ಪೆರ್ಮುದೆ ಗ್ರಾಮಪಂಚಾಯತ್ ಪಿಡಿಓರಿಂದ ಸ್ವೇಚ್ಛಾಚಾರ – ಕೋಮುಪ್ರಚೋದನೆ

Friday, June 27th, 2014
Permude

ಸುರತ್ಕಲ್ : ಪೆರ್ಮುದೆ ಗ್ರಾಮ ಪಂಚಾಯತ್ ಪಿಡಿಓ ಹಸನಬ್ಬ ಎಂಬವರು ದ.ಕ. ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಪೆರ್ಮುದೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರ ಮಾತಿಗೆ ಕವಡೆ ಕಾಸಿನ ಬೆಲೆಯನ್ನು ಕೊಡದೆ ಸ್ವೇಚ್ಛಾಚಾರದಿಂದ ವಿಜೃಂಭಿಸುತ್ತಿದ್ದು ಕುತ್ತೆತ್ತೂರು ಗ್ರಾಮದ ಬಡ ಕೃಷಿಕರಿಗೆ ಕಂಟಕಪ್ರಾಯವಾಗಿ ವರ್ತಿಸುತ್ತಿರುವ ಬಗ್ಗೆ ಬೇಸತ್ತ ಕುತ್ತೆತ್ತೂರು ಜಂತಬೆಟ್ಟು ಭಾಗದ ಸಾರ್ವಜನಿಕರು ಮತ್ತೆ ಎರಡನೇ ಬಾರಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಮೊರೆ ಹೋಗಿದ್ದಾರೆ. ಪಿಡಿಓ ಅವರನ್ನು ತಕ್ಷಣ ಅಮಾನತುಗೊಳಿಸಿ ಇವರಿಗೆ ಸಹಕಾರ ನೀಡುತ್ತಿರುವ ಗ್ರಾಮಕರಣಿಕರ ಮೇಲೂ ಶಿಸ್ತುಕ್ರಮ […]

ದುಷ್ಚಟವನ್ನು ನಿರ್ಮೂಲನ ಮಾಡಲು ಸ್ವಯಂ ಜಾಗೃತಿ ಅಗತ್ಯ : ಪರಡಿ

Friday, June 27th, 2014
Drug adiction

ಬಂಟ್ವಾಳ: ಮಾದಕ ದ್ರವ್ಯ ಸೇವನೆಯಿಂದಾಗುವ ದುಷ್ಪಾರಿಣಾಮದ ಬಗ್ಗೆ ಯುವ ಸಮುದಾಯದಲ್ಲಿ ಸ್ವಯಂ ಜಾಗೃತಿ ಮೂಡಿದರೆ ಮಾತ್ರ ಈ ದುಷ್ಚಟವನ್ನು ನಿರ್ಮೂಲನ ಮಾಡಲು ಸಾಧ್ಯ ಎಂದು ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ರಶ್ಮಿ ಪರಡಿ ಹೇಳಿದರು. ಅವರು ಗುರುವಾರ ಬಂಟ್ವಾಳ ನಗರ ಪೊಲೀಸ್ ಠಾಣೆಯ ವತಿಯಿಂದ ಮೊಡಂಕಾಪುವಿನ ಕಾರ್ಮೆಲ್ ಕಾನ್ವೆಂಟ್ ಪದವಿ ಕಾಲೇಜಿನಲ್ಲಿ ವಿಶ್ವ ಮಾಧಕ ದ್ರವ್ಯ ಹಾಗೂ ಅಕ್ರಮ ಸಾಗಾಟ ವಿರೋಧಿ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಗರ ಠಾಣಾ ಎಸೈ ನಂದಕುಮಾರ್ ಮಾತನಾಡಿ ಮಾದಕ […]

ಲೋಕಕಲ್ಯಾಣಾರ್ಥವಾಗಿ ಕದ್ರಿ ಶ್ರೀ ಮಂಜುನಾಥದೇವರಿಗೆ ಸಾಮೂಹಿಕ ಸೀಯಾಳಾಭಿಷೇಕ

Tuesday, June 24th, 2014
siyala abhisheka

ಮಂಗಳೂರು : ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ಕದ್ರಿ ಶ್ರೀ ಮಂಜುನಾಥದೇವರಿಗೆ ಸಾಮೂಹಿಕ ಸೀಯಾಳಾಭಿಷೇಕವು ದೇವಳದ ಮೊಕ್ತೇಸರ ಶ್ರೀ ಎ.ಜೆ. ಶೆಟ್ಟಿ ಅವರ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ನಡೆಯಿತು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮಹಾಬಲ ಮಾರ್ಲ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾರ್ಪೋರೇಟರ್ಗಳಾದ ಅಶೋಕ್ಡಿ.ಕೆ.,ರೂಪಾ ಡಿ. ಬಂಗೇರ, ಜಿ.ಎಸ್.ಬಿ. ಸಮಾಜದ ವಿನೋದ್ ಶೆಣೈ, ದೇವಳದ ವ್ಯವಸ್ಥಾಪನಾ ಸಮಿತಿಯಸದಸ್ಯರು, ಕದ್ರಿ ವಿಶ್ವನಾಥಆಚಾರ್ಯ, ದಿನೇಶ್ದೇವಾಡಿಗ, ಸಾಮಾಜಿಕ ಮುಖಂಡ ಎಂ.ಬಿ. ಪುರಾಣಿಕ್, ಉದಯವಾಣಿ ಬಳಗದ […]

