ಡಾ.ಜಯಂತ ಆಠವಲೆಯವರ 77ನೇ ಜನ್ಮೋತ್ಸವದ ನಿಮಿತ್ತ ಮಂಗಳೂರಿನಲ್ಲಿ ಹಿಂದೂ ಏಕತಾ ಮೆರವಣಿಗೆ

Tuesday, May 21st, 2019
Hindu janan jagruti

ಮಂಗಳೂರು : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ 77 ನೇ ಜನ್ಮೋತ್ಸವ ನಿಮಿತ್ತ ಹಿಂದೂ ಐಕ್ಯತೆ ಮೆರವಣಿಗೆಯು ಸೋಮವಾರ  ಜ್ಯೋತಿ ವೃತ್ತದಿಂದ ಧರ್ಮ ಧ್ವಜದ ಪೂಜೆಯೊಂದಿಗೆ ಪ್ರಾರಂಭವಾಗಿ ಮೆರವಣಿಗೆಯ ಮೂಲಕ ಪುರಭವನದಲ್ಲಿ ಸಮಾರೂಪ ಕಾರ್ಯಕ್ರಮದಿಂದ ಮುಕ್ತಾಯವಾಯಿತು. ಮೆರವಣೆಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ವಿವಿಧ ಹಿಂದೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಮೆರವಣಿಗೆಯಲ್ಲಿ ಇಸ್ಕಾನ್ ಸಂಸ್ಥೆ, ಶ್ರೀರಾಮ ಸೇನೆ, ನವಜೀವನ ವ್ಯಾಯಾಮ ಶಾಲೆ ಮಾರ್ನಬೈಲ್ , ಖಾವಂತಾಯ ಗೆಳೆಯರು ಮಾರ್ನಬೈಲು, ಚಿರಂಜೀವಿ ಯುವಕ ಮಂಡಳಿಯ ಕಾರ್ಯಕರ್ತರು […]

ಕದ್ರಿಯಲ್ಲಿ ಮಳೆಗಾಗಿ ಪರ್ಜನ್ಯಜಪ, ರುದ್ರ ಪಾರಾಯಣ

Saturday, May 18th, 2019
vipra

ಮಂಗಳೂರು :  ಕರ್ನಾಟಕದಲ್ಲಿ ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲ ತೀವ್ರತರವಾದ ಜಲಕ್ಷಾಮ ತಲೆದೋರಿದ್ದುಇದರ ಪರಿಹಾರಾರ್ಥ ಅಖಿಲ ಭಾರತ ಬ್ರಾಹ್ಮಣ ಒಕ್ಕೂಟ ಆಶ್ರಯದಲ್ಲಿ ಕದ್ರಿ ಮಂಜುನಾಥ ದೇವಳದ ಕೆರೆಯ ಪ್ರಾಂಗಣದಲ್ಲಿ ಬೆಳಗ್ಗೆ 9 ಗಂಟೆಯಿಂದ 7.30 ರ ವರೆಗೆ ವರುಣ ದೇವರ ಪ್ರೀತ್ಯರ್ಥ, ಪರ್ಜನ್ಯ ಜಪ, ರುದ್ರ ಪಾರಾಯಣ ವಿಷ್ಣು ಸಹಸ್ರ ನಾಮ ಪಠಣ ನಡೆಸಲಾಯಿತು. ಕದ್ರಿ ದೇವಳದ ಅರ್ಚಕರಾದ ರಾಘವೇಂದ್ರ ಅಡಿಗ, ಡಾ. ಪ್ರಭಾಕರ ಅಡಿಗ ದೀಪ ಪ್ರಜ್ವಲನಗೊಳಿಸಿದರು ಮತ್ತುಇತರ ವೈದಿಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮಜರಗಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. […]

