Blog Archive

ಪೆಟ್ರೋಲ್‌ ಬೆಲೆ 25 ರೂ.ಇಳಿಸಲು ಸಾಧ್ಯ, ಆದರೆ ಸರಕಾರ ಮಾಡದು: ಪಿ.ಚಿದಂಬರಂ

Wednesday, May 23rd, 2018
p-chidambaram

ಹೊಸದಿಲ್ಲಿ :”ದೇಶದ ಜನರು ಖರೀದಿಸುವ ಪ್ರತಿ ಲೀಟರ್‌ ಪೆಟ್ರೋಲ್‌ ದರದಲ್ಲಿ 25 ರೂ.ಗಳನ್ನು ಕೇಂದ್ರ ಸರಕಾರ ಬಾಚಿ ಕೊಳ್ಳುತ್ತಿದೆ ಮತ್ತು ತನ್ನ ಖಜಾನೆಯನ್ನು ಅದು ತುಂಬಿಸಿಕೊಳ್ಳುತ್ತಿದೆ” ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ. ದಿಲ್ಲಿಯಲ್ಲಿಂದು ಪೆಟ್ರೋಲ್‌ ಲೀಟರ್‌ ದರ 30 ಪೈಸೆಯಷ್ಟು ಏರಿ 77 ರೂ. ಗಡಿ ದಾಟಿದ ಸಂದರ್ಭದಲ್ಲಿ ಚಿದಂಬರಂ ಅವರು ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಟ್ವಿಟರ್‌ ವಾಗ್ಧಾಳಿ ಆರಂಭಿಸಿದರು. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿದಾಗ ಕೇಂದ್ರ ಸರಕಾರ ಜನರು […]

ರಾಜ್ಯಾದ್ಯಂತ ಕರಾಳ ದಿನಾಚರಣೆ ಆಚರಿಸಿ ಬಿಜೆಪಿ ಪ್ರತಿಭಟನೆ

Wednesday, May 23rd, 2018
strike-bjp

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆ ವಿರೋಧಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಕರಾಳ ದಿನಾಚರಣೆ ಆಚರಿಸುತ್ತಿದೆ. ಇಂದು ಸಂಜೆ ಹೆಚ್‌.ಡಿ.ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ, ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಜಯಪುರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರು ಕೈಗೆ ಕಪ್ಪು ಪಟ್ಟಿ ಧರಿಸಿ, ಕೈಯಲ್ಲಿ ಕಪ್ಪು ಧ್ವಜ ಹಿಡಿದು ಕಾಂಗ್ರೆಸ್-ಜೆಡಿಎಸ್ ಮುಖಂಡರ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯಿಂದ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು. […]

ರಾಜ್ಯದ 25ನೇ ಸಿಎಂ ಆಗಿ ಎಚ್ ಡಿ ಕುಮಾರಸ್ವಾಮಿ ಪ್ರಮಾಣ ವಚನ!

Wednesday, May 23rd, 2018
pramana-vachana

ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಮೂರನೇ ಪುತ್ರ, ಎಚ್ ಡಿ ಕುಮಾರಸ್ವಾಮಿ (58) ಅವರು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಮೇ 23ರಂದು 4.32 ನಿಮಿಷದ ಸುಮಾರಿಗೆ ದೇವರು ಹಾಗೂ ಕನ್ನಡ ನಾಡಿನ ಜನರೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ವಿಧಾನಸೌಧದ ಮುಂಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ನೂತನ ಸರ್ಕಾರದ ಪದಗ್ರಹಣವಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಾಳಯದಲ್ಲಿ ಸಂಭ್ರಮಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಕಂಡು ಬಂದಿತ್ತು. ಮಳೆಯ ಕಣ್ಣಾಮುಚ್ಚಾಲೆಯ ನಡುವೆ ಕಿವಿಗಡಕಿಚ್ಚಿನ ಶಬ್ದ, […]

‘ಬಹುಮತ ಸಾಬೀತು ದಿನವೇ ಬಿದ್ದು ಹೋಗಲಿದೆ ಸಮ್ಮಿಶ್ರ ಸರ್ಕಾರ’

Wednesday, May 23rd, 2018
bjp-strike

ಬಳ್ಳಾರಿ: ಈಗಾಗಲೇ ಕಾಂಗ್ರೆಸ್‌‌ನ 20ಕ್ಕೂ ಹೆಚ್ಚು ಶಾಸಕರು ತೀವ್ರ ಅಸಮಾಧಾನಗೊಂಡಿದ್ದು, ಬಹುಮತ ಸಾಬೀತು ದಿನವೇ ಜೆಡಿಎಸ್‌‌‌-ಕಾಂಗ್ರೆಸ್‌‌ನ ಸರ್ಕಾರ ಬಿದ್ದು ಹೋಗಲಿದೆ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿದರು. ಪಕ್ಷದ ಕಾರ್ಯಕರ್ತರೊಂದಿಗೆ ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ರಾಜ್ಯದಲ್ಲಿ ಅಪವಿತ್ರ ಮೈತ್ರಿಯ ಸರ್ಕಾರ ರಚನೆ ಆಗುವುದನ್ನು ವಿರೋಧಿಸಿ ಕರಾಳ ದಿನಾಚರಣೆ ಹಿನ್ನೆಲೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರದ ಜಾಯಮಾನವೆಂದರೆ ಇನ್ನೊಬ್ಬರ ಕಾಲೆಳೆಯುವುದಾಗಿದೆ. ಈ ಹಿಂದೆ ದೇವೇಗೌಡರಿಗೆ ಬೆಂಬಲ ನೀಡಿ ಪ್ರಧಾನಿ ಮಾಡಿ ನಂತರ […]

