Blog Archive

ಊಟಕ್ಕೆ ಕೈಕೊಟ್ಟ ಸಿಎಂ : ಕುತೂಹಲ ಮೂಡಿಸಿದ ಅಂಬರೀಶ್‍ ಮುಂದಿನ ನಡೆ

Tuesday, April 3rd, 2018
ambarish

ಬೆಂಗಳೂರು : ಅಂಬರೀಶ್‍ ನಿವಾಸಕ್ಕೆ ರಾತ್ರಿ ಡಿನ್ನರ್‌ಗೆ ಬರಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ನಟ, ಮಾಜಿ ಶಾಸಕ ಅಂಬರೀಶ್‌ಗೆ ಮತ್ತೆ ಚುನಾವಣೆ ಟಿಕೆಟ್‌ ಕೈತಪ್ಪುವ ಭೀತಿ ಎದುರಾಗಿದೆ. ಬೆಂಗಳೂರಿನ ಗಾಲ್ಫ್‌ ಕ್ಲಬ್‌ ಬಳಿ ಇರುವ ಅಂಬಿ ನಿವಾಸದಲ್ಲಿ ಮುಖ್ಯಮಂತ್ರಿ ಅವರಿಗೆಂದು ಅಯೋಜನೆ ಮಾಡಿದ್ದ ಔತಣಕೂಟ ದಿಢೀರ್‌ ರದ್ದಾಗಿದೆ. ಮೈಸೂರು ಚುನಾವಣೆ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ಅವರ ತಲೆಗೆ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ವಿಶ್ರಾಂತಿಗಾಗಿ ಸೀದಾ ಕಾವೇರಿ ನಿವಾಸಕ್ಕೆ ಮುಖ್ಯಮಂತ್ರಿ ತೆರಳಿದ್ದಾರೆ. ಈ ಬಗ್ಗೆ […]

ಚುನಾವಣೆಗೆ ಜೆಡಿಯು ಸಿದ್ಧ, ಬಿಜೆಪಿ ಜೊತೆ ಹೊಂದಾಣಿಕೆ ಇಲ್ಲ: ಮಹಿಮಾ ಪಟೇಲ್‌

Tuesday, April 3rd, 2018
janathdal

ಬೆಂಗಳೂರು: ಮೇ ತಿಂಗಳಿನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಸ್ಪರ್ಧೆ ಮಾಡಲು ಸಜ್ಜಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಎನ್‌ಡಿಎ ಭಾಗವಾದರೂ ನಾವು ರಾಜ್ಯದಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದೇವೆ. ಬಿಜೆಪಿ ವಿರುದ್ಧವೂ ಇಲ್ಲಿ ನಮ್ಮ ಸ್ಪರ್ಧೆ ಇರಲಿದೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೇರೆ ಬೇರೆ ಜಿಲ್ಲೆ ಪ್ರವಾಸ ಮಾಡಿದ್ದು, ಪಕ್ಷದ ಸಂಘಟನೆ ಮಾಡಿ ಪದಾಧಿಕಾರಿಗಳನ್ನು ನೇಮಿಸಿ ಚುನಾವಣೆಗೆ ಸಂಪೂರ್ಣ ಸನ್ನದ್ಧರಾಗಿದ್ದೇವೆ. ಏಪ್ರಿಲ್ 11 ರಂದು ಪಕ್ಷದ […]

