Blog Archive

ಅಯೋಧ್ಯೆ ರಾಮ ಮಂದಿರಕ್ಕೆ ಪ್ರದಾನಮಂತ್ರಿ ನರೇಂದ್ರ ಮೋದಿಯವರು ಹಸ್ತದಿಂದ ಭೂಮಿಪೂಜೆ

Wednesday, August 5th, 2020
Ayodhya

ಅಯೋಧ್ಯೆ: ಕೋಟ್ಯಾಂತರ ಭಾರತೀಯರ ಕನಸಾಗಿರುವ ಅಯೋಧ್ಯೆ ರಾಮ ಮಂದಿರ ಬುಧವಾರ ಮಧ್ಯಾಹ್ನ 12.44ರ ಶುಭ ಮುಹೂರ್ತದಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿಯವರು ಹಸ್ತದಿಂದ ಭೂಮಿಪೂಜೆ ನೆರವೇರಲಿದೆ. ಇದರೊಂದಿಗೆ ಪ್ರಧಾನಿಯವರು ತಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ರಾಮಮಂದಿರ ನಿರ್ಮಾಣ ವಾಗ್ಧಾನವನ್ನು ಸಕಾರಗೊಳಿಸಲಿದ್ದಾರೆ. ಮಧ್ಯಾಹ್ನ 12.44.08 ಗಂಟೆಯಿಂದ 12.44.40 ಗಂಟೆಯ 32 ಸೆಕೆಂಡುಗಳ ಶುಭಮುಹೂರ್ತ ನಿಗದಿಯಾಗಿದ್ದು, ಇಷ್ಟು ಅವಧಿಯಲ್ಲಿಯೇ ಮೋದಿಯವರು ಬೆಳ್ಳಿ ಇಟ್ಟಿಗೆ ಇರಿಸಿ ಸಾಂಕೇತಿಕ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಬೆಳ್ಳಿ ಇಟ್ಟಿಗೆ ಸಾಂಕೇತಿಕವಾದ ಕಾರಣ ಬಳಿಕ, ಅದನ್ನು ಭೂಮಿಪೂಜಾ […]

ಪ್ರಭು ಶ್ರೀರಾಮನನ್ನು ‘ಇಮಾಮ್-ಎ-ಹಿಂದ್’ ಎಂದು ಕರೆದ ಫೈಜ್ ಖಾನ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು !

Sunday, August 2nd, 2020
rameshsindhe

ಮುಂಬೈ : ಅನೇಕ ಹಿಂದೂಗಳ ಪ್ರಾಣಾಹುತಿ, ನೂರಾರು ವರ್ಷಗಳ ಹೋರಾಟ ಮತ್ತು 500 ವರ್ಷಗಳ ದೀರ್ಘ ಪ್ರತೀಕ್ಷೆಯ ಫಲವಾಗಿ ಆಗಸ್ಟ್ 5 ರಂದು ಶ್ರೀರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ದೇವಾಲಯದ ನಿರ್ಮಾಣ ಕಾರ್ಯದ ಶುಭಾರಂಭವಾಗುತ್ತಿದೆ. ಈ ಕ್ಷಣ ಸಂಪೂರ್ಣ ಹಿಂದೂ ಸಮಾಜಕ್ಕ್ಕೆ ತುಂಬಾ ಆನಂದೋತ್ಸವವಾಗಿದೆ. ಭಾರತೀಯ ಮುಸ್ಲಿಮರು ಆಕ್ರಮಣಕಾರಿ ಬಾಬರ್‌ನ ಕುರುಹುಗಳಿಗೆ ತಿಲಾಂಜಲಿ ನೀಡಿ ಪ್ರಭು ಶ್ರೀರಾಮನ ದೇವಾಲಯದ ನಿರ್ಮಾಣಕ್ಕೆ ಈಗಾಗಲೇ ಸಹಕರಿಸಿದ್ದರೆ ಈ ಸಂಘರ್ಷವನ್ನು ತಪ್ಪಿಸಬಹುದಿತ್ತು. ತದ್ವಿರುದ್ಧವಾಗಿ, ಮುಸ್ಲಿಂ ಸಮಾಜವು ವಿರೋಧ ಮಾಡಲು ಪಣತೊಟ್ಟಿತು. ಅದರ ನಂತರವೂ, […]

ಆಗಸ್ಟ್ 5ರಂದು ಬೆಳಗ್ಗೆ11:30ರಿಂದ 12:30ರವರೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ

Saturday, August 1st, 2020
sudarshan

ಮಂಗಳೂರು : ಆಗಸ್ಟ್  5ರಂದು ನಡೆಯಲಿರುವ  ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮಮಂದಿರದ ಭೂಮಿಪೂಜೆಯ ಪ್ರಯುಕ್ತ ದ.ಕ. ಜಿಲ್ಲೆಯಲ್ಲೂ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ತಿಳಿಸಿದ್ದಾರೆ. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಅದರಂತೆ, ಜಿಲ್ಲೆಯಲ್ಲಿ ಮನೆ ಮನೆಯಲ್ಲಿ ದೀಪ ಹಚ್ಚುವುದು, ರಾಮನಾಮ ಪಠಣ ಜತೆಗೆ ಮಠಮಂದಿರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಸಲು ವಿನಂತಿಸಲಾಗುವುದು ಎಂದರು. […]

ಅಯೋಧ್ಯೆ ರಾಮಮಂದಿರದಲ್ಲಿ5 ಅಡಿ ಎತ್ತರದ ಶಿವಲಿಂಗ ಪತ್ತೆ, ಹಾಗಾಗಿ ಶಿವನಿಗೂ ಸ್ಥಾನ ಸಿಗಬೇಕು

Friday, July 24th, 2020
shivalinga

ಹುಬ್ಬಳ್ಳಿ: ಅಯೋಧ್ಯೆ ರಾಮಮಂದಿರದಲ್ಲಿ ಶಿವನಿಗೂ ಸ್ಥಾನ ಸಿಗಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿಯ ಶ್ರೀಮಧ್ವೇಶ್ವರ ಶೈವ ಸದ್ಭೋಧನಾ ಸಂಸ್ಥೆ ವತಿಯಿಂದ ಪತ್ರ ಚಳವಳಿ ನಡೆಸಲಾಯಿತು. ರಾಮ ಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಉತ್ಖನನ ಮಾಡುವಾಗ 5 ಅಡಿ ಎತ್ತರದ ಶಿವಲಿಂಗ ಪತ್ತೆ ಆಗಿದ್ದು, ಅಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವಂತೆ ಟ್ರಸ್ಟ್ ಗೆ ಮನವಿ ಮಾಡಿ, ಸಂಸದ ಪ್ರಹ್ಲಾದ್ ಜೋಶಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.ಬಂಕಾಪುರ್ ಚೌಕ್ ಬಳಿಯ ಶ್ರೀಶೈಲ ಮಠದಲ್ಲಿ ಪತ್ರ ಚಳವಳಿ ನಡೆಸಲಾಗಿದ್ದು, ರಾಮನ ಜೊತೆಯಲ್ಲಿಯೇ […]

ಅಯೋಧ್ಯೆಯ ರಾಮಜನ್ಮ ಭೂಮಿಗೆ ಭೇಟಿ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ

Saturday, February 15th, 2020
virendra-heggade

ಉಜಿರೆ : ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದೇಶದ ಪ್ರತಿಷ್ಠಿತ ವಿಶ್ವ ವಿದ್ಯಾಲಯವಾದ ಲಕ್ನೋದ ಕಿಂಗ್‌ ಜಾರ್ಜ್‌ ಚಿಕಿತ್ಸಾ ವಿಶ್ವವಿದ್ಯಾಲಯದ ಮಾತಾ ಶಾರದಾಲಯವನ್ನು ಲೋಕಾರ್ಪಣೆ ಮಾಡಲು ಹೋಗುವ ಸಂದರ್ಭದಲ್ಲಿ ಶುಕ್ರವಾರ ಅಯೋಧ್ಯೆಯ ರಾಮಜನ್ಮ ಭೂಮಿಗೆ ಭೇಟಿ ನೀಡಿದರು. ಉತ್ತರ ಪ್ರದೇಶದ ಮಾನ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರನ್ನುಅವರ ನಿವಾಸದಲ್ಲಿ ಶನಿವಾರ ಭೇಟಿ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವರಗಳನ್ನು ನೀಡಿ ಮಾತುಕತೆ ನಡೆಸಿದರು. ಮಾನ್ಯ ಮುಖ್ಯಮಂತ್ರಿಗಳು ಗಂಗಾ ನದಿಯ ಶುದ್ಧೀಕರಣ ಯೋಜನೆಯ ಬಗ್ಗೆ […]

