Blog Archive

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನದ ಉದ್ಘಾಟನೆ:

Thursday, December 10th, 2015
Darmasthala Deepotsava

ಧರ್ಮಸ್ಥಳ : ಲಕ್ಷದೀಪೋತ್ಸವ ಸಂದರ್ಭದಲ್ಲಿ ಗುರುವಾರ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ ಎಂಬತ್ತಮೂರನೆ ಅಧಿವೇಶನವನ್ನು ಖ್ಯಾತ ಸಂಶೋಧಕ ಡಾ. ಷ. ಶೆಟ್ಟರ್ ಉದ್ಘಾಟಿಸಿ ಮಾತನಾಡಿದರು. ನಮ್ಮತನವನ್ನು ಧರ್ಮ ಮತ್ತು ಸಾಹಿತ್ಯದ ಮೇಲೆ ಹೇರುವುದು ಸರಿಯಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ನಾವು ವಿಶಾಲ ಮನೋಭಾವವನ್ನು ಕಳೆದುಕೊಂಡು ಕುಬ್ಜರಾಗುತ್ತಿದ್ದೇವೆ. ಇಂದಿನ ವಿಚಿತ್ರವಾದ ಅಸಹಿಷ್ಣುತೆ ಎಲ್ಲಾ ಸಮಾಜದಲ್ಲಿಯೂ ಇದೆ. ಆದರೆ, ಅಲ್ಲಿ ಸಾಹಿತಿಗಳಿಲ್ಲ, ವಿಚಾರವಂತರಿದ್ದಾರೆ. ಧರ್ಮ ಗುರುಗಳಿಲ್ಲ, ರಾಜಕೀಯ ವ್ಯಕ್ತಿಗಳಿದ್ದಾರೆ. ಮುಕ್ತ ಮನಸ್ಸಿನಿಂದ ಇಂದು ಸಂಶೋಧನೆ ಮಾಡುವುದೇ ಅಪರಾಧವಾಗಿದೆ ಎಂದು […]

ಧರ್ಮಸ್ಥಳದಲ್ಲಿ ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನ

Friday, August 14th, 2015
Rud Shed

ಉಜಿರೆ : ಗ್ರಾಮೀಣ ಪ್ರದೇಶದ ಆರ್ಥಿಕ ಪ್ರಗತಿಯಿಂದ ದೇಶದ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ದಕ್ಷ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ (ರುಡ್‌ಸೆಟ್ ಸಂಸ್ಥೆಗಳ) ಸೇವೆ ಮತ್ತು ಸಾಧನೆ ಶ್ಲಾಘನೀಯವಾಗಿದೆ ಎಂದು ಕೆನರಾ ಬ್ಯಾಂಕ್‌ನ ಆಡಳಿತ ನಿರ್ದೇಶಕ ಪಿ.ಎಸ್. ರಾವತ್ ಹೇಳಿದರು. ಧರ್ಮಸ್ಥಳದಲ್ಲ ಶ್ರೀಸನ್ನಿಧಿ ಅತಿಥಿ ಗೃಹದಲ್ಲಿ ಗುರುವಾರ ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. […]

ಉತ್ತಮ ಪುಸ್ತಕಗಳನ್ನು ಓದುವುದರಿಂದ ಆದರ್ಶ ವ್ಯಕ್ತಿತ್ವ ನಿರ್ಮಾಣ

Thursday, August 13th, 2015
Bansal

ಧರ್ಮಸ್ಥಳ : ಬಿಂದುವಿನಲ್ಲಿ ಸಿಂಧುವನ್ನು ತುಂಬಿರುವ ನೈತಿಕ ಪುಸ್ತಕಗಳು ಆದರ್ಶ ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುತ್ತವೆ. ಇಂತಹ ಉತ್ತಮ ಪುಸ್ತಕಗಳನ್ನು ಓದಿ ಅದರಲ್ಲಿರುವ ನೀತಿ-ನಿಯಮಗಳನ್ನು ಜೀವನದಲ್ಲಿ ಅನುಸರಿಸುವುದರಿಂದ ನಮ್ಮ ಉಜ್ವಲ ಭವವಿಷ್ಯವನ್ನು ರೂಪಿಸಿಕೊಳ್ಳಬಹುದು. ಉತ್ತಮ ಪುಸ್ತಕಗಳನ್ನು ಓದುವುದರಿಂದ ಆದರ್ಶ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಕಾರ್ಪೋರೇಶನ್ ಬ್ಯಾಂಕ್‌ನ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರಾದ ಎಸ್.ಆರ್, ಬನ್ಸಾಲ್ ಹೇಳಿದರು. ಧರ್ಮಸ್ಥಳದಲ್ಲಿ ಬುಧವಾರ ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಆಶ್ರಯದಲ್ಲಿ ಪ್ರಕಟಿಸಲಾದ ಜ್ಞಾನ ಸಿಂಧು […]

