ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ- ಮತದಾನ ಜಾಗೃತಿಗಾಗಿ ಜಾಥಾ

Saturday, April 13th, 2019
Srinivasa College

ಮಂಗಳೂರು : ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ವಳಚ್ಚಿಲ್ ಹಾಗೂ ಎಸ್‌ವಿಇಇಪಿ ಸಮಿತಿಯ ಸಹಯೋಗದೊಂದಿಗೆ ವಿದ್ಯಾರ್ಥಿ ಸಮುದಾಯಕ್ಕೆ ಹಾಗೂ ಜನ ಸಾಮಾನ್ಯರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಲ್ಲಿ ಮಾನವ ಸರಪಳಿ ಹಾಗೂ ಜಾಥಾ ಕಾರ್ಯಕ್ರಮವನ್ನು ವಳಚ್ಚಿಲ್ ನಲ್ಲಿ ಹಮ್ಮಿಕೊಳ್ಳಲಾಯಿತು. ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರುಗಳು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು. ಕಾಲೇಜಿನ ಸ್ವೀಪ್ ಘಟಕದ ಸಂಯೋಜಕರಾದ ಡಾ| ಅನಂತ ಕುಲಕರ್ಣಿಯವರು ಸ್ವಾಗತಿಸಿದರು. ಬಲವಾದ ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನ ಕೇಂದ್ರಕ್ಕೆ ತೆರಳಿ […]

ಚೂರಿ ಇರಿತ : ಉಳ್ಳಾಲ್ ವೈನ್ಸ್ ಉದ್ಯೋಗಿ ಆಸ್ಪತ್ರೆಯಲ್ಲಿ ಮೃತ್ಯು

Friday, April 12th, 2019
Nithin Jogi

ಮಂಗಳೂರು  : ಉಳ್ಳಾಲ ಪ್ಯಾರೀಸ್ ಜಂಕ್ಷನ್ನಿನಲ್ಲಿರುವ ಉಳ್ಳಾಲ್ ವೈನ್ಸ್ ನಲ್ಲಿ ಕೆಲಸಕ್ಕಿದ್ದ ಯುವಕನಿಗೆ ಕಳೆದ ಭಾನುವಾರ ದಂದು  ಕೋಳಿ ಬಾಲಿನಿಂದ  ಗಂಭೀರ ವಾಗಿ ಇರಿಯಲಾಗಿತ್ತು, ಆದರೆ ಗಾಯಗೊಂಡಿದ್ದ ಯುವಕ ಏ.10ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಉಳ್ಳಾಲ ಬಂಡಿ ಕೊಟ್ಯ ನಿವಾಸಿ ನಿತಿನ್ ಜೋಗಿ(35) ಮೃತ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಗವೀರಪಟ್ಣ ನಿವಾಸಿ ರಜನೀಶ್ ನನ್ನು ಬಂಧಿಸಲಾಗಿದೆ. ಉಳ್ಳಾಲ ಪ್ಯಾರೀಸ್ ಜಂಕ್ಷನ್ನಿನಲ್ಲಿರುವ ಉಳ್ಳಾಲ್ ವೈನ್ಸ್ ನಲ್ಲಿ ಕೆಲಸಕ್ಕಿದ್ದ ನಿತಿನ್, ಬಳಿ ದಿನನಿತ್ಯ ಆರೋಪಿ ರಜನೀಶ್ ಎಂಬಾತ ಬಂದು ಹರಟೆ ಮಾತನಾಡುತ್ತಿದ್ದ‌ . ಎ.07 ಭಾನುವಾರದಂದು ರಜನೀಶ್ […]

