Blog Archive

ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ನಿಖಿಲ್ ಕುಮಾರಸ್ವಾಮಿ

Monday, September 23rd, 2024
Nikhil-Kumara-swamy

ಮಂಗಳೂರು : ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಇಂದು ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು. ಇದೆ ವೇಳೆ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಪೂಜ್ಯ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡೆದರು ಬಳಿಕ ನಾಗರಾಧನೆಗೆ ಪ್ರಸಿದ್ಧವಾದ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ […]

ಧರ್ಮಸ್ಥಳದಲ್ಲಿ “ಸಿರಿ ಧಾನ್ಯ ಸಿರಿ-ಸರಿ” ಕೃತಿ ಬಿಡುಗಡೆ

Tuesday, July 9th, 2024
siri-dhanya-siri-sari

ಉಜಿರೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಪ್ರಕಟಿಸಿದ “ಸಿರಿ ಧಾನ್ಯ ಸಿರಿ-ಸರಿ” ಕೃತಿಯನ್ನು ಧರ್ಮಸ್ಥಳದಲ್ಲಿ ಹೇಮಾವತಿ ವೀ. ಹೆಗ್ಗಡೆಯವರು ಬಡುಗಡೆಗೊಳಿಸಿ ಶುಭ ಹಾರೈಸಿದರು. ಹಿರಿಯ ಪತ್ರಕರ್ತ ಅನಂತ ಹುದಂಗಜೆ ರಚಿಸಿದ ಪುಸ್ತಕದಲ್ಲಿ ಸಿರಿಧಾನ್ಯಗಳ ಬಳಕೆಯೊಂದಿಗೆ ಆರೋಗ್ಯಭಾಗ್ಯ ರಕ್ಷಣೆ ಬಗ್ಯೆ ಸಮಗ್ರ ಮಾಹಿತಿ, ಮಾರ್ಗದರ್ಶನ ನೀಡಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಸ್. ಅನಿಲ್ ಕುಮಾರ್, ಹಣಕಾಸು ಅಧಿಕಾರಿ ಶಾಂತಾರಾಮ ಪೈ, ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಹಿರಿಯ ನಿರ್ದೇಶಕ ದಿನೇಶ್ ಎಂ. , ಅಭಿನಂದನ್ ಜೈನ್ […]

ಮನೆಯ ಕೋಣೆಯಲ್ಲಿ ನೇಣು ಬಿಗಿದು ಮಹಿಳೆ ಆತ್ಮಹತ್ಯೆ

Tuesday, July 2nd, 2024
ಮನೆಯ ಕೋಣೆಯಲ್ಲಿ ನೇಣು ಬಿಗಿದು ಮಹಿಳೆ ಆತ್ಮಹತ್ಯೆ

ಬೆಳ್ತಂಗಡಿ : ತನ್ನ ಮನೆಯ ಕೋಣೆಯಲ್ಲಿ ಮಹಿಳೆಯೋರ್ವಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಧರ್ಮಸ್ಥಳದ ಜೋಡುಸ್ಥಾನದಲ್ಲಿ ಜುಲೈ 2ರಂದು ನಡೆದಿದೆ. ಜೋಡುಸ್ಥಾನ ನಿತ್ಯನೂತನ ಭಜನ ಮಂದಿರ ಬಳಿಯ ನಿವಾಸಿ ರಕ್ಷಿತಾ ಜೈನ್ (26) ಆತ್ಮಹತ್ಯೆ ಮಾಡಿಕೊಂಡವರು. ರಕ್ಷಿತಾ ಜೈನ್ ರವರು ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ರಕ್ಷಿತಾ ಅವರ ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಮೃತರು ತಂದೆ ವೀರಚಂದ್ರ ಜೈನ್, ತಾಯಿ ಅರುಣಾ, ಪತಿ ಸಂತೋಷ್ ಜೈನ್ ಹಾಗೂ […]

ಮಹಾಶಿವಾರಾತ್ರಿ ದಿನವೇ ಧರ್ಮಸ್ಥಳದ ಆನೆ ಲತಾ ಶಿವೈಕ್ಯ

Saturday, March 9th, 2024
Latha-elephant

ಧರ್ಮಸ್ಥಳ : ಶ್ರೀ ಮಂಜುನಾಥ ಸ್ವಾಮಿಯ ಸೇವೆ ಸಲ್ಲಿಸುತ್ತಿದ್ದ ಆನೆ ಲತಾ ಮಹಾಶಿವಾರಾತ್ರಿ ದಿನವೇ ಹೃದಯಾಘಾತದಿಂದ ಶಿವೈಕ್ಯವಾಗಿದೆ . ಆನೆ ಲತಾ ಧರ್ಮಸ್ಥಳ ಶ್ರೀ ಮಂಜುನಾಥನಿಗೆ ಸೇವೆ ಸಲ್ಲಿಸುತ್ತಾ ಭಕ್ತರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆಯವಾರ ಪ್ರೀತಿಗೆ ಪಾತ್ರವಾಗಿತ್ತು. 60 ವಯಸ್ಸಿನ ಲತಾ ಅಂತ್ಯಸಂಸ್ಕಾರವನ್ನು ಸಂಜೆ ಧರ್ಮಸ್ಥಳದಲ್ಲಿ ನೆರವೇರಿಸಲಾಗಿದೆ. ಕಳೆದ 50 ವರ್ಷಗಳಿಂದ ಆನೆ ಲತಾ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥನ ಸೇವೆ ಸಲ್ಲಿಸುತ್ತಾ ಬಂದಿದೆ. ಮಂಜುನಾಥನ ವಿಶೇಷ ಪೂಜೆ, ಉತ್ಸವ, ಲಕ್ಷದಿಪೋತ್ಸೋವ, ಶಿವರಾತ್ರಿ […]

