ಡಿಯವನಿಂದ ಸಾಲಪಡೆದು ಕಿರುಕುಳ ತಾಳಲಾರದೆ ಮಹಿಳೆ ಮನೆಯಲ್ಲೇ ಆತ್ಮಹತ್ಯೆ

Saturday, June 12th, 2021
Gowramma

ಶಿವಮೊಗ್ಗ: ಬಡ್ಡಿಯವನಿಂದ ಸಾಲಪಡೆದು  ಮರು ಪಾವತಿಸಿದರೂ  ಕಿರುಕುಳ ತಾಳಲಾರದೆ ಮನನೊಂದ ಮಹಿಳೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸಿದ್ಲಿಪುರ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಗೌರಮ್ಮ (55) ಎಂದು ಗುರುತಿಸಲಾಗಿದೆ. ಗೌರಮ್ಮ ಪತಿ ಮಲ್ಲಿಕಾರ್ಜುನಪ್ಪ ಇದೇ ಗ್ರಾಮದ ಲಂಕೇಶ್ ನಾಯ್ಕ್ ನಿಂದ 10 ರೂ. ಬಡ್ಡಿಯಂತೆ 20 ಸಾವಿರ ರೂ ಸಾಲ ಪಡೆದಿದ್ದರು. ಈ 20 ಸಾವಿರ ರೂ. ಹಣ ನೀಡುವಾಗ ಲಂಕೇಶ್ ನಾಯ್ಕ ಬಡ್ಡಿಯ ಹಣ 2 ಸಾವಿರ ಕಡಿತಗೊಳಿಸಿ ಕೊಟ್ಟಿದ್ದನಂತೆ. ಬಡ್ಡಿ ಕೊಟ್ಟ […]

ಸಿಎಂ ಬದಲಾವಣೆ ಊಹಾಪೋಹಕ್ಕೆ ಇಂದು ಫುಲ್ ಸ್ಟಾಪ್: ಆರ್ ಅಶೋಕ

Sunday, June 6th, 2021
R Ashoka

ಬೆಂಗಳೂರು : ಇಂದಿಗೂ ಮುಂದೆಯೂ ಯಡಿಯೂರಪ್ಪನವರೇ ನಮ್ಮ ನಾಯಕರು. ಅವರ ನಾಯಕತ್ವದಲ್ಲೇ ಪಕ್ಷ ಈ ಸಾಧನೆ ಮಾಡಿದೆ. ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಸಚಿವ ಆರ್‌ ಅಶೋಕ ತಿಳಿಸಿದರು. ಸಿಎಂ ಪ್ರತಿಕ್ರಿಯೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಪದೇ, ಪದೇ ಸಿಎಂ ಬದಲಾವಣೆ‌ ಎಂಬ ಮಾತುಗಳು ಕೇಳಿ ಬರುತಿರುವುದರಿಂದ ಮುಖ್ಯ ಮಂತ್ರಿಗಳ ಮನಸಿಗೆ ನೋವಾಗಿದೆ. ದೇಶದಲ್ಲೇ ಎಲ್ಲಾ ಸಿಎಂಗಳಿಗಿಂತ ಹೆಚ್ಚು ಕ್ರಿಯಾಶೀಲರಾಗಿ‌ ಜನಪರ‌ ಕಾಳಜಿಯಿಟ್ಟುಕೊಂಡು ಮುಖ್ಯಮಂತ್ರಿಗಳು ಕಾರ್ಯ ನಿರ್ವಹಿಸಿದ್ದಾರೆ. ಹಗಲು ರಾತ್ರಿ ಕೆಲಸ […]

