Blog Archive

ಕೊರೊನಾ ಆಗಸ್ಟ್ 2 : ದಕ್ಷಿಣ ಕನ್ನಡ 10 ಸಾವು,163 ಸೋಂಕಿತರು, ಉಡುಪಿ 1ಸಾವು, 182 ಸೋಂಕಿತರು

Sunday, August 2nd, 2020
CORONA

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್  2 ರಂದು  ಮತ್ತೆ 163 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6015ಕ್ಕೆ ಏರಿಕೆಯಾಗಿದೆ. ರವಿವಾರ ಮತ್ತೆ 10 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 3116 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಇಲ್ಲಿಯ ತನಕ 169 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 2730 ಮಂದಿ ಇಲ್ಲಿಯ ತನಕ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ರವಿವಾರದಂದು 45 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಇನ್ನು ಮಂಗಳೂರು […]

ಕೊರೊನಾ ಮಹಾಮಾರಿಯನ್ನು ತೊಲಗಿಸಲು ಪ್ರತಿಯೊಬ್ಬರೂ ಕಟಿಬದ್ಧರಾಗಬೇಕು : ಶ್ರೀ ಮೋಹನದಾಸ ಸ್ವಾಮೀಜಿ

Saturday, August 1st, 2020
MohanadasaSwamiji

ಮಂಗಳೂರು : ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ದಲ್ಲಿ 48 ದಿನಗಳ ವರಮಹಾಲಕ್ಷ್ಮಿ ಪೂಜೆ ಜುಲೈ 31ರಂದು ಚಂಡಿಕಾ ಯಾಗದ ಪೂರ್ಣಾಹುತಿ ಯೊಂದಿಗೆ ಸಮಾಪನ ಗೊಂಡಿತು. ಬೆಳಗ್ಗೆ ಗಣಪತಿ ಹೋಮ ನಾನಾ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಚಂಡಿಕಾ ಯಾಗ, ಕನಕಾಧಾರಾ ಯಾಗ ಪೂರ್ಣಹುತಿ ನಡೆಯಿತು. ಭಜನಾ ಸತ್ಸಂಗ ಕಾರ್ಯಕ್ರಮ ಪ್ರಸ್ತುತಗೊಂಡಿತು. ಸಂಜೆ ದುರ್ಗಾಪೂಜೆ, ಆಶ್ಲೇಷ ಬಲಿ ನಡೆದವು. ಕೊರೊನಾ ಸೋಂಕಿತರನ್ನು ನೋಡುವ ದೃಷ್ಟಿ ಬದಲಾಗಬೇಕಾಗಿದೆ. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಚಿಕಿತ್ಸೆ ಸಿಗುವಂತಾಗಲು ಮಾನವೀಯ ಮೌಲ್ಯಗಳ ಅಗತ್ಯತೆಯಿದೆ. ಈ ಮಹಾಮಾರಿಯನ್ನು ತೊಲಗಿಸಲು […]

ಬೆಳ್ಮಣ್‌ : ಹೊಟೇಲ್ ಉದ್ಯಮಿ ಹಾಗೂ ಪತ್ನಿ, ಮಗಳಿಗೂ ಕೊರೊನಾ ಸೋಂಕು

Wednesday, July 22nd, 2020
belman corona

ಉಡುಪಿ  :  ಹೊಟೇಲ್ ಉದ್ಯಮಿಯೊಬ್ಬರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದ್ದು ಎರಡು ದಿನಗಳ ಬಳಿಕ ಆತನ ಪತ್ನಿ ಹಾಗೂ ಮಗಳಿಗೂ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಮಾಜಿ ತಾಲೂಕು ಪಂಚಾಯತಿ ಸದಸ್ಯ ಹಾಗೂ ಹೋಟೆಲ್ ಉದ್ಯಮಿಗೆ ಪಾಸಿಟಿವ್ ವರದಿ ದೃಢವಾದ ಹಿನ್ನಲೆಯಲ್ಲಿ ಬೆಳ್ಮಣ್‌ನಲ್ಲಿ ಅವರು ನಡೆಸುತ್ತಿದ್ದ ಹೊಟೇಲ್ ಹಾಗೂ ಅವರ ವಾಸದ ಬಾಡಿಗೆ ಮನೆಯ ಸಹಿತ ಸುಮಾರು 15 ಮನೆ ಹಾಗೂ 30 ಅಂಗಡಿ ಹಾಗೂ ಎರಡು ಬ್ಯಾಂಕ್‌‌ಗಳನ್ನು ಸೀಲ್ ಡೌನ್ ಮಾಡಲಾಗಿತ್ತು. ಒಂದೇ ಮನೆಯ ಮೂವರಲ್ಲಿ ಕೊರೊನಾ ಸೋಂಕು […]

