Blog Archive

ಆಸ್ತಿಗಾಗಿ ತಂಗಿ ಜೊತೆಗಿನ ಜಗಳ ಅಣ್ಣನ ಸಾವಿನಲ್ಲಿ ಅಂತ್ಯ!

Wednesday, June 27th, 2018
brother

ಬೆಂಗಳೂರು: ಆಸ್ತಿ ವಿಚಾರವಾಗಿ ಅಣ್ಣ ಮತ್ತು ತಂಗಿಯ ಮಧ್ಯೆ ನಡೆದ ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಆಸ್ತಿ ವಿಚಾರವಾಗಿ ಜಗಳವಾಡುತ್ತಿದ್ದಾಗ ಅಣ್ಣ ಕುಸಿದು ಮೃತಪಟ್ಟಿದ್ದಾರೆ. 58 ವರ್ಷದ ಮುದ್ದಪ್ಪ ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಅಣ್ಣ ಮುದ್ದಪ್ಪ ಮತ್ತು ಅವರ ತಂಗಿ ಶಶಿಕಲಾ ಮಧ್ಯೆ ಆಸ್ತಿ ವಿಚಾರವಾಗಿ ಜಗಳ ನಡೆದಿತ್ತು. ಈ ವಿವಾದ ಹಲವು ವರ್ಷಗಳಿಂದಲೂ ಇತ್ತು ಎನ್ನಲಾಗಿದೆ. ನಿನ್ನೆ ಮುದ್ದಪ್ಪ ಮನೆಗೆ ಬಂದಿದ್ದ. ಆತನ ತಂಗಿ ಶಶಿಕಲಾ ಆಸ್ತಿಯಲ್ಲಿ […]

ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ: ಬಿ.ಎಸ್.ಯಡಿಯೂರಪ್ಪ

Tuesday, June 26th, 2018
yedeyurappa

ಬೆಂಗಳೂರು: ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ. ಅಂತಹ ಪ್ರಯತ್ನಕ್ಕೂ ನಾವು ಕೈ ಹಾಕುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಅಹಮದಾಬಾದ್ನಿಂದ ಹಿಂದಿರುಗಿದ ಬಳಿಕ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾತನಾಡಿದ ಅವರು, ಜೂನ್ 29 ರಂದು ನಡೆಯುವ ಕಾರ್ಯಕಾರಿಣಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಆಹ್ವಾನಿಸಲು ಅಹಮದಾಬಾದ್ಗೆ ಹೋಗಿದ್ದನೆ ಹೊರತು ಬೇರೆ ಯಾವುದೇ ವಿಷಯದ ಚರ್ಚೆಗಲ್ಲ. ರಾಜ್ಯ ಸಮ್ಮಿಶ್ರ ಸರ್ಕಾರದ ಎರಡೂ ಪಕ್ಷಗಳು ತಾವಾಗಿಯೇ ಬಡಿದಾಡಿಕೊಂಡು ಸರ್ಕಾರ ಬೀಳಿಸಿಕೊಳ್ಳುವ ಹಾದಿಯಲ್ಲಿ ಇರುವಾಗ ನಾವು ಕೇವಲ ಮೌನವಾಗಿ ವೀಕ್ಷಿಸುತ್ತೇವೆ […]

ಕೆಲವರು ಟೀಕೆ ಮಾಡುತ್ತಿದ್ದಾರೆ..ಇದೇ ಬಜೆಟ್​ನಲ್ಲಿ ಪ್ರತ್ಯುತ್ತರ ನೀಡುವೆ: ಹೆಚ್.ಡಿ.ಕುಮಾರಸ್ವಾಮಿ