ಅಕ್ರಮ ದಂಧೆ – ‘ಮುಂಗಾರು ಮಳೆ-2’ ಚಿತ್ರದ ನಟಿ ನೇಹಾ ಶೆಟ್ಟಿ ತಂದೆಯ ಬಂಧನ

Saturday, June 5th, 2021
Neha-Shetty

ಬೆಂಗಳೂರು:  ನಗರದಲ್ಲಿ ಜೂಜು ಅಡ್ಡೆನಿರ್ಮಿಸಿ ಕಾನೂನು ಬಾಹಿರ ಕೃತ್ಯ ಆರೋಪದಡಿಯಲ್ಲಿ ‘ಮುಂಗಾರು ಮಳೆ-2’ ಚಿತ್ರದ ನಟಿ ನೇಹಾ ಶೆಟ್ಟಿ ತಂದೆ ಹರಿರಾಜ್ ಶೆಟ್ಟಿಯನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಹರಿರಾಜ್ ಶೆಟ್ಟಿಯನ್ನು ನಗರದ ಪ್ರಮುಖ ಜೂಜುಕೋರ ಅಂತಾ ಗೂಂಡಾ ಕಾಯ್ದೆಯಡಿ ಬಂಧನ ಮಾಡಲಾಗಿದೆ.  ಹರಿರಾಜ ಶೆಟ್ಟಿ ವಿರುದ್ಧ ಇಲ್ಲಿತನಕ 13 ಕೇಸ್‍ಗಳು ದಾಖಲಾಗಿದೆ. ಬೆಂಗಳೂರಿನಲ್ಲಿ ಪೂಲ್ ಎನ್, ರಿ ಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಹತ್ತಾರು ಕಡೆ ನಡೆಸ್ತಿದ್ದ, ಗೇಮ್ ಗಳು ಬ್ಯಾನ್ ಇರುವ ಸ್ಕಿಲ್ ಗೇಮ್, ವೀಡಿಯೋ ಗೇಮ್ […]

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಜ್ಜಾದ ಭೂಮಾಫಿಯಾ

Wednesday, June 2nd, 2021
Rohini-Sindhoori

ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಬೇಕೆನ್ನುವ ರಾಜಕೀಯ ನಾಯಕರ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಇದರ ಹಿಂದೆ ಭೂಮಾಫಿಯಾ ಕೈವಾಡ ಶಂಕೆ ಕೇಳಿಬಂದಿದೆ. ಕರೊನಾ ನಡುವೆಯೂ ಭೂ ಅಕ್ರಮದ ದೂರುಗಳಿಗೆ ಸಂಬಂಧಿಸಿದ ಫೈಲ್ಗಳನ್ನು ವಿಲೇವಾರಿ ಮಾಡುವ ಪ್ರಯತ್ನಕ್ಕೆ ರೋಹಿಣಿ ಸಿಂಧೂರಿ ಕೈಹಾಕಿ ಭೂಗಳ್ಳರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ರಿಯಲ್ ಎಸ್ಟೇಟ್ ಉದ್ಯಮಿಗಳ ಹಿಂದೆಯೂ ರೋಹಿಣಿ ಬಿದ್ದಿದ್ದಾರೆ. ಹೀಗಾಗಿ ಅಕ್ರಮದಲ್ಲಿ ಭಾಗಿಯಾಗಿರುವವರ ಎದೆಯಲ್ಲಿ ನಡುಕು ಶುರುವಾಗಿದ್ದು, ಕ್ರಮಕ್ಕೂ ಮುನ್ನವೇ ಅವರನ್ನು ವರ್ಗಾವಣೆ ಮಾಡಿಸುವ ಪ್ರಯತ್ನ […]

ಬೆಂಗಳೂರಲ್ಲಿ ನಡೆದ ಸಾಮೂಹಿಕ ರೇಪ್, ಪ್ರಮುಖ ಆರೋಪಿಯನ್ನು ಗುಂಡುಹಾರಿಸಿ ಬಂದಿಸಿದ ಪೊಲೀಸರು

Wednesday, June 2nd, 2021
Saboob

ಬೆಂಗಳೂರು : ನಗರದಲ್ಲಿ ನಡೆದ ಯುವತಿಯ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಶೂಬೂಜ್ ಪೇಪರ್ ಆಯುವವರ ಶೆಡ್ ನಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಆತನನ್ನು ಅಲ್ಲಿಂದ ವಶಕ್ಕೆ ಪಡೆದಿದ್ದಾರೆ.  ಆದರೆ ಆತ ಪೊಲೀಸರಿಂದ ತಪ್ಪಿಸಲೆತ್ನಿಸಿದಾಗ ಆತನ ಮೇಲೆ ಗುಂಡು ಹಾರಿಸಿದ್ದಾರೆ. ಶೂಬೂಜ್ ಯುವತಿಯ ಗುಪ್ತಾಂಗಕ್ಕೆ ಕಾಲಲ್ಲಿ ಒದ್ದು, ವಿಕೃತಿ ಮೆರೆದಿದ್ದ.   ಆತನನ್ನು ಕರೆ ತರುವಾಗ ಮೂತ್ರ ಬರುತ್ತಿದೆ ಎಂದು ಹೇಳಿದ್ದ ಒಂದು ವೇಳೆ ನಿಲ್ಲಿಸದೇ ಇದ್ದರೆ ಜೀಪ್ ಒಳಗಡೆಯೇ ಮೂತ್ರ ಮಾಡುತ್ತೇನೆ ಎಂದು ಪೊಲೀಸರಿಗೆ ಧಮ್ಕಿ ಹಾಕಿದ್ದ. ಆರ್ […]

