ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದಗೊಳಿಸಿರುವ ನೂತನ ಸಚಿವ ಸಂಪುಟ ಪಟ್ಟಿಯಲ್ಲಿ ದ.ಕ ದ ಶಾಸಕರು

Friday, May 17th, 2013
Rai-Sorake-UT Khader

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಮಾರು 25 ಮಂದಿ ಸಚಿವರ ಸಂಭವನೀಯ ನೂತನ ಸಚಿವ ಸಂಪುಟ ಪಟ್ಟಿಯನ್ನು ಸಿದ್ದಪಡಿಸಿದ್ದು,  ಈ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಶಾಸಕರ ಹೆಸರಿರುವುದು ಮೂಲಗಳಿಂದ ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ರಮಾನಾಥ ರೈ, ಯು.ಟಿ.ಖಾದರ್, ವಿನಯ್ ಕುಮಾರ ಸೊರಕೆ ಈ ಮೂವರ ಹೆಸರು ನೂತನ ಸಚಿವ ಸಂಪುಟ ಪಟ್ಟಿಯಲ್ಲಿರುವುದಾಗಿ ತಿಳಿದುಬಂದಿದೆ. ರಮಾನಾಥ ರೈ ಯವರು ಮೊದಲ ಹಂತದ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಇನ್ನುಳಿದಂತೆ ವಿನಯ್ ಕುಮಾರ […]

ಡಿವೈಎಫ್ ಐ ನ ನೇತೃತ್ವದಲ್ಲಿ ವಿವಿದೋದ್ದೇಶ ಸಹಕಾರಿ ಸಂಘದ ಮೇಲೆ ಹೂಡಿಕೆದಾರರ ಮುತ್ತಿಗೆ

Thursday, May 16th, 2013
Cooperative society

ಮಂಗಳೂರು : ನಗರದ ಸ್ಟೇಟ್ ಬ್ಯಾಂಕ್ ನ ನೆಲ್ಲಿಕಾಯಿ ರಸ್ತೆ ಬಳಿಯ ವಿವಿದೋದ್ದೇಶ ಸಹಕಾರಿ ಸಂಘವೊಂದು ತನ್ನ ಹೂಡಿಕೆದಾರರಿಗೆ ಹಣ ಮರಳಿಸದೆ ಮೋಸ ಎಸಗಿರುವುದರಿಂದ  ಹೂಡಿಕೆದಾರರು  ಡಿವೈಎಫ್ ಐ ನ ನೇತೃತ್ವದಲ್ಲಿ ಸೊಸೈಟಿ ಮೇಲೆ ಮುತ್ತಿಗೆ ಹಾಕಿದ ಘಟನೆ ಗುರುವಾರ ನಡೆದಿದೆ. ಉದ್ಯಮಶೀಲ ವಿವಿದೊದ್ದೇಶ ಸಂಘ ಎಂಬ ಹೆಸರಿನ ಸಹಕಾರಿ ಸಂಘವು ನಗರದ ಪಂಪ್ ವೆಲ್ ಬಳಿ ತನ್ನ ಮುಖ್ಯ ಕಚೇರಿಯನ್ನು ಹೊಂದಿದ್ದು ಪಿಗ್ಮಿ ಹೆಸರಲ್ಲಿ ಹಲವಾರು ಜನರಿಂದ ಹಣ ಸಂಗ್ರಹಿಸುತ್ತಿದ್ದರೆನ್ನಲಾಗಿದೆ. ಗ್ರಾಹಕರು ತಾವು ತೊಡಗಿಸಿದ ಹಣವನ್ನು […]