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಟ್ರಸ್ಟ್​ ರಚನೆ : ಪ್ರಧಾನಮಂತ್ರಿ ನರೇಂದ್ರ ಮೋದಿ

Wednesday, February 5th, 2020
modi

ನವದೆಹಲಿ : ಅಯೋಧ್ಯೆಯ ವಿವಾದಿತ ಜಾಗವನ್ನು ರಾಮ್ಲಲ್ಲಾಗೆ ನೀಡಿ ಕಳೆದ ವರ್ಷ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ಈ ಮೂಲಕ ಶತಮಾನಗಳ ಹಿಂದಿನ ಬಾಬ್ರಿ ಮಸೀದಿ- ರಾಮಜನ್ಮಭೂಮಿ ವಿವಾದಕ್ಕೆ ಕಾನೂನಾತ್ಮಕವಾಗಿ ತೆರೆಬಿದ್ದಿತ್ತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಟ್ರಸ್ಟ್ ರಚಿಸುವುದಾಗಿ ಸಂಸತ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇಂದು ಈ ಬಗ್ಗೆ ಸಂಸತ್ ಅಧಿವೇಶನದಲ್ಲಿ ಘೋಷಣೆ ಮಾಡಿರುವ ಪ್ರಧಾನಿ ಮೋದಿ, ‘ ಅಯೋಧ್ಯೆ ಟ್ರಸ್ಟ್ ರಚಿಸುವ ಬಗ್ಗೆ ಇಂದು ಬೆಳಗ್ಗೆ ನಡೆದ ಸಂಪುಟ ಸಭೆಯಲ್ಲಿ ನಾವೆಲ್ಲರೂ […]

ಅಯೋಧ್ಯೆ ಮಾದರಿಯಲ್ಲಿ ದತ್ತಪೀಠ ವಿವಾದ ಇತ್ಯರ್ಥವಾಗುವ ವಿಶ್ವಾಸವಿದೆ : ಸಚಿವ ಸಿ.ಟಿ ರವಿ

Wednesday, December 11th, 2019
CT-Ravi

ಚಿಕ್ಕಮಗಳೂರು : ಈ ಬಾರಿ ದತ್ತಪೀಠ ವಿವಾದ ಇತ್ಯರ್ಥ ಮಾಡುವ ಸಂಕಲ್ಪ ಮಾಡಿದ್ದೇನೆ. ಅಯೋಧ್ಯೆ ಮಾದರಿಯಲ್ಲಿ ದತ್ತಪೀಠ ವಿವಾದ ಇತ್ಯರ್ಥವಾಗುವ ವಿಶ್ವಾಸವಿದೆ ಎಂದು ಸಚಿವ ಸಿ.ಟಿ ರವಿ ಹೇಳಿದರು. ಇಲ್ಲಿ ದತ್ತ ಮಾಲಾಧಾರಿಯಾಗಿ ಮಾತನಾಡಿದ ಸಚಿವರು, ವಿವಾದ ಇತ್ಯರ್ಥ ಮಾಡುವ ವಿಶ್ವಾಸ ನನಗಿದೆ. ಇದೊಂದು ನ್ಯಾಯ ತತ್ವ ಬದ್ಧ ಹೋರಾಟವಾಗಿದೆ. ದತ್ತಪೀಠ ವಿವಾದ ಇತ್ಯರ್ಥಕ್ಕೆ ಜೆಡಿಎಸ್-ಕಾಂಗ್ರೆಸ್ ಸಹಮತವಿರಲಿ. ಹಿಂದೂ ಅರ್ಚಕರ ನೇಮಕಕ್ಕೆ ಜೆಡಿಎಸ್ ಸಹಮತ ವ್ಯಕ್ತಪಡಿಸಿದೆ ಎಂದು ಸಿ ಟಿ ರವಿ ವಿಶ್ವಾಸ ವ್ಯಕ್ತಪಡಿಸಿದರು. ದತ್ತಪೀಠದಲ್ಲಿ ಹಿಂದೂ […]

ಅಯೋಧ್ಯೆ ಭೂಮಿ ಹಕ್ಕು ಹಿಂದೂಗಳಿಗೆ ಸೇರಿದ್ದು : ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು

Saturday, November 9th, 2019
rama-mandira

ನವದೆಹಲಿ : ಅಯೋಧ್ಯೆಯಲ್ಲಿನ 2.77 ಎಕರೆ ಭೂಮಿ ಹಕ್ಕು ಹಿಂದೂಗಳಿಗೆ ಸೇರಿದ್ದು, ಮಸೀದಿ ನಿರ್ಮಾಣಕ್ಕೆ 5 ಎಕರೆ ಪ್ರತ್ಯೇಕ ಜಾಗ ನೀಡಬೇಕೆಂದು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ರಂಜನ್ ಗೊಗೋಯ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನಿಕಾ ಪೀಠ ಸರ್ವ ಸಮ್ಮತದ ತೀರ್ಪು ಪ್ರಕಟಿಸಿದೆ. ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸ್ತೇವೆ. ಪೂಜೆ ಮಾಡುವವರ ಹಕ್ಕನ್ನು ಮಾನ್ಯ ಮಾಡಿದ್ದೇವೆ ಎಂದು ತಿಳಿಸಿದೆ. ಮುಸ್ಲಿಮರಿಗೆ 5 ಎಕರೆ ಪರ್ಯಾಯ ಭೂಮಿ ನೀಡಬೇಕು. ದೇವಸ್ಥಾನ ನಿರ್ಮಾಣಕ್ಕೆ 3 ತಿಂಗಳಲ್ಲಿ ಸಮಿತಿ […]

ರಾಮ ಮಂದಿರ ನಿರ್ಮಾಣ ಯಾರಿಂದಲೂ ತಡೆಯಲು ಸಾಧ್ಯವಿಲ್ಲ: ಜನಾರ್ದನ ಪೂಜಾರಿ

Monday, December 3rd, 2018
janardhan-poojary

ಮಂಗಳೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಆಗಿಯೇ ಆಗುತ್ತದೆ. ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲವೆಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ್ ಪೂಜಾರಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣಕ್ಕೆ ಯಾರೂ ವಿರೋಧ ಮಾಡಬಾರದು ಎಂದರು. ರಾಮಮಂದಿರ ನಿರ್ಮಾಣವಾಗುವುದನ್ನು ಮುಸ್ಲಿಮರು, ಕ್ರಿಶ್ಚಿಯನ್ನರು ಬಯಸುತ್ತಾರೆ. ಸುಮ್ಮನೆ ಯಾವುದೇ ವಿವಾದವನ್ನು ಸ್ಪಷ್ಟಿಸುವುದು ಬೇಡ ಎಂದು ಹಿರಿಯ ನಾಯಕ ತಿಳಿಸಿದ್ರು.

ಅಯೋಧ್ಯೆಯಲ್ಲಿ ನಡೆದಿದ್ದು ಧರ್ಮ ಸಭೆಯಲ್ಲ.. ಅದು ರಾಜಕೀಯ ಸಭೆ: ಮಹೇಂದ್ರ ಕುಮಾರ್​

Monday, December 3rd, 2018
manglore

ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಯಾವುದೇ ಅಡೆತಡೆಗಳಿಲ್ಲ, ಆದರೂ ಮಂದಿರ ಕಟ್ಟುತ್ತಿಲ್ಲ. ಅಯೋಧ್ಯೆಯಲ್ಲಿ ನಡೆದಿದ್ದು ಧರ್ಮ ಸಭೆಯಲ್ಲ. ಅದು ರಾಜಕೀಯ ಸಭೆ ಎಂದು ನಿರ್ಮೋಹಿ ಅಖಾಡದ ಗುರುಗಳು ಹೇಳಿದ್ದಾರೆ. ನಗರದ ನಂತೂರಿನಲ್ಲಿ‌ ಅಭಿಮತ ಮಂಗಳಾ ಆಯೋಜಿಸಿದ್ದ ಜನನುಡಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಂದಿರ ಕಟ್ಟುವುದಕ್ಕೆ ಯಾರ ವಿರೋಧವೂ ಇಲ್ಲವೆಂದು ಅಯೋಧ್ಯೆಯ ಅನ್ಸಾರಿ ಹೇಳಿದ್ದಾರೆ. ಏಕೆಂದರೆ ಇದು ರಾಜಕೀಯ ಪ್ರೇರಿತ ಕುತಂತ್ರ ಎಂದು ನಮ್ಮ ಧ್ವನಿ ಸಂಘಟನೆಯ ಮಹೇಂದ್ರ ಕುಮಾರ್ ಆರೋಪಿಸಿದರು. ನರೇಂದ್ರ ಮೋದಿಯವರು ಎಲ್ಲಾ […]