ಪಿ.ಯು. ವಿದ್ಯಾರ್ಥಿಗಳಿಗೆ ತಕ್ಷಣವೇ ಪಠ್ಯ-ಪುಸ್ತಕ ವಿತರಿಸಲು ಎಬಿವಿಪಿ ಆಗ್ರಹ.

Tuesday, June 24th, 2014
ABVP

ಮಂಗಳೂರು : ಶೈಕ್ಷಣಿಕ ವರ್ಷ ಈಗಾಗಲೇ ಪ್ರಥಮ ಹಾಗೂ ದ್ವೀತಿಯ ವರ್ಷದ ತರಗತಿಗಳು ಆರಂಭವಾಗಿದೆ. ಆದರೂ ಇದುವರೆಗೂ ಪಠ್ಯ ಪುಸ್ತಕಗಳು ದೊರಕದೆ ವಿದ್ಯಾರ್ಥಿಗಳು, ಅಧ್ಯಾಪಕರು ಗೊಂದಲಿದಾರೆ ಆದ್ದರಿಂದ ರಾಜ್ಯ ಸರ್ಕಾರ ತಕ್ಷಣ ಪಠ್ಯಪುಸ್ತಕ ವಿತರಿಸುವಲ್ಲಿ ಗಮನ ಹರಿಸಿ, ಸಮಸ್ಯೆಯನ್ನು ಬಗೆಹರಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸರ್ಕಾರವನ್ನು ಆಗ್ರಹಿಸಿ ಮಂಗಳವಾರ ಜೂನ್ 24 ರಂದು ಪಿವಿಎಸ್ ವೃತ್ತದ ಬಳಿ ಮಾನವ ಸರಪಳಿ ನಡೆಸಿ ಪ್ರತಿಭಟನೆ ನಡೆಸಿತು. ಕರ್ನಾಟಕ ರಾಜ್ಯದಲ್ಲಿ 9 ಲಕ್ಷಕ್ಕೂ ಹೆಚ್ಚು ಪದವಿ ಪೂರ್ವದಲ್ಲಿ ವ್ಯಾಸಾಂಗ […]

ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಬಿ ಮಹಮ್ಮದ್ ಕುಂಞಿ ಆಯ್ಕೆ

Monday, June 23rd, 2014
ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಬಿ ಮಹಮ್ಮದ್ ಕುಂಞಿ ಆಯ್ಕೆ

ಮಂಗಳೂರು: ಎಂ.ಬಿ ಸದಾಶಿವ ಅವರು ತಮ್ಮ ವೈಯಕ್ತಿಕ ಕಾರಣಗಳಿಂದ ಜೆಡಿಎಸ್ ನ ದ.ಕ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವರಿಂದ ತೆರವಾದ ಸ್ಥಾನಕ್ಕೆ ಜಿಲ್ಲಾ ಜೆಡಿಎಸ್ ನ ಕಾರ್ಯಾಧ್ಯಕ್ಷ ರಾಗಿದ್ದ ಬಿ. ಮಹಮ್ಮದ್ ಕುಂಞಿ ಇವರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ಜೆಡಿಎಸ್ ನ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರ ಆದೇಶದ ಮೇರೆಗೆ ಉಸ್ತುವಾರಿ ಅಧ್ಯಕ್ಷ, ಮಾಜಿ ಶಾಸಕ ಎಂ.ಎಸ್. ನಾರಾಯಣ ರಾವ್ ಲಿಖಿತ ಆದೇಶ ನೀಡಿದ್ದಾರೆ. ಬಿ. ಮಹಮ್ಮದ್ ಕುಂಞಿ ಅವರು […]

