Blog Archive

ಕೊರೊನಾ ಸೋಂಕು : ದಕ್ಷಿಣ ಕನ್ನಡ 428, ಉಡುಪಿ 186 , ಕಾಸರಗೋಡು 236

Saturday, September 5th, 2020
corona

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ  428 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೊನಾಗೆ 7 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಮೃತಪಟ್ಟ 7 ಮಂದಿಯಲ್ಲಿ 4 ಮಂದಿ ಮಂಗಳೂರು ತಾಲೂಕು, ಒಬ್ಬರು ಪುತ್ತೂರು ತಾಲೂಕು ಮತ್ತು ಇಬ್ಬರು ಹೊರಜಿಲ್ಲೆಯವ ರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 391ಕ್ಕೆ ಏರಿಕೆಯಾಗಿದೆ. ಮಂಗಳೂರು ತಾಲೂಕಿನ 222 ಮಂದಿ, ಬಂಟ್ವಾಳ ತಾಲೂಕಿನ 61, ಪುತ್ತೂರು ತಾಲೂಕಿನ 54 , ಸುಳ್ಯ ತಾಲೂಕಿನ 45, ಬೆಳ್ತಂಗಡಿ ತಾಲೂಕಿನ 28 ಮತ್ತು ಹೊರಜಿಲ್ಲೆಯ 18 […]

ಕೊರೋನ ಸೋಂಕು ಸೆ .3 : ದಕ್ಷಿಣ ಕನ್ನಡ 316, ಸಾವು 3, ಉಡುಪಿ, 226, ಸಾವು 3, ಕಾಸರಗೋಡು 133

Thursday, September 3rd, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ 316 ಮಂದಿಯಲ್ಲಿ ಕೊರೋನ ಸೋಂಕಿನ ಪಾಟಿಸಿವ್ ಪತ್ತೆಯಾಗಿದ್ದು, 3 ಮಂದಿ ಬಲಿಯಾಗಿದ್ದಾರೆ. ಗುರುವಾರ ವರದಿಯಾದ 316 ಮಂದಿಯ ಸಹಿತ ಈವರೆಗೆ ಜಿಲ್ಲೆಯಲ್ಲಿ ಒಟ್ಟು 13,795 ಮಂದಿಗೆ ಕೊರೋನ ಸೋಂಕು ತಗುಲಿದೆ. ಗುರುವಾರ ಪಾಸಿಟಿವ್‌ಗೊಳಗಾದ 316 ಮಂದಿಯಲ್ಲಿ ಮಂಗಳೂರಿನ 190, ಬಂಟ್ವಾಳದ 40, ಪುತ್ತೂರಿನ 21, ಸುಳ್ಯದ 16, ಬೆಳ್ತಂಗಡಿಯ 16 ಮತ್ತು ಇತರ ಜಿಲ್ಲೆಯ 33 ಮಂದಿ ಸೇರಿದ್ದಾರೆ. ಮಂಗಳೂರು ತಾಲೂಕಿನ 2 ಮತ್ತು ಹೊರಜಿಲ್ಲೆಯ ಒಬ್ಬರು ಸಹಿತ ಜಿಲ್ಲೆಯಲ್ಲಿ ಗುರುವಾರ […]

ಕೊರೊನಾ ಸೋಂಕು ಆಗಸ್ಟ್ 24 : ದಕ್ಷಿಣ ಕನ್ನಡ 201, ಉಡುಪಿ 103, ಕಾಸರಗೋಡು 118

Monday, August 24th, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 201 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 10531ಕ್ಕೆ ಏರಿಕೆಯಾಗಿದೆ. ಸೋಮವಾರ  ಪತ್ತೆಯಾದ ಸೋಂಕಿತರ ಪೈಕಿ ಪ್ರಾಥಮಿಕ ಸಂಪರ್ಕದಿಂದ 49 ಮಂದಿಗೆ ಸೋಂಕು ತಗುಲಿದೆ. 70 ಐಎಲ್‌ಐ ಪ್ರಕರಣಗಳಾಗಿವೆ. 9 ಸಾರಿ ಪ್ರಕರಣಗಳು ದೃಢಪಟ್ಟಿವೆ. 72 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಅಂತರ್ ರಾಜ್ಯ ಪ್ರಯಾಣ ಮುಗಿಸಿ ಬಂದ ಓರ್ವ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಆಗಸ್ಟ್ 24ರಂದು 241 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ […]

ಕೊರೊನಾ ಸೋಂಕು ಆಗಸ್ಟ್ 8 : ದಕ್ಷಿಣ ಕನ್ನಡ 194, ಸಾವು 6, ಉಡುಪಿ ಜಿಲ್ಲೆ 314, ಸಾವು 5, ಕಾಸರಗೋಡು 73