ಹುಬ್ಬಳ್ಳಿ : 24ರ ನಂತರ ಲಾಕ್ ಡೌನ್ ಗೆ ಪ್ಲಾನ್

Tuesday, July 21st, 2020
hubballi

ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಲಾಕ್ ಡೌನ್ ಮಾಡಿದ್ರು ಸಹ ದಾರಿಗೆ ಬರದ ಕೋವಿಡ್ ಗೆ ಜಿಲ್ಲಾಡಳಿತ ತಲೆ ಕೆಡಿಸಿಕೊಂಡಿದೆ. ಅಲ್ಲದೆ ಮತ್ತೊಂದು ಸುತ್ತಿನ ಲಾಕ್ ಡೌನ್ ಮಾಡಲು ಈಗಾಗಲೇ ಸದ್ದಿಲ್ಲದೆ ಪ್ಲಾನ್ ಮಾಡಿದೆ. ಹೌದು…ರಾಜ್ಯದಲ್ಲಿ ನಿತ್ಯ ಕೊರೊನಾ ಹಾವಳಿ ಹೆಚ್ಚಾಗಿದ್ದು, ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ..ಈ ಹಿನ್ನೆಲೆ ಈಗಾಗಲೇ ಲಾಕ್ ಡೌನ್ ಘೋಷಣೆ ಸಹ ಮಾಡಿದೆ.ಆದ್ರೆ ಇಷ್ಟೆಲ್ಲಾ ಮಾಡಿದ್ರು ಸಹ ಕೊರೋನಾ ರಣಕೇಕೆ ಮಾತ್ರ ನಿಂತಿಲ್ಲ. […]

ಬರಿಗಾಲಲ್ಲಿ ಬೆಟ್ಟ ಹತ್ತಿ ಕೊರೊನಾ ತೊಲಗಿಸಲು ಚಾಮುಂಡಿಯ ಪ್ರಾರ್ಥಿಸಿದ ಶೋಭಾ ಕರಂದ್ಲಾಜೆ

Friday, July 17th, 2020
shobha karandlaje

ಮೈಸೂರು: ಮಹಾಮಾರಿ ಕೊರೊನಾ ತೊಲಗಿಸಲು ಶೋಭಾ ಕರಂದ್ಲಾಜೆ ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತಿದ್ದಾರೆ. ಆಷಾಢ ಮಾಸದ ಕೊನೆಯ ಶುಕ್ರವಾರವಾದ ಇಂದು ಮೈಸೂರಿನ ಚಾಮುಂಡಿ ಬೆಟ್ಟ ಹತ್ತಿ, ನಾಡದೇವತೆ ದರ್ಶನ ಪಡೆದಿದ್ದಾರೆ. ಇಡೀ ವಿಶ್ವ ವ್ಯಾಪಿ ಕೊರೊನಾ ತಾಂಡವವಾಡುತ್ತಿದ್ದು, ಅತೀ ಶೀಘ್ರವೇ ಮಹಾಮಾರಿ ತೊಲಗಲಿ, ನಾಡಿನ ಜನತೆಗೆ ಆರೋಗ್ಯ, ಸುಖ ಶಾಂತಿ ಲಭಿಸಲಿ ಎಂದು ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಆಷಾಢ ಮಾಸದಲ್ಲಿ ಪ್ರತಿ ವರ್ಷ ಅವರು ಬೆಟ್ಟವನ್ನು ಬರಿಗಾಲಿನಲ್ಲಿ ಹತ್ತುವ ವಾಡಿಕೆ ಇದ್ದು, ಈ ವರ್ಷವು ಅದನ್ನು ಪೂರ್ಣಗೊಳಿಸಿದ್ದಾರೆ‌. […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಮತ್ತೊಬ್ಬರು ಬಲಿ

Thursday, July 9th, 2020
covid-death

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಕೊರೊನಾದಿಂದ ಮತ್ತೊಬ್ಬರು ಮೃತಪಟ್ಟಿದ್ದು ಮೃತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 48 ವರ್ಷದ ಬೋಳೂರು ನಿವಾಸಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಗುರುವಾರ ಕೂಡಾ 168 ಮಂದಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.