ಅಡಿಕೆ ಕ್ಯಾನ್ಸರ್‌‌ಕಾರಕವಲ್ಲ, ಕೇಂದ್ರ ಆರೋಗ್ಯ ಸಚಿವರಿಗೆ ವರದಿ: ಅನಂತಕುಮಾರ್‌ ಹೆಗಡೆ

Monday, April 2nd, 2018
ananth-kumar

ಮಂಗಳೂರು: ಅಡಿಕೆ ಆರೋಗ್ಯದಾಯಕವಾಗಿರುವ ಆಯುರ್ವೇದ ಔಷಧೀಯ ಗುಣವುಳ್ಳ ಉತ್ಪನ್ನ. ಅದರಲ್ಲಿ ಕ್ಯಾನ್ಸರ್‌‌ಕಾರಕ ಅಂಶವಿಲ್ಲ ಎಂಬುದು ಸಾಬೀತುಗೊಂಡಿದೆ. ಈ ಕುರಿತಂತೆ ಅಂತಾರಾಷ್ಟ್ರೀಯ ಮಟ್ಟದ ಸಂಶೋಧಕರು ತಯಾರಿಸಿರುವ ವರದಿಯನ್ನು ಏ. 4ರಂದು ಕೇಂದ್ರ ಆರೋಗ್ಯ ಸಚಿವರಿಗೆ ಸಲ್ಲಿಸಲಾಗುವುದು ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ. ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡಿಕೆ ಕುರಿತು ಗೊತ್ತಿಲ್ಲದವರು ಕ್ಯಾನ್ಸರ್‌‌ಕಾರಕ ಎಂದು ಬಿಂಬಿಸುತ್ತಿದ್ದಾರೆ. ಅಡಿಕೆ ಕ್ಯಾನ್ಸರ್‌‌ಕಾರಕವಲ್ಲ. ಬೆಳೆಗಾರರು ಗೊಂದಲಕ್ಕೊಳಗಾಗುವುದು ಬೇಡ ಎಂದರು. ಅಡಿಕೆಯಲ್ಲಿ ಕ್ಯಾನ್ಸರ್‌‌ಕಾರಕ ಅಂಶಗಳಿವೆ ಎಂಬ […]

ರಂಗೇರಿದ ವಿಧಾನಸಭಾ ಚುನಾವಣೆ… ಬಿಜೆಪಿಗೆ ಟಿಕೆಟ್‌‌ ಬಂಡಾಯದ ಬಿಸಿ!?

Saturday, March 31st, 2018
yeddeyurappa

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಲು ಸಿದ್ಧವಾಗುತ್ತಿದ್ದಂತೆ ಟಿಕೆಟ್ ವಂಚಿತರು ಬಂಡಾಯ ಏಳಲು ಸಜ್ಜಾಗುತ್ತಿದ್ದಾರೆ. ಹಾಲಿ ಶಾಸಕರನ್ನು ಹೊರತುಪಡಿಸಿ ಉಳಿದಿರುವ 150ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯದ ಭೀತಿ ಎದುರಿಸುತ್ತಿದ್ದು, ಅಭ್ಯರ್ಥಿಗಳ ಗೆಲುವಿಗೆ ಮುಂದೆ ಅವರು ಅಡ್ಡಿಯಾಗಬಹುದೆಂಬ ಆತಂಕ ಎದುರಾಗಿದೆ. ಸಮೀಕ್ಷಾ ವರದಿ ಹಾಗೂ ಜಿಲ್ಲಾ ಸಮಿತಿ ಶಿಫಾರಸು ಮಾಡಿದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವುದಾಗಿ ಬಿಜೆಪಿ ವರಿಷ್ಠರು ಹೇಳುತ್ತಿದ್ದಾರೆ. ಸದ್ಯಕ್ಕೆ ಬಿಜೆಪಿ-ಕೆಜೆಪಿ, ಬಿಎಸ್‍ಆರ್ ಸೇರಿದಂತೆ 50 ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ […]

