ಮಂಗಳೂರು ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಯಾಗಿ ಜನಾರ್ದನ ಪೂಜಾರಿ ನಾಮಪತ್ರ ಸಲ್ಲಿಕೆ

Thursday, March 27th, 2014
Poojary

ಮಂಗಳೂರು: ನಾಮಪತ್ರ ಸಲ್ಲಿಸಲು ಕೊನೆಯದಿನವಾದ ಬುಧವಾರ ಮಂಗಳೂರು ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಯಾಗಿ ಜನಾರ್ದನ ಪೂಜಾರಿ ನಾಮಪತ್ರ ಸಲ್ಲಿಸಿದರು. ಆರೋಗ್ಯ ಸಚಿವ ಯು ಟಿ ಖಾದರ್‌ ,ಜಿಲ್ಲಾಉಸ್ತುವಾರಿ ಹಾಗೂ ಅರಣ್ಯ ಸಚಿವ ರಮನಾಥ್‌ ರೈ, ಶಾಸಕ ಜೆ. ಆರ್‌ .ಲೋಬೋ, ಮತ್ತು ಮುಖಂಡ ಪಿ ವಿ ಮೋಹನ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿಮ ಪೂಜಾರಿ ಅವರು, ಜನತೆ ಕೊಮುವಾದಿಗಳನ್ನು ತಿರಸ್ಕರಿಸುವುದು ಖಂಡಿತ ಎಂದರು. ಕಾಂಗ್ರೆಸ್ ಮಾಡಿದ ಅಭಿವ್ರುದ್ದಿ ಕೆಲಸಗಳೇ ನನಗೆ ಗೆಲುವು […]

ಕಾರ್ಕಳದಲ್ಲಿ 1 ಕೋಟಿಗೂ ಹೆಚ್ಚು ಮೌಲ್ಯದ ಬೃಹತ್ ಪ್ರಮಾಣದ ಅಕ್ರಮ ಸ್ಫೋಟಕ ಪತ್ತೆ

Thursday, March 27th, 2014
Explosive

ಕಾರ್ಕಳ : ಒಟ್ಟು ರೂ. 1 ಕೋಟಿಗೂ ಹೆಚ್ಚು ಮೌಲ್ಯದ ಬೃಹತ್ ಪ್ರಮಾಣದ ಅಕ್ರಮ ಸ್ಫೋಟಕ ಕಾರ್ಕಳ ತಾಲ್ಲೂಕಿನ ಮೂರು ಕಡೆ ಮಂಗಳವಾರ ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಖಚಿತ ಮಾಹಿತಿ ಮೇರೆಗೆ ಎಎಸ್‍ಪಿ ಅಣ್ಣಾಮಲೈ ನೇತೃತ್ವದ ಪೊಲೀಸ್ ಸಿಬ್ಬಂದಿ ಏಕಕಾಲಕ್ಕೆ ತಾಲ್ಲೂಕಿನ ನಕ್ರೆ ಗ್ರಾಮದ ವರ್ಣಬೆಟ್ಟು, ಪಟ್ಟಣದ ಸಮೀಪವಿರುವ ಕೋಟಿ ಚೆನ್ನಯ ಥೀಂ ಪಾರ್ಕ್ ಸಮೀಪದ ಗಂಧದ ಬಟ್ಟಿ ಎಂಬಲ್ಲಿನ ತೋಟದಲ್ಲಿ ಹಾಗೂ ತೆಳ್ಳಾರು ಸಮೀಪದ ದುರ್ಗಾ ಗ್ರಾಮದಲ್ಲಿ ನಡೆಸಿದ ದಾಳಿಯಲ್ಲಿ ಇವು ದೊರೆತಿವೆ. […]

