Blog Archive

ಕದ್ರಿಯಲ್ಲಿ ರಾಷ್ಟ್ರೀಯ ಮಟ್ಟದ ಮಕ್ಕಳ ಉತ್ಸವ ಶ್ರಿಕೃಷ್ಣ ವೇಷ ಸ್ಪರ್ಧೆ

Saturday, August 24th, 2019
Krishna vesha

ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶ್ರೀಕ್ಷೇತ್ರ ಕದ್ರಿಯಲ್ಲಿ 9 ವೇದಿಕೆಗಳಲ್ಲಿ ಸುಮಾರು 30 ವಿಭಾಗಗಳಲ್ಲಿ ರಾಷ್ಟ್ರೀಯ ಮಟ್ಟದ ಮಕ್ಕಳ ಉತ್ಸವ ಶ್ರಿಕೃಷ್ಣ ವೇಷ ಸ್ಪರ್ಧೆ ಗೆ ಎ.ಜೆ.ಸಮೂಹ ಸಂಸ್ಥೆಗಳ ಅಧ್ಯಕ್ಷ, ಕದ್ರಿ ದೇವಸ್ಥಾನದ ಆಡಳಿತ ಟ್ರಸ್ಟಿಎ.ಜೆ . ಶೆಟ್ಟಿ ಚಾಲನೆ ನೀಡಿದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಲಕ್ಷ್ಮೀ ನಾರಾಯಣ ಅಸ್ರಣ್ಣ,ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಮತ್ತು ಧರ್ಮ ದರ್ಶಿ ಹರಿಕೃಷ್ಣ […]

ಕದ್ರಿಯಲ್ಲಿ ಮಳೆಗಾಗಿ ಪರ್ಜನ್ಯಜಪ, ರುದ್ರ ಪಾರಾಯಣ

Saturday, May 18th, 2019
vipra

ಮಂಗಳೂರು :  ಕರ್ನಾಟಕದಲ್ಲಿ ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲ ತೀವ್ರತರವಾದ ಜಲಕ್ಷಾಮ ತಲೆದೋರಿದ್ದುಇದರ ಪರಿಹಾರಾರ್ಥ ಅಖಿಲ ಭಾರತ ಬ್ರಾಹ್ಮಣ ಒಕ್ಕೂಟ ಆಶ್ರಯದಲ್ಲಿ ಕದ್ರಿ ಮಂಜುನಾಥ ದೇವಳದ ಕೆರೆಯ ಪ್ರಾಂಗಣದಲ್ಲಿ ಬೆಳಗ್ಗೆ 9 ಗಂಟೆಯಿಂದ 7.30 ರ ವರೆಗೆ ವರುಣ ದೇವರ ಪ್ರೀತ್ಯರ್ಥ, ಪರ್ಜನ್ಯ ಜಪ, ರುದ್ರ ಪಾರಾಯಣ ವಿಷ್ಣು ಸಹಸ್ರ ನಾಮ ಪಠಣ ನಡೆಸಲಾಯಿತು. ಕದ್ರಿ ದೇವಳದ ಅರ್ಚಕರಾದ ರಾಘವೇಂದ್ರ ಅಡಿಗ, ಡಾ. ಪ್ರಭಾಕರ ಅಡಿಗ ದೀಪ ಪ್ರಜ್ವಲನಗೊಳಿಸಿದರು ಮತ್ತುಇತರ ವೈದಿಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮಜರಗಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. […]

ನಂತೂರು ಸರ್ಕಲ್ ಬಳಿ ಉರುಳಿ ಬಿದ್ದ ಗ್ಯಾಸ್​ ತುಂಬಿದ ಟ್ಯಾಂಕರ್​..!

