Blog Archive

ಅನರ್ಹ ಶಾಸಕರ ಅರ್ಜಿ ವಿಚಾರಣೆ ಮುಂದೂಡಿಕೆ

Monday, September 23rd, 2019
suprrem-court

ನವದೆಹಲಿ : ಕರ್ನಾಟಕ ವಿಧಾನಸಭೆಯಿಂದ ತಮ್ಮ ಶಾಸಕತ್ವ ಅನರ್ಹಗೊಂಡಿದ್ದ 17 ಶಾಸಕರ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ಬುಧವಾರಕ್ಕೆ ಮುಂದೂಡಿದೆ. ನ್ಯಾಯಮೂರ್ತಿ ಎಸ್.ವಿ. ರಮಣ, ನ್ಯಾಯಮುರ್ತಿಗಳಾದ ಸಂಜೀವ ಖನ್ನಾ ಹಾಗೂ ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠದಿಂದ ಅನರ್ಹ ಶಾಸಕರ ಅರ್ಜಿಯ ವಿಚಾರಣೆ ಇಂದು ನಡೆಯುತ್ತಿತ್ತು. ಅನರ್ಹ ಶಾಸಕರ ಪರವಾಗಿ ಮುಕುಲ್ ರೊಹಟಗಿ ವಾದ ಮಂಡಿಸಿದ್ದರು. ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಾದ ಮಂಡಿಸಿದರು ಮತ್ತು ಸ್ಪೀಕರ್ ಪರ ತುಷಾರ್ […]

ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಮುಂದಿನ ಸೋಮವಾರಕ್ಕೆ ಮುಂದೂಡಿಕೆ

Tuesday, September 17th, 2019
supreem-court

ನವದೆಹಲಿ : ಹಲವು ತಿಂಗಳ ವಿಳಂಬದ ಬಳಿಕ ಇಂದು ನಡೆಯಬೇಕಿದ್ದ ಅನರ್ಹ ಶಾಸಕರ ಶಾಸಕರ ಅರ್ಜಿ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಲಾಗಿದೆ. ಕರ್ನಾಟಕ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ನೀಡಿದ್ದ ತೀರ್ಪು ಪ್ರಶ್ನಿಸಿ 17 ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಂಡಿತ್ತು. ಆದರೆ, ತ್ರಿಸದಸ್ಯ ಪೀಠದಲ್ಲಿ ಇದ್ದ ನ್ಯಾ.ಮೋಹನ್ ಶಾಂತನಗೌಡರ ಅವರು ತಾವು ಕರ್ನಾಟಕ ಮೂಲದವರು ಎಂಬ ಕಾರಣ ನೀಡಿ, ವಿಚಾರಣೆಯಿಂದ ಹಿಂದೆ ಸರಿದಿದ್ದರಿಂದ, ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಪೀಠ ಮುಂದೂಡಿತು. […]

ಪಿ ಚಿದಂಬರಂ ಬಂಧನಕ್ಕೆ ಅಡ್ಡಿಯಿಲ್ಲ : ಸುಪ್ರೀಂಕೋರ್ಟ್ ಆದೇಶ

Thursday, September 5th, 2019
P.-chidambaram

ನವದೆಹಲಿ : ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂಗೆ ಗುರುವಾರದಂದು ಸುಪ್ರೀಂಕೋರ್ಟಿನಿಂದ ಕಹಿ ಸುದ್ದಿ ಸಿಕ್ಕಿದೆ. ಬಂಧನದಿಂದ ರಕ್ಷಣೆ ಕೋರಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಸಿಬಿಐ ವಶದಲ್ಲಿರುವ ಪಿ.ಚಿದಂಬರಂ ಅವರ ವಿಚಾರಣೆಯನ್ನು ಸಿಬಿಐ ಮುಗಿಸಿದ್ದು, ಈಗಾಗಲೇ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಜಾರಿ ನಿರ್ದೇಶನಾಲಯವು ಸೆ.05ರ ತನಕ ಬಂಧಿಸದಂತೆ ಕೋರ್ಟ್ ಸೂಚಿಸಿದೆ. ಆದರೆ, ನಿರೀಕ್ಷಣಾ ಜಾಮೀನು ಕೋರಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ […]

