ತುಮಕೂರಿನಲ್ಲಿ ಖಾಸಗಿ ಬಸ್ ಪಲ್ಟಿ : ಏಳು ಜನರ ಸಾವು; ಹಲವರಿಗೆ ಗಂಭೀರ ಗಾಯ
Wednesday, October 30th, 2019ತುಮಕೂರು : ಖಾಸಗಿ ಬಸ್ ಪಲ್ಟಿಯಾಗಿ ಏಳು ಜನರು ಸಾವನ್ನಪ್ಪಿ , 20ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡ ಭೀಕರ ದುರ್ಘಟನೆ ಕೊರಟಗೆರೆ ಜೆಟ್ಟಿ ಅಗ್ರಹಾರದ ಬಳಿ ನಡೆದಿದೆ. ಕೊರಟಗೆರೆಯಿಂದ ತುಮಕೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಜೆಟ್ಟಿ ಅಗ್ರಹಾರದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.