Wednesday, November 21st, 2018
tankar

ಮಂಗಳೂರು: ನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಗ್ಯಾಸ್ ತುಂಬಿದ ಟ್ಯಾಂಕರ್ ಮಗುಚಿ ಬಿದ್ದಿರುವ ಘಟನೆ ನಂತೂರು ಬಳಿ ನಡೆದಿದೆ. ಭಾರತ್ ಗ್ಯಾಸ್ ತುಂಬಿದ ಈ ಟ್ಯಾಂಕರ್ ನಂತೂರಿನಿಂದ ಬಿಕರ್ನಕಟ್ಟೆ ಕಡೆಗೆ ತೆರಳುತ್ತಿರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ನಗರದ ಕದ್ರಿ ಪೊಲೀಸರು ಭೇಟಿ ನೀಡಿ ಕ್ರೇನ್ ಮೂಲಕ ಟ್ಯಾಂಕರ್ನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕದ್ರಿ ಮತ್ತು ಅತ್ತಾವರದಲ್ಲಿ ಮೊಸರು ಕುಡಿಕೆ ಉತ್ಸವ

Tuesday, September 4th, 2018
shree-krishna

ಮಂಗಳೂರು: ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿಯ ಅತ್ತಾವರ ಮುಂಡತ್ತಾಯ ದೇವಸ್ಥಾನದಲ್ಲಿ ಟೇಬಲ್ಯೂಕ್ಸ್ ಮತ್ತು ಇತರ ಮನರಂಜನಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಯಿತು. 109 ನೇ ಮೊಸರು ಕುಡಿಕೆಯನ್ನು ಸಂಗೀತ ರಾತ್ರಿ ಮತ್ತು ಇತರ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆ ಯಿಂದ ಆಚರಿಸಲಾಯಿತು.  ಮಂಗಳೂರಿನಲ್ಲಿ ಶ್ರೀ ಕೃಷ್ಣ ಜನ್ಮದಿನದ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ನಡೆಯಿತು. ಕದ್ರಿಯಲ್ಲಿ ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿ ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಿತು. ಕದ್ರಿ ಮಂಜುನಾಥ ದೇವಸ್ಥಾನದ ವಠಾರ, ಉತ್ಸವ ನಡೆದ ರಸ್ತೆಗಳು, ಬೀದಿಗಳು ಶೃಂಗಾರಗೊಂಡಿದ್ದವು. ದಾರಿಯುದ್ದಕ್ಕೂ ಎತ್ತರದ […]

ಕದ್ರಿ ನವೀಕೃತ ಹಿಂದೂ ರುದ್ರಭೂಮಿ ಉದ್ಘಾಟನೆಗೆ ಅಡ್ಡಿ

Tuesday, March 20th, 2018
kadri-mangaluru

ಮಂಗಳೂರು: ಕದ್ರಿ ನವೀಕೃತ ಹಿಂದೂ ರುದ್ರಭೂಮಿ ಉದ್ಘಾಟನೆಗೆ ಸ್ಥಳೀಯ ಜೋಗಿ ಸಮುದಾಯದವರು ಅಡ್ಡಿ ಪಡಿಸಿದ ಘಟನೆ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕ ಜೆ.ಆರ್‌.ಲೋಬೊ, ಮೇಯರ್ ಭಾಸ್ಕರ್‌ ಮೊಲಿ ಉಪಸ್ಥಿತಿಯಲ್ಲಿ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ರುದ್ರಭೂಮಿ ಸುತ್ತ ಇಂಟರ್‌‌ಲಾಕ್‌ ಆಳವಡಿಸಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೋಗಿ ಸಮುದಾಯದವರು ಇಂಟರ್‌ಲಾಕ್‌ ತೆರವಿಗೆ ಆಗ್ರಹಿಸಿದರು. ಈ ರುದ್ರಭೂಮಿ ಹಿಂದೆ ಜೋಗಿ ಸಮುದಾಯಕ್ಕೆ ಮೀಸಲಾಗಿ, ಜೋಗಿಗಳ ಮೃತದೇಹವನ್ನು ಜೋಗಿ ಸಂಪ್ರದಾಯದಂತೆ ಇಲ್ಲಿ ದಫನ್‌ ಮಾಡಲಾಗುತ್ತಿತ್ತು. ನಂತರ ಇದು ಸಾರ್ವಜನಿಕ ರುದ್ರಭೂಮಿಯಾದರೂ […]