ಕೊರೊನಾ ಹಿನ್ನೆಲೆ ಮಂಗಳೂರು ಮಹಾನಗರ ಪಾಲಿಕೆ ಒಂದು ವಾರ ಬಂದ್

Sunday, June 28th, 2020
mcc

ಮಂಗಳೂರು: ಮಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಮಂಗಳೂರು ನಗರ ಪಾಲಿಕೆಗೆ ಸೋಮವಾರದಿಂದ ಪ್ರವೇಶ ನಿರ್ಬಂಧಿಸ ಲಾಗಿದೆ ಎಂದು ಮೇಯರ್ ರವರ ಪ್ರಕಟಣೆ ತಿಳಿಸಿದೆ ಪಾಲಿಕೆಗೆ ಪ್ರತಿದಿನ ನೂರಾರು ಮಂದಿ ಸಾರ್ವಜನಿಕರು ಬಂದು ಹೋಗುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇರುವುದರಿಂದ ಸೋಮವಾರದಿಂದ ಜೂನ್  29 ರಿಂದ ಒಂದು ವಾರಗಳ ಕಾಲ ಪ್ರವೇಶ ನಿರ್ಬಂಧಿಸಲಾಗಿದೆ ಎಂದು  ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಮೊಹಿಯುದ್ದೀನ್ ಬಾವಾ ಮನೆಯಲ್ಲಿ ಕೊರೊನಾ, ಸೀಲ್ಡೌನ್

Friday, June 26th, 2020
moideen-bava-house

ಮಂಗಳೂರು : ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಅವರ ಮನೆಯಲ್ಲಿ ಕೊರೊನಾ  ಪ್ರಕರಣ ಕಂಡು ಬಂದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮನೆಗೆ  ಯಾರು ಪ್ರವೇಶಿಸಬಾರದು ಎಂಬ ನಾಮ ಫಲಕ ಹಾಕಿ ಮಂಗಳೂರು ಮಹಾನಗರ ಪಾಲಿಕೆ ಸೀಲ್ಡೌನ್ ಮಾಡಲಾಗಿದೆ. ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಅವರ ಪುತ್ರ ಬೆಂಗಳೂರಿನಲ್ಲಿ ವಾಸವಿದ್ದು, ಅವರಿಗೆ ಕೊರೊನಾ ಲಕ್ಷಣಗಳು ಕಂಡುಬಂದ ಹಿನ್ನೆಲೆ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ದೃಢವಾಗಿದೆ ಇದರಿಂದಾಗಿ ಅವರ ಮನೆಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. […]

ಬೋಳಾರ ಮಸೀದಿಯಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ

Wednesday, June 24th, 2020
death

ಮಂಗಳೂರು :  ಕೊರೊನಾ ಸೋಂಕಿನಿಂದ ಇಂದು ಮೃತಪಟ್ಟ 70 ವರ್ಷದ P-6282 ವ್ಯಕ್ತಿಯ ಮೃತದೇಹದ ಅಂತ್ಯಕ್ರಿಯೆಯನ್ನು ಇಂದು ಸಂಜೆ ಜಿಲ್ಲೆಯ ಬೋಳಾರದ ಜುಮಾ ಮಸೀದಿ ಆವರಣದಲ್ಲಿರುವ ದಫನ ಭೂಮಿಯಲ್ಲಿ ನಡೆಸಲಾಯಿತು. ಜಿಲ್ಲೆಯಲ್ಲಿ ಮುಸ್ಲಿಮರು ಕೊರೊನಾ ವೈರಸ್ ನಿಂದ ಮೃತಪಟ್ಟರೆ ಮಂಗಳೂರಿನ ಬಂದರ್ ನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ವಠಾರದ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲು ಅವಕಾಶ ಮಾಡಿಕೊಡುವುದಾಗಿ ಝೀನತ್ ಬಕ್ಷ್ ಆಡಳಿತ ಕಮಿಟಿಯು ಆರಂಭದಲ್ಲಿ ಘೋಷಿಸಿತ್ತು. ಮಳೆಗಾಲದಲ್ಲಿ ಇಲ್ಲಿನ ದಫನಗುಂಡಿಯಲ್ಲಿ ನೀರು ಹರಿದು ಬರುವ […]

ಕೊರೊನಾಗೆ ದಕ್ಷಿಣ ಕನ್ನಡದಲ್ಲಿ 70 ವರ್ಷದ ವೃದ್ಧ ಬಲಿ

Tuesday, June 23rd, 2020
corona death

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ, 70 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಇದು ಕೊರೋನಾಗೆ ಸಂಬಂಧಿಸಿದಂತೆ 9ನೇ ಬಲಿಯಾಗಿ ದೆ. ಬೆಂಗಳೂರಿನಿಂದ  ಜೂನ್‌‌ 7 ರಂದು ಅವರು  ಆಗಮಿಸಿದ್ದರು. ತೀವ್ರ ಉಸಿರಾಟದ ತೊಂದರೆ (ಎಸ್‌‌‌ಎಆರ್‌ಐ) ಯಿಂದ ಜೂನ್‌‌ 12 ರಂದು ಮಂಗಳೂರಿನ ಕೊರೊನಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ  ಮಧುಮೇಹ ಹಾಗೂ ನ್ಯೂಮೋನಿಯಾ ಸಂಬಂದಿತ ಕಾಯಿಲೆಗಳು ಇದ್ದವು.