Blog Archive

ಕುಖ್ಯಾತ ಕಳವು ಆರೋಪಿಗಳ ಕಾರು ಮಗುಚಿಬಿದ್ದು ಗಾಯಾಳುಗಳು ಆಸ್ಪತ್ರೆಯಿಂದ ಪರಾರಿ

Friday, July 22nd, 2016
Kumbale

ಕುಂಬಳೆ: ಕುಖ್ಯಾತ ಕಳವು ಆರೋಪಿ ಹಾಗೂ ತಂಡ ಸಂಚರಿಸಿದ ಕಾರು ನಿಯಂತ್ರಣ ತಪ್ಪಿ ಮನೆಯ ಮೇಲೆ ಮಗುಚಿಬಿದ್ದ ಘಟನೆ ಬುಧವಾರ ಮಧ್ಯರಾತ್ರಿ ಕುಂಬಳೆ ಸಮೀಪದ ಶಾಂತಿಪಳ್ಳದಲ್ಲಿ ನಡೆದಿದೆ. ಈವೇಳೆ ನಾಗರಿಕರು ಆಸ್ಪತ್ರೆಗೆ ತಲುಪಿಸಿದ ಗಾಯಾಳುಗಳ ಪೈಕಿ ಇಬ್ಬರು ಆಸ್ಪತ್ರೆಯಿಂದ ಪರಾರಿಯಾ ಗಿದ್ದಾರೆ. ಮೂವರು ಅಪಘಾತ ತಕ್ಷಣವೇ ಪರಾರಿಯಾಗಿದ್ದಾರೆ. ಇನ್ನೋರ್ವ ಗಾಯಗೊಂಡ ಸ್ಥಿತಿಯಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬುಧವಾರ ಮಧ್ಯಾತ್ರಿ ೧.೪೫ರ ವೇಳೆ ಕುಂಬಳೆ-ಬದಿಯಡ್ಕ ರಸ್ತೆಯ ಶಾಂತಿಪಳ್ಳ ತಿರುವಿನಲ್ಲಿ ಅಬಕಾರಿ ಕಚೇರಿಯ ಸಮೀಪ […]

ಕಾರು ಡಿಕ್ಕಿಯಾಗಿ ಬಸ್ ಚಾಲಕ ಮೃತ್ಯು, ಪರಾರಿಯಾದ ವಾಹನ ವಶ

Thursday, July 14th, 2016
Poinachi Accident

ಕಾಸರಗೋಡು: ಕಾರು ಡಿಕ್ಕಿಹೊಡೆದು ಖಾಸಗೀ ಬಸ್ ಚಾಲಕ ಮೃತಪಟ್ಟ ಘಟನೆ ಗುರುವಾರ ಮುಂಜಾನೆ ಪೊಯಿನಾಚಿಯಲ್ಲಿ ನಡೆದಿದೆ. ಕುಂಡಂಗುಳಿ ಮರುದಡ್ಕದ ರಾಮಕೃಷ್ಣನ್ ನಾಯರ್ ಎಂಬವರ ಪುತ್ರ ಮಧುಸೂದನ್(32)ಮೃತ ಬಸ್ ಚಾಲಕ.ಮಧುಸೂದನ್ ಮೂವರು ಸ್ನೇಹಿತರೊಂದಿಗೆ ಜು.12 ರಂದು ಕೊಲ್ಲೂರು ಕ್ಷೇತ್ರಕ್ಕೆ ತೆರಳಿದ್ದರು. ಮರಳಿ ಬಂದ ಇವರು ಗುರುವಾರ ಮುಂಜಾನೆ 1.30ರ ವೇಳೆಗೆ ಪೊಯಿನಾಚಿ ಪೆಟ್ರೋಲ್ ಬಂಕ್ ಬಳಿ ಕಾರಲ್ಲಿ ವಿಶ್ರಾಂತಿಪಡೆಯುತ್ತಿದ್ದರು.ಈ ಮಧ್ಯೆ 2 ಗಂಟೆಯ ವೇಳೆ ಮಧುಸೂದನ್ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದರು.ಈ ಬಗ್ಗೆ ಪೋಲೀಸರಿಗೆ ಮಾಹಿತಿ […]

ಪರಿಸರ ಜಾಗೃತಿ ವಿಶೇಷ ಸಾಕ್ಷ್ಯಚಿತ್ರ ಪ್ರದರ್ಶನದ ಉದ್ಘಾಟನೆ

Friday, January 29th, 2016
tele film

ಕುಂಬಳೆ: ಹುಟ್ಟಿನಿಂದಲೇ ಯಾರೂ ಮೇಧಾವಿಗಳಲ್ಲ. ಬಳಿಕದ ಜೀವನಾನುಭವ, ಕಲಿಕೆಗಳು ಅನುಭವ ಸಂಪನ್ನಗೊಳಿಸಿ ಜೀವನವನ್ನು ಉದ್ದರಿಸುತ್ತದೆ. ಕಲೆ, ಸಾಹಿತ್ಯಗಳ ಅಭಿರುಚಿಗಳಿಲ್ಲದ ಮಾನವ ಜೀವನ ಬರಡಾಗಿದ್ದು, ವ್ಯಕ್ತಿತ್ವವನ್ನು ಬೆಳೆಸುವ, ಜ್ಞಾನದ ಹಸಿವನ್ನು ತಣಿಸುವ ವೈಚಾರಿಕತೆಯತ್ತ ನಾವು ಒಂದಷ್ಟಾದರೂ ಗಮನ ನೀಡಬೇಕಾದ ಅಗತ್ಯವಿದೆಯೆಂದು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಂಗಳೂರಿನ ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಹುಬ್ಬಳ್ಳಿಯ ಕರ್ನಾಟಕ ಟೆಲಿಪಿಲ್ಮ್ ನಿರ್ಮಾಣ ಸಂಸ್ಥೆಯ ಸಹಕಾರದೊಂದಿಗೆ ಪ್ರಾಥಮಿಕ ಮತ್ತು ಫ್ರೌಢಶಾಲೆಗಳಲಲಿ ಪ್ರದರ್ಶಿಸಲು […]