ಭರತೇಶ ವೈಭವ ಸಾರ್ವಕಾಲಿಕ ಕೃತಿ- ಡಾ.ಎನ್.ಎಸ್.ತಾರಾನಾಥ್

Friday, April 12th, 2019
Bharatesha Vaibhava

ಮಂಗಳೂರು : ಕೃತಿಯೊಂದು ಪೂರ್ವಕಾಲೀನ, ಸಮಕಾಲೀನ ಸಂಗತಿಗಳನ್ನು ಒಳಗೊಂಡರೆ ಸಾರ್ವಕಾಲಿಕ ವೆನಿಸುತ್ತದೆ. ರತ್ನಾಕರವರ್ಣಿಯ ಭರತೇಶ ವೈಭವವು ಪೂರ್ವಕಾಲಿಕವಾಗಿ ಬಂದ ಕೃತಿಗಳ ಸಾರವನ್ನು ವಿಭಿನ್ನವಾಗಿ, ನಾವೀನ್ಯವಾಗಿ ಚಿತ್ರಿತವಾಗಿದೆ. ಇದರೊಂದಿಗೆ ಕವಿ ತನ್ನ ಕಾಲದ ಮೌಲ್ಯಗಳನ್ನು, ಚಾರಿತ್ರಿಕ ವಿಚಾರಗಳನ್ನು ಹೊಂದಿಸಿಕೊಂಡಿದ್ದಾನೆ. ಹಾಗಾಗಿ ಭರತೇಶ ವೈಭವ ಕೃತಿಯೂ ಸಾರ್ವಕಾಲಿಕವೆನಿಸಿದೆ ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕರೂ, ಸಂಶೋಧಕರೂ ಆದ ಡಾ. ಎನ್.ಎಸ್ ತಾರಾನಾಥ ನುಡಿದರು. ಅವರು ಡಾ. ಪಿ.ದಯಾನಂದ.ಪೈ- ಪಿ.ಸತೀಶ.ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಕಾಲೇಜಿನಲ್ಲಿ ಮಹಾಕವಿ ರತ್ನಾಕರವರ್ಣಿ […]

ಕದ್ರಿ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Thursday, April 11th, 2019
Kadri Temple

ಮಂಗಳೂರು  : ಕದ್ರಿ ಶ್ರೀ ಮಂಜುನಾಥದೇವಸ್ಥಾನದಲ್ಲಿ ಮೇ 2 ರಿಂದ 11 ರವರೆಗೆ ಜರಗಲಿರುವ ಬ್ರಹ್ಮಕಲಶ, ಮಹಾರುದ್ರಯಾಗ ಹಾಗೂ ಮಹಾ ದಂಡರುದ್ರಾಭಿಷೇಕದ ಆಮಂತ್ರಣ ಪತ್ರಿಕೆಯನ್ನುತಾ 10, ಬುಧವಾರ ಬೆಳಿಗ್ಗೆ  ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಹಾಗೂ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರೂ ಆಗಿರುವ ಎ. ಜಿ. ಶೆಟ್ಟಿಯವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿಎಸ್. ಪ್ರದೀಪ್‌ಕುಮಾರ್‌ಕಲ್ಕೂರ, ದೇವಳದ ಕಾರ್ಯನಿರ್ವಹಣಾಧಿಕಾರಿಡಾ. ನಿಂಗಯ್ಯ ವಿಠಲ ದಾಸತಂತ್ರಿ, ರಾಮಣ್ಣಅಡಿಗ, ರಾಘವೇಂದ್ರಅಡಿಗ, ಶಶಿಧರ ಹೆಗ್ಡೆ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ದಿನೇಶ್‌ದೇವಾಡಿಗ,ರಂಜನ್‌ಕುಮಾರ್, ಸುರೇಶ್‌ಕುಮಾರ್, ಹರಿನಾಥಜೋಗಿ, ರಾಘವೇಂದ್ರ […]

ಎಪ್ರಿಲ್ 13 ರ ಸಮಾವೇಶ ಹೊಸ‌ ಇತಿಹಾಸ‌ ನಿರ್ಮಿಸಲಿದೆ : ಸುನಿಲ್ ಕುಮಾರ್

Wednesday, April 10th, 2019
Sunil-Karkala

ಮಂಗಳೂರು: ಎಪ್ರಿಲ್ 13 ರಂದು ನಡೆಯುವ ಸಮಾವೇಶದ ಪೂರ್ವಭಾವಿ ತಯಾರಿ ಸಭೆಯಲ್ಲಿ ಮಾತನಾಡಿದ ಬಿಜೆಪಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಹಾಗೂ ಕಾರ್ಕಳ‌ ಶಾಸಕ ಸುನಿಲ್ ಕುಮಾರ್ ಕರಾವಳಿಯಲ್ಲಿ ಭಾಜಪಾ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿದೆ ಎಂದು ಹೇಳಿದ್ದಾರೆ . ಭಾರತೀಯ ಜನತಾ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಮಂಗಳೂರು ನಗರ, ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,ಕಳೆದ ಬಾರಿ ನರೇಂದ್ರ ಮೋದಿ ಮಂಗಳೂರಿಗೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದಾಗ ದಾಖಲೆಯ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿ […]