ವೈದ್ಯರ ನಡೆ ಹಳ್ಳಿ ಕಡೆ ಅಭಿಯಾನಕ್ಕೆ ಗಂಜಿಮಠದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಚಾಲನೆ

Wednesday, June 2nd, 2021
Bharath Shetty

ಮಂಗಳೂರು  : ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಟಾಸ್ಕ್ ಪೋರ್ಸ್ ಸದಸ್ಯರು ತಮ್ಮ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮನೆಮನೆ ಸಂಪರ್ಕ ಮಾಡಬೇಕು. ಅಲ್ಲಿ ಕೋವಿಡ್ 19 ಸೋಂಕಿತರು ಆಸ್ಪತ್ರೆಗೆ ತೆರಳದೆ ಮನೆಯಲ್ಲಿಯೇ ಇದ್ದು ರೋಗ ಗಂಭೀರವಾದಾಗ ಕೊನೆಯ ಹಂತದಲ್ಲಿ ವೈದ್ಯರನ್ನು ಕಾಣುವುದರಿಂದ ಸಾವು, ನೋವು ಪ್ರಮಾಣ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ಅವರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರಕಾರದ ಜಾರಿಗೆ ತಂದಿರುವ ವೈದ್ಯರ ನಡೆ ಹಳ್ಳಿಯ ಕಡೆ ಅಭಿಯಾನವನ್ನು ಜನರಿಗೆ ತಲುಪುವಲ್ಲಿ ನಾವೆಲ್ಲ ಕೆಲಸ ಮಾಡಬೇಕು ಎಂದು ಮಂಗಳೂರು […]

ಬಾಂಗ್ಲಾದೇಶಿಗಳಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಯುವತಿಯನ್ನು ಪತ್ತೆ ಹಚ್ಚಿದ ಪೊಲೀಸರು

Saturday, May 29th, 2021
Bangla Deshi

ಬೆಂಗಳೂರು : ನಗರದ ಎನ್ ಆರ್ ಐ ಲೇಔಟ್‌ನಲ್ಲಿರುವ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತ ಯುವತಿ ಕೇರಳದ ಕ್ಯಾಲಿಕಟ್‌ನಲ್ಲಿ ಪತ್ತೆಯಾಗಿದ್ದಾಳೆ. ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಲು ಎಂಟು ಮಂದಿ ವಿಕೃತರು ಸತತ ಒಂದು ಗಂಟೆ ಕಾಲ ಹಿಂಸೆ ನೀಡಿರುವ ವಿಡಿಯೋ ತುಣುಕು ಬಹಿರಂಗವಾಗಿದೆ. ಎಂಟು ಮಂದಿ ಬಾಂಗ್ಲಾ ನಿವಾಸಿಗಳು ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ. ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡರೂ ಬಿಡದೇ ಹಲ್ಲೆ ನಡೆಸಿದ್ದಾರೆ. ವೇಶ್ಯಾವಾಟಿಕೆ ವೃತ್ತಿಗೆ ಒಳಗಾಗದಿದ್ದರೆ ಹೀಗೇ ಹಿಂಸೆ ನೀಡುವುದಾಗಿ ಹೆದರಿಸಿದ್ದಾರೆ. ತದನಂತರದಲ್ಲಿ ಹಲ್ಲೆಗೆ ಒಳಗಾದ […]

ದಿ.ದೊರೆಸ್ವಾಮಿ ಪತ್ರ ಬರೆದ ಕುರಿತು ವಿಪ ಸಭಾಪತಿ ಹೊರಟ್ಟಿ ಸಿಎಂ ಗೆ ಮನವಿ

Saturday, May 29th, 2021
doreswamy

ಹುಬ್ಬಳ್ಳಿ: ಶತಾಯುಷಿ, ಮಹಾತ್ಮ ಗಾಂಧೀಜಿಯವರ ತಲೆಮಾರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಹಲವು ಸಾಮಾಜಿಕ ಚಳವಳಿಗಳ ಮುಂಚೂಣಿಯಲ್ಲಿದ್ದ ಹಿರಿಯ ಗಾಂಧಿವಾದಿ ದಿ. ಎಚ್.ಎಸ್.ದೊರೆಸ್ವಾಮಿ ಅವರ ಮನೆಯಲ್ಲಿ 10-04-2021 ರಂದು ಅವರ ಮನೆಯಲ್ಲಿ ಖುದ್ದಾಗಿ ಭೇಟಿಯಾಗಿ ಅವರ ಜನ್ಮದಿನಾಚರಣೆಯ ಶುಭಾಶಯ ಸಲ್ಲಿಸಲು ಹೋದಾಗ ರೈತರ ಅಕ್ರಮ ಸಕ್ರಮ ಜಮೀನು ಕುರಿತ ವಿಷಯವನ್ನು ನನ್ನೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದರು ಎಂದು ವಿಧಾನ ಪರಿಷತ್‌ ಸಭಾಪತಿ ಹೇಳಿದ್ದಾರೆ. ಇದೇ ವಿಷಯವಾಗ ಸಭಾಪತಿ ಹೊರಟ್ಟಿಯವರು ಸಿಎಂ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸದ್ದಾರೆ. ಅವರ ಪತ್ರದ ವಿವರ ಈ […]

