Blog Archive

ಮೋದಿ ಅವರನ್ನು ವಿಶ್ವವೇ ಒಪ್ಪಿದ್ದರೂ ಪಾಕಿಸ್ತಾನ ಹಾಗೂ ಸಿದ್ದರಾಮಯ್ಯ ಮಾತ್ರ ದ್ವೇಷಿಸುತ್ತಾರೆ: ಕೆ.ಎಸ್.ಈಶ್ವರಪ್ಪ

Thursday, August 9th, 2018
ishwarappa

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವವೇ ಒಪ್ಪಿದ್ದರೂ ಪಾಕಿಸ್ತಾನ ಹಾಗೂ ಸಿದ್ದರಾಮಯ್ಯ ಮಾತ್ರ ದ್ವೇಷಿಸುತ್ತಾರೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೂ ಮುನ್ನ ಮೋದಿಯನ್ನು ಕೊಲೆಗಡುಕ ಅಂದಿದ್ದರು. ಹಿಂದುಳಿದ ವರ್ಗಗಳ ದ್ವೇಷಿ ಅಂತಾ ಕರೆದಿದ್ದರು. ತಮ್ಮನ್ನು ತಾವು ಅಹಿಂದ ವರ್ಗಗಳ ಚಾಂಪಿಯನ್ ಎಂದುಕೊಳ್ಳುವ ಸಿದ್ದರಾಮಯ್ಯ ಒಬಿಸಿ ಶಾಶ್ವತ ಆಯೋಗಕ್ಕೆ ರಾಜ್ಯಸಭೆಯಲ್ಲಿ ಬೆಂಬಲ ಕೊಡಿಸಲಿಲ್ಲ ಎಂದು ದೂರಿದರು‌. 3 ತಿಂಗಳೋ- 6 ತಿಂಗಳೋ ಸರ್ಕಾರ ಇರಲಿದ್ದು, ಈ […]

ಪಾಕಿಸ್ತಾನ ಪರ ಘೋಷಣೆ ಆರೋಪ, ಕಾಂಗ್ರೆಸ್‌ ದೂರಿಗೆ ಬಿಜೆಪಿ ಪ್ರತಿದೂರು

Tuesday, May 22nd, 2018
bjp-party

ಮಂಗಳೂರು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ವಿಶ್ವಾಸಮತ ಯಾಚಿಸದೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಸಂಭ್ರಮಾಚರಣೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಂಗಳೂರಿನ ಜಯಪ್ರಶಾಂತ್ ಎಂಬುವವರು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ವಿಡಿಯೋವನ್ನು ತಿರುಚಿ ಅದರಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಲಾಗಿದ್ದು, ಈ ರೀತಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕ ಜೆ.ಆರ್.ಲೋಬೋ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಆಯುಕ್ತರಿಗೆ ದೂರು […]

ಕರಂದ್ಲಾಜೆಗೆ ಔತಣಕ್ಕೆ ಕರೆಯಲಿಲ್ಲ ಎಂದು ಬೇಸರ! ಯುಟಿ ಖಾದರ್

Saturday, February 3rd, 2018
karandlaje

ಮಂಗಳೂರು: ಸಾವಿನ ಮನೆಯಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಪ್ರತಿಯೊಂದಕ್ಕೂ ರಾಜಕೀಯ ತಳುಕು ಹಾಕುವುದು ಯಾಕೆ? ಅನ್ಯಾಯದ ಕೊಲೆ ಸಮರ್ಥಿಸಲು ಸಾಧ್ಯವಿಲ್ಲ ಎಂದು ಸಚಿವ ಯುಟಿ ಖಾದರ್ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. ಸಂತೋಷ್ ಪೋಷಕರಿಗಾದ ಅನ್ಯಾಯದ ಬಗ್ಗೆ ನಮಗೂ ನೋವಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಹೋಗಿ ಚಾ ಕುಡಿದು ಬರುತ್ತಾರೆ. ಸಿಎಂ ನಮ್ಮ ಮನೆಗೆ ಬಂದಿದ್ದನ್ನು ದೊಡ್ಡ ವಿಷಯವನ್ನಾಗಿ ಮಾಡ್ತಾರೆ. ಶೋಭಾ […]

ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದ ದಿನ: ಸಂಸ್ಮರಣೆ ದಿನಾಚರಣೆ

Saturday, December 17th, 2016
War Memorial

ಮಂಗಳೂರು: ಡಿಸೆಂಬರ್ 16, 1971 ಭಾರತ ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದ ದಿನ. ಕೇವಲ 13 ದಿನಗಳ ನಡೆದ ಯುದ್ಧದಲ್ಲಿ ಅಂದಿನ ಪೂರ್ವ ಪಾಕಿಸ್ತಾನದ ಲೆಫ್ಟಿನೆಂಟ್ ಜನರಲ್ ಎಂ.ಎ.ಕೆ.ನಿಝಾಝಿ ತಮ್ಮ 93,000 ಪಾಕಿಸ್ತಾನಿ ಸೈನಿಕರು ಹಾಗೂ ಅರೆಸೈನಿಕರೊಂದಿಗೆ ಭಾರತದ ಲೆ. ಜನರಲ್ ಜೆ.ಎಸ್. ಅರೋರ ಅವರಿಗೆ ಶರಣಾದ ದಿನ. ಈ ದಿನದ ಸಂಸ್ಮರಣೆ ದಿನವನ್ನು ನಗರದ ಕದ್ರಿಯಲ್ಲಿ ಸ್ಮಾರಕ ಭವನದಲ್ಲಿ ಆಚರಿಸಲಾಯಿತು. ಆ ಯುದ್ಧದಲ್ಲಿ ಭಾರತದ 1,426 ಸೈನಿಕರು ಕೊಲ್ಲಲ್ಪಟ್ಟಿದ್ದು, 3,611 ಸೈನಿಕರು ಗಾಯಾಳುಗಳಾಗಿದ್ದರು. ಪಾಕಿಸ್ತಾನದ 8,000 […]