ಮರಳು ಸಾಗಾಣಿಕೆ ಲಾರಿ ‌ಮಾಲೀಕರಿಂದ ಹಣ ಪಡೆದಿಲ್ಲ ಎಂದು‌ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ ಶಾಸಕ ಹರತಾಳು ಹಾಲಪ್ಪ

Saturday, February 12th, 2022
Haratalu Halappa

ಧರ್ಮಸ್ಥಳ : ಮರಳು ಸಾಗಾಣಿಕೆ ಲಾರಿ ‌ಮಾಲೀಕರಿಂದ ಹಣ ಪಡೆದಿಲ್ಲ ಎಂದು‌ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ್ದೇನೆ‌ ಎಂದು‌ ಶಾಸಕ ಹರತಾಳು ಹಾಲಪ್ಪ ಮಾಧ್ಯಮಗಳಿಗೆ ತಿಳಿಸಿದರು. ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಆರೋಪ ಹಾಗೂ ಆಹ್ವಾನದ ಹಿನ್ನೆಲೆ, ಸವಾಲು ಸ್ವೀಕರಿಸಿದ ಶಾಸಕ ಹರತಾಳು ಹಾಲಪ್ಪ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಿ ಮಾತನಾಡಿದರು. ಮಾಜಿ ಶಾಸಕರ ಆಹ್ವಾನದಂತೆ‌ ಆರು ದಿನಗಳ‌ ಮೊದಲೇ ಅವರಿಗೆ ತಿಳಿವಳಿಕೆ ಪತ್ರದ ಮೂಲಕ ನೋಟಿಸ್ ನಿಡಿ ಇಂದಿಗೆ ದಿನ ನಿಗದಿಪಡಿಸಲಾಗಿತ್ತು. ಅವರು ದಿನಾಂಕ […]

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆನ್‌ಲೈನ್ ಬುಕ್ಕಿಂಗ್‌ ಸೇವೆಗಳು ರದ್ದು

Friday, January 7th, 2022
dharmasthala

ಮಂಗಳೂರು  : ಕೋವಿಡ್-19 ರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಸರ್ಕಾರದ ನಿರ್ದೇಶನದಂತೆ ಮಾರ್ಗಸೂಚಿಯನ್ನು ಪ್ರಕಟಿಸಿದ ಮೇರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಜಿಲ್ಲಾಡಳಿತದ ಮುಂದಿನ ಆದೇಶದ ವರೆಗೆ ಆನ್‌ಲೈನ್ ಬುಕ್ಕಿಂಗ್‌ಗಳಾದ ವಸತಿ, ತುಲಾಭಾರ ಮತ್ತು ಉತ್ಸವಾದಿ ಸೇವೆಗಳನ್ನು ರದ್ದುಪಡಿಸಲಾಗಿದೆ ಹಾಗೂ ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ದೇವಸ್ಥಾನದ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇತರ ದಿನಗಳಲ್ಲಿ ಜಿಲ್ಲಾಡಳಿತದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಧರ್ಮಸ್ಥಳದ ಆನೆಗಳಿಗೆ ಉಪಾಹಾರದ ಯೋಗ ಭಾಗ್ಯ!

Saturday, January 1st, 2022
Dharmasthala-Elephant

ಉಜಿರೆ: ಶನಿವಾರ ಚತುರ್ದಶಿಯ ಪರ್ವ ದಿನ. ಹೊಸ ವರ್ಷದ ಶುಭಾರಂಭ. ಆನೆಗಳಾದ ಲತಾ, ಲಕ್ಷ್ಮಿ ಮತ್ತು ಶಿವಾನಿ ಅಮೃತವರ್ಷಿಣಿ ಸಭಾ ಭವನದಲ್ಲಿ ಸೂರ್ಯಾಸ್ತದ ಮೊದಲೆ ಶುದ್ಧ ಸಸ್ಯಾಹಾರವಾದ ಉಪಾಹಾರ ಸ್ವೀಕರಿಸಿದವು. ಸೇಬು, ಮುಸುಂಬಿ, ದಾಳಿಂಬೆ, ಸೌತೆ, ಮುಳ್ಳು ಸೌತೆ, ಕಬ್ಬು, ಬಾಳೆಹಣ್ಣು, ಜೋಳ, ಸಿಹಿಕುಂಬಳಕಾಯಿ, ಬಾಳೆಗಿಡ ಹೀಗೆ ಆನೆಗಳಿಗೆ ಇಷ್ವಾದ ಹಾಗೂ ಹಿತವಾದ ವಸ್ತುಗಳನ್ನು ಜೋಡಿಸಿ ಇಡಲಾಗಿತ್ತು. ಅವರವರಿಗೆ ಬೇಕಾದ, ಆಯ್ಕೆಯಾದ ಹಣ್ಣುಗಳನ್ನು ತರಕಾರಿಗಳನ್ನು ಆನೆಗಳು ತಿಂದು ಆನಂದಿಸಿದವು. ಧರ್ಮಾಧಿಕಾರಿಗಳಾದ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀಮತಿ […]