ಬಿಜೆಪಿ ನಾಯಕನ ಕೊಲೆ ಯತ್ನ ಪ್ರಕರಣ: ಇತರ ಆರೋಪಿಗಳ ಬಂಧನಕ್ಕೆ ಕಟೀಲು ಆಗ್ರಹ

Saturday, March 31st, 2018
nalin-kumar

ಮಂಗಳೂರು: ಬಿಜೆಪಿ ನಾಯಕ ಈಶ್ವರ್ ಕಟೀಲು ಕೊಲೆಗೆ ಯತ್ನಿಸಿದ ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದೆ. ಆದರೆ ರಾಜಕೀಯ ಒತ್ತಡದಿಂದ ಉಳಿದ ಮೂವರನ್ನು ಬಂಧಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ. ಮಾಧ್ಯದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸುಖಾನಂದ ಶೆಟ್ಟಿಯವರ ಮೇಲೆ ಹಲ್ಲೆ ಯತ್ನ ನಡೆದ ಸಂದರ್ಭದಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರೆ ಸುಖಾನಂದ ಶೆಟ್ಟಿಯವರನ್ನು ಉಳಿಸಿಕೊಳ್ಳಲು ಸಾಧ್ಯವಿತ್ತು. ಇದೀಗ ಕಾಂಗ್ರೆಸ್ ನಾಯಕರುಗಳ ಬೆಂಬಲದಿಂದ ಈಶ್ವರ್ ಕಟೀಲು ಮೇಲೆ ಹಲ್ಲೆ ಯತ್ನ ನಡೆಸಲಾಗಿದೆ ಎಂದು ಆರೋಪಿಸಿದರು. […]

ರಾಜಮಾತೆ ಪ್ರಮೋದಾದೇವಿ ಜೊತೆ ಅಮಿತ್ ಶಾ ಗುಪ್ತ ಮಾತುಕತೆ

Friday, March 30th, 2018
amit-shah

ಮೈಸೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅರಮನೆಗೆ ಭೇಟಿ ನೀಡಿ ರಾಜವಂಶಸ್ಥರ ಜೊತೆ ಗುಪ್ತ ಮಾತುಕತೆ ನೆಡಿಸಿದ್ದು, ಮುಂದಿನ ಚುನಾವಣೆಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅರಮನೆಗೆ ಭೇಟಿ ನೀಡಿದ ಅಮಿತ್ ಶಾ ಅವರನ್ನ ರಾಜವಂಶಸ್ಥರು ಹೂಗುಚ್ಛ ನೀಡಿ ಸ್ವಾಗತಿಸಿದರು. ನಂತರ ಸುಮಾರು 30 ನಿಮಿಷಗಳ ಕಾಲ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಜೊತೆ ಅರಮನೆಯೊಳಗಿರುವ ದೇವಾಲಯದಲ್ಲಿ ಅಮಿತ್ ಶಾ ಗುಪ್ತವಾಗಿ ಮಾತುಕತೆ ನಡೆಸಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುವಂತೆ ಮನವಿ ಮಾಡಿದ್ದಾರೆ […]

ಸುಳ್ಳು ಸುದ್ದಿ ಆರೋಪ: ‘ಪೋಸ್ಟ್ ಕಾರ್ಡ್’ ಮಹೇಶ್ ವಿಕ್ರಂ ಹೆಗ್ಡೆ ಬಂಧನ

Friday, March 30th, 2018
mahesh-vikram

ಮಂಗಳೂರು : ಸುಳ್ಳು ಸುದ್ದಿ ಪ್ರಕಟಿಸಿದ ಆರೋಪದ ಮೇಲೆ ಪೋಸ್ಟ್ ಕಾರ್ಡ್ ಡಾಟ್ ಕಾಂ ಮಾಲೀಕ ವಿಕ್ರಂ ಹೆಗ್ಡೆಯವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅವರು ತಮ್ಮ ವೆಬ್ ಸೈಟ್ ನಲ್ಲಿ ಜೈನ ಮುನಿ ಮೇಲೆ ಹಲ್ಲೆ ಎಂಬ ಸುದ್ದಿ ಪ್ರಕಟಿಸಿದ್ದರು. ಆದರೆ ಜೈನ ಮುನಿ, ನಂಜನಗೂಡಿನಲ್ಲಿ ಅಪಘಾತದಿಂದ ಗಾಯಗೊಂಡಿದ್ದು ಅವರ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿರಲಿಲ್ಲ ಎಂದು ಗಪ್ಪಾರ್ ಬೇಗ್ ಎಂಬುವವರು ಕ್ರೈಂ ಸೆಲ್ ಗೆ ನೀಡೀದ್ದ ದೂರಿನ ಮೇಲೆ ಹೆಗ್ಡೆಯನ್ನು ಪೊಲೀಸರು ಬಂಧಿಸಿದ್ದಾರೆ. […]

ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಕೊಲೆ ಪ್ರಕರಣ…!