ಪಿಎ ಕಾಲೇಜಿನಲ್ಲಿ ಕಲ್ಲುತೂರಾಟ ಲಾಠಿಚಾರ್ಜ್

Friday, March 21st, 2014
pa collage

ಮಂಗಳೂರು : ಪಿಎ ಕಾಲೇಜಿನಲ್ಲಿ ಕಳೆದ ಐದಾರು ದಿನಗಳಿಂದ ನಡೆದಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ಗುರುವಾರ ತಾರಕಕ್ಕೇರಿತ್ತು. ವಿದ್ಯಾರ್ಥಿಗಳ ಬೇಡಿಕೆಗೆ ಮಣಿದ ಕಾಲೇಜು ಆಡಳಿತ ಮಂಡಳಿ ಕೊನೆಗೆ ಪೊಲೀಸರನ್ನು ಕರೆಸಿಕೊಂಡು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಚ್ ಮಾಡಿಸಿದ ಪ್ರಸಂಗ ನಡೆಯಿತು. ಮಾ.15ರಿಂದ ಕಾಲೇಜಿನ ಮೂಲ ಸೌಕರ್ಯ ಕೊರತೆ, ಕಳಪೆ ಆಹಾರ ನೀಡಿಕೆ, ಬೌದ್ಧಿಕ ಗುಣಮಟ್ಟದ ಬಗ್ಗೆ ಪ್ರಶ್ನಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಿರತರಾಗಿದ್ದಾರೆ. ಗುರುವಾರ ಪಾಠ ಪ್ರವಚನಗಳನ್ನು ಬಹಿಷ್ಕರಿಸಿದ ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಪ್ರತಿಭಟನೆ ನಿರತರಾಗಿದ್ದರು. ಮಾ.19ರೊಳಗೆ ಸೂಕ್ತ ವ್ಯವಸ್ಥೆ […]

ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ ವತಿಯಿಂದ ಹಕ್ಕೊತ್ತಾಯ ಸಮಾವೇಶ

Wednesday, March 19th, 2014
Hakkottaya

ಮಂಗಳೂರು : ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ ಆಶ್ರಯದಲ್ಲಿ ನಗರದ ಎನ್‌ಜಿಒ ಹಾಲ್‌ನಲ್ಲಿ ಮತದಾರರ ಜಾಗೃತಿ ಮತ್ತು ಜನರ ಪ್ರಣಾಳಿಕೆ ಆಗ್ರಹದ ಅಂಗವಾಗಿ ಮಂಗಳವಾರ ಹಕ್ಕೊತ್ತಾಯ ಸಮಾವೇಶ ನಡೆಯಿತು. ಸ್ವದೇಶೀ ಜಾಗರಣ ಮಂಚ್‌ನ ರಾಷ್ಟ್ರೀಯ ಸಹಸಂಚಾಲಕ ಹಾಗೂ ಆರ್ಥಿಕ ತಜ್ಞ ಪ್ರೊ| ಬಿ.ಎಂ. ಕುಮಾರಸ್ವಾಮಿ ಮಾತನಾಡಿ ಅನ್ನ ಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಹಲವಾರು ಭಾಗ್ಯದ ಯೋಜನೆ ಆರಂಭಿಸಿರುವ ಸರಕಾರ, ‘ಉದ್ಯೋಗ ಭಾಗ್ಯ’ ನೀಡುವ ಮೂಲಕ ಜನರನ್ನು ಗಟ್ಟಿಗೊಳಿಸಿ ಎಂದು ಹೇಳಿದರು. ಕೇಂದ್ರದವರು 3 ರೂ.ಗೆ ಅಕ್ಕಿ […]

