Blog Archive

ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಟೋಲ್ ಸಂಗ್ರಹವನ್ನು ಖಂಡಿಸಿ ಡಿವೈಎಫ್‌ಐ ಪ್ರತಿಭಟನೆ

Monday, February 13th, 2017
LDYF

ಮಂಗಳೂರು: ಕೇರಳ ಮತ್ತು ಕರ್ನಾಟಕದ ಗಡಿ ಭಾಗದಲ್ಲಿರುವ ತಲಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಟೋಲ್ ಸಂಗ್ರಹಿಸುವುದನ್ನು ಖಂಡಿಸಿ ಡಿವೈಎಫ್‌ಐ ಉಳ್ಳಾಲ ಮತ್ತು ಮಂಜೇಶ್ವರ ವಲಯ ಹಾಗೂ ಎಐವೈಎಫ್ ಮಂಜೇಶ್ವರ ವಲಯದ ಜಂಟಿ ಸಂಘಟನೆ ಎಲ್‌ಡಿವೈಎಫ್ ನೇತೃತ್ವದಲ್ಲಿ ತಲಪಾಡಿಯಲ್ಲಿ ಪ್ರತಿಭಟನೆ ನಡೆಸಿತು. ಕಾಮಗಾರಿ ಪೂರ್ಣಗೊಂಡ ಬಳಿಕವೇ ಟೋಲ್ ಸಂಗ್ರಹಿಸಬೇಕು. ನೋಂದಣಿ ಸಂಖ್ಯೆ ಕೆಎಲ್ 14 ಮತ್ತು ಕೆಎ 19ರ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎಲ್‌ಡಿವೈಎಫ್ ಸಂಘಟನೆಯ ಮುಖಂಡರಾದ […]

ಮಲ್ಪೆ ಬೀಚ್‌ ಸಮಗ್ರ ಅಭಿವೃದ್ಧಿಗೆ ಒತ್ತು : ಸಚಿವ ಪ್ರಮೋದ್‌ ಮಧ್ವರಾಜ್‌

Monday, September 19th, 2016
malpe-beach

ಮಲ್ಪೆ: ಕಳೆದ 3 ವರ್ಷದ ಅವಧಿಯಲ್ಲಿ ಮಲ್ಪೆ ಬೀಚ್‌ನ ಅಭಿವೃದ್ಧಿಗೆ ವಿವಿಧ ಇಲಾಖೆ ಮತ್ತು ವಿವಿಧ ಮೂಲಗಳಿಂದ 10.42 ಕೋ. ರೂ. ಅನುದಾನ ತರಿಸಿ ಅಭಿವೃದ್ಧಿ ಕೆಲಸಗಳು ನಡೆಸಲಾಗಿದ್ದು, ಮುಂದೆ ಇನ್ನಷ್ಟು ಉತ್ತಮ ಅಭಿವೃದ್ಧಿ ಕೆಲಸಗಳನ್ನು ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮೀನುಗಾರಿಕೆೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಅವರು ಶನಿವಾರ ಮಲ್ಪೆ ಬೀಚ್‌ನಲ್ಲಿ ಬೀಚ್‌ ಸ್ವತ್ಛತಾ ಯಂತ್ರ ಉದ್ಘಾಟಿಸಿ ಮಾತನಾಡಿದರು. ಮಲ್ಪೆ, ಪಡುಕರೆಗೆ ಸೇತುವೆ ನಿರ್ಮಾಣಗೊಳ್ಳುತ್ತಿರುವುದರಿಂದ ಬೀಚ್‌ನ್ನು ಪಡುಕರೆಯ ವರೆಗೆ ವಿಸ್ತರಿಸುವ ಯೋಜನೆ […]

ರಾಷ್ಟ್ರೀಯ ಹೆದ್ದಾರಿ : ಮಂದಗತಿಯ ಕಾಮಗಾರಿ, ಅಲ್ಲಲ್ಲಿ ಟೋಲ್‌ಗೇಟ್‌ – ಸಭೆ

Sunday, November 27th, 2011
DC Chennappa Gowda

ಮಂಗಳೂರು: ಸುರತ್ಕಲ್‌- ಬಿ.ಸಿ. ರೋಡ್‌ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಿರ್ವಹಣೆಯ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ  ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿಯ ಬಗ್ಗೆ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಒಂದು ಟೋಲ್‌ಗೇಟ್‌ನಿಂದ ಕನಿಷ್ಠ 60 ಕಿ. ಮೀ. ದೂರದಲ್ಲಿ ಇನ್ನೊಂದು ಟೋಲ್‌ಗೇಟ್‌ ನಿರ್ಮಿಸಬಹುದು. ಅಲ್ಲದೆ ಮಹಾನಗರ ಪಾಲಿಕೆಯ ಗಡಿಯಿಂದ 10 ಕಿ. ಮೀ. ಅನಂತರ ಇನ್ನೊಂದು ಟೋಲ್‌ಗೇಟ್‌ ನಿರ್ಮಿಸಬಹುದು ಎನ್ನುವ ನಿಯಮವಿದೆ. ಬ್ರಹ್ಮರಕೂಟ್ಲುವಿನಲ್ಲಿ ರಾ. ಹೆದ್ದಾರಿಯಲ್ಲಿ ಟೋಲ್‌ಗೇಟ್‌ ನಿರ್ಮಿಸಲಾಗಿದ್ದು, ಬೈಕಂಪಾಡಿ ಪರಿಸರದಲ್ಲಿ ಇನ್ನೊಂದು […]

ಮಹಾನಗರಪಾಲಿಕೆ ಕಾಮಗಾರಿ-ಗುತ್ತಿಗೆದಾರರಿಗೆ ಕಾಲಮಿತಿಯಲ್ಲಿ ಬಿಲ್ ಪಾವತಿಸಿ-ಶ್ರೀ ಜೆ.ಕೃಷ್ಣ ಪಾಲೇಮಾರ್

Saturday, April 23rd, 2011
ಜೆ.ಕೃಷ್ಣ ಪಾಲೇಮಾರ್

ಮಂಗಳೂರು : ಮಂಗಳೂರು ನಗರದಲ್ಲಿ ಮೂಲಭೂತ ಸೌಲಭ್ಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಮಾನ್ಯ ಮುಖ್ಯ ಮಂತ್ರಿಗಳು ನೀಡಿರುವ ವಿಶೇಷ ಅನುದಾನದಡಿಯಲ್ಲಿ ವಿವಿಧ ಕಾಮಗಾರಿಗಳ ಗುತ್ತಿಗೆ ಪಡೆದಿರುವ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಂಡ   20 ದಿನಗಳೊಳಗೆ ಬಿಲ್ಲಿನ ಹಣ ಪಾವತಿ ಮಾಡುವಂತೆ ಮಹಾನಗರಪಾಲಿಕೆಯ ಅಧಿಕಾರಿಗಳಿಗೆ ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ,ಮೀನುಗಾರಿಕೆ,ಪರಿಸರ ಸಚಿವರಾದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣ ಜೆ.ಪಾಲೇಮಾರ್ರವರು ಸೂಚಿಸಿದ್ದಾರೆ. ಅವರು  ನಿನ್ನೆ ಮಂಗಳೂರು ಮಹಾನಗರಪಾಲಿಕೆಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಈ ವಿಷಯ ತಿಳಿಸಿದರು. […]