ಪತ್ನಿಯಿಂದ ಕಿರುಕುಳ ಕೊಲೆಯತ್ನ ದೂರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ನಾಪತ್ತೆ

Sunday, January 24th, 2021
GT Dinesh Kumar

ಮಂಗಳೂರು :  ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಆಯುಕ್ತ ಜಿ.ಟಿ. ದಿನೇಶ್ ಕುಮಾರ್ (38) ಅವರ ವಿರುದ್ಧ ಪತ್ನಿ ಕಿರುಕುಳ ನೀಡಿದ ಹಾಗೂ ಕೊಲೆಯತ್ನ ದೂರು ನೀಡಿದ್ದಾರೆ. ದಿನೇಶ್ ಕುಮಾರ್ ಮೂಡ ಆಯುಕ್ತರಾಗಿ ತಿಂಗಳ ಹಿಂದೆಯಷ್ಟೇ ನೇಮಕಗೊಂಡಿದ್ದರು. ಮಂಗಳೂರಿನ ಉರ್ವ ಮಾರ್ಕೆಟ್ ಬಳಿಯ ಅಗ್ರಜ ವಿವಾಂಟ ಫ್ಲಾಟ್‌ನಲ್ಲಿ ಇವರು ವಾಸವಿದ್ದರು. ಪತ್ನಿ ಬೆಂಗಳೂರಿನಲ್ಲಿ ಇದ್ದುದರಿಂದ ಇವರು ಒಬ್ಬರೇ ಇಲ್ಲಿ ವಾಸವಿದ್ದರು ಎಂದು ಹೇಳಲಾಗಿದೆ. ಬೆಂಗಳೂರಿನ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪತ್ನಿ ದೀಪ್ತಿ ಅವರು ಕೊಲೆಯತ್ನ ಹಾಗೂ ವರದಕ್ಷಿಣೆ ಕಿರುಕುಳ ದೂರು […]

ಅತ್ತಾವರದ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ, ಇಬ್ಬರು ಮಹಿಳೆಯರ ರಕ್ಷಣೆ

Sunday, January 24th, 2021
Amantrana Lodge

ಮಂಗಳೂರು : ಅತ್ತಾವರದಲ್ಲಿರುವ ಲಾಡ್ಜ್ ಒಂದರಲ್ಲಿ ವೇ ಶ್ಯಾವಾಟಿಕೆ ನಡೆಯುತ್ತಿದೆ ಎಂದು ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಿ ಇಬ್ಬರು ಪುರುಷರನ್ನು ಬಂಧಿಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿಸಲಾಗಿದೆ. ಮಂಗಳೂರು ಪೊಲೀಸ್ ತಂಡ ಶನಿವಾರ ಅತ್ತಾವರದಲ್ಲಿರುವ ಆಮಂತ್ರಣಾ ಲಾಡ್ಜ್ ಮೇಲೆ ದಾಳಿ ನಡೆಸಿದ್ದು, ಅಲ್ಲಿ 211 ಮತ್ತು 212 ಸಂಖ್ಯೆಯ ಕೊಠಡಿಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ದಾಳಿ ವೇಳೆ ಇಬ್ಬರು ಗ್ರಾಹಕರನ್ನು ವಶಕ್ಕೆ ತೆಗೆದುಕೊಲಾಗಿದೆ. ಲಾಡ್ಜ್‌ನ ವ್ಯವಸ್ಥಾಪಕ ಚಂದ್ರಶೇಖರ್ ಮತ್ತು ರೂಮ್ ಬಾಯ್ ಹರೀಶ್ ಪೂಜಾರಿ ಅವರನ್ನು ಪೊಲೀಸರು […]

