Blog Archive

ಪೆಟ್ರೋಲ್,​ ಡೀಸೆಲ್ ಶೇ.3 ರಷ್ಟು ಮತ್ತು ಅಬಕಾರಿ ಶೇ.6 ರಷ್ಟು ತೆರಿಗೆಯನ್ನು ಹೆಚ್ಚಿಸಿದ ರಾಜ್ಯ ಸರ್ಕಾರ

Thursday, March 5th, 2020
cm

ಬೆಂಗಳೂರು : ರಾಜ್ಯದಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಹಣ ಹೊಂದಿರುವ ಸಲುವಾಗಿ ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಶೇ. 3 ಹಾಗೂ ಮಧ್ಯಪಾನದ ಮೇಲಿನ ತೆರಿಗೆಯನ್ನು ಶೇ.6 ರಷ್ಟು ಹೆಚ್ಚಿಸಲು ಮುಂದಾಗಿದೆ. ಇಂದು ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯ ಬಜೆಟ್ ಮಂಡಿಸಿ ಭಾಷಣ ಮಾಡಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, “ರಾಜ್ಯದಲ್ಲಿ ಜಿಎಸ್ಟಿ ತೆರಿಗೆ ಹಣ ಸಂಗ್ರಹಣೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.14ರಷ್ಟು ಅಧಿಕವಾಗಿದೆ. ಅಲ್ಲದೆ, ಅಭಿವೃದ್ಧಿಗಾಗಿ ಮತ್ತಷ್ಟು ಹಣ ಸಂಗ್ರಹಿಸುವ […]

ಪೆಟ್ರೋಲ್ ಸುರಿದು ಮಗನನ್ನೇ ಜೀವಂತವಾಗಿ ಸುಟ್ಟ ತಂದೆ-ತಾಯಿ

Wednesday, November 13th, 2019
Mahesh

ಹೈದರಾಬಾದ್ : ಕುಡಿತದ ಚಟದಿಂದ ಬೇಸತ್ತು ಸ್ವತಃ ತಂದೆ-ತಾಯಿಯೇ ಮಗನನ್ನು ಜೀವಂತವಾಗಿ ಸುಟ್ಟಿರುವ ಭೀಕರ ಘಟನೆ ತೆಲಂಗಾಣದ ವಾರಂಗಲ್‍ನ ಗ್ರಾಮೀಣ ಜಿಲ್ಲೆಯಲ್ಲಿ ನಡೆದಿದೆ. ಹೈದರಾಬ್‍ನಿಂದ 200 ಕಿ.ಮೀ.ದೂರದಲ್ಲಿರುವ ವಾರಂಗಲ್ ಗ್ರಾಮೀಣ ಜಿಲ್ಲೆಯ ಮುಸ್ತಾಯಲಪಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಕುಡಿತದ ಚಟ ಹಾಗೂ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಮಗನಿಂದ ಬೇಸತ್ತ ಕೆ.ಪ್ರಭಾಕರ್ ಹಾಗೂ ವಿಮಲಾ ಅವರು ತಮ್ಮ ಮಗನಾದ ಕೆ.ಮಹೇಶ ಚಂದ್ರ(42)ನನ್ನು ಕಂಬಕ್ಕೆ ಕಟ್ಟಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟಿದ್ದಾರೆ. ಮಹೇಶ್ ಕುಡಿತದ ಚಟಕ್ಕೆ […]

ಮಹಿಳಾ ತಹಶೀಲ್ದಾರ್ ರನ್ನು ಪೆಟ್ರೋಲ್ ಹಾಕಿ ಸುಟ್ಟ ಅಪರಿಚಿತ ವ್ಯಕ್ತಿ

Monday, November 4th, 2019
tashildar

ಹೈದರಾಬದ್‌ : ಸೋಮವಾರ ಮಧ್ಯಾಹ್ನ ಹತ್ತಿರದ ಅಬ್ದುಲ್ಲಾಪುರ್ಮೆಟ್‌ನಲ್ಲಿರುವ ತನ್ನ ಕಚೇರಿಯಲ್ಲಿ ಯೇ ಮಹಿಳಾ ತಹಶೀಲ್ದಾರ್ ಒಬ್ಬರನ್ನು ಅಪರಿಚಿತ ವ್ಯಕ್ತಿಯೊಬ್ಬರು ಜೀವಂತವಾಗಿ ಸುಟ್ಟುಹಾಕಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲ್ಲೆಕೋರನು ಅದರೊಳಗೆ ಪ್ರವೇಶಿಸಿದಾಗ, ಪೆಟ್ರೋಲ್ನಲ್ಲಿ ಸುರಿದು ಬೆಂಕಿ ಹಚ್ಚಿದಾಗ ತಹಸೀಲ್ದಾರ್‌ ವಿಜಯಾ ತನ್ನ ಕೊಠಡಿಯಲ್ಲಿ ಏಕಾಂಗಿಯಾಗಿದ್ದರು ಎಂದು ಇಬ್ರಾಹಿಂಪಟ್ಟಣಂ ಕಂದಾಯ ವಿಭಾಗೀಯ ಅಧಿಕಾರಿ ಅಮರೇಂದರ್ ಹೇಳಿದ್ದಾರೆ. ಮಹಿಳಾ ಅಧಿಕಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಕಚೇರಿಯಲ್ಲಿದ್ದ ಮತ್ತೊಬ್ಬ ಸಿಬ್ಬಂದಿ ಅವಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಸುಟ್ಟಗಾಯಗಳಿಗೆ ಒಳಗಾಗಿದ್ದರು. ಹಲ್ಲೆಕೋರ ಎಂದು ಶಂಕಿಸಲಾಗಿರುವ ವ್ಯಕ್ತಿಯೂ ಗಾಯಗೊಂಡಿದ್ದು, […]

ಮುಂದಿನ ವಾರಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಕೆ

Thursday, October 3rd, 2019
petrol

ಹೊಸದಿಲ್ಲಿ : ಪೆಟ್ರೋಲ್‌ ಬೆಲೆ ಏರಿಕೆಗೆ ಅ.3ರಂದು ತುಸು ಬ್ರೇಕ್‌ ಬಿದ್ದಿದೆ. ಮುಂದಿನ ವಾರಗಳಲ್ಲಿ ಇನ್ನಷ್ಟು ಬೆಲೆ ಇಳಿಯುವುದಾಗಿ ಸರಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಹೇಳಿದೆ. ಗುರುವಾರ ಪೆಟ್ರೋಲ್‌ ಬೆಲೆ 10 ಪೈಸೆ ಇಳಿಕೆಯಾಗಿದ್ದು, ಡೀಸೆಲ್‌ ಬೆಲೆ 6 ಪೈಸೆ ಇಳಿಕೆಯಾಗಿದೆ. ಸೆ.14ರಂದು ಸೌದಿ ಅರೇಬಿಯಾದ ಅರಾಮ್ಕೋ ತೈಲ ಕಂಪೆನಿ ಮೇಲೆ ಡ್ರೋನ್‌ ದಾಳಿ ಬಳಿಕ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿತ್ತು. ಪೂರೈಕೆಯಲ್ಲಿ ವ್ಯತ್ಯಯ ಮತ್ತು ಅಂ.ರಾ. ಮಾರುಕಟ್ಟೆಯಲ್ಲಿಯ ಪರಿಣಾಮದಿಂದಾಗಿ ಬೆಲೆ ಏರಿಕೆ ಕಂಡಿತ್ತು. ಸದ್ಯ ಸಮಸ್ಯೆ […]

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ

Monday, September 23rd, 2019
petrol

ಹೊಸದಿಲ್ಲಿ : ದೇಶದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ಗೆ ದಿಲಿಯಲ್ಲಿ ಕ್ರಮವಾಗಿ 27, 18 ಪೈಸೆ ದರ ಹೆಚ್ಚಾಗಿದೆ. ಹಿಂದಿನ ಆರು ದಿನಗಳಲ್ಲಿ ಒಟ್ಟಾರೆ, ಪ್ರತಿ ಲೀ. ಪೆಟ್ರೋಲ್‌ಗೆ 1.59 ರೂ., ಡೀಸೆಲ್‌ಗೆ 1.31ರೂ. ಏರಿಕೆಯಾಗಿದೆ. 2 ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು ಗರಿಷ್ಠ ದರ ಏರಿಕೆಯಾಗಿದೆ. ದಿಲ್ಲಿ ಪೆಟ್ರೋಲ್‌ಗೆ ಕೋಲ್ಕತಾದಲ್ಲಿ 76.32 ರೂ., ಮುಂಬಯಿನಲ್ಲಿ 79.29 ರೂ., ಚೆನ್ನೈಯಲ್ಲಿ 76.52 ರೂ., ಹೊಸದಿಲ್ಲಿಯಲ್ಲಿ 73.62 ರೂ. ಆಗಿದ್ದರೆ, ಪ್ರತಿ ಲೀ. ಡೀಸೆಲ್‌ಗೆ ಕೋಲ್ಕತಾದಲ್ಲಿ 69.15 ರೂ., […]

ಒಂದೇ ವಾರದಲ್ಲಿ ಪೆಟ್ರೋಲ್ ಬೆಲೆ 2 ರೂ.. ಡೀಸೆಲ್​ ಬೆಲೆ 1ರೂ. ಇಳಿಕೆ

Saturday, October 27th, 2018
petrol

ನವದೆಹಲಿ: ಕಳೆದ ಒಂದುವಾರದಿಂದ ಹೆಚ್ಚು ಕಡಿಮೆ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ 2 ರೂ. ಇಳಿಕೆಯಾಗಿದೆ. ಇನ್ನು ಡೀಸೆಲ್ ಬೆಲೆಯಲ್ಲಿ 1 ರೂ. ಇಳಿಕೆ ಕಂಡು ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದ ಕಾರಣದಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕಡಿತವಾಗಿದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 80.85 ರೂ. ಹಾಗೂ ಡೀಸೆಲ್ 74.73 ರೂ. ಇದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಅತಿ ಹೆಚ್ಚು ಅಂದರೆ 84 ರೂ.ಗೆ ಏರಿಕೆ ಕಂಡು ಗ್ರಾಹಕರ […]

ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ: ತೈಲಕ್ಕೆ ಕೇರಳಕ್ಕಿಂತ ಕಡಿಮೆ ದರ

Monday, September 24th, 2018
petrol

ಮಂಗಳೂರು: ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಆಗಿರುವುದರಿಂದ ಕರ್ನಾಟಕ ಮತ್ತು ಕೇರಳದ ಗಡಿ ಭಾಗವಾದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ತಲಪಾಡಿಯಲ್ಲಿ ಕೇರಳದ ವಾಹನ ಸವಾರರಿಗೆ ಸಂತಸ ತಂದಿದೆ. ಕೇರಳದಿಂದ ಉತ್ತರ ಭಾರತಕ್ಕೆ ಸಂಪರ್ಕಿಸುವ ಹೆದ್ದಾರಿಯಲ್ಲಿರುವ ತಲಪಾಡಿಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ತಲಪಾಡಿಯ 2 ಪೆಟ್ರೋಲ್ ಪಂಪ್ನಲ್ಲಿ 1 ಕರ್ನಾಟಕ ವ್ಯಾಪ್ತಿಯಲ್ಲಿದೆ. ಇನ್ನೊಂದು ಕೇರಳ ರಾಜ್ಯದಲ್ಲಿದೆ. ಅರ್ಧ ಕಿಲೋ ಮೀಟರ್ ಅಂತರದಲ್ಲಿರುವ ಈ ಎರಡು ಪೆಟ್ರೋಲ್ ಪಂಪ್ನಲ್ಲಿ ಇದೀಗ ಬೆಲೆ ವ್ಯತ್ಯಾಸವಾಗಿದ್ದು, 1 ಪೆಟ್ರೋಲ್ […]

ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಮೇಲೆ 2 ರೂಪಾಯಿ ಕಡಿತ: ಕುಮಾರಸ್ವಾಮಿ

Monday, September 17th, 2018
kumarswamy

ಕಲಬುರಗಿ: ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್ಗೆ ಎರಡು ರೂಪಾಯಿ ಕಡಿತಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕಲಬುರಗಿಯಲ್ಲಿ ಏರ್ಪಡಿಸಲಾಗಿದ್ದ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಮುಖ್ಯಮಂತ್ರಿ ಕುಮಾರಸ್ವಾಮಿ ಸೆಸ್ ಕಡಿತದ ನಿರ್ಧಾರ ಪ್ರಕಟಿಸಿದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನ ಮುಖಿಯಾಗಿರುವುದರಿಂದ ಜನತೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹೀಗಾಗಿ ಜನರ ಒಂದಷ್ಟು ಭಾರವನ್ನಾದರೂ ಇಳಿಸಬೇಕೆಂಬ ಉದ್ದೇಶದಿಂದ ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ಕನಿಷ್ಟ 2 ರೂಪಾಯಿ ಸೆನ್ ತೆರಿಗೆ ಕಡಿತಗೊಳಿಸಲಾಗುವುದು […]

ಇಂದಿನಿಂದ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಏರಿಕೆ!

Saturday, July 14th, 2018
petrol-deisel

ಬೆಂಗಳೂರು: ರಾಜ್ಯದ ಜನತೆಗೆ ಸರ್ಕಾರ ಶಾಕ್ ನೀಡಿದ್ದು, ಇಂದಿನಿಂದ ಬಜೆಟ್ ಬರೆ ತಟ್ಟಲಿದೆ. ರೈತರ ಸಾಲ ಮನ್ನಾದ ಹೊರೆಯನ್ನು ಸರಿದೂಗಿಸುವ ಸಲುವಾಗಿ ಸರ್ಕಾರ ಕೆಲ ವಸ್ತುಗಳ ತೆರಿಗೆ ಏರಿಕೆ ಮಾಡಿದೆ. ಇಂದಿನಿಂದ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಏರಿಕೆಯಾಗಲಿದೆ. ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ಸೆಸ್ ಶೇಕಡಾ 30 ರಿಂದ 32 ಕ್ಕೆ ಏರಿಸಿರುವುದರಿಂದ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 1.14 ರೂಪಾಯಿ ಹೆಚ್ಚಳವಾಗಿದೆ. ಡೀಸೆಲ್ ಬೆಲೆ ಲೀಟರ್ಗೆ 1.12 ರೂಪಾಯಿ ಹೆಚ್ಚಳವಾಗಿದೆ‌. ಗೃಹ ಬಳಕೆ […]

ಶೀಘ್ರದಲ್ಲೇ ಕೆಎಸ್‌ಆರ್‌ಟಿಸಿ ಬಸ್‌‌‌‌ ಟಿಕೆಟ್‌ ದರ ಏರಿಕೆ?

Monday, May 28th, 2018
ksrtc-bus

ಬೆಂಗಳೂರು: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಬೆನ್ನಲ್ಲೇ ಈಗ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಟಿಕೆಟ್ ದರ ಹೆಚ್ಚಳದ ಬಗ್ಗೆ ಸರ್ಕಾರದ ಮುಂದೆ ಕೆಎಸ್‌ಆರ್‌ಟಿಸಿ ನಿಗಮ ಪ್ರಸ್ತಾವನೆ ಇಡಲಿದೆ ಎನ್ನಲಾಗಿದೆ. ಕಳೆದ ಮೂರು ವರ್ಷಗಳಿಂದ ಟಿಕೆಟ್ ದರ ಏರಿಕೆ ಮಾಡದೇ ಇರುವ ಹಿನ್ನೆಲೆ ಮತ್ತು ದಿನದಿಂದ ದಿನಕ್ಕೆ ಡಿಸೇಲ್ ಬೆಲೆ ಏರಿಕೆಯಾಗುತ್ತಿರುವ ಕಾರಣದಿಂದ ಬಸ್ ಟಿಕೆಟ್ ದರ ಏರಿಕೆ ಮಾಡಲು ಸಾರಿಗೆ ನಿಗಮ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಇನ್ನು ಪೆಟ್ರೋಲ್, […]