Blog Archive

ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್..ಬಜೆಟ್ ನಲ್ಲಿ ಕರಾವಳಿಗೆ ಭಾರಿ ನಿರಾಸೆ!

Thursday, July 5th, 2018
karavali

ಮಂಗಳೂರು: ರಾಜ್ಯದ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಇಂದು ಮಂಡಿಸಲಾಗಿದೆ. ಬಜೆಟ್ ನಲ್ಲಿ ಕರಾವಳಿ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಹಳೆ ಮೈಸೂರು ಭಾಗಕ್ಕೆ ಮಾತ್ರ ಬಜೆಟ್ ಸೀಮಿತವಾಗಿಸಿದ್ದಾರೆ ಎಂಬ ಆಕ್ರೋಶ ಕರಾವಳಿಯಾದ್ಯಂತ ವ್ಯಕ್ತವಾಗುತ್ತಿದೆ. ಇಂದಿನ ಬಜೆಟ್ ನಲ್ಲಿ ಎಲ್ಲಿಯೂ ಕರಾವಳಿ ಅಭಿವೃದ್ಧಿಗೆ ಒತ್ತು ನೀಡದಿರುವುದು ಕರಾವಳಿ ಭಾಗದ ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ. ಸಂಪೂರ್ಣ ಬಜೆಟ್ ನಲ್ಲಿ ಎಲ್ಲಿಯೂ “ಕರಾವಳಿ ” ಅನ್ನುವ ಪದವನ್ನೇ ಬಳಸದ ಕುಮಾರ ಸ್ವಾಮಿ ಚುನಾವಣೆಯ ಫಲಿತಾಂಶದ ಪ್ರತಿಕಾರ ತೀರಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ […]

ಕುಮಾರಸ್ವಾಮಿ ಮಂಡಿಸಿದ ಚೊಚ್ಚಲ ಬಜೆಟ್ ಉತ್ತಮ ಹಾಗೂ ಸ್ವಾಗತಾರ್ಹ: ಯು.ಟಿ.ಖಾದರ್

Thursday, July 5th, 2018
u-t-khader

ಮಂಗಳೂರು:‌ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು‌ ಮಂಡಿಸಿದ ಚೊಚ್ಚಲ ಬಜೆಟ್ ಉತ್ತಮ ಹಾಗೂ ಸ್ವಾಗತಾರ್ಹ ಎಂದು ವಸತಿ ಇಲಾಖೆ ಸಚಿವ ಯು.ಟಿ.ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ವ ಜನಾಂಗಕ್ಕೆ ಸಮನಾದ ಬಜೆಟ್ ಇದಾಗಿದೆ.‌‌ ಕರಾವಳಿ ಭಾಗಕ್ಕೆ ಈ ಬಾರಿ ಅಗತ್ಯ ಅನುದಾನ ನೀಡದಿದ್ದರೂ ಹಿಂದೆ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ನಲ್ಲಿ ಕರಾವಳಿಗೆ ಸಾಕಷ್ಟು ಅನುದಾನ ನೀಡಿದ್ದರು ಎಂದರು. ಬಿಜೆಪಿಯವರಿಗೆ ಟೀಕೆ ಮಾಡುವುದೇ ಅವರ ಕೆಲಸ. ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಶಿವಮೊಗ್ಗ ಜಿಲ್ಲೆಗೆ‌ ನೀಡಿದ ಅನುದಾನ‌ದ ಬಗ್ಗೆ ನಮಗೆ ಗೊತ್ತಿದೆ. ಅಲ್ಪಸಂಖ್ಯಾತ […]

ತೀವ್ರ ಕುತೂಹಲ ಕೆರಳಿಸಿರುವ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್​ಗೆ ಕ್ಷಣಗಣನೆ..!

Wednesday, July 4th, 2018
parameshwar

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ಗೆ ಕ್ಷಣಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಮಂಡಿಸಲಿರುವ ಬಜೆಟ್ನಲ್ಲಿ ಕೃಷಿ ಸಾಲ ಮನ್ನಾ ಆಗುವ ಬಗ್ಗೆ ರೈತ ಸಮೂಹ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ಮೈಸೂರು ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್, ವಾಣಿಜ್ಯ ಬ್ಯಾಂಕ್ಗಳಲ್ಲಿ ಎಲ್ಲಾ ತರಹದ ಕೃಷಿ ಸಾಲ ಸೇರಿ ಜಿಲ್ಲೆಯ 1.70 ಲಕ್ಷ ರೈತರು ಸುಮಾರು 7 ಸಾವಿರ ಕೋಟಿ ರೂ. ಸಾಲ ಹೊಂದಿದ್ದಾರೆ. 65 ಸಾವಿರಕ್ಕೂ ಹೆಚ್ಚು ರೈತರು ಸಹಕಾರಿ ಬ್ಯಾಂಕಿನಲ್ಲಿ […]

ಬಜೆಟ್​ನಲ್ಲಿ ಸಾಲಮನ್ನಾ ಘೋಷಣೆ ಮಾಡಲೇಬೇಕು..ಇಲ್ಲವಾದಲ್ಲಿ ಉಗ್ರ ಹೋರಾಟ: ಕೆ.ಎಸ್ ಈಶ್ವರಪ್ಪ

Wednesday, July 4th, 2018
eshwarappa

ಬೆಂಗಳೂರು: ಬಜೆಟ್ನಲ್ಲಿ ಸಾಲಮನ್ನಾ ಘೋಷಣೆ ಮಾಡಲೇಬೇಕು. ಇಲ್ಲವಾದಲ್ಲಿ ಬಿಜೆಪಿ ರಾಜ್ಯವ್ಯಾಪಿ ಉಗ್ರ ಹೋರಾಟ ಮಾಡಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮುಂದುವರೆಯುತ್ತದೆ. ಬಳಿಕ ಸಿಎಂ ಏನು ಉತ್ತರ ನೀಡಲಿದ್ದಾರೆ ಎಂದು ನೋಡುತ್ತೇವೆ. ಬಜೆಟ್ನಲ್ಲಿ ಸಾಲಮನ್ನಾ ಘೋಷಣೆ ಮಾಡಲೇಬೇಕು, ಇಲ್ಲವಾದಲ್ಲಿ ಬಿಜೆಪಿ ರಾಜ್ಯ ವ್ಯಾಪಿ ಉಗ್ರ ಹೋರಾಟ ಮಾಡಲಿದೆ. ಶಾಸಕರ ನಿಧಿ ವಾಪಸ್ಗೆ ಬೆಂಬಲವಿದೆ. ಖರ್ಚಾಗದೇ ಉಳಿದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳೋದಾದರೆ ಅದು […]

ರೈತರು, ಸರ್ಕಾರಿ ನೌಕರರರಿಗೆ ಸಿಎಂ ಸಿಹಿಸುದ್ದಿ?!

Thursday, February 15th, 2018
siddaramaih

ಬೆಂಗಳೂರು: ಪ್ರಸಕ್ತ ಬಜೆಟ್‍ನಲ್ಲಿ ರಾಜ್ಯದ ರೈತರು ಹಾಗೂ ಸರ್ಕಾರಿ ನೌಕರರಿಗೆ ಬಂಪರ್ ಬಹುಮಾನ ಕಾದಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸಿಎಂ ಸಿದ್ದರಾಮಯ್ಯ ಚುನಾವಣೆ ಹೊಸ್ತಿಲಲ್ಲಿ ಮಂಡಿಸುತ್ತಿರುವ ಬಜೆಟ್ ಇದಾಗಿದೆ. ಮುಖ್ಯಮಂತ್ರಿಯಾಗಿ ಆರನೇ ಹಾಗೂ ಹಣಕಾಸು ಸಚಿವರಾಗಿ ದಾಖಲೆಯ 13ನೇ ಬಜೆಟ್ ಮಂಡಿಸುತ್ತಿರುವ ಕೀರ್ತಿಗೆ ಸಿಎಂ ಭಾಜನರಾಗಲಿದ್ದು, ಈ ಮಹತ್ವದ ಗಳಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕೃಷಿಕರು ಹಾಗೂ ಸರ್ಕಾರಿ ನೌಕರರನ್ನು ಸಮಾಧಾನಪಡಿಸಲು ಸಿಎಂ ಮುಂದಾಗಿದ್ದಾರೆ. ರಾಜ್ಯ ಬಜೆಟ್‍ನಲ್ಲಿ ಈ ಎರಡು ವರ್ಗದವರನ್ನು ಸಮಾಧಾನಪಡಿಸುವ ಉತ್ತಮ ಕೊಡುಗೆ ಇರಲಿದೆ […]

ಬಲಿಷ್ಟ ಭಾರತದ ನಿರ್ಮಾಣದ ಬಜೆಟ್ : ಸಂಸದ ನಳಿನ್

Thursday, July 10th, 2014
Nalin kumar

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಠಿತ್ವದ, ಅಭಿವೃದ್ಧಿಶೀಲ, ಬಲಿಷ್ಟ ಭಾರತದ ನಿರ್ಮಾಣಕ್ಕೆ ಪೂರಕವಾದ ಬಜೆಟನ್ನು ಸಚಿವ ಅರುಣ್ ಜೆಟ್ಲಿ ನೀಡಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಜನಸಾಮಾನ್ಯರ ಜೀವನಕ್ಕೆ ಪೂರಕವಾದ ಅಂಶಗಳನ್ನು ಗಮನಿಸಿ, ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಲಾಗಿದೆ. ಬಟ್ಟೆಬರೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಲಾಗಿದೆ. ವೇತನ ವರ್ಗದವರಿಗೆ ಆದಾಯ ಮಿತಿ 2.50ಲಕ್ಷಗೆ ವಿಸ್ತರಿಸಲಾಗಿದೆ. ಕೃಷಿ ಉತ್ತೇಜನ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಎಲ್ಲಾ ಮನೆಗಳಿಗೆ […]

ನನ್ನ ಬಜೆಟ್ ಸುಳ್ಳಿನ ಸರಮಾಲೆ ಅಲ್ಲ, ಸಾಧನೆಗಳ ಸರಮಾಲೆ: ಸಿಎಂ

Wednesday, February 26th, 2014
Siddaramaiah

ಬೆಂಗಳೂರು: ತಮ್ಮ ಬಜೆಟ್‌ನ್ನು ಸುಳ್ಳಿನ ಸರಮಾಲೆ ಎಂದಿದ್ದ ಪ್ರತಿಪಕ್ಷದ ನಾಯಕರಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನನ್ನ ಬಜೆಟ್ ಸುಳ್ಳಿನ ಸರಮಾಲೆ ಅಲ್ಲ. ಸಾಧನೆಗಳ ಸರಮಾಲೆ ಎಂದು ಬುಧವಾರ ಹೇಳಿದ್ದಾರೆ. ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಸಿಎಂ, ನಮ್ಮದು ನಡಿದಂತೆ ನಡೆಯುವ ಸರ್ಕಾರ. ಮೊದಲು ನೀವು ಬಜೆಟ್ ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಿ ಎಂದು ಪ್ರತಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು. ನನ್ನ ಬಜೆಟ್ ಸುಳ್ಳಿನ ಸರಮಾಲೆ […]

ತೆರಿಗೆ ವಂಚನೆ, ಪಾಲಿಕೆಗೆ 3 ಪಟ್ಟು ಹೆಚ್ಚು ಬಾಡಿಗೆ!

Tuesday, February 18th, 2014
City-Corporation

ಮಂಗಳೂರು: ದೈತ್ಯ ಕೈಗಾರಿಕೆ ಸಂಸ್ಥೆಗಳಿಂದಲೇ ನೀರಿನ ಕಳವು, ಸುರತ್ಕಲ್‌ನಲ್ಲಿ ಪಾಲಿಕೆ ಕಚೇರಿಯ ಲೆಕ್ಕಕ್ಕಿಂತ ಹೆಚ್ಚಿಗೆ ಬಾಡಿಗೆ ಜಾಲ, ಖಾಸಗಿ ಮಾಲ್‌ಗಳ ತೆರಿಗೆ ವಂಚನೆ ಪುರಾಣ, ಅನಧಿಕೃತ ಪಾರ್ಕಿಂಗ್ ಶುಲ್ಕ… ಒಂದೇ ರಡೇ ಮಹಾನಗರ ಪಾಲಿಕೆಯ ಬಜೆಟ್ ಪೂರ್ವ ಸಿದ್ಧತೆ ಸಭೆಯಲ್ಲಿ ಸಾರ್ವಜನಿಕರು, ಕಾರ್ಪೊರೇಟರ್‌ಗಳು ಒಂದೊಂದೇ ವಂಚನೆಯನ್ನು ಬಟಾ ಬಯಲು ಮಾಡಿದರು. ಪ್ರತಿ ವಿಚಾರಗಳು ಬಂದಾಗ ಸರಿಯಾಗಿ ಮಾಹಿತಿ ಇಲ್ಲದೆ ಪಾಲಿಕೆ ಎಂಜಿನಿಯರ್‌ಗಳು, ಅಧಿಕಾರಿಗಳು ತಡಬಡಾಯಿಸಿದರು. ನೀರಿನ ಬಿಲ್ಲಿನ ಅಕ್ರಮ ತಡೆಗಟ್ಟುವ ಸಲುವಾಗಿ ಕೈಗಾರಿಕೆಗಳಿಗೆ ಡಿಜಿಟಲ್ ಮಾದರಿಯ ಮೀಟರ್ […]

ಚುನಾವಣೆಯ ದೃಷ್ಟಿಯಿಂದ ಮಂಡಿಸಿದ ಗೊತ್ತು ಗುರಿಗಳಿಲ್ಲದ ಗಿಮಿಕ್ ಬಜೆಟ್: ಕ್ಯಾಪ್ಟನ್ ಕಾರ್ಣಿಕ್

Saturday, February 15th, 2014
Ganesh Karnik

ಮಂಗಳೂರುಃ ರಾಜ್ಯದ ಜನತೆಯಲ್ಲಿ ಯಾವುದೇ ಹೊಸ ಬರವಸೆ ಮೂಡಿಸದ ಕೃಷಿ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿ ರೈತರ ಸಮಸ್ಯೆಗಳಿಗೆ ಪರಿಹಾರವನ್ನು ಯೋಚಿಸದ ಕೇವಲ ಕಲವೇ ಸಮುದಾಯಗಳನ್ನು ಮುಂದಿಟ್ಟುಕೊಂಡು ಚುನಾವಣೆಗಾಗಿ ಮಂಡಿಸಿದ ಗಿಮಿಕ್ ಬಜೆಟ್ ಇದಾಗಿದೆ. ಈಗಾಗಲೇ 8 ಬಜೆಟ್ ಮಂಡಿಸಿ ಅರ್ಥಿಕ ತಜ್ಞರೆನಿಸಿಕೊಂಡಿದ್ದ ಸನ್ಮಾನ್ಯ ಮುಖ್ಯಮಂತ್ರಿಗಳಿಂದ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ನೀಲನಕ್ಷೆಯನ್ನು ನಿರೀಕ್ಷಿಸಿದ್ದ ಸಂದರ್ಭದಲ್ಲಿ ಈ ಬಜೆಟ್ ನಿರಾಶೆ ಮೂಡಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಾಲಾ ಕಾಲೇಜುಗಳನ್ನು ಅನುದಾನಕ್ಕೊಳಪಡಿಸುವ ಮಾನದಂಡವನ್ನು ಈ ಬಜೆಟ್ನಲ್ಲಿ ಕನಿಷ್ಟ ಇನ್ನೂ 5 ವರ್ಷಗಳಿಗೆ […]