ಧರ್ಮಸ್ಥಳ ವಸತಿ ಛತ್ರದ ನಿವೃತ್ತ ಪ್ರಬಂಧಕ ಸುರೇಂದ್ರ ಬಲ್ಲಾಳ್ ನಿಧನ

Monday, December 6th, 2021
Surendra Ballal

ಉಜಿರೆ: ಧರ್ಮಸ್ಥಳ ಗ್ರಾಮದ ನಿವಾಸಿ ಸುರೇಂದ್ರ ಬಲ್ಲಾಳ್ (66) ಸೋಮವಾರ ಹೃದಯಾಘಾತದಿಂದ ನಿಧನರಾದರು. ಅವರು ಕಬಡ್ಡಿ ಆಟಗಾರರಾಗಿದ್ದು ಹಲವಾರು ಪಂದ್ಯಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದರು. ಧರ್ಮಸ್ಥಳದಲ್ಲಿ ದೇವಸ್ಥಾನದ ವಸತಿ ಛತ್ರದಲ್ಲಿ ಪ್ರಬಂಧಕರಾಗಿ ಅವರು ಮೂವತ್ತು ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ, ಸಾಹಿತ್ಯ ಸಮ್ಮೇಳನದ 89 ನೆ ಅಧಿವೇಶನ

Friday, December 3rd, 2021
Dharmasthala-Deepothsava

ಉಜಿರೆ: ದೀಪ ಬೆಳಕಿನ ಸಂಕೇತ. ಲಕ್ಷದೀಪೋತ್ಸವ ಕೇವಲ ಉತ್ಸವ ಅಲ್ಲ. ಶಿಕ್ಷಣ, ಮಾಹಿತಿ ಮತ್ತು ಜಾಗೃತಿಯೊಂದಿಗೆ ಭಕ್ತಿ ಮತ್ತು ಶರಣಾಗತಿ ಮೂಲಕ ದೇವರಿಗೆ ಕೃತಜ್ಞತೆ ಸಲ್ಲಿಸುವ ಉತ್ಸವವಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 89ನೆ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು. ದೇವರಿಗೆ ದೀಪ ಹಚ್ಚುವುದು ಭಾರತೀಯ ಸಂಸ್ಕೃತಿಯ ಲಕ್ಷಣವಾಗಿದೆ. ಲಕ್ಷದೀಪೋತ್ಸವ ಸಂಸ್ಕೃತಿ ಉಳಿಸುವ, ಅಜ್ಞಾನದ […]

ಧರ್ಮಸ್ಥಳ ಲಕ್ಷ ದೀಪೋತ್ಸವ: ರಾಜ್ಯಪಾಲರಿಂದ 89 ನೆ ಸರ್ವಧರ್ಮ ಸಮ್ಮೇಳನ ಅಧಿವೇಶನ ಉದ್ಘಾಟನೆ

Thursday, December 2nd, 2021
Dharmasthala-Deepothsava4

ಉಜಿರೆ: ತಮ್ಮ ಧರ್ಮದ ಮರ್ಮವನ್ನರಿತು ಇತರ ಧರ್ಮಗಳನ್ನೂ ಗೌರವಿಸಿದಾಗ ಸಾಮಾಜಿಕ ಸಾಮರಸ್ಯದೊಂದಿಗೆ ವಿಶ್ವಶಾಂತಿ ಸಾಧ್ಯವಾಗುತ್ತದೆ ಎಂದು ಗೌರವಾನ್ವಿತ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಹೇಳಿದರು. ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಗುರುವಾರ ಆಯೋಜಿಸಿದ ಸರ್ವಧರ್ಮ ಸಮ್ಮೇಳನದ 89 ನೆ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬದುಕು ಮತ್ತು ಬದುಕಲು ಬಿಡು ಎಂಬುದು ಜೈನಧರ್ಮದ ಶ್ರೇಷ್ಠ ತತ್ವವಾಗಿದೆ. ಸತ್ಯ, ಅಹಿಂಸೆ, ತ್ಯಾಗ, ಪರರ ಸೇವೆಯಿಂದ ಜೀವನ ಪಾವನವಾಗುತ್ತದೆ ಎಂದು ಭಗವಾನ್ ಮಹಾವೀರರು ಬೋಧಿಸಿದ್ದಾರೆ. ಸಾಧಿಸಿ ತೋರಿಸಿದ್ದಾರೆ. ಲೋಕಸಭೆಯಲ್ಲಿ ಹಾಗೂ ಸರ್ವೋಚ್ಛ […]