ಶ್ಮಶಾನಕ್ಕೆ ಸಿಕ್ಕಿತು ಹೈಟೆಕ್‌ ಸ್ಪರ್ಶ

Thursday, March 15th, 2018
smashana

ಮಂಗಳೂರು: ಸಾಮಾನ್ಯವಾಗಿ ಶ್ಮಶಾನ ಅಂದರೆ, ಅದು ಜನವಾಸವಿರುವ ಪ್ರದೇಶದಿಂದ ಸ್ವಲ್ಪ ದೂರದಲ್ಲಿದ್ದು, ಅತ್ತ ಸುಳಿಯುವುದಕ್ಕೂ ಜನರು ಹಿಂದೇಟು ಹಾಕುತ್ತಾರೆ. ಅಷ್ಟೇ ಅಲ್ಲ, ಸರಿಯಾದ ನಿರ್ವಹಣೆಯೂ ಕಾಣದೆ ಪೊದೆ- ಗಿಡಗಳಿಂದ ಆವರಿಸಿರುತ್ತದೆ. ಅವೆಲ್ಲಕ್ಕಿಂತಲೂ ಶ್ಮಶಾನ ಅಂದಾಗ ಒಂದು ರೀತಿಯ ನಕಾರಾತ್ಮಕ ಭಾವನೆಯೂ ಮೂಡುತ್ತದೆ. ಆದರೆ, ನಗರದ ಹೃದಯ ಭಾಗದಲ್ಲಿರುವ ಈ ಶ್ಮಶಾನ ಮಾತ್ರ ಇದಕ್ಕಿಂತ ಭಿನ್ನವಾಗಿದೆ. ವರ್ಷಗಳ ಹಿಂದೆ ಕದ್ರಿ ಶ್ಮಶಾನದತ್ತ ತೆರೆಳುವುದೆಂದರೆ ಸ್ಥಳೀಯರೇ ಭಯ ಪಡುತ್ತಿದ್ದರು. ಆದರೆ, ಈಗ ನವೀಕರಣಗೊಂಡ ಶ್ಮಶಾನಕ್ಕೆ ಹೈಟೆಕ್‌ ಟಚ್‌ ದೊರೆತಿದೆ. ಕದ್ರಿಯ […]

ವರ್ಷದ ಮೊದಲ ದಿನ: ಕದ್ರಿ, ಕುದ್ರೋಳಿ ಸೇರಿ ಹಲವು ದೇವಾಲಯಗಳಲ್ಲಿ ಭಕ್ತರಿಂದ ಪೂಜೆ

Monday, January 1st, 2018
Temple

ಮಂಗಳೂರು: ಹಳೆ ವರ್ಷ ಕಳೆದು ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಇಡೀ ವರ್ಷ ಆರೋಗ್ಯ, ನೆಮ್ಮದಿ, ಯಶಸ್ಸು, ಐಶ್ವರ್ಯ ದಯಪಾಲಿಸಲಿ ಎಂಬುದು ಎಲ್ಲರ ಅಭಿಲಾಸೆ. ಯಾವುದೇ ಕಾರ್ಯವನ್ನು ಜನ ಇಂದು ದೇವರ ದರ್ಶನದ ಮೂಲಕ ಆರಂಭಿಸುತ್ತಾರೆ. ಹಾಗೆಯೇ ಮಂಗಳೂರಿನಲ್ಲೂ ಮಂಗಳಾದೇವಿ, ಕದ್ರಿ ಮಂಜುನಾಥ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ ಸೇರಿದಂತೆ ಎಲ್ಲಾ ದೇವಸ್ಥಾನಗಳಲ್ಲೂ ಭಕ್ತರು ಮುಗಿಬಿದ್ದು ಪೂಜೆ ಸಲ್ಲಿಸುತ್ತಿರುವ ದೃಶ್ಯ ಕಂಡುಬಂತು. ಬಹುತೇಕ ಎಲ್ಲಾ ದೇವಸ್ಥಾನಗಳಲ್ಲೂ ಇಂದು ವಿಶೇಷ ಪೂಜೆ ನೆರವೇರಿತು. ಭಕ್ತರು ಸಾಮೂಹಿಕ ಸತ್ಯನಾರಾಯಣ ಪೂಜೆ ಕೈಗೊಂಡು […]