ಸುತ್ತಿಗೆಯಿಂದ ಹೊಡೆದು ತಂದೆಯನ್ನು ಸಾಯಿಸಿದ ಮಗ

Monday, January 18th, 2021
sridhar

ಬೆಳ್ತಂಗಡಿ : ಮಗನೊಬ್ಬ ತನ್ನ ತಂದೆಯನ್ನು ಸುತ್ತಿಗೆಯಿಂದ ಹೊಡೆದು ಸಾಯಿಸಿದ ಘಟನೆ ಬೆಳ್ತಂಗಡಿತಾಲ್ಲೂಕಿನ ಗರ್ದಾಡಿ ಗ್ರಾಮದ ಮುಂಡ್ಯೊಟ್ಟು ಎಂಬಲ್ಲಿ ಜನವರಿ 18 ರ ಸೋಮವಾರ ನಡೆದಿದೆ. ಮೃತರನ್ನು ಶ್ರೀಧರ್ ಎಂದು ಗುರುತಿಸಲಾಗಿದೆ, ಅವರ ಮಗ ಹರೀಶ್ ಈ ಕೊಲೆ ಮಾಡಿದ ಆರೋಪಿ.ಮೃತ ರಿಗೆ ಇಬ್ಬರು ಗಂಡು ಮತ್ತು ಒಬ್ಬರು ಮಗಳು ಇದ್ದಾರೆ. ಕೌಟುಂಬಿಕ ವಿವಾದವೇ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಗೋವಾ ಪ್ರವಾಸ ಹೋರಾಟ ಮಿನಿ ಬಸ್ ಅಪಘಾತ, 11 ಮಹಿಳೆಯರ ದುರ್ಮರಣ, ಸಾವಿನ ಸಂಖ್ಯೆ ಏರಿಕೆ

Friday, January 15th, 2021
Goa Tour

ಧಾರವಾಡ :  ದಾವಣಗೆರೆಯಿಂದ ಮುಂಜಾನೆ ಮೂರು ಗಂಟೆಗೆ ಹೊರಟಿದ್ದ ಮಿನಿಬಸ್ ಧಾರವಾಡ ಸಮೀಪ ಟಿಪ್ಪರ್ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ 6 ಜನ ಸಾವನ್ನಪ್ಪಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಐದು ಮಂದಿ ಅಸುನೀಗಿದರು. ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ದಾವಣಗೆರೆಯ ವಿದ್ಯಾನಗರ, ಎಂಸಿಸಿ ಎ ಬ್ಲಾಕ್ ಮತ್ತು ಎಂಸಿಸಿ ಬಿ ಬ್ಲಾಕ್ ನಿವಾಸಿಯ ಕೆಲ ಮಹಿಳೆಯರು ಒಂದೆಡೆ ಸೇರಿ ಎಂಜಾಯ್ ಮಾಡಲು ಗೋವಾದ ಪಣಜಿಗೆ ಖಾಸಗಿ ಮಿನಿ ಬಸ್ವೊಂದನ್ನು ಬುಕ್ ಮಾಡಿ ಪ್ರವಾಸ  ಕೈಗೊಂಡಿದ್ದರು. ಇಂದು ಬೆಳಗ್ಗೆ ಸರಿಸುಮಾರು 3 ಗಂಟೆ […]

ಮನೆಯ ಋಣಾತ್ಮಕ ದೋಷಗಳನ್ನು ಸರಿಪಡಿಸಲು ಹೀಗೆ ಮಾಡಿ

Wednesday, January 13th, 2021
Mane

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಮನೆಯಲ್ಲಿ ಅಶಾಂತಿಯ ವಾತಾವರಣ, ಆಕಸ್ಮಿಕ ಅವಘಡಗಳು ಅಥವಾ ಅನಾರೋಗ್ಯದ ಸ್ಥಿತಿಗಳು ಕಂಡು ಬರುತ್ತಿದ್ದರೆ ಇದು ಮಾಂತ್ರಿಕ ದೋಷ ಸಮಸ್ಯೆಯಿಂದ ಆಗಬಹುದಾದ ಸಾಧ್ಯತೆ ಇರುತ್ತದೆ. ನಿಮ್ಮ ಕೆಲಸದಲ್ಲಿ ಗೆಲುವು ಮರೀಚಿಕೆ ಆಗಬಹುದು, ಆರ್ಥಿಕ ಸ್ಥಿತಿ, ಮಾನಸಿಕ ಸ್ಥಿತಿ ಹದಗೆಡಬಹುದು, ಕುಟುಂಬದ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು, ಪದೇಪದೇ ಆರೋಗ್ಯ ಕೈಕೊಡುತ್ತಿರುಬಹುದು ಇಂತಹ ಸಂದರ್ಭಗಳಿಂದ ನಿಮಗೆ ದುಃಖದ ವಾತಾವರಣ ಮಡುಗಟ್ಟುತ್ತದೆ. ಕೆಲವು ಸಂದರ್ಭಗಳಲ್ಲಿ ಅಮಾವಾಸ್ಯೆ ಹುಣ್ಣಿಮೆ ಇಂತಹ ದಿನಗಳಲ್ಲಿ ಈ ಮೇಲ್ಕಂಡ […]

ಆಟವಾಡುತ್ತಿದ್ದ ಮಗು ಸೀಮೆ ಎಣ್ಣೆ ಸೇವಿಸಿ ಮೃತ್ಯು

Sunday, January 10th, 2021
Ruthik

ಕಾಸರಗೋಡು : ಮನೆಯಲ್ಲಿ ಆಟವಾಡುತ್ತಿದ್ದ ಮಗು ಸೀಮೆ ಎಣ್ಣೆ ಸೇವಿಸಿದ ಪರಿಣಾಮ ಮೃತಪಟ್ಟ ದಾರುಣ ಘಟನೆ ಉದುಮದಲ್ಲಿ ನಡೆದಿದೆ. ಉದುಮ ಏರೋಲ್‌ನ ದಾಸ್ ಮತ್ತು ರೇಣುಕಾ ದಂಪತಿ ಪುತ್ರ ಋತಿಕ್ ಮೃತಪಟ್ಟ ಮಗು. ಬಾಟಲಿಯಲ್ಲಿದ್ದ ಸೀಮೆಎಣ್ಣೆಯನ್ನು ಸೇವಿಸಿದ್ದು , ಮಗು ಅಸ್ವಸ್ಥವಾಗಿ ಬಿದ್ದಿದ್ದು ಸಮೀಪ ಸೀಮೆ ಎಣ್ಣೆ ತುಂಬಿದ್ದ ಬಾಟಲಿ ಪತ್ತೆಯಾಗಿತ್ತು. ತಕ್ಷಣ ಮಗುವನ್ನು ಉದುಮದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಬಳಿಕ ವೈದ್ಯರ ಸಲಹೆಯಂತೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.

ಹೆಣ್ಣು ಕೊಟ್ಟ ಮಾವನ ಕಪಾಳ ಕ್ಕೊಡೆದು ಸಾಯಿಸಿದ ಅಳಿಯ

Saturday, January 2nd, 2021
Shiek Aboobakkar

ಕಾರ್ಕಳ :  ಹತ್ತು ದಿನದ ಹಿಂದೆ ಮಗಳನ್ನು ಮದುವೆಯಾಗಿದ್ದ ಅಳಿಯನೊಬ್ಬ ಮಾವನ ಕಪಾಳಕ್ಕೆ ಬಾರಿಸಿದ್ದೇ ಅಲ್ಲದೆ ಮರ್ಮಾಂಗಕ್ಕೂ ತುಳಿದು ಸಾಯಿಸಿದ ಘಟನೆ ಬಂಗ್ಲೆಗುಡ್ಡೆಯ  ಹಂಚಿಕಟ್ಟೆ ಫ್ಲಾಟ್ ಒಂದರಲ್ಲಿ ನಡೆದಿದೆ. ಕ್ಷುಲಕ ಕಾರಣದಿಂದ ಉಂಟಾದ ಜಗಳದಲ್ಲಿ ಶೇಖ್ ಅಬೂಬಕ್ಕರ್ (57) ಜೀವ ಕಳೆದುಕೊಂಡವರು. ಶೇಖ್ ಅಬೂಬಕ್ಕರ್ ಹಾಗೂ ಅವರ ಅಳಿಯ ತೌಫಿಕ್ ನಡುವೆ ಡಿಸೆಂಬರ್ 31ರ ರಾತ್ರಿ 8.00ಗಂಟೆಗೆ ಫ್ಲಾಟ್‌‌ನಲ್ಲಿ  ಜಗಳ ಏರ್ಪಟ್ಟಿತ್ತು. ಮಾತಿಗೆ ಮಾತು ವಿಕೋಪಕ್ಕೆ ತಿರುಗಿದಾಗ ತೌಫಿಕ್ ತನ್ನ ಮಾವ ಶೇಖ್ ಅಬೂಬಕ್ಕರ್‌‌ನ ಎಡ ಕೆನ್ನೆಗೆ ಹೊಡೆದು ಬಲವಾಗಿ […]

ಪಾಂಡೇಶ್ವರ ಪೊಲೀಸ್ ಠಾಣೆ ವಠಾರ ದುರಸ್ತಿ ಮತ್ತು ಠಾಣಾ ಒಳರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ

Thursday, December 24th, 2020
Pandeshwara Station

ಮಂಗಳೂರು : ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆ ವಠಾರ ದುರಸ್ತಿ, ಹಾಗೂ ಠಾಣಾ ಒಳರಸ್ತೆ ಕಾಂಕ್ರೀಟೀಕರಣಕ್ಕೆ ಇಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್, ಎಸಿಪಿ ಜಗದೀಶ್, ನಟರಾಜ್, ಪಾಂಡೇಶ್ವರ ಇನ್ ಸ್ಪೆಕ್ಟರ್ ಎ. ಸಿ ಲೋಕೇಶ್, ಸಬ್ ಇನ್ ಸ್ಪೆಕ್ಟರ್ ಸುರೇಶ್, ಶೀತಲ್, ಹಿರಿಯ ಸಿಬ್ಬಂದಿ ಸುನಿಲ್ SB, ಸ್ಥಳೀಯ ಪ್ರಮುಖರಾದ ನಿತಿನ್ ಕಾಮತ್, ಅನಿಲ್ […]

ಶಾಸಕ ಯು.ಟಿ ಖಾದರ್‌ ಅವರ ಕಾರನ್ನು ಫಾಲೋ ಮಾಡಿಕೊಂಡು ಬಂದ ವ್ಯಕ್ತಿಯ ಬಂಧನ

Thursday, December 24th, 2020
utKhader

ಮಂಗಳೂರು : ಮಾಜಿ ಸಚಿವ ಯು.ಟಿ ಖಾದರ್‌ ಅವರ ಕಾರನ್ನು ಬುಧವಾರ ರಾತ್ರಿ  ಬೈಕ್‌ನಲ್ಲಿ ಫಾಲೋ ಮಾಡಿಕೊಂಡು ಬಂದ ವ್ಯಕ್ತಿಯೊಬ್ಬನನ್ನು ಮಂಗಳೂರು ಪೊಲೀಸರು ತಡರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಯುವಕನನ್ನು ಬೋಳೂರು ನಿವಾಸಿ ಅನೀಶ್ ಪೂಜಾರಿ ಎಂದು ಗುರುತಿಸಲಾಗಿದೆ. ಬುಧವಾರ ಮಂಗಳೂರಿನ ದೇರಳಕಟ್ಟೆಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಭದ್ರತಾ ವಾಹನದ ಬೆಂಗಾವಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿದ ಅಪರಿಚಿತ ವ್ಯಕ್ತಿಯೋರ್ವ ಸುಮಾರು 15 ಕಿ.ಮೀ ಖಾದರ್‌ ಅವರ ವಾಹನವನ್ನು ಫಾಲೋ ಮಾಡಿದ್ದ ಎನ್ನಲಾಗಿದ್ದು,  ಭದ್ರತಾ […]

ಯುವತಿಗೆ ಹಾಡಹಗಲೇ ನಡುರಸ್ತೆಯಲ್ಲಿ ತಲವಾರಿನಿಂದ ಇರಿದ ಆಟೋ ಚಾಲಕ

Tuesday, December 22nd, 2020
Asha

ಹುಬ್ಬಳ್ಳಿ: ಆಟೋರಿಕ್ಷಾ ಚಾಲಕ  ಹುಚ್ಚುಪ್ರೇಮಿಯೊಬ್ಬ ಯುವತಿಗೆ ಹಾಡಹಗಲೇ ನಡುರಸ್ತೆಯಲ್ಲಿ ತಲವಾರಿನಿಂದ ಮನಬಂದಂತೆ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಸೋಮವಾರ ಬೆಳಗ್ಗೆ ಇಲ್ಲಿನ ದೇಶಪಾಂಡೆ ನಗರದಲ್ಲಿ ನಡೆದಿದೆ. ಕುಂದಗೋಳ ತಾಲೂಕ ರಾಮಾಪೂರ ಗ್ರಾಮದ ಆಟೋರಿಕ್ಷಾ ಚಾಲಕ ಇಸ್ಮಾಯಿಲ್ ಕೆ. ಕುಂಕುರ ಹಲ್ಲೆ ಮಾಡಿದ ಆರೋಪಿ. ಇಲ್ಲಿನ ದುರ್ಗದ ಬಯಲಿನ ಜುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆಶಾ ಡಿ. ಅಗಸರ ಹಲ್ಲೆಗೊಳಗಾಗಿದ್ದಾಳೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.