Tuesday, June 26th, 2018
kumarswamy

ಬೆಂಗಳೂರು: ಸಾಲ ಮನ್ನಾ ಬಗ್ಗೆ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕೆಲವರು ಟೀಕೆ ಮಾಡುತ್ತಿದ್ದಾರೆ. ಅವರಿಗೆ ಇದೇ ಬಜೆಟ್ನಲ್ಲಿ ಪ್ರತ್ಯುತ್ತರ ನೀಡುವೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ. ಕಾಸಿಯಾ ಸಂಸ್ಥೆಯ ಕಾಸಿಯಾ ಶ್ರೇಷ್ಠತೆ ಮತ್ತು ನಾವಿನ್ಯತೆ ಕೇಂದ್ರ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನನಗೆ ಸ್ವತಂತ್ರವಾಗಿ ಸರ್ಕಾರ ರಚನೆಗೆ ರಾಜ್ಯದ ಜನತೆ ಆಶೀರ್ವಾದ ಮಾಡಿದ್ದರೆ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುತ್ತಿದ್ದೆ. ಆದರೆ ಕೆಲವರು ಅನೇಕ ಟೀಕೆಗಳನ್ನು ಮಾಡುತ್ತಿದ್ದಾರೆ. ಅವರಿಗೆ ನನ್ನ ಸಮಸ್ಯೆ […]

ಜಾತಿ ಗಣತಿಗೆ ಹೆಚ್ಚುವರಿ ಹಣ ಕೇಳುತ್ತಿದ್ದಾರೆ: ಸಚಿವ ಪುಟ್ಟರಂಗ ಶೆಟ್ಟಿ

Friday, June 22nd, 2018
puttaranag-shetty

ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ಕೈಗೊಂಡಿರುವ ಆರ್ಥಿಕ ಮತ್ತು ಸಾಮಾಜಿಕ ಗಣತಿಗೆ ಅಧಿಕಾರಿಗಳು ಹೆಚ್ಚುವರಿ ಹಣ ಕೇಳುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ತಮ್ಮ ಕಚೇರಿ ಪ್ರವೇಶಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಆರ್ಥಿಕ ಮತ್ತು ಸಾಮಾಜಿಕ ಗಣತಿಗೆ ಈಗಾಗಲೇ 150 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಆ ಹಣ ಸಾಲದು ಎಂದು ಹೆಚ್ಚುವರಿಯಾಗಿ ಇನ್ನೂ ಹಣ ಬೇಕು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮನವಿ ಸಲ್ಲಿಸಿದ್ದಾರೆ. […]

ವಿಕೋಪಕ್ಕೆ ತಿರುಗಿದ ಹಣಕಾಸಿನ ಜಗಳ…ಪತ್ನಿಯನ್ನು ಬರ್ಬರವಾಗಿ ಕೊಂದ ಪತಿ!

Friday, June 22nd, 2018
murdered

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಜಗಳ ನಡೆದು ಗಂಡನೇ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ. 42 ವರ್ಚದ ಸಹನಾ ಎಂಬುವರನ್ನು ಆಕೆಯ ಪತಿ ಗಣೇಶ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಂಪತಿ ಮಧ್ಯೆ ಹಣಕಾಸಿನ ವಿಚಾರವಾಗಿ ಭಿನ್ನಾಭಿಪ್ರಾಯ ಇತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ನಿನ್ನೆ ರಾತ್ರಿ ಇಬ್ಬರ ಮಧ್ಯೆ ಜಗಳ ನಡೆದು ವಿಕೋಪಕ್ಕೆ ಹೋದಾಗ ಗಂಡ ಗಣೇಶ್ ಚಾಕುವಿನಿಂದ ಸಹನಾಗೆ ಇರಿದು ಕೊಲೆ ಮಾಡಿದ್ದಾನೆ ಎಂದು […]

ರಾಜ್ಯ ಮತ್ತು ಜಿಲ್ಲಾ ಹೆದ್ದಾರಿ ಗುಂಡಿ ಮುಚ್ಚಲು ಒಂದು ಕಿ.ಮೀ.ಗೆ 25-30 ಸಾವಿರ ರೂಪಾಯಿ ಬಿಡುಗಡೆ: ಹೆಚ್.ಡಿ.ರೇವಣ್ಣ

