Blog Archive

ಮಂಗಳೂರು : ಪ್ರತಿ ಗ್ರಾಮದ ವಿಶೇಷತೆಯ ಮಾಹಿತಿ ಕ್ರೋಢೀಕರಣಕ್ಕೆ ಕ್ರಮ; ಸಚಿವ ಸಿ.ಟಿ.ರವಿ

Monday, September 30th, 2019
CT Ravi

ಮಂಗಳೂರು : ರಾಜ್ಯದ ಪ್ರತಿ ಗ್ರಾಮದ ಇತಿಹಾಸ, ಭೌಗೋಳಿಕ, ಸಾಂಸ್ಕೃತಿಕ, ಜಾನಪದ ಹೀಗೆ ವಿವಿಧ ಅಂಶಗಳನ್ನೊಳಗೊಂಡಂತೆ ಗ್ರಾಮದ ವಿಶೇಷತೆಯ ಮಾಹಿತಿಯನ್ನು ಕ್ರೋಢೀಕರಿಸಿ ಅವುಗಳನ್ನು ವಿಕಿಪೀಡಿಯಾ ಮಾದರಿಯಲ್ಲಿ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು. ಅವರು ಸೋಮವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, 2020ರ ಡಿಸೆಂಬರ್ ನೊಳಗೆ ಸರ್ಕಾರ ಈ ಪರಿಕಲ್ಪನೆಯನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದ್ದು, ಇದ್ಕಕಾಗಿ ಪ್ರತಿ ಗ್ರಾಮದ ಮಾಹಿತಿಯನ್ನು […]

ಆವರಣ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳ ಮೃತ್ಯು : ಮಕ್ಕಳ ಕುಟುಂಬಕ್ಕೆ11 ಲಕ್ಷ ರೂ. ಪರಿಹಾರ ವಿತರಣೆ

Monday, September 9th, 2019
vedha-vyasa

ಮಂಗಳೂರು : ನಗರದ ಪಡೀಲ್ ಕೊಡೆಕಲ್ ಸಮೀಪದ ಶಿವನಗರ ಎಂಬಲ್ಲಿ ಮನೆಯ ಆವರಣ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದ ಘಟನೆ ಭಾನುವಾರ ನಡೆದಿದ್ದು, ಮೃತ ಮಕ್ಕಳ ಕುಟುಂಬಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್ ಇಂದು 11 ಲಕ್ಷ ರೂಪಾಯಿಗಳ ಚೆಕ್ ಅನ್ನು ವಿತರಣೆ ಮಾಡಿದರು. ರಾಜ್ಯ ಸರ್ಕಾರದಿಂದ ನೀಡುವ 10 ಲಕ್ಷ ರೂ. ಮತ್ತು ಸೇವಾಂಜಿಲಿ ಚಾರಿಟೇಬಲ್ ಟ್ರಸ್ಟ್  ಇದರಿಂದ ನೀಡಲಾಗುವ 1 ಲಕ್ಷ ರೂ ಹೀಗೆ ಒಟ್ಟು 11 ಲಕ್ಷ […]

ನೇತ್ರಾವತಿ ಸೇತುವೆಗೆ ಸಿಸಿಟಿವಿ ಕ್ಯಾಮೆರಾ : ವೇದವ್ಯಾಸ ಕಾಮತ್

Friday, August 2nd, 2019
cctv

ಮಂಗಳೂರು :  ನೇತ್ರಾವತಿ ಸೇತುವೆ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಚಿಂತನೆ ನಡೆಯುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಯವರೊಂದಿಗೆ ಚರ್ಚಿಸಲಾಗುವು ದೆಂದು ಶಾಸಕ ಡಿ.ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಉದ್ಯಮಿ ಸಿದ್ಧಾರ್ಥ್ ಅವರ ಸಾವಿನ ಬಳಿಕ ಮಂಗಳೂರು- ಉಳ್ಳಾಲ ರಸ್ತೆಯಲ್ಲಿನ ನೇತ್ರಾವತಿ ಸೇತುವೆ ಹೆಚ್ಚು ಸುದ್ದಿಯಲ್ಲಿದೆ. “ನೇತ್ರಾವತಿ ಸೇತುವೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಪಾಯಕಾರಿ ತಾಣವಾಗಿದೆ. ಆತ್ಮಹತ್ಯೆಯಂತಹ ಅಹಿತಕರ ಘಟನೆಗಳಿಗೆ ಇದು ನೆಲೆಯಾಗುತ್ತಿದೆ. ಸಿಸಿ ಟಿವಿಗಳನ್ನು ಅಳವಡಿಸಿದರೆ ಸೇತುವೆ ಮೇಲೆ ನಡೆದ ದುರ್ಘಟನೆಗಳನ್ನು ತಕ್ಷಣ ಪರಿಶೀಲಿಸಲು ಅನುಕೂಲವಾಗುತ್ತದೆ. ಸಿಸಿಟಿವಿ […]

ದ.ಕ ಜಿಲ್ಲೆಯ ಕಾಂಗ್ರೆಸ್ ನಾಯಕರು ಲೋಕಸಭಾ ಸದಸ್ಯನಾಗಬೇಕೆಂದು ಪಾದಯಾತ್ರೆ ಮಾಡುತ್ತಿದ್ದಾರೆ : ಕಾಮತ್

Wednesday, January 30th, 2019
Vedavyas

ಮಂಗಳೂರು: ಲೋಕಸಭಾ ಸದಸ್ಯನಾಗಬೇಕೆಂದು ದ.ಕ ಜಿಲ್ಲೆಯ ಕಾಂಗ್ರೆಸ್ ನಾಯಕರು  ಪಾದಯಾತ್ರೆ ಮಾಡುತ್ತಿದ್ದಾರೆ . ಪಂಪ್ ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆಗೆ ನಡೆಸುತ್ತಿರುವ ಪಾದಯಾತ್ರೆ ಬಹಳ ಹಾಸ್ಯಾಸ್ಪದವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ದೂರಿದರು. ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ  ಮಾತನಾಡಿದ ಅವರು, ಇದಕ್ಕೆ ಕಾರಣೀಕರ್ತರು ಕಾಂಗ್ರೆಸ್ನವರು. ಆದರೆ ಗೂಬೆ ಕೂರಿಸುವುದು ಸಂಸದ ನಳಿನ್ ಕುಮಾರ್ ಮೇಲೆ  ಅಂದು ಸಂಸದರು ಎನ್.ಎಚ್ ಬಗ್ಗೆ ಮೀಟಿಂಗ್ ಕರೆದಾಗ ಜೆ.ಆರ್.ಲೋಬೋ‌ ಹಾಗೂ ಇನ್ನಿತರ ಶಾಸಕರು ಬಾರದೆ, ನಾಲ್ಕೂವರೆ […]

ಆರೋಗ್ಯವಂತ ಭಾರತ ಸೃಷ್ಟಿ, ಸ್ವಚ್ಛ ಪರಿಸರದಿಂದ ಮಾತ್ರ ಸಾಧ್ಯ: ವೇದವ್ಯಾಸ ಕಾಮತ್

Friday, December 28th, 2018
swaccha-bharat

ಮಂಗಳೂರು: 2014ರಲ್ಲಿ ಹೊಸ ಹೆಸರಿನಿಂದ ಪ್ರಾರಂಭವಾದ ಸ್ಚಚ್ಛ ಭಾರತ ಅಭಿಯಾನ ಇಂದು ದೇಶದ್ಯಾಂತ ಗುರುತಿಸಲ್ಪಟ್ಟಿದ್ದು, ಸ್ಚಚ್ಛತೆಯ ಕಲ್ಪನೆಯನ್ನು ಮನೆ ಮನೆಗೆ ಮುಟ್ಟಿಸಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ವೇದವ್ಯಾಸ ಕಾಮತ್ ಶಾಸಕರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅಭಿಪ್ರಾಯಪಟ್ಟರು. ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ ಎಂಬ ದ್ಯೇಯ ವಾಕ್ಯದಂತೆ ನಾವೆಲ್ಲರೂ ಸ್ವಚ್ಛತೆಯಲ್ಲಿ ಭಾಗಿಯಾಗೋಣ 2019 ರೊಳಗಾಗಿ ಮಹಾತ್ಮ ಗಾಂಧೀಜಿಯ ಕನಸಾದ ಸ್ವಚ್ಛ ಭಾರತದ ಕನಸು ನನಸಾಗಿಸೋಣ ಎಂದು ಕಾರ್ಯಕ್ರzಮದಲ್ಲಿ ತಿಳಿಸಿದರು. ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ವಾರ್ತಾ ಮತ್ತು ಪ್ರಸಾರ […]

ತೋಟಬೆಂಗ್ರೆಯಲ್ಲಿ ಜಿಲ್ಲೆಯ ಮಾದರಿ ಅಂಗನವಾಡಿ ಕೇಂದ್ರಕ್ಕೆ ಶಾಸಕ ಡಿ ವೇದವ್ಯಾಸ ಕಾಮತ್ ಶಿಲಾನ್ಯಾಸ

Friday, December 28th, 2018
vedvyas-kamath

ಮಂಗಳೂರು: ಮಂಗಳೂರಿನ ವಾರ್ಡ್ 60ನೇ ತೋಟಬೆಂಗ್ರೆಯಲ್ಲಿ ಜಿಲ್ಲೆಯಲ್ಲಿಯೇ ಮಾದರಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಶಿಲಾನ್ಯಾಸ ನೆರವೇರಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ಕಾಮತ್ ಅವರ ಮನವಿಯ ಮೇರೆಗೆ ಎಂಆರ್ ಪಿಎಲ್ ಕಂಪೆನಿಯು ಸಾಮಾಜಿಕ ಬದ್ಧತಾ ನಿಧಿಯಡಿಯಲ್ಲಿ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಅಂಗನವಾಡಿ ನಿರ್ಮಾಣಕ್ಕೆ ಮಂಜೂರು ಮಾಡಿದೆ. ಗುದ್ದಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಕಾಮತ್ ಅವರು, ಎಂಆರ್ ಪಿಎಲ್ ಕಂಪೆನಿಯು ಸಾಮಾಜಿಕ […]

ಮಂಗಳೂರು ವಿವಿ ಹಗರಣಗಳ ಬಗ್ಗೆ ಶಾಸಕ ಡಿ ವೇದವ್ಯಾಸ ಕಾಮತ್ ಪ್ರಶ್ನೆ

Thursday, December 20th, 2018
vedvyas-kamth

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಹಗರಣಗಳ ಕುರಿತು ರಾಜ್ಯ ಸರಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನಿಸಿದ್ದಾರೆ. ಈ ಕುರಿತು ಅಧಿವೇಶನದಲ್ಲಿ ಮಾತನಾಡಿದ ಅವರು ಮಂಗಳೂರು ವಿವಿಯಲ್ಲಿ ಮೂರು ವರ್ಷಗಳಿಂದ ನಡೆದ ಹಗರಣಗಳು ಸರಕಾರದ ಗಮನಕ್ಕೆ ಬಂದಿದೆಯಾ ಎಂದು ಪ್ರಶ್ನೆ ಕೇಳಿದಾಗ ಗಮನಕ್ಕೆ ಬಂದಿಲ್ಲ ಎಂದು ಸರಕಾರ ಕಡೆಯಿಂದ ಉನ್ನತ ಶಿಕ್ಷಣ ಸಚಿವರು ಉತ್ತರ ನೀಡಿದ್ದಾರೆ. ಮಂಗಳೂರು ವಿವಿಯಲ್ಲಿ ನಡೆದ ಹಗರಣಗಳ ಬಗ್ಗೆ ಪತ್ರಿಕೆ, […]

ಕುಡ್ಪಾಡಿ ರೈಲ್ವೆ ಅಂಡರ್ ಪಾಸ್: ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ವ್ಯವಸ್ಥೆಗೊಳಿಸಲು ಸೂಚನೆ

Tuesday, December 11th, 2018
vedvyas-kamath

ಮಂಗಳೂರು : ನಗರದ ಕುಡ್ಪಾಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರೈಲ್ವೆ ಅಂಡರ್ ಪಾಸ್ ಗೆ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಪರಿಶೀಲಿಸಿದರು. ಈ ಅಂಡರ್ ಪಾಸ್ ಕಾಮಗಾರಿ ಬಹುತೇಕ ಮುಗಿದಿದ್ದರೂ, ದಾರಿದೀಪವನ್ನು ಅಳವಡಿಸದೇ ಇರುವುದರಿಂದ ಸ್ಥಳೀಯ ನಾಗರಿಕರಿಗೆ ಆಗುತ್ತಿರುವ ಅನಾನುಕೂಲತೆಯ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ಶೀಘ್ರದಲ್ಲಿ ದಾರಿದೀಪ ಅಳವಡಿಸುವಂತೆ ನಗರಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ ಈ ಅಂಡರ್ ಪಾಸ್ ನಿಂದ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಹೋಗುವ ದಾರಿ ಡಾಮರೀಕರಣಗೊಳ್ಳದೇ ಅವ್ಯವಸ್ಥೆಗೊಂಡಿ […]

ಶಾಸಕ ವೇದವ್ಯಾಸ ಕಾಮತ್ ಕೇಂದ್ರ ಮಾರುಕಟ್ಟೆಗೆ ಭೇಟಿ: ಬೆಂಕಿಗೆ ತುತ್ತಾದ ಅಂಗಡಿಗಳ ಪರಿಶೀಲನೆ

Saturday, December 8th, 2018
central-market

ಮಂಗಳೂರು: ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಶುಕ್ರವಾರ ಕೇಂದ್ರ ಮಾರುಕಟ್ಟೆಗೆ ಭೇಟಿ ನೀಡಿ ಬೆಂಕಿ ಅವಘಡ ಸಂಭವಿಸಿದ ಮಳಿಗೆಗಳನ್ನು ಪರಿಶೀಲಿಸಿದರು. ನಂತರ ಈ ಬಗ್ಗೆ ಮಾತನಾಡಿದ ಶಾಸಕ ಕಾಮತ್ ಅವರು ಸಬ್ ಮೀಟರ್ ಗಳಿಂದ ಹೊರಡುವ ವಿದ್ಯುತ್ ತಂತಿಗಳಿಂದ ಬೆಂಕಿ ಉಂಟಾಗಿ ಕೆಲವು ಮಳಿಗೆಗಳ ಇಲೆಕ್ಟ್ರಿಕಲ್ ವೈಯರ್ಸ್ ಮತ್ತು ಸಲಕರಣೆಗಳು ಹಾಳಾಗಿ ನಷ್ಟ ಸಂಭವಿಸಿದೆ. ಹಾಗೆ ಅಂಗಡಿಗಳ ಚಾವಣಿಗಳಿಗೆ ಬೆಂಕಿ ತಗುಲಿ ಸೊತ್ತು ನಾಶವಾಗಿವೆ. ತಾನು ಈ ಅಪಘಾತ ಸಂಭವಿಸಿದ ಸಂದರ್ಭದಲ್ಲಿ […]

ಕನಕರಬೆಟ್ಟು ರೈಲ್ವೆ ಕ್ರಾಸಿಂಗ್: ಪರ್ಯಾಯ ರಸ್ತೆ ನಿರ್ಮಿಸಲು ಶಾಸಕ ವೇದವ್ಯಾಸ ಕಾಮತ್ ಸೂಚನೆ

Wednesday, December 5th, 2018
vedvyas-kamth

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 59 ನೇ ಜಪ್ಪು ವಾರ್ಡ್ ವ್ಯಾಪ್ತಿಯಲ್ಲಿರುವ ಕನಕರಬೆಟ್ಟು ಬಳಿಯಿರುವ ಸೂಟರ್ ಪೇಟೆ ರೈಲ್ವೆ ಕ್ರಾಸಿಂಗ್ ಅನ್ನು ರೈಲ್ವೆ ಅಧಿಕಾರಿಗಳು ಸಾರ್ವಜನಿಕರಿಗೆ ಯಾವುದೇ ಮಾಹಿತಿಯನ್ನು ನೀಡದೆ ಏಕಾಏಕಿ ಬಂದ್ ಮಾಡಿರುವುದರಿಂದ ಕನಕರಬೆಟ್ಟು ಭಾಗದ ನಾಗರಿಕರಿಗೆ ಆಗಿರುವ ಅನಾನುಕೂಲತೆಯ ಬಗ್ಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಭೇಟಿ ನೀಡಿ ಪರಿಶೀಲಿಸಿದರು. ಈ ಹಿಂದೆ ಈ ಭಾಗದ ಜನತೆಯು ನಗರದ ಪ್ರಮುಖ ಕೇಂದ್ರವಾದ ಕಂಕನಾಡಿ ಹಾಗೂ ಮಂಗಳೂರು ನಗರವನ್ನು […]