Thursday, March 29th, 2018
Sukhananda

ಮಂಗಳೂರು: ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ 17 ಆರೋಪಿಗಳನ್ನು ಮಂಗಳೂರು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ನೀಡಿದೆ. ನವಾಜ್, ನೌಷಾದ್, ಶಾಕಿರ್, ಮೊಹಮ್ಮದ್ ಅಜೀಜ್, ಮೊಹಮ್ಮದ್ ರಫೀಕ್, ಅಬ್ದುಲ್ ಖಾದರ್ ಆಲಿ, ಪಿ.ಕೆ.ಅಯೂಬ್, ಮೊಹಮ್ಮದ್ ಅಶ್ರಫ್, ಫಾತಿಮಾ ಝೊಹರಾ, ಸಲೀಂ, ಖಲಂದರ್ ಬಜಪೆ, ರೆಹಮತ್ ಖಲಂದರ್, ಅಜೀಜ್ ಯಾನೆ ಯುರೋಪಿಯನ್ ಅಜೀಜ್, ನಿಜಾಮುದ್ದೀನ್, ಮೊಹಮ್ಮದ್ ಯಾನೆ ಸಾದಾ ಮೊಹಮ್ಮದ್, ಅಪ್ರೋಜ್, ನಾಸಿರ್ ಕೊಲೆ ಪ್ರಕರಣದಲ್ಲಿ ದೋಷ ಮುಕ್ತಗೊಂಡವರು. ಈ […]

ಕುಟುಂಬದವರಿಗೆ ಟಿಕೆಟ್‌ ಕೊಟ್ರೆ ಜನಾರ್ದನ ರೆಡ್ಡಿ ರಾಜಕೀಯ ಎಂಟ್ರಿ!?

Wednesday, March 28th, 2018
janardhan-reddy

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಸಕ್ರಿಯ ರಾಜಕಾರಣದಿಂದಲೇ ದೂರ ಉಳಿದಿದ್ದ ಬಳ್ಳಾರಿ ಗಣಿ-ಧಣಿ ಗಾಲಿ ಜನಾರ್ದನ ರೆಡ್ಡಿ ಮತ್ತೆ ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗ್ತಿದೆ. ತಮ್ಮನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ನಾಲ್ಕೈದು ಜಿಲ್ಲೆಗಳಲ್ಲಿ ತಾವು ಬಿಜೆಪಿ ಪರ ಸಕ್ರಿಯವಾಗಿ ಕೆಲಸ ಮಾಡಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಜನಾರ್ಧನರೆಡ್ಡಿ ವರಿಷ್ಠರಿಗೆ ಸಂದೇಶವನ್ನು ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ತಮ್ಮ ಆಪ್ತರ ಬಳಿ ಪಕ್ಷ ಸೇರ್ಪಡೆ ಕುರಿತಂತೆ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿರುವ […]

ಯಡಿಯೂರಪ್ಪ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್‌ 1: ಹೇಳಿಕೆ ನೀಡಿ ಮುಜುಗರಕ್ಕೊಳಗಾದ ಶಾ

Tuesday, March 27th, 2018
amit-shah

ದಾವಣಗೆರೆ: ಮಾತನಾಡುವ ಭರದಲ್ಲಿ, ಭ್ರಷ್ಟಾಚಾರದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ನಂಬರ್‌‌ 1 ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮುಜುಗರಕ್ಕೊಳಗಾಗಿರುವ ಘಟನೆ ನಡೆದಿದೆ. ದಾವಣಗೆರೆ ತಾಲೂಕಿನ ದೊಡ್ಡ ಬಾತಿ ಗ್ರಾಮದಲ್ಲಿ ಐದು ರೈತರ ಮನೆಗಳಲ್ಲಿ ಮುಷ್ಠಿ ಅಕ್ಕಿ ಸಂಗ್ರಹಿಸಿ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ರೀತಿಯ ಹೇಳಿಕೆ ನೀಡಿ ಮುಜುಗರಕ್ಕೆ ಒಳಗಾಗಿದ್ದಾರೆ. ಸುದ್ದಿಗೋಷ್ಠಿ ವೇಳೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಶಾ ಮಾತಿನ ಭರದಲ್ಲಿ ಈ ರೀತಿ […]