Thursday, June 21st, 2018
H-D-Revanna

ಬೆಂಗಳೂರು: ರಾಜ್ಯ ಮತ್ತು ಜಿಲ್ಲಾ ಹೆದ್ದಾರಿ ಗುಂಡಿ ಮುಚ್ಚಲು ಒಂದು ಕಿ.ಮೀ.ಗೆ 25-30 ಸಾವಿರ ರೂಪಾಯಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸದ್ಯ ಜಲ್ಲಿ ಹಾಕಿ ಮುಚ್ಚಲಾಗುವುದು. ಮಳೆಗಾಲ ಬಳಿಕ ಅದಕ್ಕೆ ಟಾರ್ ಹಾಕಲಾಗುವುದು. ಈ ನಿಟ್ಟಿನಿಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು. ರಸ್ತೆ ಗುಂಡಿಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಪ್ರದಾನ ಕಾರ್ಯದರ್ಶಿ, ಚೀಫ್ ಇಂಜಿನಿಯರ್‌ಗಳ ಜೊತೆ ಸಭೆ ಮಾಡಿದ್ದೇನೆ. […]

ನನ್ನ ಬಳಿಯೂ ಕೆಲವರ ಡೈರಿಗಳಿವೆ..ಯಾರು ಯಾರಿಗೆ ಏನೇನು ಬರೆದಿದ್ದಾರೆ ಅನ್ನೋದು ಗೊತ್ತಿದೆ: ಡಿ.ಕೆ.ಶಿವಕುಮಾರ್

Wednesday, June 20th, 2018
d-k-shivkumar

ಬೆಂಗಳೂರು:‌ ನನ್ನ ಬಳಿಯೂ ಕೆಲವರ ಡೈರಿಗಳಿವೆ. ಯಾರು ಯಾರಿಗೆ ಏನೇನು ಬರೆದಿದ್ದಾರೆ ಅನ್ನೋದು ಗೊತ್ತಿದೆ. ಕೊನೆಯಲ್ಲಿ ಏನೂ ಆಗಲ್ಲವೆಂದಾಗ ಅದನ್ನ ಬಹಿರಂಗ ಮಾಡುತ್ತೇನೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಐಟಿ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸುತ್ತಾ, ನನ್ನನ್ನ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಡಿಕೆಶಿ ಯಾವುದಕ್ಕೂ ಹೆದರುವುದಿಲ್ಲ. ನಾನು ಕಾನೂನಿಗೆ ಬೆಲೆ ಕೊಡುವವನು. ಪ್ರಕರಣ ಈಗ ಕೋರ್ಟ್‌ನಲ್ಲಿ ಇರೋದ್ರಿಂದ ಈಗ ಏನು ಹೇಳೋದಿಲ್ಲ. ಇಲ್ಲವಾಗಿದ್ದರೆ ನಾನೇನು ಅನ್ನೋದನ್ನ ತೋರಿಸುತ್ತಿದ್ದೆ. […]

ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಅನ್ನೋದು ಜಗತ್ತಿಗೆ ಗೊತ್ತಿರುವ ವಿಚಾರ: ಲಕ್ಷ್ಮಿ ಹೆಬ್ಬಾಳ್ಕರ್

Monday, June 18th, 2018
laxmi-hebbalkar

ಬೆಂಗಳೂರು: ಜಯಮಾಲಾರ ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಅನ್ನೋದು ಜಗತ್ತಿಗೆ ಗೊತ್ತಿರುವ ವಿಚಾರವೆಂದು ಮಾರ್ಮಿಕವಾಗಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಕಡೆ ಸೇವೆ ಅಂದ್ರೆ ಬೇರೆ ಇದೆ. ಸೇವೆ ಅಂದ್ರೆ ದೇವ್ರ ಸೇವೆ, ಅಭಿಷೇಕದ ಸೇವೆ, ಉರುಳು ಸೇವೆ, ಪಕ್ಷದ ಸೇವೆ, ಆಗಿರಬಹುದು. ಜಯಾಮಾಲರ ರಾಜಕೀಯ ಸೇವೆ ಪಕ್ಷಕ್ಕೆ ಇಷ್ಟವಾಗಿರಬಹುದು. ಹೀಗಾಗಿ ಅವರಿಗೆ ಸಚಿವ ಸ್ಥಾನ ಸಿಕ್ಕಿರಬಹುದು. ಅವರು ಯಾವ ಅರ್ಥ ತಿಳಿದುಕೊಂಡಿದ್ದಾರೋ ಗೊತ್ತಿಲ್ಲವೆಂದು […]