ಸೈಕಲ್ ಬಿಟ್ಟು ಕೈ ಹಿಡಿದ ಸಿ.ಪಿ ಯೋಗೀಶ್ವರ್

Wednesday, March 19th, 2014
Yogeshwar

ಬೆಂಗಳೂರು : ಸಿ..ಪಿ ಯೋಗೀಶ್ವರ್ ಅವರು ಮತ್ತೊಮ್ಮೆ ಪಕ್ಷಾಂತರ ಮಾಡಿದ್ದಾರೆ. ಸಮಾಜವಾದಿ ಪಕ್ಷದ ಏಕೈಕ ಶಾಸಕ ಮಂಗಳವಾರದಂದು ಕೆಪಿಸಿಸಿ ಕಚೇರಿಗೆ ತೆರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶಾಸಕ ಸಿ.ಪಿ ಯೋಗೀಶ್ವರ್ ಅವರು ಸಮಾಜವಾದಿ ಪಕ್ಷ ತೊರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಚಿವ ಡಿ.ಕೆ ಶಿವಕುಮಾರ್, ಮುಂತಾದ ನಾಯಕರು ಉಪಸ್ಥಿತರಿದ್ದರು. ಕಳೆದ ಆಗಸ್ಟಿನಲ್ಲಿ ಚನ್ನಪಟ್ಟಣದಲ್ಲಿ ನಡೆದಿದ್ದ ಸಮಾಜವಾದಿ ಪಕ್ಷದ ಬೆಂಬಲಿಗರ ಸಭೆಯಲ್ಲಿ […]

ಮಂಗನಕಾಯಿಲೆ ನಿಯಂತ್ರಣಕ್ಕೆ ಕ್ರಮ : ಸಚಿವ ಯು.ಟಿ.ಖಾದರ್

Tuesday, March 18th, 2014
ut khader

ಶಿವಮೊಗ್ಗ : ಇತ್ತೀಚೆಗೆ ರಾಜ್ಯದ ನಾಲ್ಕಾರು ಜಿಲ್ಲೆಗಳಲ್ಲಿ ಕಂಡುಬಂದಿರುವ ಮಂಗನಕಾಯಿಲೆ ನಿಯಂತ್ರಣಕ್ಕೆ ಅಗತ್ಯಕ್ರಮ ಕೈಗೊಳ್ಳಲಾಗುವುದೆಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಹೇಳಿದರು. ಅವರು ಸೋಮವಾರ ತೀರ್ಥಹಳ್ಳಿಯ ತಾಲೂಕು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಈ ಕಾಯಿಲೆಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು. ವಿಶೇಷವಾಗಿ ಈ ಕಾಯಿಲೆಯು ಅರಣ್ಯಗಳಲ್ಲಿ ವಾಸಿಸುವ ವನವಾಸಿಗಳಲ್ಲೇ ಕಂಡುಬರುತ್ತಿರುವುದರಿಂದ ಮಲೆನಾಡಿನ ಅರಣ್ಯ ಪ್ರದೇಶಗಳಲ್ಲಿವಾಸಿಸುವ ಹಾಗೂ ಕಾಯಿಲೆ ಪೀಡಿತರಿಗೆ […]

ಮತದಾನದ ಅವಧಿ ಒಂದು ಗಂಟೆ ವಿಸ್ತರಣೆ

Tuesday, March 18th, 2014
Anil Zha

ಬೆಂಗಳೂರು : ಮತದಾನದ ಅವಧಿ ವಿಸ್ತರಣೆ ಮಾಡಲು ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದ್ದು, ರಾಜ್ಯದ 28 ಲೋಕಾಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಅನಿಲ್ ಕುಮಾರ್ ಝಾ, ಬೇಸಿಗೆ ಹಿನ್ನಲೆಯಲ್ಲಿ ಮತದಾನದ ಅವಧಿಯನ್ನು ಹೆಚ್ಚಿಸಲು ಮನವಿಗಳು ಬಂದಿದ್ದವು. ಕೇಂದ್ರ ಚುನಾವಣಾ ಆಯೋಗ ಇದಕ್ಕೆ ಒಪ್ಪಿಗೆ ನೀಡಿದ್ದು, ಏ.17 ರಂದು […]

ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ ಮಾಡಲು ಬಿಡುವುದಿಲ್ಲ : ಜನಾರ್ಧನ ಪೂಜಾರಿ

Monday, March 17th, 2014
B Janardhana Poojary

ಮಂಗಳೂರು : ಪಾಲಿಕೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಆಡಳಿತಾಧಿಕಾರಿಗಳು ಆಸ್ತಿ ತೆರಿಗೆಯನ್ನು ಹೆಚ್ಚಿಸಿ ಆದೇಶ ಹೊರಡಿಸಿರುವುದು ಸರಿ ಅಲ್ಲ. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ ಮಾಡಲು ಬಿಡುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಮಂಗಳೂರು ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಜನಾರ್ಧನ ಪೂಜಾರಿ ಹೇಳಿದರು. ಅವರು ಸೋಮವಾರ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪಾಲಿಕೆ ಆಡಳಿತಾಧಿಕಾರಿಗಳು ಈಗಾಗಲೇ ಆಸ್ತಿ ತೆರಿಗೆಯನ್ನು ಶೇ. 15ರಷ್ಟು ಏರಿಕೆ […]