Sunday, August 9th, 2020
corona-virus

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 194 ಕೊರೊನಾ ಸೋಂಕು  ಪ್ರಕರಣಗಳು, ಆರು ಸಾವು.  ಉಡುಪಿ ಜಿಲ್ಲೆಯಲ್ಲಿಂದು 314 ಮಂದಿಗೆ ಕೊರೊನಾ ಸೋಂಕು ಮತ್ತು ಐದು ಸಾವು ಶನಿವಾರ ವರದಿಯಾಗಿದೆ. ಶನಿವಾರ ಮಂಗಳೂರಿನಲ್ಲಿ 129, ಬಂಟ್ವಾಳದಲ್ಲಿ 15, ಬೆಳ್ತಂಗಡಿಯಲ್ಲಿ 16, ಪುತ್ತೂರಿನಲ್ಲಿ 16, ಸುಳ್ಯದಲ್ಲಿ 5 ಮಂದಿಗೆ ಸೋಂಕು ದೃಢಪಟ್ಟಿದ್ದು ಇದನ್ನು ಹೊರತುಪಡಿಸಿ ಇತರೆ ಜಿಲ್ಲೆಯ 11 ಮಂದಿಗೆ ಪಾಸಿಟಿವ್‌ ಆಗಿದೆ.  ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7075 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಶನಿವಾರ 183 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ […]

ನಾಲ್ವರು ಸಂಭಂದಿಕರನ್ನು ನೇಣು ಹಾಕಿ ಹತ್ಯೆಗೈದ ವ್ಯಕ್ತಿ

Monday, August 3rd, 2020
Udaya

ಮಂಜೇಶ್ವರ : ವ್ಯಕ್ತಿಯೊಬ್ಬ ತನ್ನ ನಾಲ್ವರು ಸಂಭಂದಿಕರನ್ನು ನೇಣು ಹಾಕಿ ಹತ್ಯೆಗೈದ ಭೀಕರ ಘಟನೆ ಮಂಜೇಶ್ವರ ಸಮೀಪದ ಬಾಯಾರು ಸುದೆಂಬಳ ಗುರುಕುಮೇರಿ ಎಂಬಲ್ಲಿ ಆಗಸ್ಟ್ 3 ರ ಸೋಮವಾರ ಸಂಜೆ 7 ಗಂಟೆಗೆ  ನಡೆದಿದೆ. ಉದಯ ಎಂಬಾತ ತನ್ನ ಸಂಭಂದಿಕರಾದ ಸದಾಶಿವ (54), ವಿಠ್ಠಲ (52), ಬಾಬು (50) ಮತ್ತು ದೇವಕಿ (58) ನೇಣು ಹಾಕಿ ಹತ್ಯೆಗೈದ ಆರೋಪಿಯಾಗಿದ್ದಾನೆ. ಕೌಟುಂಬಿಕ ಕಲಹವನ್ನು ಅನುಸರಿಸಿ ಈ ಘಟನೆ ನಡೆದಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕಾಸರಗೋಡು  ಡಿಎಸ್‌ಪಿ ಬಾಲಕೃಷ್ಣನ್ […]

ಕೊರೊನಾ ಸೋಂಕು ಜುಲೈ 31 : ದಕ್ಷಿಣ ಕನ್ನಡ ಜಿಲ್ಲೆ 204 , ಉಡುಪಿ ಜಿಲ್ಲೆ 213, ಕಾಸರಗೋಡು 52

Friday, July 31st, 2020
corona virus

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ  204 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಆ ಮೂಲಕ ಸೋಂಕಿತರ ಸಂಖ್ಯೆ 5713ಕ್ಕೆ ಏರಿಕೆಯಾಗಿದೆ. ಶುಕ್ರವಾರದಂದು ಮತ್ತೆ 70 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಜಿಲ್ಲೆಯಲ್ಲಿ ಇಲ್ಲಿಯ ತನಕ 2631 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸದ್ಯ 2929 ಮಂದಿ ಜಿಲ್ಲೆಯಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಪತ್ತೆಯಾದ ಸೋಂಕಿತರ ಪೈಕಿ 75 ಮಂದಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. 63 ಮಂದಿಯಲ್ಲಿ ಐಎಲ್ ಐ ಪ್ರಕರಣ ಪತ್ತೆಯಾಗಿದೆ. 14 ಮಂದಿಯಲ್ಲಿ ಸಾರಿ ಪ್ರಕರಣ ದೃಢಪಟ್ಟಿದೆ. […]

ಪಾರೆಕಟ್ಟೆಯಲ್ಲಿ ನೂತನ ಜಿಲ್ಲಾ ಪೊಲೀಸ್ ತರಬೇತಿ ಕೇಂದ್ರ ಉದ್ಘಾಟನೆ

Friday, July 24th, 2020
police training

ಕಾಸರಗೋಡು: ಜಾಗತಿಕ ಗುಣಮಟ್ಟದ ತರಬೇತಿ ಪೊಲೀಸರಿಗೆ ನೀಡುವ ಉದ್ದೇಶದಿಂದ ಪಾರೆಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾ ಪೊಲೀಸ್ ಕೇಂದ್ರವನ್ನು ಗುರುವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು. ತರಬೇತಿಗಾಗಿ ಆಗಮಿಸುವ ಮಂದಿಗೆ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ವಿಜಯನ್ ಹೇಳಿದರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್, ಉಪಾಧ್ಯಕ್ಷ ದಿವಾಕರ ಆಚಾರ್ಯ, ಡಿ.ವೈ.ಎಸ್.ಪಿ. ಹರಿಶ್ಚಂದ್ರ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಸ್ವಾಗತಿಸಿ, ಸಹಾಯಕ ಜಿಲ್ಲಾ […]