ನಳಿನ್‌ರನ್ನು ದ.ಕ.ಜಿಲ್ಲೆಯ ಸಂಸದ ಎನ್ನಲು ನಾಚಿಕೆಯಾಗುತ್ತದೆ : ರಮಾನಾಥ ರೈ

Saturday, May 18th, 2019
Nalin-Hatavo

ಮಂಗಳೂರು : ಇತ್ತೀಚೆಗೆ ಟ್ವಿಟ್ ಮೂಲಕ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ತಕ್ಷಣ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತು ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಮಹಾತ್ಮಾ ಗಾಂಧೀಜಿಯನ್ನು ಅವಮಾನಿಸಿದ್ದನ್ನು ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಶನಿವಾರ ಪಕ್ಷದ ಕಚೇರಿ ಮುಂದೆ ನಡೆಸಿದ ಪ್ರತಿಭಟನೆಯನ್ನು […]

ಅಟೋ ರಿಕ್ಷಾಗಳಲ್ಲಿ ಮಿತಿ ಮೀರಿ ಮಕ್ಕಳ ಸಾಗಾಟ ಕ್ರಮ

Friday, May 17th, 2019
lobour

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಕಾರ್ಖಾನೆಗಳಿದ್ದು, ಬಹಳ ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ ವ್ಯವಸ್ಥಾಪಕರು ವಾಹನ ವ್ಯವಸ್ಥೆ ಮಾಡಿದ್ದಾರೆಯೇ? ಅಥವಾ ಇವರಿಗೆ ಸಮರ್ಪಕ ಬಸ್ ವ್ಯವಸ್ಥೆ ಇದೆಯೇ, ಇಲ್ಲದಿದ್ದಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ನಿಯೋಜಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆಲವು ಜಿಲ್ಲೆಗಳಲ್ಲಿ ಕಾರ್ಮಿಕರನ್ನು ಲಾರಿ, ಟ್ಯಾಕ್ಟರ್ ಗಳಲ್ಲಿ ತುಂಬಿಸಿಕೊಂಡು ಸಾಗಾಣಿಕೆ ಮಾಡಲಾಗುತ್ತಿದೆ. ಇದನ್ನು ತಡೆಯಬೇಕು. ಈ ಬಗ್ಗೆ ಕಾರ್ಮಿಕ ಇಲಾಖೆ ಜನ ಜಾಗೃತಿ ಕಾರ್ಯಕ್ರಮಗಳನ್ನು, ಶಿಕ್ಷಣ ಇಲಾಖೆ, ಪ್ರಾಧೇಶಿಕ […]

ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣ ಆರೋಪಿ ವಿಕ್ಟೋರಿಯಾಗೆ ನ್ಯಾಯಾಂಗ ಬಂಧನ

Friday, May 17th, 2019
Victoria

ಮಂಗಳೂರು :  ಶ್ರೀಮತಿ ಶೆಟ್ಟಿ (35) ಕೊಲೆ ಪ್ರಕರಣದಲ್ಲಿ ಬಂಧಿತ ಎರಡನೇ ಆರೋಪಿ ವಿಕ್ಟೋರಿಯಾ ಮಥಾಯಿಸ್‌ಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆಕೆಗೆ ಮೇ 29ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಮುಖ ಆರೋಪಿ ಜೋನಸ್ ಜೂಲಿನ್ ಸ್ಯಾಮ್ಸನ್ (36) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ನಾಲ್ಕೈದು ದಿನಗಳ ಕಾಲ ಚಿಕಿತ್ಸೆ ನೀಡಿ ಗುಣಮುಖನಾದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈತನ ಪತ್ನಿ ವಿಕ್ಟೋರಿಯಾ ಮಥಾಯಿಸ್ ನೀಡಿದ ಹೇಳಿಕೆಯ ಪ್ರಕಾರ ಆತನಿಂದ ಕೆಲವೊಂದು ಸೊತ್ತುಗಳನ್ನು ವಶಪಡಿಸಿಕೊಳ್ಳಲು ಬಾಕಿ ಇದೆ ಎಂದು […]