ಮನಪಾ ಮೇಯರ್‌ ಆಗಿ ಮಹಾಬಲ ಮಾರ್ಲ

Thursday, March 13th, 2014
Mahabala-Morley

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 25ನೇ ಮೇಯರ್‌ ಆಗಿ ಕಾಂಗ್ರೆಸ್‌ ಸದಸ್ಯ ಮಹಾಬಲ ಮಾರ್ಲ ಅವರು ಮಾ. 13ರಂದು  ಆಯ್ಕೆಯಾಗಿದ್ದಾರೆ. ಕವಿತಾ ಅವರು ಉಪಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ  ಚುನಾವಣೆಯಲ್ಲಿ  ಬಿಜೆಪಿಯಿಂದ ಸ್ಪರ್ಧಿಸಿದ ತಿಲಕ್‌ರಾಜ್‌ ಅವರು 20 ಮತಗಳನ್ನು ಪಡೆದರೆ ಮಾರ್ಲ ಅವರು 37 ಮತಗಳನ್ನು ಪಡೆದು ಜಯಶಾಲಿಯಾದರು. ಮಹಾಬಲ ಮಾರ್ಲ  ಅವರು ಕದ್ರಿ ಪದವು ವಾರ್ಡ್‌ನಿಂದ ಮೂರು ಬಾರಿ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ಮೈಸೂರು ಪ್ರಾದೇಶಿಕ ಆಯುಕ್ತರು ಚುನಾವಣೆ […]

‘ಎಣ್ಣೆ’ ಮೇಲೆ ಅಬಕಾರಿ ಇಲಾಖೆ ಕಣ್ಣು

Thursday, March 13th, 2014
Alcohol

ಬೆಂಗಳೂರು: ಲೋಕಸಭಾ ಚುನಾವಣೆ ವೇಳೆ ಹರಿಯಬಹುದಾದ ಹೆಂಡದ ಹೊಳೆಗೆ ಅಣೆಕಟ್ಟೆ ಕಟ್ಟಲು ಅಬಕಾರಿ ಇಲಾಖೆ ಕಸರತ್ತು ಆರಂಭಿಸಿದೆ. ಮದ್ಯ ಮಾರಾಟ ಮತ್ತು ಸಾಗಣೆ ಮೇಲೆ ಇಲಾಖೆ ಇದೇ ಪ್ರಥಮ ಬಾರಿಗೆ ‘ಎಸ್‌ಎಂಎಸ್ ಅಸ್ತ್ರ’ ಬಳಸಲು ತೀರ್ಮಾನಿಸಿದೆ. ಅಂದರೆ ಪ್ರತಿ ಡಿಸ್ಟಿಲರಿಗಳು ಉತ್ಪಾದಿಸುವ ಮದ್ಯ, ಅದು ಸಾಗಣೆಯಾಗುವ ರೀತಿ ಮತ್ತು ಮದ್ಯದ ಅಂಗಡಿಗಳು ನಡೆಸುವ ಮಾರಾಟದ ಬಗ್ಗೆ ಕ್ಷಣಕ್ಷಣದ ಮಾಹಿತಿ ಪಡೆಯಲಿದೆ. ಡಿಸ್ಟಿಲರಿಗಳು ಮದ್ಯ ಉತ್ಪಾದಿಸಿ, ಅದನ್ನು ಹಂಚಿಕೆ ಮಾಡುವವರೆಗೂ ನಡೆಯುವ ಚಟುವಟಿಕೆ ತಿಳಿಯಲು ಎಲ್ಲಾ ಡಿಸ್ಟಿಲರಿಗಳಲ್ಲೂ ಸಿಸಿ […]