ಧರ್ಮಸ್ಥಳದಲ್ಲಿ ಕಣ್ಣಿನ ತಪಾಸಣಾ ಶಿಬಿರ

Tuesday, March 24th, 2015
Dharmasthala eye test

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳವು ಚತುರ್ವಿದದಾನಗಳಿಗೆ ಹೆಸರುವಾಸಿಯಾಗಿದ್ದು ಆರೋಗ್ಯದಾನವು ಅನೂಚಾನವಾಗಿ ನಡೆಯುತ್ತಾ ಬಂದಿದೆ. ಇತ್ತೀಚೆಗೆ ಜರುಗಿದ ಶ್ರೀ ಮಂಜುನಾಥ ಸ್ವಾಮಿಯ ಅಷ್ಟಬಂಧ ಮತ್ತು ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಶ್ರೀ ಕೇತ್ರದಲ್ಲಿ ಜರಗಿದ ಆರೋಗ್ಯ ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವೂ ಒಂದು. ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಣ್ಣಿನ ಆಸ್ಪತ್ರೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ ಇದರ ಜಂಟಿ ಆಶ್ರಯದಲ್ಲಿ ಜರಗಿದ ಈ ಶಿಬಿರದಲ್ಲಿ 375 ಮಂದಿ ಉಚಿತ ತಪಾಸಣೆಯ ಪ್ರಯೋಜನ […]

ಧರ್ಮಸ್ಥಳದ ಸೇವಾ ಗಂಗೆ ರಾಷ್ಟ್ರವ್ಯಾಪಿ ಪಸರಿಸಿದೆ : ವಿಶ್ವೇಶತೀರ್ಥ ಸ್ವಾಮೀಜಿ

Friday, March 20th, 2015
Darmasthala

ಧರ್ಮಸ್ಥಳ : ಇಲ್ಲಿಗೆ ಬರುವ ಭಕ್ತರ ಅಭೀಷ್ಟಗಳು ನೆರವೇರುತ್ತವೆ. ಧರ್ಮಸ್ಥಳದಲ್ಲಿ ನಿತ್ಯವೂ ನಡೆಯುವ ಚತುರ್ವಿಧ ದಾನಗಳು ಹಾಗೂ ಸೇವಾ ಕಾರ್ಯಗಳು ಇಂದು ರಾಷ್ಟ್ರವ್ಯಾಪಿ ಪಸರಿಸಿದ್ದು ಸರ್ವರಿಗೂ ಕಲ್ಯಾಣಕಾರಿಯಾಗಿವೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಧರ್ಮಸ್ಥಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬುಧವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ಏರ್ಪಡಿಸಲಾದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಹಿಂದಿನ ಕಾಲದಲ್ಲಿ ನಾಡಿಗೆ ಸೀಮಿತವಾಗಿದ್ದ ಧರ್ಮಸ್ಥಳದ ಸೇವಾಕಾರ್ಯ ವೀರೇಂದ್ರ ಹೆಗ್ಗಡೆಯವರ ದಕ್ಷ ನೇತೃತ್ವದಲ್ಲಿ ಇಂದು ರಾಷ್ಟ್ರವ್ಯಾಪಿಯಾಗಿ ವಿಸ್ತರಿಸಿರುವ ಬಗ್ಗೆ ಅವರು […]