ಮತದಾರರ ಜಾಗೃತಿಗೆ ಸಹ್ಯಾದ್ರಿ ಕಾಲೇಜ್ ಸಹಿ ಆಂದೋಲನ

Wednesday, April 10th, 2019
Sahyadri-Awareness

ಮಂಗಳೂರು  : ಮುಂಬರುವ ಲೋಕ ಸಭಾ ಚುನಾವಣೆಗಳಲ್ಲಿ ಸಕ್ರಿಯ ಪಾಲ್ಗೊಳ್ಳಲು ಮೊದಲ ಬಾರಿಗೆ ಮತದಾರರನ್ನು ಉತ್ತೇಜಿಸಲು, ಸಹ್ಯಾದ್ರಿ ಕಾಲೇಜ್ ಎನ್.ಎಸ್.ಎಸ್ ಘಟಕವು ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ಪ್ರತಿಜ್ಞೆ ಮಾಡುವ ಮತ್ತು ಕಾಲೇಜು ಕ್ಯಾಂಪಸ್ನಲ್ಲಿ ಸಹಿ ಅಭಿಯಾನವನ್ನು ಪ್ರಾರಂಭಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳನ್ನು ಮತ ಚಲಾಯಿಸಲು ಪ್ರೋತ್ಸಾಹಿಸಲು ಒಂದು ಅನನ್ಯ ಮಾರ್ಗವನ್ನು ಪ್ರಾರಂಭಿಸಿತು. ಸಹಿ ಮಾಡುವ ಮೂಲಕ ಮತ ಚಲಾಯಿಸಿ. ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳನ್ನು ಮತದಾನ ಮಾಡಲು ಉತ್ತೇಜಿಸಲು ಈ ಎರಡು ದಿನಗಳ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದೆ […]

ನಳಿನ್‌ಗೆ ಮಿಥುನ್ ಸರಿಸಾಟಿಯಾದ ಅಭ್ಯರ್ಥಿಯಲ್ಲ: ಹರಿಕೃಷ್ಣ ಬಂಟ್ವಾಳ್

Tuesday, April 9th, 2019
Harikrishna

ಮಂಗಳೂರು :  ನರೇಂದ್ರ ಮೋದಿ ದೇಶದ ಪ್ರತಿಯೊಬ್ಬ ನಾಗರಿಕನ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ಹೇಳಿದುದರ ಬಗ್ಗೆ ದಾಖಲೆ ನೀಡಿದರೆ ತಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ. ದ.ಕ.ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವತ್ತೂ ಕೂಡ 15 ಲಕ್ಷ ರೂ. ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ ಹಾಕುತ್ತೇನೆ ಎಂದು ಹೇಳಲಿಲ್ಲ, ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ […]

ನಾವು ನಿಜವಾದ ಹಿಂದೂ ಧರ್ಮದ ಸಿದ್ದಾಂತ ನಂಬಿ ಬದುಕುತ್ತಿರುವವರು : ಮಿಥುನ್‌ ರೈ

Tuesday, April 9th, 2019
Mithun Rai

ಬೆಳ್ತಂಗಡಿ :  ನಿಜವಾದ ಹಿಂದೂ ಧರ್ಮದ ಸಿದ್ದಾಂತ ಎಂದರೆ ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಿ ಮುನ್ನಡೆಸುವುದು.  ನಾವು  ಹಿಂದೂ ಸಿದ್ದಾಂತವನ್ನು ನಂಬಿ ಬದುಕುತ್ತಿರುವವರು ಎಂದು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಹೇಳಿದರು. ಮಿಥುನ್ ರೈ ಮುಂದೆ ಇರುವ ರಾಜಕೀಯ ಸಿದ್ಧಾಂತ ಸ್ಪಷ್ಟವಾಗಿದೆ. ಈ ಸಿದ್ಧಾಂತದಲ್ಲಿ ಸಮಪಾಲು ಸಹಬಾಳು ಎನ್ನುವ ನೀತಿ ಇದೆ. ಮಾತ್ರವಲ್ಲದೆ ಎಲ್ಲಾ ಜಾತಿ ಬಾಂಧವರನ್ನು ಗೌರವಿಸಿ ಜತೆಯಾಗಿ ಮುನ್ನಡೆಯುವುದೇ ನೈಜ ಹಿಂದೂ ಧರ್ಮ. ಬದಲಾಗಿ ಜಾತಿ -ಧರ್ಮಗಳ ನಡುವೆ ವಿಷ ಬೀಜ ಬೆಳೆಸಿ […]

ಶಿವನಗರದ 12 ಜನ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ

Tuesday, April 9th, 2019
Nalin-Kateel

ಮಂಗಳೂರು  : ಕಳೆದ ಐದು ವರ್ಷಗಳಿಂದ ನರೇಂದ್ರ ಮೋದಿಯವರ ಕೈಯಲ್ಲಿ ಭಾರತ ಬಲಾಡ್ಯವಾಗಿ, ಸುಭದ್ರವಾಗಿ ವಿಶ್ವದೆದುರು ಎದೆಯುಬ್ಬಿಸಿ ನಿಂತಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ. ನಾಗುರಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಈ ಹಿಂದೆ ಭಾರತಕ್ಕೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಪ್ರಮುಖರು ಭೇಟಿ ಕೊಟ್ಟಾಗ ಅವರಿಗೆ ಭಾರತವನ್ನು ಪರಿಚಯಿಸುವಲ್ಲಿ ಕಾಂಗ್ರೇಸ್ ನಿರಾಸಕ್ತಿ ತೋರಿಸಿದೆ.ಆದರೆ ಕಳೆದ ಐದು ವರ್ಷಗಳಿಂದ ಪ್ರಧಾನಿ ಮೋದಿಜೀ ಅವರು ಭಾರತದ ಪರಂಪರೆ ಆಚಾರ ವಿಚಾರಗಳನ್ನು ಜಗತ್ತಿನ […]

ಆಸ್ಪತ್ರೆಗೆ ಹೋಗುವ ವೇಳೆ ಸಹೋದರಿಯರಿಬ್ಬರ ದುರ್ಮರಣ

Monday, April 8th, 2019
Bantwal- Accident

ಬಂಟ್ವಾಳ :  ಅಸೌಖ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋಗುವ ವೇಳೆ ಸಹೋದರಿಯರಿಬ್ಬರು ಮೃತಪಟ್ಟ ಘಟನೆ ಸೋಮವಾರ ಸಂಜೆ ಸಜೀಪದಲ್ಲಿ ನಡೆದಿದೆ. ಕಾರು ಹಾಗೂ ರಿಕ್ಷಾದ ನಡುವೆ ಮುಖಾಮುಖಿ ಡಿಕ್ಕಿಯಾಗಿ ರಿಕ್ಷಾದಲ್ಲಿದ್ದ ಮಂಚಿ ನಿವಾಸಿಗಳಾದ ಜೈನಾಬಾ(45) ಹಾಗೂ ಜೋಹರಾ(55) ಮೃತಪಟ್ಟ ಮಹಿಳೆಯರು. ಮಂಚಿ ನಿವಾಸಿಗಳಾದ ಈ ಸಹೋದರಿಯರು ಆಸ್ಪತ್ರೆಗೆ ಹೋಗುವ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಜೋಹರಾರವರ ಅಸೌಖ್ಯದ ಹಿನ್ನೆಲೆಯಲ್ಲಿ ಜೈನಾಬಾ ಅವರು ಮಂಚಿಯಿಂದ ರಿಕ್ಷಾ ಬಾಡಿಗೆಗೆಪಡೆದುಕೊಂಡು ಚೇಲೂರಿಗೆ ವೈದ್ಯರ ಬಳಿ ತೆರಳುತ್ತಿದ್ದರು. ಈ ಸಂದರ್ಭ ಸಜೀಪ […]