ಮಗಳೊಂದಿಗೆ ಶಬರಿಮಲೆ ಯಾತ್ರೆಗೆ ತೆರಳಿದ್ದ ವೀರಮಂಗಲದ ನಿವಾಸಿ ಸಾವು

Friday, May 17th, 2019
Janardhana Gowda

ಪುತ್ತೂರು :  ಶಬರಿಮಲೆ ಯಾತ್ರೆಗೆ ತೆರಳಿದ್ದ ಪುತ್ತೂರಿನ ಯುವ ಉದ್ಯಮಿಯೊಬ್ಬರು ಅಯ್ಯಪ್ಪ ಸನ್ನಿಧಾನದ ಸಮೀಪ ಹೃದಯಾಘಾತದಿಂದ ಮೇ 16 ರ ಗುರುವಾರ ಮೃತಪಟ್ಟಿದ್ದಾರೆ. ಮೃತರನ್ನು ಪುತ್ತೂರು ಹೊರ ವಲಯದ ನರಿಮೊಗರು ಎಂಬಲ್ಲಿನ ವೀರಮಂಗಲದ ಗುತ್ತು ನಿವಾಸಿ ಜನಾರ್ದನ ಗೌಡ (36) ಎಂದು ಗುರುತಿಸಲಾಗಿದೆ. ವಿಪರ್ಯಾಸ ಎಂದರೆ ಮೇ 16ರಂದು ಇವರ ವಿವಾಹ ವಾರ್ಷಿಕೋತ್ಸವ ದಿನವೂ ಆಗಿತ್ತು. ಮೇ 15ರಂದು ಅವರು ತಮ್ಮ ಪುತ್ರಿ ಭಾವ ಹಾಗೂ ಮತ್ತಿಬ್ಬರ ಜತೆ ಶಬರಿಮಲೆಯತ್ತ ಪ್ರಯಾಣ ಬೆಳೆಸಿದ್ದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ […]

ಸಹೋದರನ ಚಿಂತೆಯಲ್ಲೇ ವಿಷ ಸೇವಿಸಿದ ಚಂದ್ರಶೇಖರ್ ಮೊಗೇರ ಮೃತ್ಯು

Thursday, May 16th, 2019
Chandrashekar

ಉಡುಪಿ : ಭಟ್ಕಳ ಬಂದರ್ ರೋಡ್‌ನ ಶನಿಯಾರ ತಿಮ್ಮಪ್ಪ ಮೊಗೇರ ಎಂಬವರ ಪುತ್ರ ರಮೇಶ್ ಮೊಗೇರ ಸುವರ್ಣ ತ್ರಿಭುಜ ಬೋಟ್ ಅವಘಡದಲ್ಲಿ ನಾಪತ್ತೆಯಾಗಿರುವ ಚಿಂತೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿರುವ ಸಹೋದರ ಚಂದ್ರಶೇಖರ್ ಮೊಗೇರ (30) ಚಿಕಿತ್ಸೆ ಫಲಕಾರಿಯಾಗದೆ  ಬುಧವಾರ  ಮೃತಪಟ್ಟಿದ್ದಾರೆ. 3 ದಿನಗಳ ಬಳಿಕ ವಿಷ ಸೇವನೆ ಬಗ್ಗೆ ನೆರೆಮನೆಯವರಲ್ಲಿ ಬಾಯಿಬಿಟ್ಟಿದ್ದ ಚಂದ್ರಶೇಖರ್ ಮಾರಕವಾದ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷ ರಕ್ತದಲ್ಲಿ ಸೇರಿ ಲಿವರ್‌ಗೆ ಹಾನಿಯಾಗಿದೆ. ದೇಹದೊಳಗೆ […]

