Blog Archive

ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವೈಭವದ ‘ಮಂಗಳೂರು ದಸರಾ’ಕ್ಕೆ ಚಾಲನೆ

Thursday, September 29th, 2011
Kudroli Temple

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ವರ್ಷಂಪ್ರತಿ ಜರಗುವ ವೈಭವದ ‘ಮಂಗಳೂರು ದಸರಾ’ಕ್ಕೆ ಬುಧವಾರ ಚಾಲನೆ ನೀಡಲಾಯಿತು. ಈ ಸಂಧರ್ಭದಲ್ಲಿ ಶಾರದೆ ಹಾಗೂ ನವದುರ್ಗೆಯರ ವಿಗ್ರಹ ಪ್ರತಿಷ್ಠೆ ನಡೆಯಿತು.ಉದ್ಯಮಿ ರಮೇಶ್‌ ಕುಮಾರ್‌ ಹಾಗೂ ಊರ್ಮಿಳಾ ರಮೇಶ್‌ ಕುಮಾರ್‌ ದಂಪತಿ ಪ್ರತಿಷ್ಠಾಪನಾ ದೀಪವನ್ನು ಬೆಳಗಿದರು. ಶಾರದೆಯ ವಿಗ್ರಹವನ್ನು ಕ್ಷೇತ್ರಕ್ಕೆ ಪ್ರದಕ್ಷಿಣೆ ಮಾಡಿ ನಂತರ ಕ್ಷೇತ್ರದ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಮಧ್ಯಾಹ್ನ 11.35ಕ್ಕೆ ನವದುರ್ಗೆಯರು ಹಾಗೂ ಶಾರದೆಯ ವಿಗ್ರಹವನ್ನು ಸಾಂಪ್ರದಾಯಿಕ ವಿಧಿ ವಿಧಾನಗಳಿಂದ ಪ್ರತಿಷ್ಠಾಪಿಸುವ ಮೂಲಕ ಮುಂದಿನ […]

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಿಧವಾ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ

Wednesday, September 21st, 2011
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಿಧವಾ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಉತ್ಸವ ಸಂದರ್ಭದಲ್ಲಿ ಈ ಬಾರಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ಪತ್ರಿಕಾಭಾವನದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಗಂಡ ಮೃತಪಟ್ಟ ಮಹಿಳೆಯನ್ನು ಸಮಾಜ ಇತರ ಮಹಿಳೆಯರಂತೆ ಗೌರವ ಭಾವದಿಂದ ನೋಡುವಂತಾಗಬೇಕು. ಅದಕ್ಕಾಗಿ ಸುಮಾರು 1500 ಮಂದಿ ವಿಧವೆಯರಿಗೆ ಸೀರೆ, ಕುಂಕುಮದ ಕರಡಿಗೆ, ಹೂವು, ಬಳೆಗಳನ್ನು ದಸರಾ ಉತ್ಸವ ಸಂದರ್ಭದಲ್ಲಿ ನೀಡಲಾಗುವುದು ಎಂದು ಹೇಳಿದರು. ಮಹಿಳೆಯರಿಗೆ ವಿಶೇಷ ಗೌರವ […]

ಸೋನಿಯಾ ಗಾಂಧಿ ಗುಣಮುಖರಾಗಲು ಪೂಜಾರಿ ನೇತೃತ್ವದಲ್ಲಿ ಉರುಳು ಸೇವೆ

Sunday, August 7th, 2011
Janardhana Poojary/ಪೂಜಾರಿ ನೇತೃತ್ವದಲ್ಲಿ ಉರುಳು ಸೇವೆ

ಮಂಗಳೂರು : ಸೋನಿಯಾ ಗಾಂಧಿ ಅವರು ಶೀಘ್ರ ಗುಣಮುಖರಾಗಿ ಭಾರತಕ್ಕೆ ಮರಳಿ ಬರಲಿ ಎಂದು ಪ್ರಾರ್ಥಿಸಿ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶನಿವಾರ ವಿಶೇಷ ಪೂಜೆ ಹಾಗೂ ಉರುಳು ಸೇವೆ ಜರಗಿತು. ಸೋನಿಯಾ ಗಾಂಧಿ ಅವರು ಶೀಘ್ರ ಗುಣಮುಖರಾಗಿ ಭಾರತಕ್ಕೆ ಮರಳಿ ಬರಲಿ ಎಂದು ಪ್ರಾರ್ಥಿಸಿ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ […]

ಉದ್ಯಮಿ ರಮೇಶ್ ಕುಮಾರ್ ದಂಪತಿಗಳಿಂದ ಕುದ್ರೋಳಿ ಕ್ಷೇತ್ರಕ್ಕೆ ಬೆಳ್ಳಿರಥ ಸಮರ್ಪಣೆ

Wednesday, March 2nd, 2011
ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಬೆಳ್ಳಿರಥ ಸಮರ್ಪಣೆ

ಮಂಗಳೂರು : ಉದ್ಯಮಿ ರಮೇಶ್ ಕುಮಾರ್ ಮತ್ತು ಉರ್ಮಿಳ ರಮೇಶ್ ದಂಪತಿಗಳು ಇಂದು ಮಧ್ಯಾನ್ಹ 12.42 ರ ವೃಷಭ ಲಗ್ನದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಈ ಬೆಳ್ಳಿರಥವನ್ನು ಸಮರ್ಪಿಸಿದರು. 18.5 ಅಡಿ ಎತ್ತರ ಹಾಗೂ 8.5 ಅಡಿ ಅಗಲವಿರುವ  ಬೆಳ್ಳಿ ರಥವನ್ನು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ರಥವನ್ನು 225ಕ.ಜಿ. ಬೆಳ್ಳಿಯಲ್ಲಿ ತಯಾರಿಸಲಾಗಿದೆ. ಫೆಬ್ರವರಿ 18 ರಂದು  ಕುಂಟಾಡಿಯಿಂದ ವಿವಿಧ ವಾದ್ಯಾ ಘೋಷಗಳೊಂದಿಗೆ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ತರಲಾಗಿತ್ತು. ಇಂದು ಮಧ್ಯಾಹ್ನ […]