ಸ್ಥಿರ ಸರ್ಕಾರ ರಚನೆಗೆ ಹೆಚ್‌ಡಿಕೆ ಕಾರ್ಯತಂತ್ರ!

Tuesday, May 22nd, 2018
jds-kumarswamy

ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಯಾವುದೇ ವಿವಾದ, ಗೊಂದಲಗಳಿಗೆ ಅವಕಾಶ ಕೊಡದೆ ಐದು ವರ್ಷಗಳ ಸ್ಥಿರ ಸರ್ಕಾರ ನೀಡಬೇಕೆಂದು ಹೆಚ್.ಡಿ. ಕುಮಾರಸ್ವಾಮಿಯವರು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಸರ್ಕಾರ ರಚನೆ, ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಐದು ವರ್ಷಗಳ ಕಾಲ ಸುಗಮವಾಗಿ ಸರ್ಕಾರ ನೀಡಲು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಅಧಿಕಾರ ಹಂಚಿಕೆಯಲ್ಲಿ ತುಸು ಎಡವಟ್ಟು ಮಾಡಿಕೊಂಡರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಅರಿತಿರುವ ಉಭಯ ಪಕ್ಷಗಳ ನಾಯಕರು ಅಂತಹ […]

ಜನ ನಮ್ಮನ್ನು ತಿರಸ್ಕರಿಸಿದ್ದಾರೆ… ಸಾಲ ಮನ್ನಾಕ್ಕೆ ಸ್ವಲ್ಪ ದಿನ ಕಾಯಿರಿ: ಹೆಚ್‌.ಡಿ. ಕುಮಾರಸ್ವಾಮಿ

Tuesday, May 22nd, 2018
chikmagaluru

ಚಿಕ್ಕಮಗಳೂರು: ಮುಖ್ಯಮಂತ್ರಿ ಸ್ಥಾನವನ್ನು ಅಷ್ಟು ಸುಲಭವಾಗಿ ನಿಭಾಯಿಸಲು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತಿದೆ. ನನ್ನ ಜೀವನದಲ್ಲಿ ಇದೊಂದು ದೊಡ್ಡ ಸವಾಲು ಎಂದು ನಿಯೋಜಿತ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಹೇಳಿದರು. ಶೃಂಗೇರಿಯಲ್ಲಿ ಮಾತನಾಡಿದ ಅವರು, ಜನತೆಯಲ್ಲಿಯೂ ಯಾರು ರಾಜ್ಯ ಆಳುತ್ತಾರಾ ಎಂಬ ಅನುಮಾನ ಇದೆ. ತಾಯಿ ಶಾರದಾಂಬೆಯ ಆಶೀರ್ವಾದದಿಂದ ಎಲ್ಲವೂ ಸುಗಮ ಆಗುತ್ತೆ ಎಂಬ ನಂಬಿಕೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಡಿಸಿಎಂ ಸ್ಥಾನಕ್ಕೆ ಪೈಪೋಟಿ ವಿಚಾರದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಈ ಬಗ್ಗೆ ಸಂಜೆ ಚರ್ಚೆ ನಡೆಸಿ […]

ಪಾಕಿಸ್ತಾನ ಪರ ಘೋಷಣೆ ಆರೋಪ, ಕಾಂಗ್ರೆಸ್‌ ದೂರಿಗೆ ಬಿಜೆಪಿ ಪ್ರತಿದೂರು

Tuesday, May 22nd, 2018
bjp-party

ಮಂಗಳೂರು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ವಿಶ್ವಾಸಮತ ಯಾಚಿಸದೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಸಂಭ್ರಮಾಚರಣೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಂಗಳೂರಿನ ಜಯಪ್ರಶಾಂತ್ ಎಂಬುವವರು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ವಿಡಿಯೋವನ್ನು ತಿರುಚಿ ಅದರಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಲಾಗಿದ್ದು, ಈ ರೀತಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕ ಜೆ.ಆರ್.ಲೋಬೋ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಆಯುಕ್ತರಿಗೆ ದೂರು […]

ರೈತರ ಸಾಲ ಮನ್ನಾ ವಿಷಯ..ಧರ್ಮಸ್ಥಳದಲ್ಲಿ ಹೆಚ್‌ಡಿಕೆ ಗೊಂದಲದ ಹೇಳಿಕೆ..!

