ಸ್ಯಾಂಡಲ್‌ವುಡ್ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ತುಳು ಸಿನಿಮಾದಲ್ಲಿ ನಟನೆ
Thursday, October 13th, 2016ಮಂಗಳೂರು: ಸ್ಯಾಂಡಲ್‌ವುಡ್ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಇದೇ ಮೊದಲ ಬಾರಿಗೆ ತುಳು ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಹೊರಬಂದಿದೆ. ಪುನೀತ್ ಅವರ `ದೊಡ್ಮನೆ ಹುಡ್ಗ’ ನಂತರ ಇವರಿಗೆ ಇದು ಹೊಸ ಅನುಭವವಂತೆ. ನಾಗೇಶ್ವರ ಸಿನಿ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಡಂದಲೆ ಸುರೇಶ್ ಎಸ್. ಭಂಡಾರಿ ನಿರ್ಮಾಣದ ಅಂಬರ್ ಕೇಟರರ್ಸ್ ತುಳು ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಭಾರತಿಯವರು ಭಾಗಿಯಾಗುತ್ತಿದ್ದಾರೆ. ಅಂಬರ್ ಕೇಟರರ್ಸ್ ಇದೊಂದು ವಿನೂತನ ಶೈಲಿಯ ಸಿನಿಮಾ ಇದಾಗಿದ್ದು, ಹಾಸ್ಯ ಪ್ರಧಾನ ಕಥಾವಸ್ತು ಹೊಂದಿದೆ. ಕೇಟರರ್ಸ್ ಉದ್ಯಮ ವ್ಯವಸ್ಥೆಯೊಳಗಿನ […]