ಕೊರೋನ ಸೋಂಕು ಜುಲೈ 20 : ದಕ್ಷಿಣ ಕನ್ನಡ 89, ಉಡುಪಿ ಜಿಲ್ಲೆ 99, ಕಾಸರಗೋಡು 28

Tuesday, July 21st, 2020
CORONA

ಮಂಗಳೂರು :  ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ಸೋಮವಾರ  89 ಮಂದಿಯಲ್ಲಿ ಕೊರೋನ ಸೋಂಕು ಕಾಣಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,685ಕ್ಕೆ ಏರಿಕೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಮಂದಿ, ಶೀತ-45, ತೀವ್ರ ಉಸಿರಾಟ ತೊಂದರೆ-16, ವಿದೇಶದಿಂದ ಆಗಮಿಸಿದ ಇಬ್ಬರು, ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್‌ನ 15 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ […]

ಕೊರೋನ ಸೋಂಕು ರವಿವಾರ : ದಕ್ಷಿಣ ಕನ್ನಡ 285, ಉಡುಪಿ ಜಿಲ್ಲೆ 134, ಕಾಸರಗೋಡು 57

Sunday, July 19th, 2020
coronavirus

ಮಂಗಳೂರು : ದಕ್ಷಿಣ ಕನ್ನಡ  ಜಿಲ್ಲೆಯಲ್ಲಿರವಿವಾರ 285 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ.  ಈಗ  ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 3,596ಕ್ಕೆ ಏರಿಕೆಯಾಗಿದೆ. ಕೋವಿಡ್‌ಗೆ ರವಿವಾರ ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಹೊಸದಾಗಿ ಪತ್ತೆಯಾದ ಪ್ರಕರಣಗಳಲ್ಲಿ ತೀವ್ರ ಉಸಿರಾಟ ಸಮಸ್ಯೆ (ಸಾರಿ) ಮತ್ತು ಶೀತ (ಐಎಲ್‌ಐ) ಪ್ರಕರಣಗಳು ಹೆಚ್ಚಿದ್ದು, ಸೋಂಕು ಮೂಲ ಪತ್ತೆಯಾಗದ ಪ್ರಕರಣಗಳು ಕೂಡ 60ಕ್ಕೂ ಹೆಚ್ಚಿವೆ. ಸೋಂಕಿತರ ಪ್ರಾಥಮಿಕ ಸಂಪರ್ಕದಿಂದಲೂ ಅನೇಕರಿಗೆ ಸೋಂಕು ಹರಡಿದ್ದು, ಇಂಥವರ ಸಂಪರ್ಕದಲ್ಲಿರುವವರ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿವಿಧ ಆಸ್ಪತ್ರೆ, ಆರೈಕೆ […]

ಕೊರೋನ ಸೋಂಕು ಶನಿವಾರ : ದಕ್ಷಿಣ ಕನ್ನಡ ಜಿಲ್ಲೆ 237, ಉಡುಪಿ ಜಿಲ್ಲೆ109, ಕಾಸರಗೋಡು 29

Sunday, July 19th, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಶನಿವಾರ ಒಂದೇ ದಿನದಲ್ಲಿ 237 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇದುವರೆಗಿನ ಕೊರೋನ ಸಾವಿನ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಇದರಲ್ಲಿ 12 ಮಂದಿ ಹೊರ ಜಿಲ್ಲೆಯವರು. ಕೋವಿಡ್‌ನಿಂದಾಗಿ ಶನಿವಾರ ನಾಲ್ವರು ಮೃತಪಟ್ಟಿದ್ದಾರೆ. ಶನಿವಾರ ಸಾವಿಗೀಡಾದವರಲ್ಲಿ ಮೂವರು ಮಹಿಳೆಯರಾಗಿದ್ದರೆ, ಒಬ್ಬರು ಪುರುಷ. ಮೃತರಲ್ಲಿ ಮಂಗಳೂರಿನ ಮೂವರು ಹಾಗೂ ಪುತ್ತೂರಿನ ಮತ್ತೋರ್ವರು ಇದ್ದಾರೆ. ಮೃತರು 49 ವರ್ಷ ಮೇಲ್ಪಟ್ಟವರು. ಇವರೆಲ್ಲರೂ ಕೊರೋನದೊಂದಿಗೆ ಇತರ ಕಾಯಿಲೆಗಳಿಂದಲೂ ಬಳಲುತ್ತಿದ್ದರು ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ. ಮಂಗಳೂರಿನ 67 […]