ಮಾನವೀಯ ನೆಲೆವೀಡು ಪಚ್ಚನಾಡಿ ನಿರಾಶ್ರಿತರ ಕೇಂದ್ರ

Wednesday, June 18th, 2014
Rehabilitation Centre at Pacchanady

ಮಂಗಳೂರು : (ಲೇಖನ, ಬಿ.ಆರ್.ಚಂದ್ರಶೇಕರ ಅಜಾದ್, ವಾರ್ತಾ ಸಹಾಯಕ) ಪ್ರತಿಯೊಬ್ಬರಿಗೂ ಮೂಲಭೂತವಾಗಿ ಆಹಾರ, ವಸ್ತ್ರ ಹಾಗೂ ಇರಲೊಂದು ಸೂರು ಇದು ಅತ್ಯಾವಶ್ಯಕ. ಆದರೆ ಕೆಲವರಿಗೆ ಸ್ವಯಂಕೃತ ಅಪರಾಧವೂ ಎಂಬಂತೆ ಈ ಮೂರು ಮೂಲಭೂತ ಅವಶ್ಕತೆಗಳು ದೊರೆಯದೆ ಮಾನಸಿಕ ಅಸ್ವಸ್ಥರಂತೆ ಬೀದಿಬದಿಯಲ್ಲಿ , ಅಂಗಡಿ ಮುಂಭಾಗ, ದೇವಸ್ಥಾನ, ಸಾರ್ವಜನಿಕ ಪಾರ್ಕುಗಳು, ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ದಿನ ದೂಡುತ್ತಾರೆ. ಇವರಿಗೆ ತಮ್ಮದು, ನಮ್ಮವರು ಎಂದು ಹೇಳಿಕೊಳ್ಳಲು ಏನೂ ಇಲ್ಲದವರೂ, ಯಾರು ಇಲ್ಲದವರೂ ಇರುತ್ತಾರೆ. ಇವರ ಜೀವನವೇ ಅಯೋಮಯ ಸ್ಥಿತಿಯಲ್ಲಿರುತ್ತದೆ. […]

ಶಿಶುಮಂದಿರದಲ್ಲಿ ಸಂಸ್ಕಾರಯುತವಾದ ಶಿಕ್ಷಣ : ಡಾ.ಪ್ರಭಾಕರ ಭಟ್

Wednesday, June 18th, 2014
Ajji Bettu Free Meal

ಬಂಟ್ವಾಳ: ಇಂದು ಶಿಕ್ಷಣ ಎನ್ನುವುದು ಕೇವಲ ಮಾಹಿತಿ ನೀಡಲಷ್ಟೇ ಸೀಮಿತವಾಗುತ್ತಿದೆ. ಸಾಕ್ಷರರ ಹೆಸರಿನಲ್ಲಿ ಅದರ ತದ್ವಿರುದ್ದ ರೂಪ ರಾಕ್ಷಸರನ್ನು ಸೃಷಿಸಲಾಗುತ್ತಿದೆ ಎಂದು ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕ ಡಾ.ಪ್ರಭಾಕರ ಭಟ್ ಹೇಳಿದರು. ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಸಹಬಾಗಿತ್ವದೊಂದಿಗೆ ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಶ್ರೀ ಅಕ್ಕಮಹಾದೇವಿ ಶಿಶುಮಂದಿರದಲ್ಲಿ ಉಚಿತ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯದಿಂದಲೇ ಮಕ್ಕಳಿಗೆ ಸಂಸ್ಕಾರಯುತವಾದ ಶಿಕ್ಷಣ ದೊರೆಯಬೇಕು. ಅಂತಹ ಶಿಕ್ಷಣ ಶಿಶುಮಂದಿರಗಳಿಂದ ಕೊಡಿಸಲಾಗುತ್ತಿದೆ. ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಿಶುಮಂದಿರಗಳಿಗೆ ಕಳುಹಿಸುತ್ತಿದ್ದೇವೆ ಎನ್ನುವ […]

ಶೈಕ್ಷಣಿಕ ಸಾಲ, ಸಾಮಾಜಿಕ ಸೇವಾ ಕಾರ್ಯ ಸಾಧನೆಗೆ ಸುಬ್ಬರಾವ್ ಪೈ ಸ್ಪೂರ್ತಿ : ಆರ್.ಕೆ.ದುಬೆ.