ಕರಾವಳಿ ಉತ್ಸವ ಉದ್ಘಾಟನೆ ಮಾಡಲಿದ್ದಾರೆ ನಟ ಪ್ರಕಾಶ್ ರೈ

Wednesday, December 20th, 2017
prakash-rai

ಮಂಗಳೂರು: ಡಿಸೆಂಬರ್ 22ರಿಂದ 31ರವರೆಗೆ ಮಂಗಳೂರಿನಲ್ಲಿ ನಡೆಯುವ ‘ಕರಾವಳಿ ಉತ್ಸವ 2017’ ಅನ್ನು ಬಹುಭಾಷಾ ನಟ‌ ಪ್ರಕಾಶ್ ರೈ ಉದ್ಘಾಟಿಸಲಿದ್ದಾರೆ. ಪ್ರಕಾಶ್ ರೈ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಸ್ಪಷ್ಟಪಡಿಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ‘ಕರಾವಳಿ ಉತ್ಸವ ಯಶಸ್ವಿಯಾಗಿ ನಡೆಯುವಂತೆ ಸಕಲ ತಯಾರಿಗಳೂ ನಡೆಯುತ್ತಿವೆ’ ಎಂದರು. ಕರಾವಳಿ ಉತ್ಸವದ ಅಂಗವಾಗಿ ಹತ್ತು ದಿನಗಳ ಕಾಲ ಕರಾವಳಿ ಉತ್ಸವ ಮೈದಾನ ಮತ್ತು ಕದ್ರಿ ಉದ್ಯಾನದ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. […]

ಕದ್ರಿಯಲ್ಲಿ ಕಲಾವಿದ ಮೋಹನ್ ಶೆಟ್ಟಿಗಾರ್ ಮಿಜಾರ್ ದಂಪತಿಗಳಿಗೆ ಸನ್ಮಾನ

Monday, December 11th, 2017
mohan-shettiger

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರ ಮೇಳದಲ್ಲಿರುವ ಹಿರಿಯ ಯಕ್ಷಗಾನ ಚೆಂಡೆಮದ್ದಳೆ ಕಲಾವಿದಳನ್ನು ಇತ್ತೀಚೆಗೆ ಕದ್ರಿ ದೇವಸ್ಥಾನ ಬಳಿ ನಡೆದ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಂಜಾರುಬೀಡು ಪ್ರದೀಪ್ ಆಳ್ವ ಕದ್ರಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಡಾ. ಕೆ. ಕೃಷ್ಣಭಟ್ ತಿರುಪತಿ, ವೆಂಕಪ್ಪ ಕಾಜವ ಪಟ್ಟೋರಿ, ಮಧುಕರ ಮಲ್ಲಿ ಕಾವೂರು, ಪಟ್ಲ ಸತೀಶ್ ಶೆಟ್ಟಿ, ಪ್ರದೀಪ್ ಕಲ್ಕೂರ, […]

ಕದ್ರಿ ಸಂಚಾರ ವಿಭಾಗದ ಪೊಲೀಸ್ ಪೇದೆಯ ಪತ್ನಿ ಆತ್ಮಹತ್ಯೆ

Thursday, November 2nd, 2017
kadri

ಮಂಗಳೂರು: ಪೊಲೀಸ್ ವಸತಿ ಗೃಹದಲ್ಲಿ ನಗರದ ಕದ್ರಿ ಪೊಲೀಸ್ ಠಾಣೆ ಸಂಚಾರ ವಿಭಾಗದ ಪೊಲೀಸ್ ಪೇದೆ ಚಿನ್ನಪ್ಪಎಂಬವರ ಪತ್ನಿ ಉಮಾ (26)ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ. ಶಕ್ತಿ ನಗರದಲ್ಲಿ ಇರುವ ಪೊಲೀಸ್ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಚಿನ್ನಪ್ಪ ಹಾಗೂ ಇಬ್ಬರೂ ಮಕ್ಕಳನ್ನು ಅಗಲಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.