Tuesday, May 22nd, 2018
kumarswamy

ಮಂಗಳೂರು: ನನ್ನ ತಂದೆಯವರು ಧರ್ಮಸ್ಥಳ ಕ್ಷೇತ್ರದ ಭಕ್ತರು. ನನಗೆ ದೇವರ ಅನುಗ್ರಹ ಇದೆ. ಸಮ್ಮಿಶ್ರ ಸರ್ಕಾರಕ್ಕೆ ದೈವ ಪ್ರೇರಣೆ ಇದೆ. ಹಾಗಾಗಿ ದೇವರ ದರ್ಶನ ಮತ್ತು ಗುರು ಹಿರಿಯ ಆಶೀರ್ವಾದ ಪಡೆಯುತ್ತಿದ್ದೇನೆ ಎಂದು ನಿಯೋಜಿತ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ನಾಡಿನ‌ ನಿರೀಕ್ಷೆಗಳ ಬಗ್ಗೆ ದೇವರ ಬಳಿ ಪ್ರಾರ್ಥನೆ ಮಾಡಿರುವೆ. ನಾಡಿನಲ್ಲಿ ರೈತರಿಗೆ ಉತ್ತಮವಾದ ಮಳೆ-ಬೆಳೆ ಬಂದು ನಾಡಿನ ಸಮಸ್ಯೆಗಳು ಪರಿಹಾರವಾಗಬೇಕೆಂದು ದೇವರಲ್ಲಿ ಕೇಳಿಕೊಂಡಿದ್ದೇನೆ ಎಂದರು. ಕಾಂಗ್ರೆಸ್ ಮತ್ತು […]

ಜನಾದೇಶ ಕಾಂಗ್ರೆಸ್‌ಗೆ ವಿರುದ್ಧವಾಗಿದ್ದರೂ ಜೆಡಿಎಸ್ ನೊಂದಿಗೆ ಆತುರವಾಗಿ ಮೈತ್ರಿ : ಅಮಿತ್ ಶಾ

Monday, May 21st, 2018
Amith sha

ನವದೆಹಲಿ : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನಾದೇಶ ಕಾಂಗ್ರೆಸ್‌ಗೆ ವಿರುದ್ಧವಾಗಿತ್ತು. ಅದಕ್ಕಾಗಿಯೇ ಜೆಡಿಎಸ್ ನೊಂದಿಗೆ ಆತುರವಾಗಿ ಮೈತ್ರಿ ಮಾಡುಲು ಒಪ್ಪಿಕೊಂಡಿದೆ ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲನ್ನು ಗೆಲುವೆಂದು ಬಿಂಬಿಸಲು ಕಾಂಗ್ರೆಸ್‌ ಹೊಸ ದಾರಿಯನ್ನು ಈ ರೀತಿಯಾಗಿ ಕಂಡುಕೊಂಡಿದೆ ಎಂದು ಹೇಳಿದರು. ಹೆಚ್ಚಿನ ಎಲ್ಲ ಸಚಿವರು ಸೋತ ಹೊರತಾಗಿಯೂ ತಾವು ಸಂಭ್ರಮಿಸುತ್ತಿರುವುದು ಯಾಕೆ ಎಂಬುದನ್ನು ಕಾಂಗ್ರೆಸ್‌ನವರು ರಾಜ್ಯದ ಜನತೆಗೆ ವಿವರಿಸಲಿ ಎಂದು ಶಾ ಹೇಳಿದರು. ‘ಕೇವಲ […]

ನಾಪತ್ತೆಯಾಗಿದ್ದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ವಿಧಾನಸೌಧಕ್ಕೆ ಆಗಮನ..!

Saturday, May 19th, 2018
anand-singh-cngrs

ಬೆಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಶಾಸಕ ಆನಂದ್ ಸಿಂಗ್ ನಾಪತ್ತೆ ಪ್ರಕರಣಕ್ಕೆ ತೆರೆ ಬಿದ್ದಿದೆ. ವಿಶ್ವಾಸಮತ ಯಾಚನೆಗೆ ಸಮಯ ನಿಗದಿಯಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ವಿಧಾನಸೌಧ ಆವರಣಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ ಆನಂದ್ ಸಿಂಗ್ ಅವರನ್ನು ಕೈಹಿಡಿದುಕೊಂಡು ಡಿಕೆಶಿ ವಿಧಾನಸಭೆಗೆ ಕರೆದೊಯ್ದರು. ವಿಧಾನಸೌಧದೊಳಕ್ಕೂ ಡಿಕೆಶಿ ಕೈಹಿಡಿದುಕೊಡೇ ಸಾಗಿದ ಶಾಸಕ ನಾಗೇಂದ್ರ ಅವರು ಹಿರಿಯ ಕಾಂಗ್ರೆಸ್ ಮುಖಂಡರಿಗೆ ವಿಶ್ ಮಾಡಿದರು. ಬಳಿಕ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರಿಗೂ ವಿಶ್ ಮಾಡಿ ನಾನಿದ್ದೇನೆ ಎಂದು […]