ಕುಂದಾಪುರ : ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪುನರಾರಂಭ

Thursday, May 16th, 2013
Kundapur

ಕುಂದಾಪುರ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಕಂಪನಿಯು ಆರ್ಥಿಕ ಮುಗ್ಗಟ್ಟನಿಂದಾಗಿ ಕಾಮಗಾರಿಯನ್ನು ಅರ್ಧದಲ್ಲೇ ನಿಲ್ಲಿಸಿತ್ತು. ಆದರೆ  ಪ್ರಸ್ತುತ ಗುತ್ತಿಗೆ ವಹಿಸಿಕೊಂಡ ಕಂಪನಿಯ ಎಲ್ಲಾ ಸಮಸ್ಯೆಗಳು ಬಗೆಹರಿದಿದ್ದು ಅರ್ಧದಲ್ಲೇ ನಿಂತ ಹೆದ್ದಾರಿ ಕಾಮಗಾರಿಯನ್ನು ತಕ್ಷಣ ಪೂರೈಸಿಕೊಡುವ ಭರವಸೆ ನೀಡಿದ್ದಾರೆ ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ. ಅಲ್ಲದೆ ಈ  ಪ್ರದೇಶದಲ್ಲಿ ಎಂಬ್ಯಾಂಕ್ ಮೆಂಟ್ ನಿರ್ಮಿಸಲಾಗುತ್ತದೆ ಎಂಬ ಕಾರಣಕ್ಕಾಗಿ ಹಲವಾರು ಸಂಘಟನೆಗಳು ಹೋರಾಟ ನಡೆಸಿ ಎಂಬ್ಯಾಂಕ್ ಮೆಂಟ್ ನಿರ್ಮಾಣ ಮಾಡದಂತೆ ಅಗ್ರಹಿಸಲಾಗಿತ್ತು ಕೊನೆಗೆ ಮಣಿದ ಹೆದ್ದಾರಿ ಪ್ರಾಧಿಕಾರದ […]

ನಿಗಧಿತ ಅವಧಿಯಲ್ಲಿ ಪಾಲಿಕೆ ಕಾಮಗಾರಿ ಪೂರೈಸುವಂತೆ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಸೂಚನೆ

Thursday, May 16th, 2013
N.Prakash

ಮಂಗಳೂರು : ಮಳೆಗಾಲ ಪ್ರಾರಂಭವಾಗುವುದಕ್ಕು ಮುನ್ನ ನಗರದ ಚರಂಡಿಗಳ ಹೂಳೆತ್ತುವಿಕೆ ಕಾಮಗಾರಿಗಳನ್ನು ಮೇ 25 ರೊಳಗೆ ಪೂರ್ಣಗೊಳಿಸಬೇಕೆಂದು ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಹಾಗು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್. ಪ್ರಕಾಶ್ ತಿಳಿಸಿದರು. ಅವರು ಬುಧವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಲಾದ ಅಭಿವೃದ್ಧಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಪಾಲಿಕೆ ಮುಖ್ಯ ಅಧೀಕ್ಷಕ ಎಂಜಿನಿಯರ್ ಬಿ.ಎಸ್.ಬಾಲಕೃಷ್ಣ ಮಾತನಾಡಿ, ನೆರೆ ಪೀಡಿತ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದ್ದು, 10 ತಂಡಗಳ ಟಾಸ್ಕ್ಫೋರ್ಸ್‌ ರಚಿಸಲಾಗಿದೆ. ಇನ್ನುಳಿದಂತೆ  ಪಾಲಿಕೆಯಲ್ಲಿ ಈಗಾಗಲೇ 71 ಲಕ್ಷ ರೂಪಾಯಿ […]

ಮೇ 18.ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರಧಾನ

Wednesday, May 15th, 2013
Beary Academy Awards

ಮಂಗಳೂರು : ಬ್ಯಾರಿ ಭಾಷೆ, ಕಲೆ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ವತಿಯಿಂದ ನೀಡಲಾಗುವ ಬ್ಯಾರಿ ಸಾಹಿತ್ಯ ಅಕಾಡಮಿ ಪ್ರಶಸ್ತಿ  ಪ್ರಧಾನ ಸಮಾರಂಭವು ಮೇ 18 ರಂದು ನಗರದ ಪುರಭವನದಲ್ಲಿ ನಡೆಯಲಿರುವುದಾಗಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದರು. 2012 ನೇ ಸಾಲಿನ ಗೌರವ ಪ್ರಶಸ್ತಿಗೆ ಬ್ಯಾರಿ ಭಾಷೆ, ಕಲೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಲ್ಜಾಜ್ ವಿ.ಎ. ಇಸ್ಮಾಯಿಲ್ ಮದನಿ, ಮುಹಮ್ಮದ್ ಬಡ್ಡೂರು […]