Wednesday, June 18th, 2014
canara bank dubey

ಮಂಗಳೂರು: ಸಾಮಾಜಿಕ ಮೌಢ್ಯಗಳೇ ಬಲವಾಗಿದ್ದ ಅಂದಿನ ದಿನಗಳಲ್ಲಿ ಮಹಿಳಾ ಶಿಕ್ಷಣದ ಅದ್ಭುತ ಚಿಂತನೆಯೊಂದಿಗೆ ಬ್ಯಾಂಕಿಂಗ್ ಜತೆಗೆ ಹೆಣ್ಣು ಮಕ್ಕಳ ಶಿಕ್ಷಣ ಸಂಸ್ಥೆಯನ್ನೂ ಕಟ್ಟಿ ಬೆಳೆಸಿದ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ ದೂರದರ್ಶಿತ್ವದ ಕೊಡುಗೆ ನಮ್ಮೆಲ್ಲರಿಗೂ ಆದರ್ಶ ಮತ್ತು ಸ್ಪೂರ್ತಿಯಾಗಿದೆ. ಅವರ ಆಶಯದಂತೆ ಜಾಗತಿಕ ಮನ್ನಣೆಯೊಂದಿಗೆ ಮುನ್ನಡೆಯುತ್ತಿರುವ ಕೆನರಾ ಸಂಸ್ಥೆಗಳು , ಶಿಕ್ಷಣ ಸಾಲದ ವಿಷಯದಲ್ಲಿ ರಾಷ್ಟ್ರದಲ್ಲೇ ಅಗ್ರಸ್ಥಾನದಲ್ಲಿರುವ ಕೆನರಾ ಬ್ಯಾಂಕ್ ಸಾಮಾಜಿಕ ಕಾಳಜಿಯ ದ್ಯೋತಕವಾಗಿ ಒಂದು ವರ್ಷದಲ್ಲೇ ರೂ 67 ಕೋಟಿ ವೆಚ್ಚದಲ್ಲಿ ಸಾಮಾಜಿಕ ಸೇವಾ […]

ಬಾಂಜಾರುಮಲೆಗೆ ಮೊಬೈಲ್ ಟವರ್: ಡಿಸಿ ಸೂಚನೆ

Tuesday, June 17th, 2014
BSNL Tower

ಮಂಗಳೂರು : ಬೆಳ್ತಂಗಡಿ ತಾಲೂಕಿನ ಕುಗ್ರಾಮ ಬಾಂಜಾರುಮಲೆಯಲ್ಲಿ ಮೊಬೈಲ್ ಟವರ್ ಸ್ಥಾಪಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಬಿ.ಎಸ್.ಎನ್.ಎಲ್. ಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಬಿ.ಎಸ್.ಎನ್.ಎಲ್. ಜನರಲ್ ಮೆನೇಜರ್ಗೆ ಪತ್ರ ಬರೆದಿರುವ ಅವರು, ಸುಮಾರು 42 ಮಲೆಕುಡಿಯ ಕುಟುಂಬಗಳು ಈ ಕುಗ್ರಾಮದಲ್ಲಿ ವಾಸಿಸುತ್ತಿದ್ದು, ಸಂಪರ್ಕ ಮತ್ತು ಸಾರಿಗೆ ವ್ಯವಸ್ಥೆ ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳು ಇಲ್ಲದಿರುವುದು ಇಲ್ಲಿನ ಸಮಸ್ಯೆಯಾಗಿದೆ. ಈಗಾಗಲೇ ಗ್ರಾಮದಲ್ಲಿ ರಸ್ತೆ, ವಿದ್ಯುತ್, ನೀರು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. […]

ಗ್ರಾಮಸ್ಥರ ಮನೆ ಬಾಗಿಲಿಗೆ ಕಂದಾಯ ಇಲಾಖೆ-ರಮಾನಾಥ.ರೈ

Tuesday, June 17th, 2014
Ramanatha Rai

ಮಂಗಳೂರು : ಗ್ರಾಮೀಣ ಪ್ರದೇಶಗಳ ಜನರು ಕಂದಾಯ ಇಲಾಖೆಗೆ ಸಂಬಂದಿಸಿದ ಕೆಲಸಕಾರ್ಯಗಳಿಗೆ ಸದಾ ಪಟ್ಟಣ ಪ್ರದೇಶದ ತಹಶೀಲ್ದಾರರ ಕಚೇರಿಗೆ ಕಂದಾಯ ನಿರೀಕ್ಷಕರ ಗ್ರಾಮಲೆಕ್ಕಾಧಿಕಾರಿಗಳ ಕಚೇರಿಗೆ ಆಗಿಂದಾಗ್ಗೆ ಅಲೆಯುವುದನ್ನು ತಪ್ಪಿಸಲು ದ.ಕ.ಜಿಲ್ಲೆಯಲ್ಲಿ ಜಿಲ್ಲಾಡಳಿತ ವಿನೂತನ ಕಾರ್ಯ ಕೈಗೊಂಡಿದ್ದು ಪ್ರತಿದಿನ ಒಂದೊಂದು ಗ್ರಾಮಪಂಚಾಯತ್ ನಲ್ಲಿ ಕಂದಾಯ ಅದಾಲತ್ ಗಳನ್ನು ಹಮ್ಮಿಕೊಳ್ಳುವ ಮೂಲಕ ಕಂದಾಯ ಇಲಾಖೆಯನ್ನು ಗ್ರಾಮಸ್ಥರ ಮನೆ ಬಾಗಿಲಿಗೆ ತಂದಿದೆ ಎಂದು ಅರಣ್ಯ, ಪರಿಸರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಅವರು ತಿಳಿಸಿದ್ದಾರೆ. ಅವರು ಇಂದು ಬಂಟ್ವಾಳ […]