ಕೊಡಗಿಗೆ ತಮಿಳುನಾಡು ಪರಿಹಾರ ಕೊಡಬೇಕು: ಎಸ್.ಎಲ್.ಭೈರಪ್ಪ

Wednesday, November 14th, 2018
kodagu

ಮೈಸೂರು: ಪ್ರವಾಹದಿಂದ ತತ್ತರಿಸಿರುವ ಕೊಡಗಿಗೆ ತಮಿಳುನಾಡು ಸರ್ಕಾರ ಕೂಡ ಪರಿಹಾರ ಕೊಡಬೇಕು ಎಂದು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಪ್ರತಿಪಾದಿಸಿದ್ದಾರೆ. ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡಗಿನಿಂದ ಕಾವೇರಿ ನೀರು ಹೋಗಲಿಲ್ಲವೆಂದರೆ, ತಮಿಳುನಾಡು ಸರ್ಕಾರ ಕಾವೇರಿ ನೀರು ಬಂದಿಲ್ಲವೆಂದು ಸುಪ್ರೀಂಕೋರ್ಟ್ ಮೊರೆಹೋಗುತ್ತದೆ. ಸದ್ಯ ಕೊಡುಗಿನಲ್ಲಿ ಭೀಕರ ಪ್ರವಾಹವಾಗಿದ್ದು, ಇಲ್ಲಿಂದ ನೀರು ಪಡೆಯಲು ಹಠಕ್ಕೆ ಬೀಳುವ ತಮಿಳುನಾಡಿಗೆ ಕೊಡುಗಿನ ಮೇಲೆ ಮಾನವೀಯತೆ ಬಂದಿದಿಯಾ? ಎಂದು […]

ಅಯ್ಯಪ್ಪನ ದರ್ಶನಕ್ಕಾಗಿ 10 ರಿಂದ 50 ವರ್ಷದವರೆಗಿನ 550 ಮಹಿಳೆಯರು ಆನ್​ಲೈನ್​ನಲ್ಲಿ ಬುಕ್ಕಿಂಗ್​..!

Saturday, November 10th, 2018
ayyappa-swami

ತಿರುವನಂತಪುರ: ಗಲಭೆ ಹಾಗೂ ಭಕ್ತರ ನಿರ್ವಹಣೆ ದೃಷ್ಟಿಯಿಂದ ಕೇರಳ ಪೊಲೀಸರು ಅಯ್ಯಪ್ಪನ ದರ್ಶನಕ್ಕಾಗಿ ಆರಂಭಿಸಿರುವ ಆನ್ಲೈನ್ ಬುಕ್ಕಿಂಗ್ನಲ್ಲಿ 550 ಮಹಿಳೆಯರು ನೋಂದಣಿ ಮಾಡಿದ್ದಾರೆ. ಇದೇ 16ರಂದು ಶಬರಮಲೆಯಲ್ಲಿ ಹಬ್ಬ ಆರಂಭವಾಗಲಿದ್ದು, ಅಯ್ಯಪ್ಪನ ದರ್ಶನಕ್ಕಾಗಿ 10ರಿಂದ 50 ವರ್ಷದವರೆಗಿನ 550 ಮಹಿಳೆಯರು ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡಿದ್ದಾರೆ ಎಂದು ತಿರುವಂಕೂರು ದೇವಸಂ ಮಂಡಳಿ ಮಾಹಿತಿ ನೀಡಿದೆ. ಸುಪ್ರೀಂಕೋರ್ಟ್ ತೀರ್ಪಿನಂತೆ ಅಯ್ಯಪ್ಪನ ದೇಗುಲ ಪ್ರವೇಶಿಸಲು ಮುಂದಾದ ಮಹಿಳೆಯರು ಹಾಗೂ ಅಯ್ಯಪ್ಪನ ಭಕ್ತರ ನಡುವೆ ಗಲಭೆ ಸಂಭವಿಸಿ ದೇಶಾದ್ಯಂತ ಸುದ್ದಿಯಾಗಿತ್ತು. ಮತ್ತೆ ಇಂತಹ […]

ನನ್ನನ್ನು ಯಾರೂ ಈ ನಿಟ್ಟಿನಲ್ಲಿ ಸಂಪರ್ಕ ಮಾಡಿಲ್ಲ… ಆ ಧೈರ್ಯ ಯಾರಿಗೂ ಇಲ್ಲ: ಎಚ್. ವಿಶ್ವನಾಥ್

Friday, May 18th, 2018
H-vishwanath;

ಹೈದರಾಬಾದ್: ರಾಜ್ಯ ಸರ್ಕಾರ ರಚನೆ ಕಸರತ್ತಿನ ಹಿನ್ನೆಲೆಯಲ್ಲಿ ಬಹುಮತ ಸಾಬೀತಿಗೆ ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್ ನಾಳೆ ದಿನಾಂಕ ನಿಗದಿಪಡಿಸಿದೆ. ಈ ನಡುವೆ ಬಿಜೆಪಿಯಿಂದ ಕುದುರೆ ವ್ಯಾಪಾರ ನಡೆಯಲು ಪ್ರಯತ್ನ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ನನ್ನನ್ನು ಯಾರೂ ಈ ನಿಟ್ಟಿನಲ್ಲಿ ಸಂಪರ್ಕ ಮಾಡಿಲ್ಲ. ಆ ಧೈರ್ಯ ಯಾರಿಗೂ ಇಲ್ಲ ಎಂದು ಹಿರಿಯ ಕಾಂಗ್ರೆಸ್ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ. ತಮ್ಮ ತಂದೆಯವರನ್ನು ಖರೀದಿ ಮಾಡುವ ಪ್ರಯತ್ನ ಸಫಲವಾಗುವುದಿಲ್ಲ ಎಂದು ಶಾಸಕ ವಿಶ್ವನಾಥ್ ಅವರ ಪುತ್ರ ಹಾಕಿರುವ […]

ನಲಪಾಡ್‌‌ಗೆ ಸುಪ್ರೀಂಕೋರ್ಟ್‌ನಲ್ಲೂ ಜಾಮೀನು ಸಿಗುವುದು ಡೌಟ್‌‌!

Wednesday, March 21st, 2018
nalapad-harris

ಬೆಂಗಳೂರು: ವಿದ್ವತ್ ಕೊಲೆ ಯತ್ನದ ಕೇಸ್‌‌ನಲ್ಲಿ ಜೈಲು ಸೇರಿರುವ ನಲಪಾಡ್ ಹ್ಯಾರಿಸ್‌‌ಗೆ ಸುಪ್ರೀಂಕೋರ್ಟ್‌ನಲ್ಲೂ ಜಾಮೀನು ಸಿಗದಂತೆ ಮಾಡುವ ನಿಟ್ಟಿನಲ್ಲಿ ಸಿಸಿಬಿ ಅಧಿಕಾರಿಗಳು ಇಂದು ಕೇವಿಯೆಟ್ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ನಲಪಾಡ್ ಪರ ವಕೀಲರು ಸುಪ್ರೀಂಕೋರ್ಟ್ ಮೊರೆ ಹೋಗುವ ಮುನ್ನವೇ ಸಿಸಿಬಿ ಅಧಿಕಾರಿಗಳು ಕೇವಿಯೆಟ್ ಅರ್ಜಿ ಸಲ್ಲಿಸಿದ್ದಾರೆ. ನಲಪಾಡ್ ಹ್ಯಾರಿಸ್ ಜಾಮೀನು ಅರ್ಜಿ ಸಲ್ಲಿಸಿದರೆ ಆದೇಶ ನೀಡುವ ಮುನ್ನ ನಮ್ಮ ಅಭಿಪ್ರಾಯ ಪಡೆಯುವಂತೆ ಕೋರಿ […]

ಶಾಲೆ ಮುಂದೆ ಬಾರ್ ತೆರೆಯದಂತೆ ವಿದ್ಯಾರ್ಥಿಗಳಿಂದ ಪೋಸ್ಟ್ ಕಾರ್ಡ್‌ ಚಳವಳಿ

Saturday, December 16th, 2017
school

ಮಂಗಳೂರು: ಶಾಲೆ ಮುಂದೆ ಇರುವ ಬಾರ್ ಅಂಡ್‌ ರೆಸ್ಟೋರೆಂಟ್‌ ಅನ್ನು ಉದ್ಘಾಟಿಸಲು ಬಂದ ಮೇಯರ್ ಕವಿತಾ ಸನಿಲ್ ಅವರನ್ನು ತಡೆದು, ಪ್ರತಿಭಟನೆ ಮಾಡಿದ ಕುಂಟಿಕಾನ ಸೈಂಟ್ ಆ್ಯನ್ಸ್ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು, ಬಾರ್ ಮುಚ್ಚುವಂತೆ ಮಕ್ಕಳ ಹಕ್ಕು ರಕ್ಷಣಾ ಸಮಿತಿಗೆ ಪೋಸ್ಟ್ ಕಾರ್ಡ್‌ ಚಳವಳಿ ಮೂಲಕ ಆಗ್ರಹಿಸುತ್ತಿದ್ದಾರೆ. ಶಾಲೆಯಿಂದ ನೂರು ಮೀಟರ್ ದೂರದಲ್ಲಿ ಮದ್ಯದಂಗಡಿ ಇರುಬೇಕೆಂದು ಸುಪ್ರೀಂಕೋರ್ಟ್‌ ಆದೇಶವಿದೆ. ಅಷ್ಟೇ ಅಲ್ಲ, ನೂರು ಮೀಟರ್ ವ್ಯಾಪ್ತಿಯೊಳಗೆ ತಂಬಾಕು ಉತ್ಪಾದನೆ ಅಥವಾ ಅಮಲು ಪದಾರ್ಥಗಳ ಜಾಹಿರಾತು, ಮಾರಾಟ […]

ಗಾಂಧಿ ಹತ್ಯೆ ಮರುತನಿಖೆ, ಅಮಿಕಸ್ ಕ್ಯೂರಿ ನೇಮಿಸಿದ ಸುಪ್ರೀಂಕೋರ್ಟ್‌

Friday, October 6th, 2017
ghandhi

ನವದೆಹಲಿ: ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಮರುತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಈ ಸಂಬಂಧ ನ್ಯಾಯಾಲಯಕ್ಕೆ ನೆರವಾಗಲು ಅಮಿಕಸ್‌ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ನೇಮಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌.ಎ. ಬೋಬ್ಡೆ ಮತ್ತು ಎಲ್‌. ನಾಗೇಶ್ವರ ರಾವ್‌ ಅವರಿದ್ದ ನ್ಯಾಯಪೀಠವು ಹಿರಿಯ ವಕೀಲ ಅಮರೇಂದರ್‌ ಶರಣ್‌ ಅವರನ್ನು ಅಮಿಕಸ್‌ ಕ್ಯೂರಿಯಾಗಿ ನೇಮಕ ಮಾಡಿದೆ. ಮಹಾತ್ಮ ಗಾಂಧಿ ಹತ್ಯೆ ಕುರಿತು ಪೂರ್ಣ ಸತ್ಯ ಹೊರಬರಬೇಕಿದ್ದು, ಈ ಬಗ್ಗೆ ಮರುತನಿಖೆಗೆ ಆದೇಶಿಸಬೇಕು […]

ಹೆಚ್.ಡಿ.ದೇವೇಗೌಡರ ಉಪವಾಸ ಸತ್ಯಾಗ್ರಹ ಸುಪ್ರೀಂಕೋರ್ಟ್ ನ್ಯಾಯಾಧೀಶರ ಕಣ್ಣು ತೆರೆಸಬಹುದು: ಜಿ.ಪರಮೇಶ್ವರ್

Saturday, October 1st, 2016
devegouda

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಪದೇ ಪದೇ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಉಪವಾಸ ಸತ್ಯಾಗ್ರಹ ಸುಪ್ರೀಂಕೋರ್ಟ್ ನ್ಯಾಯಾಧೀಶರ ಕಣ್ಣು ತೆರೆಸಬಹುದು ಎನ್ನುವ ಭಾವನೆಯನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ್ ವ್ಯಕ್ತಪಡಿಸಿದರು. ಕಾವೇರಿ ವಿವಾದದಲ್ಲಿ ಪ್ರಧಾನಿಗಳ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಗೃಹ ಸಚಿವ ಪರಮೇಶ್ವರ್ ಭೇಟಿ ನೀಡಿದರು. ದೇವೇಗೌಡರೊಂದಿಗೆ ಕೆಲ ಕಾಲು ಮಾತುಕತೆ ನಡೆಸಿದರು. ನೀರು ಹರಿಸದಿರುವ […]