ಕಾಸರಗೋಡು : ಟಾಟಾ ಸುಮೋದ ಮೂಲಕ ಸಾಗಿಸುತ್ತಿದ್ದ ಗಾಂಜಾ ವಶ, ಇಬ್ಬರ ಸೆರೆ

Wednesday, May 15th, 2013
Ganja seize Kasargod

ಕಾಸರಗೋಡು : ಟಾಟಾ ಸುಮೋದ ಮೇಲ್ಬಾಗದಲ್ಲಿ ವಿಶೇಷ ರಂದ್ರ ನಿರ್ಮಿಸಿ ಆ ಮೂಲಕ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 52 ಕೆ.ಜಿ ಗಾಂಜಾ ಸಹಿತ ಇಬ್ಬರನ್ನು ನಗರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಸುನಿಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಕೋಟಯಂ ನಿವಾಸಿ ಕೆ.ಎ. ನವಾಝ್ (32), ನೀಲೇಶ್ವರ ಕುನ್ನುಂಗೈಯ ಸಿ.ಎಚ್.ಸಲೀಂ(32) ಬಂಧಿತ ಆರೋಪಿಗಳಾಗಿದ್ದಾರೆ. ಕಾಸರಗೋಡು ಡಿವೈಎಸ್ಪಿ  ಮೋಹನ್ ಚಂದ್ರನ್ ನಾಯರ್ ಗೆ ಲಭಿಸಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಬೇವಿಂಜೆ ಬಳಿ […]

ಡಾ.ಜಿ.ಎಸ್. ವೃದ್ದಾಶ್ರಮದ ವತಿಯಿಂದ ಮೂವರು ಗಣ್ಯರಿಗೆ ಅಭಯಶ್ರೀ ಪ್ರಶಸ್ತಿ

Wednesday, May 15th, 2013
ಡಾ.ಜಿ.ಎಸ್. ವೃದ್ದಾಶ್ರಮದ ವತಿಯಿಂದ ಮೂವರು ಗಣ್ಯರಿಗೆ ಅಭಯಶ್ರೀ ಪ್ರಶಸ್ತಿ

ಮಂಗಳೂರು : ವೃದ್ಧರ ಹಾಗು ದೀನ ದಲಿತರ ಆಶ್ರಯಧಾಮವಾಗಿರುವ, ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಡಾ.ಗಿರಿಧರ್ ರಾವ್ ಸಂಜೀವಿ ಬಾಯಿ ವೃದ್ದಾಶ್ರಮದ ವತಿಯಿಂದ ಸಮಾಜಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡಿರುವ ಅಭಯ ಆಶ್ರಯದ ಸಂಸ್ಥಾಪಕ ದಿ.ಬೇಕಲ್  ಲಿಂಗಪ್ಪಯ್ಯ, ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ಕುಲಪತಿ ಡಾ. ರಾಮ್ ದಾಸ್ ಪೈ ಈ ಮೂವರಿಗೆ ಅಭಯ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಡಾ.ಜಿ.ಎಸ್. ವೃದ್ದಾಶ್ರಮದ ಸಂಚಾಲಕ ಶ್ರೀನಾಥ್ ಹೆಗ್ಡೆ  ತಿಳಿಸಿದರು. ಮಂಗಳವಾರ ವೃದ್ದಾಶ್ರಮದಲ್ಲಿ […]

ಕಾಂಗ್ರೆಸ್ ತನ್ನ ಆಡಳಿತಾವಧಿಯಲಿ ಜನೋಪಯೋಗಿ ಕಾರ್ಯಗಳ ಮೂಲಕ ಉತ್ತಮ ಆಡಳಿತವನ್ನು ನೀಡಲಿದೆ : ಇಬ್ರಾಹಿಂ ಕೋಡಿಜಾಲ್