ರಾಜ್ಯದಲ್ಲಿ ಭಾರಿ ಮಳೆ…13 ವರ್ಷಗಳ ಹಿಂದಿನ ದಾಖಲೆ ಮುರಿದ ವರುಣ

Monday, June 18th, 2018
heavy-rain

ಬೆಂಗಳೂರು: ರಾಜ್ಯದೆಲ್ಲೆಡೆ ಮುಂಗಾರು ಚುರುಕಾಗಿದ್ದು, ಕಳೆದ ಹತ್ತು ದಿನದಲ್ಲಿ ಸುರಿದ ಮಳೆ ಕಳೆದ 13 ವರ್ಷಗಳಲ್ಲೇ ಇದು ಅತ್ಯಧಿಕ ಪ್ರಮಾಣದ್ದಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್‌ಡಿಎಂಸಿ) ಮಾಹಿತಿ ನೀಡಿದೆ. ಕೆಎಸ್ಎನ್‌ಡಿಎಂಸಿ ಪ್ರಕಟಿಸಿದ ಮುಂಗಾರು ಅವಧಿಯ ಮೊದಲ 10 ದಿನಗಳ ಮಳೆಯ ವರದಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. ವರದಿ ಪ್ರಕಾರ ಜೂ.1ರಿಂದ ಜೂ.10ರವರೆಗೆ ವಾಡಿಕೆಯಂತೆ ರಾಜ್ಯಾದ್ಯಂತ ಸರಾಸರಿ 51 ಮಿ.ಮೀ. ಮಳೆ ದಾಖಲಾಗಬೇಕು. ಆದರೆ ಈ ವರ್ಷ 92 ಮಿ.ಮೀ. ದಾಖಲಾಗಿದ್ದು, 2004ರ ನಂತರದಲ್ಲಿ […]

ಪಶ್ಚಿಮ ಘಟ್ಟದಲ್ಲಿ ಗುಡ್ಡ ಕುಸಿತ…ರೈಲ್ವೆ ಹಳಿ ಮೇಲೆ ಬಿದ್ದ ಮಣ್ಣು

Friday, June 15th, 2018
colapse

ಮಂಗಳೂರು: ಪಶ್ಚಿಮ ಘಟ್ಟದಲ್ಲಿ‌ ಭಾರಿ ಮಳೆ ಸುರಿಯುತ್ತಿದ್ದು ಗುಡ್ಡವೊಂದು ಕುಸಿದು ರೈಲ್ವೆ ಹಳಿ ಮೇಲೆ ಮಣ್ಣು ಬಿದ್ದಿದೆ. ಸುಬ್ರಹ್ಮಣ್ಯ ಮತ್ತು ಸಿರಿಬಾಗಿಲು ನಡುವೆ ಇರುವ ರೈಲ್ವೆ ಹಳಿಗೆ ಗುಡ್ಡ ಕುಸಿದು ಮಣ್ಣು ಬಿದ್ದಿದ್ದು ರೈಲು ಸಂಚಾರಕ್ಕೆ ತೊಡಕಾಗಿದೆ. ಮಣ್ಣು ತೆರವು ಕಾರ್ಯಚರಣೆ ನಡೆಯುತ್ತಿದ್ದು ಮಂಗಳೂರು -ಬೆಂಗಳೂರು ರೈಲು ಸಂಚಾರಕ್ಕೆ ವಿಳಂಬವಾಗಿದೆ.