ಧರ್ಮಸ್ಥಳದ ವತಿಯಿಂದ ಲೋಕ ಕಲ್ಯಾಣಕ್ಕಾಗಿ ಹಲವು ಹೊಸ ಯೋಜನೆಗಳು

Friday, October 24th, 2014
pattabhisheka

ಧರ್ಮಸ್ಥಳ : ಬೆಂಗಳೂರಿನಲ್ಲಿ 350 ಹಾಸಿಗೆ ಸಾಮಥ್ರ್ಯದ ಆಯುರ್ವೇದ ಆಸ್ಪತ್ರೆ ಪ್ರಾರಂಭಗೊಂಡಿದ್ದು ಮುಂದಿನ ವರ್ಷ ಪೂರ್ಣ ಪ್ರಮಾಣದ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜು ಸೇವೆಗೆ ಸಜ್ಜಾಗಲಿವೆ. ಧರ್ಮಸ್ಥಳದಲ್ಲಿ ಯಾತ್ರಿಕರ ಅನುಕೂಲಕ್ಕಾಗಿ 520 ಕೊಠಡಿಗಳುಳ್ಳ ಹೊಸ ವಸತಿ ಛತ್ರ ನಿರ್ಮಾಣದ ಕಾಮಗಾರಿ ಈಗಾಗಲೇ ಪ್ರಾರಂಭಿಸಲಾಗಿದೆ. ಧಾರವಾಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಗೊಂಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು. ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಶುಕ್ರವಾರ ನಡೆದ ಪಟ್ಟಾಭಿಷೇಕದ 47ನೇ ವರ್ಧಂತ್ಯತ್ಸವ ಸಮಾರಂಭದಲ್ಲಿ ಅವರು […]

ಧರ್ಮಸ್ಥಳ : ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಿದ ದೇವಳದ ಸಿಬ್ಬಂದಿ

Friday, August 8th, 2014
Dharmasthala River

ಧರ್ಮಸ್ಥಳ : ಧರ್ಮಸ್ಥಳದಲ್ಲಿ ನೇತ್ರಾವತಿ ಸ್ನಾನ ಘಟ್ಟದಲ್ಲಿ ಗುರುವಾರ ಸಂಜೆ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಯತ್ನಿಸಿದ ಮಹಿಳೆಯನ್ನು ದೇವಳದ ಸಿಬ್ಬಂದಿ ಸಕಾಲಿಕ ಪ್ರಜ್ಷೆಯಿಂದ ರಕ್ಷಿಸಿದ ಘಟನೆ ವರದಿಯಾಗಿದೆ. ಬೆಂಗಳೂರಿನ ನಿವಾಸಿ ಗೀತಾ (ಹೆಸರು ಬದಲಾಯಿಸಲಾಗಿದೆ) ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ತಂದೆ – ತಾಯಿ ಜೊತೆ ವಾಸ್ತವ್ಯ ಇದ್ದಾರೆ. ಒಬ್ಬ ತಮ್ಮನೂ ಇದ್ದಾನೆ. ಗುರುವಾರ ಅದೇನೋ ಮಾನಸಿಕ ಖಿನ್ನತೆ ಆಕೆಯನ್ನು ಕಾಡಿತು. ಮನೆಯಿಂದ ಬೆಳಿಗ್ಗೆ ಕಚೇರಿಗೆಂದು ಹೊರಟವಳು ಧರ್ಮಸ್ಥಳಕ್ಕೆ ಬರುವ ಬಸ್ ಹತ್ತಿದರು. ಸಂಜೆ 7 ಗಂಟೆಗೆ […]

ಪತ್ರಿಕಾಗೋಷ್ಠಿ ನಡೆಸಿ ಸಿ.ಬಿ.ಐ. ತನಿಖೆಯ ದಾರಿ ತಪ್ಪಿಸುತ್ತಿರುವ ಮಹೇಶ ಶೆಟ್ಟಿ ತಿಮರೋಡಿ : ಧರ್ಮಸ್ಥಳ