ಸಿಎಂ ಪಟ್ಟಕ್ಕಾಗಿ ಕಸರತ್ತು, ಮುಖ್ಯಮಂತ್ರಿ ಸೀಟಲ್ಲಿ ಕೂರಲು ಯಾರೆಲ್ಲ ರೆಡಿಯಾಗಿದ್ದಾರೆ ಎಂದು ನೀವೇ ನೋಡಿ !

Thursday, May 27th, 2021
yedyurappa

ಬೆಂಗಳೂರು :  ಕೊರೋನಾ ಸಂದಿಗ್ಧತೆ ನಡುವೆಯೂ ಬಿಜೆಪಿಯಲ್ಲಿ ರಾಜಕೀಯ ಚಟುವಟಿಗೆ ಬಿರುಸಿನಿಂದ ಕೂಡಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ದಾಟುತ್ತಿದ್ದಂತೆ ಸಿಎಂ ಸ್ಥಾನದ ಆಕಾಂಕ್ಷಿಗಳು ಹೈಕಮಾಂಡ್  ಕದ ತಟ್ಟಲು ಶುರು ಮಾಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿಸಿಎಂ ಲಕ್ಷ್ಮಣ ಸವದಿ, ಅರವಿಂದ್ ಬೆಲ್ಲದ, ಬಸವರಾಜ ಬೊಮ್ಮಾಯಿ ಮತ್ತು ಮುರುಗೇಶ್ ನಿರಾಣಿ ಅವರು ಸಿಎಂ ಸ್ಥಾನದ ರೇಸಿನಲ್ಲಿದ್ದಾರೆ ಎನ್ನಲಾಗುತ್ತಿದೆ. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿವೆ. ವಿಜಯೇಂದ್ರ ಆಡಳಿತದಲ್ಲಿ ಮೂಗು […]

ಲಾಕ್‍ಡೌನ್ ನಡುವೆ ಗ್ರಾಮ ಪಂಚಾಯತ್ ಸದಸ್ಯನ ಮಗಳ ಅದ್ಧೂರಿ ಮದುವೆ, ಮುಂದೇನಾಯ್ತು ನೋಡಿ !

Monday, May 24th, 2021
Ambagilu Marraige

ಮಂಡ್ಯ:  ಬಿ.ಹೊಸೂರು ಗ್ರಾಮದ ಹೊರ ಹೊಲಯದಲ್ಲಿರುವ ಅಂಬೆಗಾಲು ಕೃಷ್ಣ ದೇವಾಲಯದಲ್ಲಿ ಗ್ರಾ.ಪಂ ಸದಸ್ಯರೊಬ್ಬರು ಲಾಕ್‍ಡೌನ್ ನಿಯಮ ಮೀರಿ  ಮಗಳ ಮದುವೆಯನ್ನು ಅದ್ಧೂರಿಯಾಗಿ ನಡೆಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮದುವೆಗೆ ಯಾವುದೇ ಅನುಮತಿ ಪಡೆಯದೆ ಗ್ರಾ.ಪಂ ಸದಸ್ಯ ಮಹೇಶ್ ಎಂಬವರು ಲಾಕ್‍ಡೌನ್ ನಿಯಮ ಮೀರಿ ಮದುವೆ ಕಾರ್ಯಕ್ರಮ ನಡೆಸಿದ್ದರು. ಈ ಮದುವೆ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಈ ವಿಚಾರ ತಿಳಿದು ಅಧಿಕಾರಿಗಳು ಮಂಡ್ಯ ತಹಶಿಲ್ದಾರ್ ಚಂದ್ರಶೇಖರ್ ಶಂಗಾಳಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಮದುವೆ ಕಾರ್ಯಕ್ರಮದ ಮೇಲೆ ದಾಳಿ ಮಾಡಿದ ತಹಶೀಲ್ದಾರ್ […]