ಮಹಾಯುದ್ಧದ ನಂತರವಷ್ಟೆ ಪಾಕಿಸ್ತಾನ ಬುದ್ಧಿ ಕಲಿಯಲಿದೆ: ಮಾತೆ ಮಾಣಿಕೇಶ್ವರಿ

Thursday, October 6th, 2016
matha-manikeshwari

ಕಲಬುರಗಿ: ಪ್ರಪಂಚದಲ್ಲಿ ಅಧರ್ಮ ಹಾಗೂ ಪಾಪ ಮಾಡುವರ ಸಂಖ್ಯೆ ಹೆಚ್ಚುತ್ತಿದೆ. ಮಾನವನ ವಿನಾಶಕ್ಕೆ ದಾರಿಯಾಗಿರುವ ಅಧರ್ಮವನ್ನು ಪಾಕಿಸ್ತಾನ ಮಾಡುತ್ತಿದೆ ಎಂದು ನಡೆದಾಡುವ ದೇವತೆ ಯಾನಗುಂದಿ ಮಾತೆ ಮಾಣಿಕೇಶ್ವರಿ ಅಮ್ಮನವರು ತಿಳಿಸಿದ್ದಾರೆ. ಬುಧವಾರ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿ ಮಾಣಿಕ್ಯಗಿರಿ ಬೆಟ್ಟದ ತಮ್ಮ ಗುಹೆಯಲ್ಲಿ ಪ್ರಥಮ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ದುಷ್ಟತನ ಮೆರೆಯುತ್ತಿದೆ. ಈ ಎಲ್ಲದರ ಪರಿಣಾಮ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆಯುವುದು ಖಚಿತವೆಂದು ಮಾಣಿಕೇಶ್ವರಿ ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ನಿತ್ಯ ಹೆಚ್ಚಾಗುತ್ತಿರುವ […]

ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿದೆ: ಮೆಹಬೂಬ ಮುಫ್ತಿ

Saturday, August 27th, 2016
Modi

ದೆಹಲಿ: ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿದೆ ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕಿಡಿ ಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ಪಾಕಿಸ್ತಾನವು ಕಾಶ್ಮೀರದಲ್ಲಿ ಆತಂಕ ಸೃಷ್ಟಿಸುವುದಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೂ ನಮ್ಮೆಲ್ಲರಂತೆಯೇ ಜಮ್ಮು-ಕಾಶ್ಮೀರದ ಪರಿಸ್ಥಿತಿ ಬಗ್ಗೆ ಕಾಳಜಿ ಇದೆ. 2008ರಿಂದಲೂ ಕಾಶ್ಮೀರದ ಸ್ಥಿತಿ ಚೆನ್ನಾಗಿಲ್ಲ. ಆದರೆ ಯುಪಿಎ ಸರ್ಕಾರ ನಿರ್ಲಕ್ಷ್ಯ ಮಾಡುತ್ತಾ ಬಂತು. ಈಗ ಮೋದಿ […]

ಜಗತ್ತಿನ ಅತ್ಯಂತ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ ಹತ್ಯೆ

Monday, May 2nd, 2011
ಒಸಾಮಾ ಬಿನ್ ಲಾಡೆನ್‌ ಹತ್ಯೆ

ಇಸ್ಲಾಮಾಬಾದ್ : ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ಸೇನಾ ಪಡೆ ಪಾಕಿಸ್ತಾನದಲ್ಲಿ ಹತ್ಯೆಗೈಯುವ ಮೂಲಕ ಜಗತ್ತಿನ ಅತ್ಯಂತ ಕುಖ್ಯಾತ ಭಯೋತ್ಪಾದಕನ ಅದ್ಯಾಯಕ್ಕೆ ತೆರೆ ಎಳೆದಿದೆ.  ಲಾಡೆನ್ ಪಾಕ್ ಮಿಲಿಟರಿ ಬೇಸ್‌ನಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿಯೇ ವಾಸವಾಗಿದ್ದರೂ ಕೂಡ ಆತನ ಬಗ್ಗೆ ಯಾವುದೇ ಮಾಹಿತಿಗಳನ್ನು ಪಾಕ್ ಅಮೇರಿಕನ್ ಸೇನೆಗೆ ನೀಡಿರಲಿಲ್ಲ . ಅಮೆರಿಕ ನೇತೃತ್ವದ ಪಡೆ ಕಳೆದ ಹತ್ತು ವರ್ಷಗಳಿಂದ ಲಾಡೆನ್ ಬೇಟೆಯಲ್ಲಿ ತೊಡಗಿತ್ತು. ಆದರೆ ಪಾಕಿಸ್ತಾನ ಮಾತ್ರ ಲಾಡೆನ್ ಇರುವಿಕೆ ಬಗ್ಗೆ ಯಾವುದೇ ಸುಳಿವು […]