ಮಳೆಗಾಗಿ ಶಾಸಕ ವೇದವ್ಯಾಸ್‌ ಕಾಮತ್‌ರಿಂದ ಹಲವೆಡೆ ವಿಶೇಷ ಪ್ರಾರ್ಥನೆ

Thursday, May 16th, 2019
vedavyas kamath

ಮಂಗಳೂರು :  ಶಾಸಕ ವೇದವ್ಯಾಸ್‌ ಕಾಮತ್‌ ಅವರ ನೇತೃತ್ವದಲ್ಲಿ ಬುಧವಾರ ಹಲವೆಡೆ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಶೀಘ್ರದಲ್ಲಿ ಮಳೆ ಬಂದು ನಗರದ ಜನತೆಯ ಸಂಕಷ್ಟ ಬಗೆ ಹರಿಯಲು ದೇವರು ಅನುಗ್ರಹಿಸಬೇಕು ಎಂದು ಶಾಸಕ ಡಿ ವೇದವ್ಯಾಸ ಕಾಮತ್‌ ಮಂಗಳಾದೇವಿ ದೇವಸ್ಥಾನದಲ್ಲಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನದ ಮಹಾಪೂಜೆಯಲ್ಲಿ ಭಾಗ ವಹಿಸಿದ ಶಾಸಕ ಕಾಮತ್‌ ಮತ್ತು ಭಕ್ತಜನರು ದೇವರಲ್ಲಿ ಶೀಘ್ರ ಮಳೆಗಾಗಿ ಪ್ರಾರ್ಥಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು, ಸಂಕ್ರಮಣದ ಈ ಪರ್ವದಿನದಂದು ನಗ ರದ ಎಲ್ಲ ದೇವಸ್ಥಾನಗಳಲ್ಲಿ ಭಜ ಕರು, ಆಡಳಿತ […]

ದೈವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಮೀನು ಹಿಡಿಯುವ ಉತ್ಸವ

Wednesday, May 15th, 2019
Kandiga

ಮಂಗಳೂರು : ಪ್ರತಿವರ್ಷ ವೃಷಭ ಸಂಕ್ರಮಣದ ದಿನದಂದು ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ನಂದಿನಿ ನದಿಯಲ್ಲಿ ಮೀನು ಹಿಡಿಯುವ ಉತ್ಸವ  ನಡೆಯಿತು. ಸುರತ್ಕಲ್ ಸಮೀಪದ ಚೇಳಾಯಿರು ಖಂಡಿಗೆಯ  ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಮೀನು ಹಿಡಿಯುವ ಉತ್ಸವ ನಡೆಯುತ್ತದೆ. ಈ ಬಾರಿಯೂ ಚೇಳಾಯಿರು ಖಂಡಿಗೆಯ ನಂದಿನಿ ನದಿಯಲ್ಲಿ ಈ ಮೀನು ಹಿಡಿವ ಉತ್ಸವ ನಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ. ಚೇಳಾಯಿರು ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದಲ್ಲಿ […]

ಶ್ರೀಮತಿ ಶೆಟ್ಟಿ ಕೊಲೆ ಆರೋಪಿ ಆಕೆಯಿಂದ 1ಲಕ್ಷ ಸಾಲ ಪಡೆದಿದ್ದ

Wednesday, May 15th, 2019
jhone

ಮಂಗಳೂರು :  ಅಮರ್ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ (35) ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಶ್ರೀಮತಿ ಶೆಟ್ಟಿಯವರನ್ನು ಬರ್ಬರವಾಗಿ ಕೊಲೆಗೈದು ತಲೆ ಹಾಗೂ ದೇಹದ ಭಾಗಗಳನ್ನು ಕತ್ತರಿಸಿ ನಗರದ ಕದ್ರಿ ಪಾರ್ಕ್, ನಂತೂರ್, ನಂದಿಗುಡ್ಡೆ ಸೇರಿದಂತೆ ವಿವಿಧೆಡೆಗಳಲ್ಲಿ ಎಸೆದು ಹೋಗಿದ್ದ ಈ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಈ ಕೊಲೆಯಲ್ಲಿ ದಂಪತಿಗಳಿಬ್ಬರು ಭಾಗಿಯಾಗಿದ್ದು, ಬಂಧಿತರನ್ನು ವೆಲೆನ್ಸಿಯಾ ಸೂಟರ್ ಪೇಟೆಯ ಜೋನಸ್ […]