Tuesday, May 14th, 2013
Ibrahim Kodijal

ಮಂಗಳೂರು : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸಿದ್ದರಾಮಯ್ಯನವರು ಉತ್ತಮ ಆಡಳಿತವನ್ನು ನೀಡಲಿದ್ದು, ಕರ್ನಾಟಕ ರಾಜ್ಯವನ್ನು ಪ್ರಗತಿ ಪಥದತ್ತ ಕೊಂಡೊಯ್ಯಲಿದ್ದಾರೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದರು. ಅವರು ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಏರ್ಪಡಿಸಲಾದ ಪತ್ರಿಕಾಘೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಪ್ರಾರಂಭದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಇತ್ತೀಚಿಗೆ ನಡೆದ ವಿಧಾನಸಭಾ ಚುನವಣೆಗಳಲ್ಲಿ ಭ್ರಷ್ಟಾಚಾರದಿಂದ ಕೂಡಿದ್ದ ಬಿಜೆಪಿ ಸರ್ಕಾರವನ್ನು ತಿರಸ್ಕರಿಸಿದ ಮತದಾರ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ನೀಡುವ […]

ರವಿ ಪೂಜಾರಿಯ ಸಹಚರರೆನ್ನಲಾದ ಮೂವರು ಆರೋಪಿಗಳ ಬಂಧನ

Tuesday, May 14th, 2013
Ravi Poojari

ಕಾರ್ಕಾಳ : ರವಿ ಪೂಜಾರಿಯ ಸಹಚರರೆನ್ನಲಾದ ಮೂವರು ಆರೋಪಿಗಳನ್ನು ಕಾರ್ಕಾಳ ಪೋಲಿಸರು ಸೊಮವಾರ ಬಂಧಿಸಿದ್ದಾರೆ. ಬಂಟ್ವಾಳ ಸಾಲೆತ್ತೂರಿನ ಗುರುಪ್ರಸನ್ನ(೨೨), ಕಾರ್ಕಾಳ ನಗರದ ನಿತಿನ್ ಕುಮಾರ್(೨೨) ಮತ್ತು ಕಾರ್ಕಾಳದ ಸೋನನಾಥ ಎಂಬುವವರು ಬಂಧಿತ ಆರೋಪಿಗಳಾಗಿದ್ದಾರೆ. ಕಾರ್ಕಾಳ ತಾಲೂಕಿನ ಮಾಳ ಗ್ರಾಮದ ಕ್ರಷರ್ ಮಾಲಕ ಸಿ.ಎಂ.ಜಾಯ್ ಅವರ ಮನೆಗೆ ಮೇ ೧೧ ಶನಿವಾರ ಕಾರಿನಲ್ಲಿ ಬಂದಿದ್ದ ಆರೋಪಿಗಳು ಪಿಸ್ತೂಲ್ ತೋರಿಸಿ ರವಿ ಪೂಜಾರಿ ಕೇಳಿದ ಹಣ ಕೊಡುವಂತೆ ಹೇಳಿ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಸೋಮವಾರ ಆರೋಪಿಗಳು ಹೊಸ್ಮಾರು ಕಡೆಯಿಂದ ಕಾರ್ಕಾಳದ […]

ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡಿದ ನಟ ಶಿವರಾಜ್ ಕುಮಾರ್

Tuesday, May 14th, 2013
Shivraj Kumar

ಮಂಗಳೂರು : ಅಕ್ಷಯ ತದಿಗೆ ಮತ್ತು ಬಸವ ಜಯಂತಿಯ ವಿಶೇಷ ದಿನವಾದ ಸೋಮವಾರ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ರವರು ಕುಂಟುಂಬ ಸಮೇತ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ  ನಗರಕ್ಕೆ ಆಗಮಿಸಿದ್ದ ಅವರ ಜೊತೆಯಲ್ಲಿ ಪತ್ನಿ ಗೀತಾ, ಹಿರಿಯ ನಟ ಚಂದ್ರಶೇಖರ್, ಗುರುದತ್ ಹಾಗು ಇತರರು ಆಗಮಿಸಿದ್ದರು. ಶ್ರೀ ಕ್ಷೇತ್ರದ ಪರವಾಗಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್ ರವರು ಶಿವರಾಜ್ ಕುಮಾರ್ […]