Thursday, July 24th, 2014
Sowjanya Murder

ಧರ್ಮಸ್ಥಳ: ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಉಜಿರೆಯ ಮಹೇಶ ಶೆಟ್ಟಿ ತಿಮರೋಡಿಯವರು ಕಳೆದ ಒಂದು ವರ್ಷದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಇಲ್ಲಿಯ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕುಟುಂಬದ ವಿರುದ್ಧ ನಿರಂತರವಾಗಿ ಮಾಡುತ್ತಿದ್ದ ಸುಳ್ಳು ಆರೋಪಗಳನ್ನು ಮತ್ತೊಮ್ಮೆ ಪುನರುಚ್ಚರಿಸುತ್ತಾ ಸಾರ್ವಜನಿಕರನ್ನು ಹಾಗೂ ಶ್ರೀ ಕ್ಷೇತ್ರದ ಭಕ್ತಾದಿಗಳನ್ನು ದಾರಿ ತಪ್ಪಿಸುವ ಕಠೋರ ಪ್ರಯತ್ನವಷ್ಟೆ ಆಗಿದೆ. ಉಜಿರೆಯ ಕಾಲೇಜು ವಿದ್ಯಾರ್ಥಿನಿಯ ಹತ್ಯೆಯ ಕುರಿತು ರಾಷ್ಟ್ರದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿ.ಬಿ.ಐ. ಕಳೆದ 4 ತಿಂಗಳುಗಳಿಂದ ನಿಷ್ಪಕ್ಷಪಾತ ಹಾಗೂ […]

ಧರ್ಮಸ್ಥಳದಲ್ಲಿ ಪುರಾಣ ವಾಚನ-ಪ್ರವಚನ ಪ್ರಾರಂಭ

Thursday, July 17th, 2014
Dharmasthala

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಬುಧವಾರದಿಂದ ಎರಡು ತಿಂಗಳ ಕಾಲ ನಡೆಯಲಿರುವ ಪುರಾಣ ವಾಚನ-ಪ್ರವಚನ ಎಂಬ ಸತ್ಸಂಗ ಕಾರ್ಯಕ್ರಮಕ್ಕೆ ವಾಚನ-ಪ್ರವಚನಕಾರರು, ಕ್ಷೇತ್ರದ ಭಕ್ತಾದಿಗಳ ಸಮ್ಮುಖದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಮಂಗಳೂರಿನ ಉದ್ಯಮಿ ರಾಜವರ್ಮ ಬಳ್ಳಾಲ್ ಉಪಸ್ಥಿತರಿದ್ದರು. ಪ್ರತಿದಿನ ಸಂಜೆ ಗಂಟೆ 6.30 ರಿಂದ 8 ರ ವರೆಗೆ ದೇವಸ್ಥಾನದ ಎದುರುಗಡೆ ಇರುವ ಪ್ರವಚನ ಮಂಟಪದಲ್ಲಿ ಶ್ರೀ ಕುಮಾರ ವ್ಯಾಸ ವಿರಚಿತ ಕರ್ಣಾಟ ಭಾರತ ಮಂಜರಿ ಯ ವಾಚನ – ಪ್ರವಚನ ನಡೆಯಲಿದೆ. […]

ಶ್ರೀ. ಧ. ಮಂ. ಆಂಗ್ಲ ಮಾಧ್ಯಮ ಶಾಲೆಯ ಆದಿತ್ಯ ಮತ್ತು ದರ್ಶನ್ ಗೆ ತಾಲೂಕು ಮಟ್ಟದ ಪ್ರಜ್ಞಾ ಸಾಧಕ ಪ್ರಶಸ್ತಿ

Sunday, June 15th, 2014
Dharshan Aditya

ಧರ್ಮಸ್ಥಳ: : ಪ್ರಸಕ್ತ 2013-14 ವರ್ಷದ ಸುಳ್ಯದ ಪ್ರಜ್ಞಾ ಎಜ್ಯುಕೇಶನ್ ಟ್ರಸ್ಟ್ ನಡೆಸಿದ ಸದಾ ಸಿದ್ದರಾಗಿರೋಣ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಧರ್ಮಸ್ಥಳದ ಶ್ರೀ. ಧ. ಮಂ. ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿ ದರ್ಶನ್ ಭಾಗವಹಿಸಿದ್ದು, ಕಳೆದ ಸಾಲಿನ 6ನೇ ತರಗತಿಯ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಇವರು ಜೂನ್ 15 ಭಾನುವಾರದಂದು ಲಯನ್ಸ್ ಸೇವಾ ಸದನ, ಸುಳ್ಯದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ 2 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ […]